Advertisements

ಕನ್ನಡ ಸಿನಿಮಾ ಬಗ್ಗೆ ಹಾಗೂ ಕಿಚ್ಚ ಸುದೀಪ್ ಗೆ ಇಡೀ ಭಾರತೀಯ ಚಿತ್ರರಂಗದ ಖ್ಯಾತ ನಟ ನಟಿಯರು ಏನು ಹೇಳಿದ್ದಾರೆ ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣಾ ಸಿನಿಮಾದ ಟೈಟಲ್ ಟೀಸರ್ ದುಬೈನ ಬುರ್ಜ್ ಖಲೀಪಾ ಕಟ್ಟಡದ ಮೇಲೆ ಪ್ರದರ್ಶನಗೊಂಡಿದೆ. ಇದರ ಬಗ್ಗೆ ಮತ್ತು ಸುದೀಪ್ ಅವರು 25 ವರ್ಷ ಪೂರೈಸಿರುವ ಬಗ್ಗೆ ಭಾರತೀಯ ಚಿತ್ರರಂಗದ ಖ್ಯಾತ ನಟ ನಟಿಯರು ಏನು ಹೇಳಿದ್ದಾರೆ ಗೊತ್ತಾ? ನೋಡೋಣ ಬನ್ನಿ.. ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ್ದಕ್ಕೆ ನಮ್ಮ ಹೃದಯ ಪೂರ್ವಕ ಅಭಿನಂದನೆಗಳು.. ವಿಕ್ರಾಂತ್ ರೋಣ ತಂಡದಲ್ಲಿ ನಾವು ಭಾಗಿಯಾಗಿರುವುದು ಹೆಮ್ಮೆ ಅನಿಸುತ್ತಿದೆ ಎಂದು ತೆಲುಗಿ‌ನ ಖ್ಯಾತ ನಟ ನಾಗಾರ್ಜುನ ಅವರು ಅನ್ನಪೂರ್ಣ ಸ್ಟೂಡಿಯೋ ನಿರ್ಮಾಣ ಸಂಸ್ಥೆಯ ಮೂಲಕ ತಿಳಿಸಿದ್ದಾರೆ.

Advertisements

ಕನ್ನಡ ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ್ದಕ್ಕೆ.. ಅಭಿನಂದನೆಗಳು ಸುದೀಪ್ ಎಂದು ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಟ್ವೀಟ್ ಮಾಡಿದ್ದಾರೆ. ಕಿಚ್ಚ ಸುದೀಪ್ ಸರ್ ಅವರ ಈ ಅಭೂತಪೂರ್ವ ಸಾಧನೆಗೆ ಹೃದಯ ಪೂರ್ವಕ ಅಭಿನಂದನೆಗಳು. ವಿಕ್ರಾಂತ್ ರೋಣ ಚಿತ್ರ ದೊಡ್ಡ ಮಟ್ಟದಲ್ಲಿ ದಾಖಲೆ ಬರೆಯಲಿ. ಇದೇ ರೀತಿ ಯುವ ನಟರಿಗೆ ಸ್ಪೂರ್ತಿಯಾಗಿರಲಿ ಎಂದು ನಟಿ ಹರಿಪ್ರಿಯಾ ತಿಳಿಸಿದ್ದಾರೆ.

ಚಿತ್ರರಂಗದಲ್ಲಿ 25 ವರ್ಷ ಇಂತಹ ಅಸಾಧಾರಣ ಸಾಧನೆ ವಿಕ್ರಾಂತ್ ರೋಣ ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಮಹಿಳಾ ಕ್ರಿಕೇಟ್ ತಂಡದ ನಾಯಕಿ ವೇದ ಕೃಷ್ಣಮೂರ್ತಿ ಅವರು ತಿಳಿಸಿದ್ದಾರೆ. ಇದರ ಜೊತೆ ತೆಲುಗಿನ ಖ್ಯಾತ ನಟರಾದ ಮಹೇಶ್ ಬಾಬು, ಪ್ರಭಾಸ್ ಅವರ ಅಭಿಮಾನಿಗಳು ಸಹ ಸುದೀಪ್ ಅವರಿಗೆ ಅಭಿನಂದನೆಗಳನ್ನು ತಿಳಿಸಿ.. ವಿಕ್ರಾಂತ್ ರೋಣ ತಂಡಕ್ಕೆ ಶುಭ ಕೋರಿದ್ದಾರೆ. ನಮ್ಮ ಕನ್ನಡ ಹಾಗೂ ಕನ್ನಡ ಸಿನಿಮಾದ ಟೈಟಲ್ ಟೀಸರ್ ಬುರ್ಜ್ ಖಲಿಪಾ ದಲ್ಲಿ ನೋಡಿದ ನಿಮಗೆ ಏನು ಅನಿಸುತ್ತಿದೆ ಎಂಬುದರ ಬಗ್ಗೆ ತಿಳಿಸಿ.