Advertisements

ಕತ್ತಲಲ್ಲಿ ಕಾಡಿಗೆ ಹೋಗಿ, ಏನನ್ನೋ ಹುಡುಕುತ್ತಿರುವ ಕಿಚ್ಚ ಸುದೀಪ್.

Cinema

ಕೊರೊನಾ ಲಾಕ್ ಡೌನ್ ಇಂದ ಸ್ಯಾಂಡಲ್ ವುಡ್ ಸ್ತಬ್ದವಾಗಿದೆ. ಆದರೆ ಇತ್ತೀಚೆಗೆ ಆಂದ್ರಪ್ರದೇಶದಲ್ಲಿ ಸಿನಿಮಾ ಶೂಟಿಂಗ್ ಗಳನ್ನು ಮಾಡಲು ಅನುಮತಿ ನೀಡಿದೆ. ಹೀಗಾಗಿ ಕಿಚ್ಚ ಸುಧೀಪ್ ಅವರ ಪ್ಯಾಂಟಮ್ ಚಿತ್ರವೂ ಶೂಟಿಂಗ್ ನಡೆಸಲು ಹೈದರಾಬಾದ್ ಗೆ ತೆರಳಿತ್ತು. ಅಲ್ಲಿ ಅದ್ದೂರಿಯಾಗಿ ಕಾಡಿನ ರೀತಿ ಸೆಟ್ ಹಾಕಿ ಸಿನಿಮಾ ಶೂಟಿಂಗ್ ಆರಂಭಿಸಿದ್ದಾರೆ. 

Advertisements

ಕಳೆದ ವಾರದಲ್ಲಿ ಪ್ಯಾಂಟಮ್ ತಂಡ ಒಂದು ಚಿಕ್ಕ ವಿಡಿಯೋವನ್ನು ಬಿಡುಗಡೆ ಮಾಡಿದ್ದರು. ಇದರಲ್ಲಿ ಚಿಕ್ಕ ಮಗುವಿನ ಜೊತೆ ದೋಣಿಯಲ್ಲಿ ಕಿಚ್ಚ ಸುದೀಪ್ ಅವರು ಬರುತ್ತಿರುವ ದೃಶ್ಯವನ್ನು ನೋಡಬಹುದು. ಇನ್ನೂ ಅಭಿಮಾನಿಗಳು ಈ ಚಿಕ್ಕ ವೀಡಿಯೋದಲ್ಲಿನ ದೃಶ್ಯ ಹಾಗೂ ಹಿನ್ನಲೆ ಮ್ಯೂಸಿಕ್ ಅನ್ನು ನೋಡಿ ಫಿದಾ ಹಾಗಿದ್ದಾರೆ. ಈಗ ಇಂದು ಇನ್ನೊಂದು ಚಿಕ್ಕ ವೀಡಿಯೋವನ್ನು ಜಾಲತಾಣಗಳಲ್ಲಿ ಹಂಚಿಕೊಂಡಿದ್ದು ಈ ದೃಶ್ಯದಲ್ಲಿ ಕಿಚ್ಚ ಸುದೀಪ್ ಅವರು ಬೈಕಿನಿಂದ ಬಂದು ಟಾರ್ಚ್ ಹಿಡಿದುಕೊಂಡು ಕಾಡಿನಲ್ಲಿ ಏನೋ ಹುಡುಕುವ ದೃಶ್ಯವನ್ನು ಕಾಣಬಹುದು. ಇದರ ಹಿನ್ನಲೆ ಸಂಗೀತವು ಕೂಡ ಸಖತ್ ಕ್ಯಾಚಿಯಾಗಿದೆ.

ಗುರುವಾರ ಶೂಟಿಂಗ್ ನಡೆದ ಒಂದು ದೃಶ್ಯವನ್ನು, ಇನ್ನೇನು ಕೆಲವೇ ಕ್ಷಣಗಳಲ್ಲಿ ನಿಮ್ಮ ಹತ್ತಿರ ಅಂಚಿಕೊಳ್ಳಲ್ಲಿದ್ದೇನೆ. ಈ ವಿಡಿಯೋ ನಿಮ್ಮೆಲ್ಲರನ್ನು ಪ್ಯಾಂಟಮ್ ಜಗತ್ತಿಗೆ ಕರೆದುಕೊಂಡು ಹೋಗಲಿದೆ ಎಂದು ಹೇಳಿದ್ದರು‌. ಈ ರೀತಿ ಹೇಳಿಕೊಂಡ ಕೆಲವೇ ಕ್ಷಣಗಳಲ್ಲಿ ಈ  ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದು ಇದು ಕೇವಲ ಒಂದು ಸಣ್ಯ ತುಣುಕು ಅಷ್ಟೇ ನನ್ನ ಅಭಿಮಾನಿಗಳಿಗಾಗಿ ಎಂದು ತಿಳಿಸಿದ್ದಾರೆ‌.

ಈ ವೀಡಿಯೋ ಅಂಚಿಕೊಂಡ ನಂತರ ಅಭಿಮಾನಿಗಳು ಕಾಮೆಂಟ್ ಗಳನ್ನು ಮಾಡಿದ್ದು ಹಿನ್ನೆಲೆ ಸಂಗೀತ, ವೀಡಿಯೋ ಮೇಕಿಂಗ್, ತುಂಬಾ ಚೆನ್ನಾಗಿದೆ ಹೇಳಿದ್ದಾರೆ. ಇನ್ನೊಬ್ಬ ಅಭಿಮಾನಿ ಈ ವೀಡಿಯೋ ನೋಡಿ ಕಿಚ್ಚ ಸುದೀಪ್ ಅವರಿಗೆ ನಿವು ಮೊದಲ ಬಾರಿಗೆ ಹಾರರ್ ಸಿನಿಮಾ ಮಾಡುತ್ತಿದ್ದೀರಾ ಎಂದು ಪ್ರಶ್ನೆಯನ್ನು ಕೇಳಿದ್ದಾರೆ ಇದಕ್ಕೆ ಉತ್ತರಿಸಿದ ಕಿಚ್ಚ ಇದು ಹಾರರ್ ಸಿನಿಮಾ ಅಲ್ಲ ಎಂದು ಉತ್ತರಿಸುತ್ತಾರೆ.