Advertisements

ಐದು ವರ್ಷ ಪ್ರೀತಿ ಮಾಡಿ ಮದುವೆಯಾದ ಹುಡುಗಿಗೆ ಸುದೀಪ್ ಡೈವೋರ್ಸ್ ಕೊಡಲು ಹೋಗಿದ್ದೇಕೆ ಗೊತ್ತಾ? ಈ ಒಂದು ಕಾರಣಕ್ಕೆ!

Cinema

ಅಭಿನಯ ಚಕ್ರವರ್ತಿ ಎಂದೇ ಕರೆಸಿಕೊಳ್ಳುವ ಕಿಚ್ಚ ಸುದೀಪ್ ರವರು ಓರ್ವ ಬಹುಮುಖ ಪ್ರತಿಭೆಯಾಗಿದ್ದು ನಟನೆ ಮಾತ್ರವಲ್ಲದೇ ಇವರೊಬ್ಬ ಕ್ರಿಕೆಟರ್ ಸಿಂಗರ್ ಡೈರೆಕ್ಟರ್ ಪ್ರೊಡ್ಯೂಸರ್ ಹಾಗೂ ಅದ್ಭುತವಾದ ಕುಕ್ ಕೂಡ ಹೌದು . ಹೊಸಬರಿಗೆ ಪ್ರೋತ್ಸಾಹ ನೀಡುವುದರಲ್ಲಿ ಮೊದಲಿಗೆ ನಿಲ್ಲುವ ಸುದೀಪ್ ಚಿತ್ರರಂಗದ ಕಲಾವಿದರುಗಳಿಗೆ ಹಾಗೂ ಬಡವರ ಕಷ್ಟಕ್ಕೆ ಆರ್ಥಿಕವಾಗಿ ನಿಲ್ಲುತ್ತಾ ಎಲ್ಲರ ಮನದಲ್ಲಿಯೂ ಕೂಡ ಶಾಶ್ವತವಾಗಿ ನೆಲೆಯೂರಿದ್ದಾರೆ.ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ತಂದೆ ಸಂಜೀವ್ ಹೋಟೆಲ್ ಉದ್ಯಮಿ ಯಾದರೆ ತಾಯಿ ಸರೋಜ ಗೃಹಿಣಿಯಾಗಿದ್ದಾರೆ. ಕಿಚ್ಚನ ಪತ್ನಿಯ ಹೆಸರು ಪ್ರಿಯಾ ರಾಧಾಕೃಷ್ಣನ್. ಇವರು ಮೂಲತಃ ಕೇರಳದವರಾಗಿದ್ದು ಸುದೀಪ್ ಪ್ರಿಯಾರನ್ನು ಬಹಳ ವರ್ಷಗಳ ಕಾಲ ಪ್ರೀತಿಸಿ ವಿವಾಹವಾದರು. ಇನ್ನು ಸುದೀಪ್ ಹಾಗೂ ಪ್ರಿಯಾ ದಂಪತಿಗೆ ಸಾನ್ವಿ ಎಂಬ ಮುದ್ದಾದ ಹೆಣ್ಣು ಮಗಳು ಕೂಡ ಇದ್ದಾಳೆ.

Advertisements

ಇನ್ನು ಸುದೀಪ್ ಅವರಿಗೆ ಇಬ್ಬರು ಅಕ್ಕಂದಿರಿದ್ದು ಅದರಲ್ಲಿ ಈ ಪಕ್ಕಾ ಸರೋಜಾ ಕಿಚ್ಚ ಸುದೀಪ್ ರವರ ಅಚ್ಚುಮೆಚ್ಚು ಎನ್ನಬಹುದು. ಕೆಲವು ವರ್ಷಗಳ ಹಿಂದೆ ಸುದೀಪ್ ಹಾಗೂ ಪತ್ನಿ ಪ್ರಿಯಾ ಸುದೀಪ್ ರಮೇಶ್ ಅರವಿಂದ್​​​​​​​​​​ ನಡೆಸಿಕೊಡುತ್ತಿದ್ದ ಪ್ರೀತಿಯಿಂದ ರಮೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ಸುದೀಪ್ ಅಕ್ಕ ಸುಜಾತಾ ಅವರು ಮಾತನಾಡಿದ ವಿಡಿಯೋ ಕ್ಲಿಪ್ಪಿಂಗ್ ಒಂದು ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.ಇನ್ನು ಸುದೀಪ್ ರವರ ದಾಂಪತ್ಯ ಜೀವನದಲ್ಲೂ ಕೂಡ ಕೆಲವೊಂದು ಬಿರುಕು ಮೂಡಿತ್ತು. ಇದರ ಅಸಲಿ ಕತೆ ನೋಡುವುದಾದರೆ ಸುದೀಪ್ ಅವರು ಸ್ಪರ್ಶ ಸಿನಿಮಾದ ಮೂಲಕ ತೆರೆಮೇಲೆ ಬಂದಿದ್ದು ಈ ಚಿತ್ರ ಸಹ ಅವರಿಗೆ ಕೊಂಚ ಮಟ್ಟಿಗೆ ಹೆಸರನ್ನು ತಂದು ಕೊಡುತ್ತದೆ. ತದ ನಂತರ ಹುಚ್ಚ ಸಿನಿಮಾವನ್ನು ಕೈಗೆತ್ತಿಕೊಂಡ ಕಿಚ್ಚ ಸುದೀಪ್ ಕೊಟ್ಟಿದ್ದ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಸಿನಿಮಾ ಗೆಲ್ಲಲು ಪ್ರಮುಖ ಕಾರಣವಾಗುತ್ತದೆ.

ಇನ್ನು ಇದೇ ಸಮಯದಲ್ಲಿ ಚಿತ್ರ ಸೂಪರ್ ಡೂಪರ್ ಹಿಟ್ ಆಗುವ ಮೂಲಕ ಸುದೀಪ್ ಗೆ ಸಾಕಷ್ಟು ಖ್ಯಾತಿ ಹಾಗೂ ಜನಪ್ರಿಯತೆಯನ್ನು ತಂದುಕೊಟ್ಟಿದ್ದು ಇನ್ನು ಇದೆ ಶುಭಸಂದರ್ಭದಲ್ಲಿ ಕಿಚ್ಚ ಸುದೀಪ್ ಹಾಗೂ ಪ್ರಿಯಾಂಕಾ ಅವರ ಪ್ರೇಮ ಕಹಾನಿ ಮನೆಯವರಿಗೆ ಗೊತ್ತಾಗುತ್ತದೆ.ಹೌದು ತದನಂತರ ಇಬ್ಬರ ಕುಟುಂಬವನ್ನು ಒಪ್ಪಿಸಿ ಮದುವೆ ಕೂಡ ಆಗಿದ್ದು ಇನ್ನು ಬರೋಬ್ಬರಿ ಐದು ವರ್ಷಗಳ ಕಾಲ ಸುದೀಪ್ ಹಾಗೂ ಪ್ರಿಯಾ ಅವರು ಪ್ರೀತಿ ಮಾಡಿ ಮದುವೆಯಾಗುತ್ತಾರೆ. ಅಲ್ಲದೆ ಎರಡು ವರ್ಷಗಳ ಬಳಿಕ ಅವರಿಗೆ ಓರ್ವ ಹೆಣ್ಣು ಮಗು ಕೂಡ ಜನಿಸುತ್ತದೆ. ಅವರ ಹೆಸರು ಸಾನ್ವಿ. ಮದುವೆ ಬಳಿಕ ಬ್ಯುಸಿಯಾದ ನಟ ಫ್ಯಾಮಿಲಿ ಜೊತೆ ಸಮಯ ಕಳೆಯಲು ಕೊಂಚ ಸೋತರು ಎಂದೇ ಹೇಳಬಹುದು.

ಹೌದು ಹೀಗಾಗಿಯೇ ಬೇಸತ್ತು ಪ್ರಿಯಾ ಅವರು ವಿಚ್ಛೇದನ ಕೂಡ ಅರ್ಜಿ ಸಲ್ಲಿಸಿದ್ದರು. ಆದರೆ ಸುದೀಪ್ ಮತ್ತು ಪ್ರಿಯಾಂಕಾ ಅವರು ಕೂತು ಚರ್ಚೆ ಮಾಡಿ ತಮ್ಮ ಮಗಳಿಗೋಸ್ಕರ ಮತ್ತೊಮ್ಮೆ ಒಂದಾಗಿದ್ದಾರೆ.ಇನ್ನು ನಮ್ಮ ಸುದೀಪ್ ಮತ್ತು ಪ್ರಿಯಾ ಅವರಿಂದ ಕಲಿಯುವುದು ಸಾಕಷ್ಟಿದೆ. ಹೌದು ಈ ಕಾಲದಲ್ಲಿ ಒಂದು ಬಾರಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಡೈವರ್ಸ್ ಆಗೋದೇ ಜಾಸ್ತಿ. ಅಂತದ್ರಲ್ಲಿ ಇವರು ಎಲ್ಲವನ್ನೂ ಮೀರಿ ಮತ್ತೆ ಒಂದಾಗಿರುವುದು ನಿಜಕ್ಕೂ ಮೆಚ್ಚಲೇಬೇಕಾದ ಸಂಗತಿ. ಹೌದು ಇನ್ನು ಸಾಮಾನ್ಯವಾಗಿ ನಮಗೆಲ್ಲ ತಿಳಿದಿರುವಂತೆ ಹೇಗೆ ಹುಡುಗನೆ ಹುಡುಗಿಗೆ ಪ್ರಪೋಸ್ ಮಾಡುತ್ತಾನೂ ಅದೇ ರೀತಿ ಇಲ್ಲಿ ಕಿಚ್ಚ ಸುದೀಪ್ ಅವರೇ ಪ್ರಿಯಾ ಅವರಿಗೆ ಪ್ರಪೋಸ್ ಮಾಡಿದ್ದು.