Advertisements

3 ವರ್ಷದಿಂದ ವಿದ್ಯುತ್ ಇಲ್ಲದೆ ಕತ್ತಲಲ್ಲಿ ಜೀವನ. ಯಾತನೆ ಅನುಭವಿಸುತ್ತಿದ್ದ ವೃದ್ಧ ದಂಪತಿಯ ಮನೆಗೆ ಬೆಳಕಾದ ಸ್ಯಾಂಡಲ್ ವುಡ್ ನಟ.

News

ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಅವರು ಈಗ ಪ್ಯಾಂಟಮ್ ಚಿತ್ರಿಕರಣ ಬ್ಯುಸಿಯಲ್ಲಿ ಇದ್ದು ಪ್ಯಾಂಟಮ್ ಚಿತ್ರದ ಸಣ್ಣ ತುಣುಕು ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋಗಳನ್ನು ನೋಡಿ ವೀಕ್ಷಕರು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ. ಇನ್ನೂ ಕೋವಿಡ್ ಲೌಕ್ ಡೌನ್ ನ ಸಮಯದಲ್ಲಿ ಸಂಕಷ್ಟದಲ್ಲಿ ಸಿಲುಕಿಕೊಂಡವರಿಗೆ ಹಲವು ರೀತಿಯಲ್ಲಿ ಕಿಚ್ಚ ಸುದೀಪ್ ಅವರು ಸಹಾಯ ಮಾಡುತ್ತಾ ಬಂದಿದ್ದಾರೆ.

Advertisements

ಇದೀಗ ಕೆಲ ವರ್ಷಗಳಿಂದ ಬೆಳಕು ಇಲ್ಲದ ಮನೆಗೆ ಕಿಚ್ಚ ಸುಧೀಪ್ ಅವರು ಬೆಳಕನ್ನು ತಂದಿದ್ದಾರೆ. ಸುದೀಪ್ ಅವರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅನೇಕರಿಗೆ ಸಹಾಯ ಮಾಡುತ್ತ ಬಂದಿದ್ದಾರೆ. ಈ ಟ್ರಸ್ಟ್ ಕೂಡ ಸಮಾಜ ಸೇವೆ ಮಾಡುವಲ್ಲಿ ನಿರತವಾಗಿದೆ. ತುಮಕೂರು ಜಿಲ್ಲೆಯ ಮಾಧುಗಿರಿ ತಾಲೂಕಿನ ಸಿದ್ಧಾಪುರ ತಾಲೂಕಿನ ಬಡಕುಟುಂಬಕ್ಕೆ ಸಹಾಯ ಹಸ್ತವನ್ನು ಚಾಚಿದ್ದಾರೆ. ಈ ಕುಟುಂಬದಲ್ಲಿ ವೃದ್ದ ದಂಪತಿಗಳು ಇದ್ದು ಮೂರು ವರ್ಷಗಳ ಹಿಂದೆಯೇ ಈ ಮನೆಯನ್ನು ಕಟ್ಟಿಸಿಕೊಂಡಿದ್ದರು ಆದರೆ ಈ ಮನೆಗೆ ವಿದ್ಯುತ್‌ ಸಂಪರ್ಕವೇ ಇರಲಿಲ್ಲ‌‌. ಮೂರುವರ್ಷದಿಂದ ಕತ್ತಲಲ್ಲೇ ಜೀವನವನ್ನು ಕಳೆದಿದ್ದಾರೆ. ಈ ವಿಷಯ ಸುದೀಪ್ ಚಾರಿಟಬಲ್ ಟ್ರಸ್ಟ್ ಗಮನಕ್ಕೆ ಬಂದಿದ್ದು ಮನೆಗೆ ವಿದ್ಯುತ್ ಸಂಪರ್ಕವನ್ನು ಮಾಡಿಕೊಟ್ಟಿದ್ದಾರೆ.

ಹೌದು. ಸುದೀಪ್ ಟ್ರಸ್ಟ್ ನ ಯುವಕರು ಈ ವಿಷಯ ತಿಳಿದ ಕೂಡಲೇ ವೃದ್ದ ದಂಪತಿಗಳ ನಾಗರಾಜು, ಹಾಗೂ ರಾಧಮ್ಮ ಅವರ ಮನೆಗೆ ಬೇಟಿ ನೀಡಿದ್ದಾರೆ. ನಂತರ ಅವರ ಸಮಸ್ಯೆಯನ್ನು ಕೇಳಿ ತಾವೇ ತಮ್ಮ ಸ್ವಂತ ಖರ್ಚಿನ ಹಣದಿಂದ ವಿದ್ಯುತ್ ಸಂಪರ್ಕವನ್ನು ಹಾಕಿಸಿಕೊಟ್ಡಿದ್ದಾರೆ. ಅಲ್ಲದೇ ಮನೆಯ ವಿದ್ಯುತ್ ಸಂಪರ್ಕಕ್ಕೆ ಬೇಕಾದ ಅನುಮತಿಯನ್ನು ಇವರೆ ತೆಗೆದುಕೊಂಡಿದ್ದಾರೆ. ವೃದ್ಧ ದಂಪತಿ ವಿಕಲಾಂಗ ಮೊಮ್ಮಗನ ಜೊತೆ ಈ ಮನೆಯಲ್ಲಿ ಜೀವನವನ್ನು ಕಳೆಯುತ್ತಿದ್ದಾರೆ. ಟ್ರಸ್ಟಿನ ಮೂಲಕ ಸುದೀಪ್ ಸಹಾಯವನ್ನು ಮಾಡಿದ್ದಕ್ಕೆ ಕಿಚ್ಚನಿಗೆ ಮತ್ತು ಟ್ರಸ್ಟ್ ನ ಯುವಕರಿಗೆ ಈ ವೃದ್ಧ ದಂಪತಿಗಳು ಕೈಮುಗಿದು ಧನ್ಯವಾದವನ್ನು ತಿಳಿಸಿದ್ದಾರೆ. ಅಭಿಮಾನಿಗಳು ವೃದ್ದ ದಂಪತಿಗೆ ಸಹಾಯ ಮಾಡಿರುವ ವೀಡಿಯೋವನ್ನು ಟ್ವೀಟರ್ ನಲ್ಲಿ ಹಂಚಿಕೊಂಡಿದ್ದು ಸುದೀಪ್ ಇವರ ಕಾರ್ಯಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಇಂದು ಕತ್ತಲೆಯ ಕಪಿಮುಷ್ಟಿಯಲ್ಲಿ ವರ್ಷಗಳ ಯಾತನೆ ಅನುಭವಿಸಿದ. ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ. ಸಿದ್ದಾಪುರ ಎಂಬ ಗ್ರಾಮದ ಎರಡು ಹಿರಿಯ ಜೀವಗಳಾದ ನಾಗರಾಜು. ರಾಧಮ್ಮ ಮತ್ತು ವಿಶೇಷಚೇತನ ಮಗ ಪವನ್ ರವರ ಬಾಳಿಗೆ ಬೆಳಕಾದ ಸಾರ್ಥಕ ಕ್ಷಣ. ಎಂದು ಬರೆದು ವೀಡಿಯೋವನ್ನು ಹಂಚಿಕೊಂಡಿದ್ದಾರೆ.