Advertisements

ಮತ್ತೆ ಅಚ್ಚರಿ ಭವಿಷ್ಯ ನುಡಿದ ಕೋಡಿ ಮಠದ ಶ್ರೀಗಳು. ಕೊರೋನಾ ಮುಂದೆ ಏನಾಗಲಿದೆ ಗೊತ್ತಾ.

News

ಕಳೆದ ವರ್ಷ ಕೋಡಿ ಮಠದ ಶ್ರೀಗಳು ಕೊರೊನಾ ಬಗ್ಗೆ ಭವಿಷ್ಯ ನುಡಿದಿದ್ದು ಔಷದಿಯಿಲ್ಲದ ಕಾಯಿಲೆಗೆ ಸಾವಿರಾರು ಜನರು ಕಣ್ಮರೆಯಾಗುತ್ತಾರೆ ಎಂದಿದ್ದರು. ಇದೀಗ ಯುಗಾದಿಯ ನಂತರ ಈ ವರ್ಷದ ಮೊದಲ ಭವಿಷ್ಯವನ್ನು ತಿಳಿಸಿದ್ದಾರೆ.

Advertisements

ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಕೋಡಿಮಟದ ಹರಗುರುಚರಮೂರ್ತಿ ಡಾ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಈಗ ವಿಶ್ವದೆಲ್ಲೆಡೆ ಆವರಿಸುತ್ತಿರುವ ಕೊರೊನಾ ಕಾಯಿಲೆ ಮುಂದೆ ಜಡತ್ವದಂಥ ಕಲ್ಲು, ಮರಕ್ಕೂ ಆವರಿಸಲಿದೆ. ಎಂತಹ ರೋಗಗಳು ಬಂದರೂ ಭಾರತದ ಭೂಮಿಗೆ ತಡೆಯುವ ಶಕ್ತಿಯಿದೆ ಎಂದು ಕೊರೊನಾ ವೈರಸ್ ಬಗ್ಗೆ 2020 ರ ಯುಗಾದಿ ನಂತರ ಮೊದಲ ಭವಿಷ್ಯವನ್ನು ನುಡಿದಿದ್ದಾರೆ.

ಪ್ರಪಂಚದಾದ್ಯಂತ ಕೊರೋನಾ ವ್ಯಾದಿ ಇನ್ನೂ ಉಲ್ಭಣವಾಗುವ ಲಕ್ಷಣವಿದ್ದು. ಜಗತ್ತಿನಾದ್ಯಂತ ಮುತ್ತಿಗೆ ಹಾಕಿ ಕೊಲ್ಲುತ್ತದೆ‌. ಒಂದು ದೇಶ ಸಂಪೂರ್ಣವಾಗಿ ನಾಶವಾಗಲಿದೆ. ಆದರೆ ಭಾರತ ದೇಶಕ್ಕೆ ಯಾವುದೇ ಅಪಾಯವಾಗುವುದಿಲ್ಲ. ಹೊಸ ಶಾಸನವು ಬರುವ ನಿರೀಕ್ಷೆಯಿದೆ. ಜಲಪ್ರಳಯ ಹಾಗುವ ಸಾಧ್ಯತೆ ಇದೆ. ಕೊರೋನಾ ಮನುಷ್ಯರಿಗೆ ಮಾತ್ರವಲ್ಲದೆ ಗಿಡ, ಮರ ಪ್ರಾಣಿ ಸಂಕುಲಕ್ಕೂ ಸಹ ಘೋರವಾಗಿ ಅಪ್ಪಳಿಸಲಿದೆ. ದಿನೇ ದಿನೇ ಈ ಕೊರೊನಾ ವ್ಯಾದಿ ಹೆಚ್ಚಾಗಿ ಮನುಷ್ಯರ ಜೀವದ ಜೊತೆ ತಾಂಡವವಾಡುತ್ತದೆ.

ಭಾರತೀಯರು ಹೆದರಬೇಕಾಗಿಲ್ಲ, ಭಾರತಕ್ಕೆ ಇದರಿಂದ ಯಾವುದೇ ಅಪಾಯ ಆಗುವುದಿಲ್ಲ ಯಾಕೆಂದರೆ ಭಾರತ ಒಂದು ಧರ್ಮ ಭೂಮಿಯಾಗಿದೆ. ಪ್ರತಿಯೊಬ್ಬರು ನಿಮ್ಮ ಇಷ್ಟದೇವರುಗಳನ್ನು ನೆನೆದು ಪ್ರಾರ್ಥನೆ ಸಲ್ಲಿಸಬೇಕು. ಅಕ್ಷಯ ನಾಮ ತೃತೀಯದವರೆಗೂ ಈ ಕೊರೊನಾ ವ್ಯಾದಿ ಕಾಡುತ್ತದೆ. ಮೇ ಕೊನೆಯ ವೇಳೆಗೆ ಒಂದು ಅವಸ್ಥೆ ತಲುಪುತ್ತದೆ. ಪ್ರಕೃತಿ ನೀಡಿರುವ ರೋಗಕ್ಕೆ ಪ್ರಕೃತಿಯಿಂದಲೇ ಔಷಧಿ ದೊರೆಯುತ್ತದೆ ಹೀಗಾಗಿ ಜನರು ಭಯ ಪಡುವ ಅವಶ್ಯಕತೆ ಇಲ್ಲ ಎಂದು ಏಳಿದ್ದಾರೆ.

ಇನ್ನು ಸ್ವಾಮಿಜಿಗಳು ಮಳೆಯ ವಿಚಾರದ ಬಗ್ಗೆ ಹೇಳಿದ್ದು. ಕೆಲವೆಡೆ ಅತಿವೃಷ್ಟಿ ಇನ್ನೂ ಕೆಲವೆಡೆ ಅನಾವೃಷ್ಟಿ ಆಗಲಿದೆ.
ಕೆಲವು ನದಿಗಳು ಉಕ್ಕಿ ಹರಿದರೆ ಇನ್ನೂ ಕೆಲವು ನದಿಗಳು ಬರಡಾಗುತ್ತದೆ. ಮಳೆ ಬಂದು, ಬೆಳೆ ಬೆಳೆದು ಹೆಚ್ಚು ಫಸಲು ಬಂದರೂ ಅದಕ್ಕೆ ರೋಗ ಕಾಡಲಿದೆ. ಭೂಮಿ ಕಂಪನಗೊಂಡು ಇಬ್ಭಾಗವಾಗಲಿದೆ. ಸಮುದ್ರ ತನ್ನ ಒಡಲನ್ನು ಬಿಚ್ಚುತ್ತದೆ. ಬಹುಪಾಲು ಜಲಪ್ರಳಯವಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಹಾಗೂ ತಮ್ಮ ಮನೆಗಳಲ್ಲಿ ಮಾವು, ಬೇವು, ಬೇಟೆ ಸೊಪ್ಪು ಇಡಬೇಕು, ರಾತ್ರಿ ಮಲಗುವ ಮುನ್ನ ಬಿಲ್ವಪತ್ರೆಯನ್ನು ತಲೆಗೆ ಸುತ್ತಿ ಮಲಗಬೇಕು. ಮನೆಯಲ್ಲಿ ದಿನನಿತ್ಯ ದೀಪವನ್ನು ಉರಿಸಬೇಕು. ಕೊರೋನಾ ಮೇ ತಿಂಗಳಲ್ಲಿ ನಿರ್ನಾಮವಾಗುತ್ತದೆ. ಸ್ವಲ್ಪ ಎಚ್ಚರ ತಪ್ಪಿದರೆ ವರ್ಷಪೂರ್ತಿ ಬೇಟೆಯಾಡುತ್ತದೆ. ಎಂದು ಶ್ರೀಗಳು ಭವಿಷ್ಯವನ್ನು ನುಡಿದಿದ್ದಾರೆ.