ನಮಸ್ತೇ ಸ್ನೇಹಿತರೆ, ಲಕ್ಷಗಳನ್ನು ಖರ್ಚು ಮಾಡಿ ನಿರ್ಮಾಣ ಮಾಡಲು ಕನ್ನಡ ಚಿತ್ರರಂಗ ಕಷ್ಟ ಪಡುತ್ತಿದ್ದ ಕಾಲದಲ್ಲಿ ಕೋಟಿ ಕೋಟಿ ಸುರಿದು ಕನ್ನಡ ಚಿತ್ರಗಳನ್ನು ನಿರ್ಮಿಸಿ ಕನ್ನಡ ಚಿತ್ರರಂಗಕ್ಕೆ ಹೊಸ ಮಾರುಕಟ್ಟೆಯನ್ನು ಕೊಟ್ಟ ರಾಮು ಅವರು ಇನ್ನೂ ನೆನಪು ಮಾತ್ರ. ಕನ್ನಡ ಚಿತ್ರರಂಗದಲ್ಲಿ ಇಂದು ಕೋಟಿಗಳಿಗೆ ಲೆಕ್ಕವಿಲ್ಲ.. ಆದರೆ ಮೊದಲ ಬಾರಿಗೆ ಕೋಟಿ ಸುರಿದು ಚಿತ್ರ ನಿರ್ಮಾಣ ಮಾಡಿದ್ದು ನಮ್ಮ ರಾಮು ಅವರು ಮಾತ್ರ.. ಕಳೆದ ಐದು ದಿನಗಳಿಂದ ಕರೋ’ನದಿಂದ ಬಳಲುತ್ತಿದ್ದ ಚಿತ್ರ ನಿರ್ಮಾಪಕ ನಟಿ ಮಾಲಾಶ್ರೀಯವರ ಪತಿ 52 ವರ್ಷದ ರಾಮು ಅವರು ಚಿಕಿತ್ಸೆಗೆ ಸ್ಪಂದಿಸದೆ ನಿನ್ನೆ ಸಾವನ್ನಪಿದ್ದರು. ಮೂಲತಃ ಕುಣಿಗಲ್ ನವರಾಗಿದ್ದ ರಾಮು ಅವರಿಗೆ ಪತ್ನಿ ಮಾಲಾಶ್ರೀ, ಪುತ್ರಿ ಅನನ್ಯ, ಪುತ್ರ ಆರ್ಯ ಇದ್ದಾರೆ..

ಆರಂಭದಲ್ಲಿ ಹಂಚಿಕೆದಾರರಾಗಿದ್ದ ರಾಮು ಅವರು ನಂತರ ಗೋಲಿಬಾರ್ ಚಿತ್ರದ ಮೂಲಕ ನಿರ್ಮಾಪಕರಾಗುತ್ತಾರೆ. ನಂತರ ಲಾಕಪ್ ಡೆ’ತ್, ಎಕೆ ಪಾರ್ಟಿ ಸೆವೆನ್, ಕಲಾಸಿಪಾಳ್ಯ, ರಾ’ಕ್ಷಸ, ಶಿವಾಜಿನಗರ, ಕಿಚ್ಚ, ಹಾಲಿವುಡ್, ಚಾಮುಂಡಿ, ನೈನ್ಟಿ ನೈನ್ ಸೇರಿದಂತೆ ಅರ್ಜುನ್ ಗೌಡ ರಾಮು ಎಂಟರ್ಪ್ರೈಸಸ್ ನಲ್ಲಿ ನಿರ್ಮಾಣವಾದ ಚಿತ್ರಗಳು.. ಒಟ್ಟು 37 ಚಿತ್ರಗಳನ್ನು ನಿರ್ಮಿಸಿ ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ನಿರ್ಮಾಪಕರಾಗಿದ್ದರು. ಅನ್ನದಾತನ ನಿ’ಧನಕ್ಕೆ ನಟ, ನಟಿಯರು ಸಹ ಕಲಾವಿದರು ಸೇರಿದಂತೆ ಇಡೀ ಚಿತ್ರರಂಗವೇ ಕಂಬನಿ ಮಿಡಿದಿತ್ತು..

ಇನ್ನೂ ಕೋಟಿ ನಿರ್ಮಾಪಕರಾಗಿದ್ದ ಇವರು ಆಸ್ತಿಯಲ್ಲು ಕೂಡ ಸಿರಿವಂತರು. ಹುಟ್ಟು ಶ್ರೀಮಂತರಾಗಿದ್ದ ಕಾರಣ ಚಿತ್ರರಂಗಕ್ಕೆ ಬಂದ್ರು.. ಚಿತ್ರರಂಗದಲ್ಲಿ ಸಾಕಷ್ಟು ಏಳು ಬೀಳು ಕಂಡರು ಬುದ್ದಿವಂತ ನಿರ್ಮಾಪಕ ಎನಿಸಿಕೊಂಡಿದ್ದರು. ಕೆಲವು ಬಾರಿ ನಿರ್ಮಾಣದಲ್ಲಿ ಸೋತರು ಅಂಚಿಕೆಯಲ್ಲಿ ಬಹಳ ಬುದ್ದಿವಂತಿಕೆಯಿಂದ ಯಶಸ್ಸನ್ನು ಸಾಧಿಸಿದ್ದರು.. ಬೆಂಗಳೂರಿನಲ್ಲಿ ಮನೆ, ಹುಟ್ಟೂರಿನಲ್ಲಿ ಆಸ್ತಿ ಮನೆ ಸೇರಿದಂತೆ ಸುಮಾರು 150 ರಿಂದ 200 ಕೋಟಿ ಆಸ್ತಿಯ ಒಡೆಯ ರಾಮು ಅವರ ಆಸ್ತಿ ಇದೀಗ ಮಾಲಾಶ್ರೀ ಮತ್ತು ಮಕ್ಕಳಿಗೆ ಸೇರಲಿದೆ. ರಾಮು ಅವರು ಮಾಲಾಶ್ರೀ ಮತ್ತು ಮಕ್ಕಳಿಗೆ ಎಷ್ಟೇ ಆಸ್ತಿ ದುಡ್ಡು ಕಾಸು ಬಿಟ್ಟು ಹೋಗಿದ್ದರು ಸ್ವತಃ ರಾಮು ಅವರು ಇದ್ದಂತೆ ಆಗುವುದಿಲ್ಲ ಅಲ್ವಾ..