Advertisements

ಬಾಡಿಗೆ ಕಟ್ಟಲು ದುಡ್ಡಿಲ್ಲದೆ ಓನರ್ ಮನೆಯಲ್ಲಿ ಮನೆ ಕೆಲಸ ಮಾಡಿದ ಕನ್ನಡದ ಟಾಪ್ ನಟಿ ಯಾರು ಗೊತ್ತಾ?

Cinema

ಜೀವನ ಎಂಬ ಹೋರಾಟದಲ್ಲಿ ಸಮಸ್ಯೆಗಳು ಎನ್ನುವುದು ಯಾವಾಗ ಬರುತ್ತದೆ ಯಾವ ಸಮಯದಲ್ಲಿ ಹೋಗುತ್ತದೆ ಎನ್ನುವುದು ಯಾರಿಂದಲೂ ಕೂಡ ಊಹಿಸಲು ಸಾಧ್ಯವಿಲ್ಲ. ಕಷ್ಟ ಬಂದಾಗ ಅದಕ್ಕೆ ಹೊಂದಿಕೊಂಡು ಮುಂದಿನ ಜೀವನದ ಬಗ್ಗೆ ಅಲೋಚನೆ ಮಾಡಬೇಕಾಗುತ್ತದೆ.. ಅದೇ ರೀತಿ ಕನ್ನಡದ ನಟಿ ಒಬ್ಬರ ಜೀವನದಲ್ಲಿ ಕಷ್ಟ ಎಂಬುದು ಅನಿವಾರ್ಯವಾಗಿ ಬಂದಿರುತ್ತದೆ.. ಹೌದು ಒಂದು ಟೈಮ್ ನಲ್ಲಿ ಕೈನಲ್ಲಿ ಬಿಡುಗಾಸಿಲ್ಲದೇ ಮನೆ ಬಾಡಿಗೆ ಕಟ್ಟಲು ಸಹ ಪರದಾಡುತ್ತಿದ್ದ ಈ ನಟಿ ತನ್ನ ಮಾಲಿಕರ ಮನೆಯಲ್ಲಿ ಕೆಲಸಕ್ಕೆ ಸೇರಿಕೊಂಡು ಪಾತ್ರೆಗಳನ್ನು ತೊಳೆದು, ಮನೆ ಕೆಲಸದವಳಂತೆ ಮಾಲಿಕನ ಮನೆಯಲ್ಲಿ ಎಲ್ಲಾ ಕೆಲಸ ಮಾಡಿ ಮುಗಿಸುತ್ತಿದ್ದಳು ಈ ನಟಿ..

[widget id=”custom_html-3″]

Advertisements

ಆದ್ದರಿಂದ ಮನೆ ಮಾಲೀಕರು ಈ ನಟಿಯ ಬಳಿ ಮನೆ ಬಾಡಿಗೆ ಕೇಳುತ್ತಿರಲಿಲ್ಲ. 2014 ರ ಮಿಸ್ ಕರ್ನಾಟಕ ಹಾಗು ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಕ್ರಿಷಿತಾ ಪಾಂಡಾ.. ಕೊಡಗಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಕ್ರಿಷಿತಾ ಪಾಂಡಾ ಅವರು ತನ್ನ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಕೊಡಗಿನಿಂದ ಬೆಂಗಳೂರಿಗೆ ಆಗಮಿಸಿದ ಕ್ರಿಷಿತಾ ಅವರು ಕೈನಲ್ಲಿ ಹಣವಿಲ್ಲದೇ ತುಂಬಾ ಪರದಾಡಿದ್ದರು. ಇದೇ ಸಮಯಕ್ಕೆ ಕ್ರಿಷಿತಾ ಅವರಿಗೆ ತಮ್ಮ ಸ್ನೇಹಿತೆಯೊಬ್ಬರು ಮಿಸ್ ಕರ್ನಾಟಕ ಆಡಿಶನ್ ಗೇ ಹೋಗುವಂತೆ ಸಲಹೆ ನೀಡುತ್ತಾರೆ.. ಇದೇ ವೇಳೆ ತಮ್ಮ ಕುಟುಂಬದಿಂದ ದೂರ ಉಳಿದಿದ್ದ ಕ್ರಿಶಿ ಅವರು ಬೆಂಗಳೂರಿನ ಪೀಜಿ ಒಂದರಲ್ಲಿ ನೆಲೆಸುತ್ತಾರೆ.. ಇನ್ನೂ ಪೀಜಿಗೆ ಬಾಡಿಗೆ ಕಟ್ಟಲು ತನ್ನ ಬಳಿ ಹಣವಿಲ್ಲದ ಕಾರಣ..

[widget id=”custom_html-3″]

ಬಾಡಿಗೆ ಕಟ್ಟಲು ಹಣವಿಲ್ಲ, ಏನು ಮಾಡುವುದು ಎಂಬ ಆಲೋಚನೆಯಲ್ಲೇ ಒದ್ದಾಡುತ್ತಾರೆ ನಟಿ ಕ್ರಿಷಿತಾ ಪಾಂಡಾ ಅವರು. ನಂತರ ಬಾಡಿಗೆ ಕಟ್ಟಲು ಪೀಜಿ ಓನರ್ ಮನೆಯಲ್ಲೇ ಕೆಲಸ ಮಾಡುತ್ತಾರೆ.. ಕೆಲಸ ಮಾಡುತ್ತಿದ್ದರಿಂದ ಮನೆಯ ಓನರ್ ಕ್ರಿಷಿತಾ ಬಳಿ ಬಾಡಿಗೆ ಹಣ ಕೇಳುವುದಿಲ್ಲ. ಇದೇ ವೇಳೆ ಅದೃಷ್ಟವೆಂಬಂತೆ ಕ್ರಿಷಿತಾ ಪಾಂಡಾ ಅವರಿಗೆ ಮಿಸ್ ಕರ್ನಾಟಕ ಒಲಿದು ಬರುತ್ತದೆ.. ಕ್ರಿಷಿತಾ ಅವರು ತುಂಬಾ ಸ್ವಾಭಿಮಾನಿಯಾಗಿದ್ದ ಕಾರಣ ತಂದೆ ತಾಯಿಯ ಬಳಿ ಏನನ್ನು ಕೂಡ ಅಪೇಕ್ಷಿಸದೇ ತನ್ನ ಸ್ವಂತ ಬುದ್ದಿ ಶಕ್ತಿಯ ಮೇಲೆ ಬದುಕುತ್ತಾರೆ.

[widget id=”custom_html-3″]

ನಂತರ ಬಿಗ್ ಬಾಸ್ ಗೆ ಆಯ್ಕೆಯಾಗಿ ಬಿಗ್ ಮನೆಗೆ ಎಂಟ್ರಿಕೊಟ್ಟ ಕ್ರಿಷಿತಾ ಅವರು ಹಲವು ದಿನಗಳ ಕಾಲ ಉಳಿದು ತನ್ನದೇ ಆದ ಹೆಸರು ಮಾಡುತ್ತಾರೆ.. ನಾನು ಮನೆ‌ ಕೆಲಸ ಮಾಡಿರುವುದು, ಇಷ್ಟೆಲ್ಲಾ ಕಷ್ಟ ಪಟ್ಟಿರುವ ಬಗ್ಗೆ ನಮ್ಮ ತಂದೆ ತಾಯಿಗೆ ಸ್ವಲ್ಪವೂ ತಿಳಿದಿಲ್ಲ. ನಾನು ಹೇಳಿಯೂ ಇಲ್ಲಾ.. ಅದಕ್ಕಾಗಿ ನಾನು ಕ್ಷಮೆ ಕೇಳುತ್ತೇನೆ ಎಂದು ಮಾಧ್ಯಮಗಳ ಮುಂದೆ ಕ್ರಿಷಿತಾ ಅವರು ಹೆಳಿಕೊಂಡಿದ್ದಾರೆ. ಕ್ರಿಷಿತಾ ಪಾಂಡಾ ಅವರು ಕನ್ನಡಕ್ಕಾಗಿ ಒಂದನ್ನು ಒತ್ತಿ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ.. ಹಲವು ಜಾಹಿರಾತುಗಳಲ್ಲಿಯೂ ಕೂಡ ಕಾಣಿಸಿಕೊಂಡಿದ್ದಾರೆ. ಈ ನಟಿಯ ಸ್ವಾಭಿಮಾನ ಹಾಗು ಬೆಳೆದು ಬಂದ ಹಾದಿಯ ಬಗ್ಗೆ ನಿವೇನು ಹೇಳುವದಕ್ಕೆ ಇಷ್ಟ ಪಡ್ತೀರಾ..