Advertisements

ಇಲ್ಲೇ ನೋಡಿ ಕೃಷ್ಣನಿಗೆ ಶಮಂತಕ ಮಣಿ ಸಿಕ್ಕಿದ್ದು!

Cinema

ಪ್ರಿಯ ಓದುಗರೆ ರಾಮಾಯಣ ಮತ್ತು ಮಹಾಭಾರತದಲ್ಲಿ ಬರುವ ಈ ಶಮಂತಕ ಮಣಿಯ ಬಗ್ಗೆ ನಾವು ನಿಮಗೆ ತಿಳಿಸುತ್ತೇವೆ. ಸಮಂತಕ ಮಣಿ ಯಾವುದು? ಯಾರು? ಯಾರಿಗೆ?ಯಾರು ನೀಡಿದರು.? ಶ್ರೀ ಕೃಷ್ಣ ಯಾರೊಂದಿಗೆ ಈ ಮನಿಗಾಗಿ ಯು’ದ್ಧ ಮಾಡಬೇಕಾಯಿತು? ಈ ಎಲ್ಲ ಮಾಹಿತಿಯನ್ನು ನಾವು ನಿಮಗೆ ಈ ಲೇಖನದಲ್ಲಿ ತಿಳಿಸುತ್ತೇನೆ. ಓದುಗರೇ ಈ ಶಮಂತಕ ಮಣಿಯನ್ನು ಯಾರು ಯಾರಿಗೆ ನೀಡಿದರು ಎಂದು ನೋಡುವುದಾದರೆ, ಹಿಂದೆ ಯದುಕುಲದಲ್ಲಿ ಸತ್ರಾರ್ಜಿತ ಎಂಬ ರಾಜನಿಗೆ ತಪಸ್ಸಿನ ಪ್ರತಿಫಲವಾಗಿ ಸೂರ್ಯದೇವನು ನೀಡಿದ ವಿಶೇಷ ಮಣಿಯೇ ಶಮಂತಕ ಮಣಿ. ಈ ಮಣಿಯೂ ಸತ್ರಾಜೀತ ರಾಜನಿಗೆ ನಿತ್ಯವೂ ಹೊನ್ನ ರಾಶಿಯನ್ನು ನೀಡುತ್ತಿತ್ತು. ಈ ವಿಶೇಷ ಮಣಿಯ ಬಗ್ಗೆ ದ್ವಾರಕ ಜನರಿಂದ ಕೃಷ್ಣನಿಗೆ ತಿಳಿಯುತ್ತದೆ. ಆಗ ಶ್ರೀಕೃಷ್ಣನು ಸತ್ರಾಜಿತ ನನ್ನು ಕರೆದು ಆ ಮಣೀ ಯನ್ನು ರಾಜರ ಆಸ್ಥಾನಕ್ಕೆ ನೀಡುವಂತೆ ಕೇಳುತ್ತಾನೆ. ಅದು ಅಲ್ಲದೆ ಮೌಲ್ಯವರ್ಧಿತ ಬೆಲೆಬಾಳುವ ಈ ಶಮಂತಕ ಮಣಿಯಿಂದ ನಿನಗೆ ತೊಂದರೆ, ಪ್ರಾ’ಣಾ’ಪಾಯ ಸಂಭವಿಸಬಹುದು. ಇದು ಸಾಮಾನ್ಯರ ಬಳಿ ಇರುವುದು ಕ್ಷೇಮವಲ್ಲ ಎಂದು ಹೇಳುತ್ತಾನೆ. ಆದರೆ ಸತ್ರಾಜಿತ ಇದು ನನ್ನ ತಪಸ್ಸಿಗೆ ಸಿಕ್ಕ ವರದಾನ. ನಾನು ಯಾರಿಗೂ ಇದನ್ನು ನೀಡಲಾರೆ ಎಂದು ಕೃಷ್ಣನಿಗೆ ಮಣಿಯನ್ನು ನೀಡಲು ನಿರಾಕರಿಸುತ್ತಾನೆ.

[widget id=”custom_html-3″]

Advertisements

ಕೃಷ್ಣನು ಸುಮ್ಮನಾಗಿ ಸತ್ರಾಜಿತ ನನ್ನು ವಾಪಸ್ ಕಳಿಸಿಕೊಡುತ್ತಾನೆ. ದ್ವಾರಕಾದ್ಯಂತ ದೊಡ್ಡ ಸುದ್ದಿಯಾದ ಈ ಮಣೀ ಯನ್ನು ಯಾರಾದರೂ ಕದಿಯುತ್ತಾರೆ ಎಂಬ ಕಾರಣಕ್ಕೆ ರಾಜ ಇದನ್ನು ದಾರದಲ್ಲಿ ಹಾಕಿ ಕೊರಳಲ್ಲಿ ಧರಿಸಿ ಓಡಾಡುತ್ತಾನೆ.
ಇದಾದ ಕೆಲ ದಿನಗಳ ನಂತರ ಸತ್ರಾಜಿತ ರಾಜನು ಬೇಟೆಗಾಗಿ ಕಾಡಿಗೆ ಹೋಗುತ್ತಾನೆ. ಆಗ ಸಿಂಹವೊಂದು ಈತನ ಕೊರಳಲ್ಲಿದ್ದ ಹಾರಕ್ಕಾಗಿ ಆತನ ಮೇಲೆ ಎರಗಿ, ರಾಜನನ್ನು ಕೊಂದು ಆಹಾರವನ್ನು ತಾನು ಧರಿಸಿ ಸಾಗುತ್ತದೆ. ಕಾಡಿನಲ್ಲಿ ಹಾರವನ್ನು ಧರಿಸಿ ಹೋರಾಡುತ್ತಿರುವ ಸಿಂಹವನ್ನು ಕಂಡ ಜಾಂಬುವಂತ ಸಿಂಹವನ್ನು ಅಚ್ಚರಿಯಿಂದ ನೋಡುತ್ತಾನೆ. ಜಾಂಬುವಂತ ಸಿಂಹದೊಂದಿಗೆ ಹೋರಾಡಿ ಹರಸಾಹಸದಿಂದ ಸಿಂಹವನ್ನು ಕೊಂ’ದು ಈ ಮಣಿಯನ್ನು ತಾನು ಪಡೆದು, ತನ್ನ ಮಗಳು ಜಂಭುವಂತಿಗೆ ನೀಡುತ್ತಾನೆ. ಇತ್ತ ಶ್ರೀಕೃಷ್ ಗಣೇಶ ಚತುರ್ಥಿಯಂದು ಚಂದ್ರನ ದರ್ಶನ ಮಾಡಬಾರದು ಎಂದು ತಿಳಿದಿದ್ದರೂ ತಪ್ಪಿ ತತ್ವದರ್ಶನ ಮಾಡುತ್ತಾನೆ. ಗೋಗಳನ್ನು ಮೇಯಿಸಿಕೊಂಡು ವಾಪಸ್ ಮನೆಯಕಡೆಗೆ ಹೊರಟಿರುವಾಗ ಕಾಡಿನ ದಾರಿಯಲ್ಲಿ ಗೋವುಗಳ ಹೆಜ್ಜೆಯಲ್ಲಿ ನಿಂತ ನೀರಿನಲ್ಲಿ ಚಂದ್ರನ ದರ್ಶನ ಪಡೆದ ಶ್ರೀಕೃಷ್ಣನಿಗೆ ಕಳ್ಳತನದ ಆ’ರೋ’ಪ ಬರುತ್ತದೆ.
ಹೌದು ಭೇಟಿಗಾಗಿ ಹೋದ ಸತ್ರಾಜಿತ ತುಂಬಾ ದಿನಗಳೇ ಕಳೆದರೂ ಮರಳಿ ಬರುವುದಿಲ್ಲ.

[widget id=”custom_html-3″]

ಆತ ಬೇ’ಟೆಗಾಗಿ ಹೋದವ ಮರಳಿ ಬರದಿದ್ದಾಗ ಆತನ ಪತ್ನಿ ಹಾಗೂ ದ್ವಾರಕ ದ ಜನರೆಲ್ಲರೂ ಶಮಂತಕಮಣಿಗಾಗಿ ಕೃಷ್ಣನನು ರಾಜ ಸತ್ರಾಜೀತನನ್ನು ಸಾ’ಯಿ’ಸಿರಬೇಕು ಎಂದು ಆ’ರೋ’ಪಿಸುತ್ತಾರೆ. ಇದು ಶ್ರೀಕೃಷ್ಣನ ಗುಪ್ತಚರ ರಿಂದ ಕೃಷ್ಣನ ಕಿವಿಗೆ ಬೀಳುತ್ತದೆ. ಜಾಂಬುವಂತ ಸಿಂಹದೊಂದಿಗೆ ಕಾದಾಡಿ, ಹೋರಾಡಿ, ಹರಸಾಹಸದಿಂದ ಪಡೆದ ಶಮಂತಕ ಮಣಿಯನ್ನು ತನ್ನ ಮಗಳಾದ ಜಂಭುವಂತಿ ಕೊರಳಲ್ಲಿ ಹಾಕಿರುತ್ತಾನೆ. ಇದರಿಂದ ಮಗಳು ಜಂಭುವಂತಿ ಅತೀ ಸಂತೋಷದಿಂದ ಇರುತ್ತಾಳೆ.
ಇದಾದ ಕೆಲ ದಿನಗಳಲ್ಲಿ ಕೃಷ್ಣ ತನ್ನ ಮೇಲೆ ಬಂದ ಕಳ್ಳತನ ಆರೋಪದಿಂದ ಮುಕ್ತರಾಗಲು ಸೈನಿಕರೊಂದಿಗೆ ಕಾಡಿಗೆ ಹೋಗುತ್ತಾನೆ. ಕಾಡಿನಲ್ಲಿ ಸ್ವಲ್ಪ ದೂರದ ನಂತರ ಸತ್ರಾಜಿತನ ಶ’ವ ಪತ್ತೆಯಾಗುತ್ತದೆ. ಆತನ ದೇಹದಲ್ಲಿ ಸಿಂಹದ ದಾ’ಳಿ ಗುರುತುಗಳು ಪತ್ತೆಯಾಗುತ್ತವೆ. ಸಿಂಹ ದಾಳಿಯಲ್ಲಿ ಸಮಂಥಕಮಣಿ ಇಲ್ಲೆಲ್ಲಾದರೂ ಬಿದ್ದಿರಬಹುದೆಂದು ಕೃಷ್ಣ ಮತ್ತು ಸೈನಿಕರು ಹುಡುಕಾಡುತ್ತಾರೆ. ಆದರೆ ಅಲ್ಲೆಲ್ಲಿಯೂ ಶಮಂತಕ ಮಣಿ ಸಿಗುವುದಿಲ್ಲ. ನಂತರ ಸಿಂಹದ ಹೆಜ್ಜೆಯನ್ನು ಹಿಂಬಾಲಿಸಿ ಕಾಡಿನಲ್ಲಿ ಸ್ವಲ್ಪ ದೂರ ಸಾಗಿದಾಗ ಸಿಂಹದ ಶ’ವ ಪತ್ತೆಯಾಗುತ್ತದೆ.

[widget id=”custom_html-3″]

ಕರಡಿಯೊಂದು ಅದರ ಮೇಲೆ ದಾ’ಳಿ ಮಾಡಿದ್ದು ಕಂಡು ಬರುತ್ತದೆ. ಅಲ್ಲಿಯೂ ಶಮಂತಕ ಮಣಿ  ಸಿಗುವುದಿಲ್ಲ. ನಂತರ ಕೃಷ್ಣ ಸೈನಿಕರೊಂದಿಗೆ ಮತ್ತೆ ಕರಡಿಯ ಹೆಜ್ಜೆಗಳನ್ನು ಗುರುತಿಸಿಕೊಂಡು ಮುಂದೆ ಸಾಗುತ್ತಾನೆ. ಆ ಹೆಜ್ಜೆಗುರುತುಗಳನ್ನು ಹಿಂಬಾಲಿಸಿ ಗುಹೆಯ ಒಳಗೆ ಪ್ರವೇಶ ಮಾಡುತ್ತಾನೆ. ಗುಹೆ ಪ್ರವೇಶಿಸಿದ ಶ್ರೀಕೃಷ್ಣನಿಗೆ ಜಾಂಬುವಂತಿ ಕೊರಳಲ್ಲಿ ಶಮಂತಕ ಮಣಿ  ಹಾರ ಕಂಗೊಳಿಸುತ್ತಿರುವುದು ಕಾಣಿಸುತ್ತದೆ. ಆ ಮಣಿಯನ್ನು ಮರಳಿಸುವಂತೆ ಜಂಭುವಂತಿಗೆ ಶ್ರೀಕೃಷ್ಣನು ಕೇಳಿದಾಗ ಜಾಂಬುವಂತಿ ನಿರಾಕರಿಸುತ್ತಾಳೆ. ತಂದೆಯನ್ನು ಕರೆದಾಗ ಜಾಂಬುವಂತ ಶ್ರೀಕೃಷ್ಣ ನೊಂದಿಗೆ ಸತತ 21ದಿನಗಳ ಕಾಲ ಯು’ದ್ಧ ಮಾಡುತ್ತಾನೆ. ಇಬ್ಬರು ಸೋಲುವ ಲಕ್ಷಣಗಳು ಕಾಣದಿದ್ದಾಗ ಶ್ರೀಕೃಷ್ಣನಿಗೆ ತಿಳಿಯುತ್ತದೆ. ಈತ ಬಹುಶಃ ರಾಮನೇ ಇರಬೇಕು ಎಂದು. ಅದರಂತೆ ಜಾಂಬುವಂತನ ರೂಪದಲ್ಲಿದ್ದ ರಾಮನಿಗೂ ತಿಳಿಯುತ್ತದೆ ಈತ ಶ್ರೀಕೃಷ್ಣ ಎಂದು.

[widget id=”custom_html-3″]

ನಂತರ ಜಾಂಬುವಂತ ಶ್ರೀಕೃಷ್ಣನಿಗೆ ಕ್ಷಮೆಯಾಚಿಸಿ, ಶಮಂತಕ ಮಣಿ  ಜೊತೆಗೆ ತನ್ನ ಮಗಳು ಜಾಂಬುವಂತಿಯನ್ನು ಸಹ ನೀಡಿ ಅದೇ ಗುಹೆಯಲ್ಲಿ ವಿವಾಹ ಮಾಡಿಕೊಡುತ್ತಾನೆ. ನಂತರ ಶ್ರೀಕೃಷ್ಣನಿಂದ ಮೋಕ್ಷ ಪಡೆಯುತ್ತಾನೆ. ನಂತರ ದ್ವಾರಾಕ್ಕಕ್ಕೆ ಬಂದ ಶ್ರೀಕೃಷ್ಣನು ನಡೆದ ವೃತ್ತಾಂತಗಳನ್ನು ಜನರಿಗೆ ತಿಳಿಸುತ್ತಾನೆ. ತನ್ನ ಮೇಲೆ ಬಂದ ಕ’ಳ್ಳ’ತನದಿಂದ ಮುಕ್ತನಾಗುತ್ತಾನೆ.
ಇಂದಿಗೂ ಈ ಗುಹೆಯನ್ನು ಜಾಂಬುವಂತನ ಗುಹೆ ಎಂದು ಕರೆಯುತ್ತಾರೆ. ಇದು ಗುಜರಾತ್ ರಾಜ್ಯದ ಪೋರಬಂದರಿನ ರೈಲು ನಿಲ್ದಾಣದಿಂದ, ಸುಮಾರು 17 ಕಿಲೋಮೀಟರ್ ದೂರದಲ್ಲಿರುವ ರಣಭವ ಎಂಬಲ್ಲಿ ಇದೆ. ಇದನ್ನು ಪ್ರವೇಶ ಮಾಡಲು ಅತಿ ಇಕ್ಕಟ್ಟಾದ ದಾರಿ ಇದೆ. ಕೇವಲ ಒಬ್ಬರು ಮಾತ್ರ ಸಾಗಬಹುದು. ಒಳ ಪ್ರವೇಶಿಸಿದ ನಂತರ ಅಲ್ಲಿ ವಿಶಾಲ ಜಾಗವಿದೆ. ಅಲ್ಲಿ ಐವತ್ತಕ್ಕೂ ಹೆಚ್ಚು ಶಿವಲಿಂಗ ಗಳು ಇವೆ. ಪ್ರತಿ ಲಿಂಗಗಳಿಗೆ ಗುಹೆಯ ಮೇಲ್ಚಾವಣಿಯಿಂದ ಸತತವಾಗಿ ಹನಿ ಹನಿ ನೀರು ಬೀಳುತ್ತದೆ. ಗುಹೆಗಳಿಗೆ ಎರಡು ದ್ವಾರಗಳಿದ್ದು, ಒಂದು ದ್ವಾರಕಾ ನಗರಕ್ಕೆ ಹೋದರೆ, ಇನ್ನೊಂದು ಸುರಂಗಮಾರ್ಗ ಜುನಾಗಢ ತೇರಳುತ್ತದೆ. ಇದೀಗ ಸುರಕ್ಷಾ ದೃಷ್ಟಿಯಿಂದ ಈ ದ್ವಾರಗಳನ್ನು ಮುಚ್ಚಲಾಗಿದೆ. ಇದು ರಾಮ ಮತ್ತು ಶ್ರೀ ಕೃಷ್ಣನ ಹಾಗೂ ಕೃಷ್ಣ ಮತ್ತು ಜಂಭುವಂತಿಯ ವಿವಾಹವಾದ ಪುಣ್ಯ ಸ್ಥಳದ ಸಂಕೇತವಾಗಿದೆ..

[widget id=”custom_html-3″]