Advertisements

ಶ್ರೀ ಕೃಷ್ಣನು ಭಗವಾನ್ ಶಿವನ ಮೇಲೆ ಸುದರ್ಶನ ಚಕ್ರ ಬಿಟ್ಟಿದ್ದೇಕೆ ! ಮುಂದಾಗಿದ್ದೆನು ?

Adyathma Kannada Mahiti

ಸ್ನೇಹಿತರೆ, ದಾನವರಲ್ಲಿ ದೈತ್ಯ ರಾಜನಾಗಿದ್ದ ಬಲಿಚಕ್ರವರ್ತಿಗೆ ನೂರು ಜನ ಮಕ್ಕಳಿದ್ದರು. ಇವರಲ್ಲಿ ಅತ್ಯಂತ ಪರಾಕ್ರಮ ಶಾಲಿಯಾದವನು ಬಾಣಾಸುರ. ಈ ಬಾಣಾಸುರ ದೇವಾದಿ ದೇವ ಮಹದೇವನನ್ನ ಕುರಿತು ಕಠಿಣ ತಪಸ್ಸನ್ನ ಮಾಡುತ್ತಾನೆ. ಇವನ ತಪಸ್ಸಿಗೆ ಮೆಚ್ಚಿದ ಈಶ್ವರ ಪ್ರತ್ಯಕ್ಷನಾಗಿ ಸಹಸ್ರ ಬಾಹುಗಳ ಜೊತೆಗೆ ಅಪಾರವಾದ ಶಕ್ತಿಯನ್ನ ವರದಾನವಾಗಿ ನೀಡುತ್ತಾನೆ. ಇನ್ನು ಇವನ ಅಪಾರ ಬಲ ಮತ್ತು ಸಹಸ್ರ ಬಾಹುಗಳ ಬಗ್ಗೆ ತಿಳಿದಿದ್ದ ಯಾರೂ ಕೂಡ ಭಯದಿಂದ ಬಾಣಾಸುರನ ಮುಂದೆ ಯುದ್ಧ ಮಾಡುತ್ತಿರಲಿಲ್ಲ. ಅನೇಕ ವರ್ಷಗಳ ಕಾಲ ಬಾಣಾಸುರನ ಮುಂದೆ ಯುದ್ಧ ಮಾಡಲು ಯಾರೂ ಬಾರದ ಕಾರಣ ಬಾಣಾಸುರ ತುಂಬಾ ಅಹಂಕಾರಿಯಾಗಿಬಿಡುತ್ತಾನೆ.

Advertisements

ಇನ್ನು ಇದೆ ಅಹಂಕಾರದಿಂದಲೇ ಒಂದು ದಿನ ಭಗವಾನ್ ಶಿವನ ಮುಂದೆ ಹೋದ ಬಾಣಾಸುರ..ಹೇ ಪ್ರಭು ನನಗೆ ಯುದ್ಧ ಮಾಡುವ ಬಯಕೆಯಾಗುತ್ತಿದೆ.ಆದರೆ ಯಾರೂ ನನ್ನೊಂದಿಗೆ ಯುದ್ಧ ಮಾಡುತ್ತಿಲ್ಲ. ಕೃಪೆ ಮಾಡಿ ನೀವೇ ನನ್ನೊಂದಿಗೆ ಯುದ್ಧ ಮಾಡಿ.ಬಾಣಾಸುರನ ಅಹಂಕಾರದ ಮಾತನ್ನ ಕೇಳಿ ಈಶ್ವರನಿಗೆ ತುಂಬಾ ಕೋಪ ಬಂದುಬಿಡುತ್ತದೆ. ಆದರೆ ಬಾಣಾಸುರ ಶಿವನ ಪರಮ ಭಕ್ತ. ಹಾಗಾಗಿ ತನ್ನ ಕ್ರೋಧವನ್ನ ಶಮನಮಾಡಿಕೊಂಡು ಶಿವ, ಹೇ ಮೂರ್ಖ ಬಾಣಾಸುರ, ನಿನ್ನೊಂದಿಗೆ ಯುದ್ಧ ಮಾಡಿ ನಿನ್ನ ಅಹಂಕಾರವನ್ನ ಛಿದ್ರ ಛಿದ್ರ ಮಾಡುವವನು ಈಗಾಗಲೇ ಹುಟ್ಟಿದ್ದಾನೆ.ನಿನ್ನ ಅರಮನೆಯ ಧ್ವಜ ಯಾವತ್ತು ಬೀಳುತ್ತದೆ, ಅಂದು ನೀನು ತಿಳಿ ನಿನ್ನ ಶತ್ರು ಬಂದಿದ್ದಾನೆ ಅಂತ.

ಬಾಣಾಸುರನಿಗೆ ಉಷಾ ಎಂಬ ಮಗಳಿರುತ್ತಾಳೆ. ಒಂದು ದಿನ ರಾಜಕುಮಾರಿ ಉಷಾ ಶ್ರೀಕೃಷ್ಣನ ಮೊಮ್ಮಗ, ಪ್ರದ್ಯುಮ್ನನ ಮಗ ಅನಿರುದ್ಧನನ್ನ ಕನಸಿನಲ್ಲಿ ನೋಡುತ್ತಾಳೆ. ಹಾಗೂ ಅವನ ಮೇಲೆ ಮೋಹಿತಳಾಗುತ್ತಾಳೆ. ಇನ್ನು ತಾನು ಕಂಡ ಕನಸಿನ ಬಗ್ಗೆ ತನ್ನ ಸಖಿ ಚಿತ್ರಲೇಖಾಳಿಗೆ ಹೇಳುತ್ತಾಳೆ. ಚಿತ್ರಲೇಖಾ ತನ್ನ ಯೋಗಬಲದಿಂದ ಅನಿರುದ್ದನ ಚಿತ್ರ ಬರೆದು ಉಷಾಗೆ ತೋರಿಸುತ್ತಾಳೆ. ಇನ್ನು ಈ ಚಿತ್ರವನ್ನ ನೋಡಿದ ಉಷಾ ಇವನನ್ನೇ ನಾನು ಸ್ವಪ್ನದಲ್ಲಿ ಕಂಡದ್ದು ಎಂದು ಹೇಳುತ್ತಾಳೆ. ಹಾಗೂ ಅನಿರುದ್ಧನನ್ನ ಬಿಟ್ಟು ನಾನು ಇರಲಾರೆ ಎಂದು ಉಷಾ ಹೇಳುತ್ತಾಳೆ. ಬಳಿಕ ಚಿತ್ರಲೇಖಾ ದ್ವಾರಕಾ ನಗರಕ್ಕೆ ಹೋಗಿ ಮಲಗಿದ್ದ ಅನಿರುದ್ಧನನ್ನ ಮಂಚದ ಸಮೇತ ಉಷಾ ಮಹಲಿಗೆ ತಂದು ಬಿಡುತ್ತಾಳೆ. ಇನ್ನು ನಿದ್ದೆಯಿಂದ ಕಣ್ಣು ಬಿಟ್ಟ ಅನಿರುದ್ಧನಿಗೆ ನಾನು ಯಾವುದೊ ಹೊಸ ಜಗದಲ್ಲಿ ಇದ್ದೇನೆ ಎಂದೆನಿಸುತ್ತದೆ. ಹಾಗೆಯೆ ಎದುರುಗಡೆ ನೋಡಿದಾಗ ಅಪ್ರತಿಮ ಸುಂದರಿ ಉಷಾ ಕುಳಿತಿರುತ್ತಾಳೆ. ಆಗ ನೀನು ಯಾರು ಎಂದು ಅನಿರುದ್ಧ ಕೇಳಿದಾಗ, ನಾನು ಬಾಣಾಸುರನ ಪುತ್ರಿ ಉಷಾ, ನಿಮ್ಮನ್ನ ಮದುವೆಯಾಗಲು ಬಯಸುತ್ತೇನೆ ಎಂದು ಹೇಳುತ್ತಾಳೆ. ಇನ್ನು ಅನಿರುದ್ಧ ಕೂಡ ಉಷಾ ಮೇಲೆ ಮೋಹಿತನಾಗಿ ಅವಳ ಜೊತೆಯಲ್ಲೇ ಅದೇ ಅರಮನೆಯಲ್ಲಿ ವಾಸಮಾಡುತ್ತಾನೆ.

ಇನ್ನು ಇದೆ ವೇಳೆ ಬಾಣಾಸುರನು ತನ್ನ ಅರಮನೆಯ ಮೇಲಿನಿಂದ ಧ್ವಜ ಬಿಳುತ್ತಿರುವುದನ್ನ ನೋಡುತ್ತಾನೆ. ಆಗ ಅವನಿಗೆ ಗೊತ್ತಾಗಿಬಿಡುತ್ತೆ, ಉಷಾ ಮಹಲಿನ ಒಳಗಡೆ ಯಾರೋ ಶತ್ರು ಪ್ರವೇಶ ಮಾಡಿದ್ದಾನೆ ಅಂತ. ಆಗ ಶಸ್ತ್ರ ಸಜ್ಜಿತ ಸಮೇತನಾಗಿ ಪುತ್ರಿ ಉಷಾ ತಂಗಿದ್ದ ಮಹಲಿಗೆ ಹೋಗಿ ನೋಡುತ್ತಾನೆ, ಅಲ್ಲಿ ಉಷಾ ಪಕ್ಕದಲ್ಲಿ ಪೀತಾಂಬರ ಧರಿಸಿದ್ದ, ದೊಡ್ಡ ದೊಡ್ಡ ನೇತ್ರಗಳಿರುವ ಪುರುಷನೊಬ್ಬ ಕುಳಿತಿರುವುದನ್ನ. ಇನ್ನು ಇದನ್ನ ಕಂಡು ಕೋಪಾದ್ರಿಕ್ತನಾದ ಬಾಣಾಸುರ ಅನಿರುದ್ಧನನ್ನ ಯುದ್ಧಕ್ಕೆ ಕರೆಯುತ್ತಾನೆ. ಅನಿರುದ್ಧ ಕೂಡ ಬಾಣಾಸುರನ ಮೇಲೆ ಯುದ್ಧಕ್ಕೆ ಬರುತ್ತಾನೆ. ಇಬ್ಬರ ನಡುವೆ ಘೋರವಾದ ಯುದ್ಧ ನಡೆಯುತ್ತೆ. ಇನ್ನು ನಿಯಂತ್ರಣಕ್ಕೆ ಬಾರದ ಅನಿರುದ್ಧನನ್ನ ಬಾಣಾಸುರನನ್ನ ನಾಗಪಾಶವನ್ನ ಉಪಯೋಗಿಸಿ ಬಂದಿಯನ್ನಾಗಿ ಮಾಡುತ್ತಾನೆ. ಇನ್ನು ದೇವರ್ಷಿ ನಾರದರ ಮೂಲಕ ಅನಿರುದ್ಧ ಬಾಣಾಸುರನ ಬಂದಿಯಾಗಿರುವುದನ್ನ ತಿಳಿದ ಶ್ರೀಕೃಷ್ಣ ಬಲರಾಮರು ತಮ್ಮ ಸೈನ್ಯ ಸಮೇತ ಬಾಣಾಸುರನ ನಗರವಾದ ಶೋಣಿತ ಪುರಕ್ಕೆ ಬರುತ್ತಾರೆ. ಇನ್ನು ಬಾಣಾಸುರನು ತನ್ನ ಸೈನ್ಯ ಸಮೇತ ಬಂದು ಎರಡು ಸೈನ್ಯಗಳ ನಡುವೆ ಘನ ಘೋರವಾದ ಯುದ್ಧ ನಡೆಯುತ್ತದೆ.

ಇನ್ನು ಶ್ರೀಕೃಷ್ಣ ಮತ್ತು ಬಾಣಾಸುರನ ನಡುವೆ ಯುದ್ಧ ನಡೆದು, ಬಾಣಾಸುರನ ಮೇಲೆ ಕೃಷ್ಣನು ತನ್ನ ಸುದರ್ಶನ ಚಕ್ರವನ್ನ ಪ್ರಯೋಗ ಮಾಡುತ್ತಾನೆ. ಇನ್ನೇನು ತನ್ನ ಸಾವು ಸಮೀಪವಾಗುತ್ತಿದೆ ಎಂದರಿತ ಬಾಣಾಸುರನು ನನ್ನನ್ನ ಕಾಪಾಡು ಎಂದು ಮಹಾದೇವನನ್ನ ಪ್ರಾರ್ಥಿಸುತ್ತಾನೆ. ಭಕ್ತನ ಕೋರಿಕೆಗೆ ಪ್ರತ್ಯಕ್ಷನಾದ ಶಿವನು ಸುದರ್ಶನವನ್ನ ತಡೆದು, ತನ್ನ ಭಕ್ತನನ್ನ ರಕ್ಷಣೆ ಮಾಡುವ ಸಲುವಾಗಿ ಕೃಷ್ಣನೊಂದಿಗೆ ಯುದ್ಧ ಮಾಡುತ್ತಾನೆ. ಇನ್ನು ಭಗವಾನ್ ರಕ್ಷಣೆಯಲ್ಲಿದ್ದ ಬಾಣಾಸುರನನ್ನ ಸೋಲಿಸಲು ಆಗದಿದ್ದಾಗ ಭಗವಾನ್ ಕೃಷ್ಣ ಶಿವನಲ್ಲಿ ಪ್ರಾರ್ಥನೆ ಮಾಡುತ್ತಾನೆ. ಆಗ ಮಹಾದೇವನು ಕೃಷ್ಣನಿಗೆ ನೀನು ಬಾಣವೊಂದನ್ನ ಬಿಡು, ನಾನು ನಿದ್ದೆಗೆ ಜಾರಿಬಿಡುತ್ತೇನೆ..

ಆಗ ಕೃಷ್ಣನು ಶಿವನ ಮೇಲೆ ಬಾಣ ಬಿಡುತ್ತಾನೆ, ತಕ್ಷಣವೇ ಶಿವಶಂಕರನಿಗೆ ನಿದ್ದೆ ಬಂದು ಮಲಗಿ ಬಿಡುತ್ತಾನೆ. ಬಳಿಕ ಕೃಷ್ಣನು ತನ್ನ ಸುದರ್ಶನ ಚಕ್ರದಿಂದ ಬಾಣಾಸುರನ ಸಹಸ್ರ ಬಾಹುಗಳನ್ನ ಕತ್ತರಿಸುಬಿಡುತ್ತಾನೆ. ಇನ್ನೇನು ಸುದರ್ಶನ ಚಕ್ರ ಬಾಣಾಸುರನ ತಳೆಯನಂ ತೆಗೆಯಬೇಕು ಎನ್ನುವಷ್ಟರಲ್ಲಿ ನಿದ್ದೆಯಿಂದ ಎಡ್ಡಾ ಶಿವ ಸುದರ್ಶನ ಚಕ್ರವನ್ನ ತಡೆಯುತ್ತಾನೆ. ಬಾಣಾಸುರ ನನ್ನ ಭಕ್ತನಾಗಿದ್ದಾನೆ, ಈಗ ಅವನ ಅಹಂಕಾರವೆಲ್ಲಾ ನಾಶವಾಗಿ ಹೋಗಿದೆ, ಅವನನ್ನ ಕ್ಷಮಿಸಿಬಿಡು ಕೃಷ್ಣಾ ಎಂದು ಹೇಳುತ್ತಾನೆ. ಇನ್ನು ಇದನ್ನೆಲ್ಲಾ ನೋಡಿದ ಬಾಣಾಸುರನು ಸಹ ಕೃಷ್ಣನಲ್ಲಿ ತನ್ನ ತಪ್ಪಿಗಾಗಿ ಕ್ಷಮೆ ಬೇಡುತ್ತಾನೆ..ಇನ್ನು ಮುಂದೆ ಧರ್ಮದಿಂದ ರಾಜ್ಯಭಾರ ನಡೆಸುವೆ ಎಂದು ಕೃಷ್ಣನಿಗೆ ಮಾತು ಕೊಡುತ್ತಾನೆ. ಹಾಗೂ ತನ್ನ ಪುತ್ರಿ ಉಷಾ, ಅಳಿಯ ಅನಿರುದ್ಧನನ್ನ ಗೌರವಯುತವಾಗಿ ಶ್ರೀಕೃಷ್ಣನೊಂದಿಗೆ ದ್ವಾರಕೆಗೆ ಕಳುಹಿಸಿಕೊಡುತ್ತಾನೆ.