Advertisements

ನೀವು ದಿನನಿತ್ಯ ಹೋಡಾಡೋ ಕೆ.ಎಸ್‌‌.ಆರ್‌.‌ಟಿಸಿ ಬಸ್ ನ ಇತಿಹಾಸ ಗೊತ್ತಾ.. ಈಗ ದಿನಕ್ಕೆ ಎಷ್ಟು ಜನ ಪ್ರಯಾಣ ಮಾಡ್ತಾರೆ ಗೊತ್ತಾ?

Kannada Mahiti

ಅನೇಕರು ಶಾಲೆಗೆ ಹೋಗಬೇಕಂದ್ರೆ, ಕೆಲಸಕ್ಕೆ ಹೋಗಬೇಕಾದ್ರೆ, ಮಾರ್ಕೆಟ್ ಹೋಗಬೇಕಾದ್ರೆ ಇವತ್ತು ಕೆಎಸ್‌ಆರ್‌ಟಿಸಿ ನಂಬಿಕೊಂಡಿರುತ್ತಾರೆ. ಆದರೆ ಎಷ್ಟೋ ಜನರಿಗೆ ಕೆಎಸ್‌ಆರ್‌ಟಿಸಿ ಹೇಗೆ ಶುರುವಾಯ್ತು.. ಎಲ್ಲಿಂದ ಇದು ಜನ ಸೇವೆ ಮಾಡಲಿಕ್ಕೆ ಶರಂಭಿಸಿದೆ ಎಂಬಿತ್ಯಾದಿ ವಿಚಾರಗಳ ಬಗ್ಗೆ ಅರಿವೇ ಇರುವುದಿಲ್ಲ. ಈ ಹಿನ್ನಲೆ ಇವತ್ತು ಕೆಎಸ್‌ಆರ್‌ಟಿಸಿ ಬಗೆಯ ಸಂಕ್ಷಿಪ್ತ ನೋಟ ನಿಮ್ಮ ಮುಂದೆ.. ಮೊದಲಿಗೆ ರಾಜ್ಯ ರಸ್ತೆ ಸಾರಿಗೆ ನಿಗಮವನ್ನು ಆರಂಭಿಸಿದ್ದು ಮೈಸೂರು ಸರ್ಕಾರದ ಅವಧಿಯಲ್ಲಿ 12 ಸೆಪ್ಟೆಂಬರ್ 1948ರ ಹೊತ್ತಿಗೆ ಮೈಸೂರು ಸರ್ಕಾರ ಸಾರ್ವಜನಿಕರಿಗೆ ಸಮರ್ಪಕವಾದ ಸಾರಿಗೆ ವ್ಯವಸ್ಥೆ ಮಾಡಬೇಕು ಎಂಬ ಉದ್ದೇಶದಿಂದ ಎಂಜಿಆರ್‌ಟಿಡಿ ಅನ್ನು ಶುರು ಮಾಡುತ್ತೆ. ಮುಂದಿನ ದಿನಗಳಲ್ಲಿ ಅಂದ್ರೆ 1961 ಅಗಸ್ಟ್ 1ರ ಹೊತ್ತಿಗೆ ಎಂಜಿಆರ್‌ಟಿಡಿ ಸ್ವತಂತ್ರ ಕಾರ್ಪರೇಶನ್ ಆಗಿ ಬದಲಾವಣೆಯಾಗುತ್ತೆ..

[widget id=”custom_html-3″]

Advertisements

ಅಲ್ಲಿಂದ ಎಂಎಸ್‌ಆರ್‌ಟಿಸಿ ಆಗಿ ಕಾರ್ಯನಿರ್ವಹಿಸುತ್ತೆ. ಮುಂದೆ ನವೆಂಬರ್ 1, 1973 ರಂದು ಮೈಸೂರು ರಾಜ್ಯವನ್ನು ಕರ್ನಾಟಕ ಅಂತ ಮರುನಾಮಕಾರಣ ಮಾಡಲಾಗುತ್ತೆ, ಅಂದಿನಿಂದ ಎಂಎಸ್‌ಆರ್‌ಟಿಸಿ, ಕೆಎಸ್‌ಆರ್‌ಟಿಸಿ ಆಗಿ ಕಾರ್ಯನಿರ್ವಹಿಸಲು ಶುರು ಮಾಡುತ್ತೆ. ಮುಂದೆ ಕೆಎಸ್‌ಆರ್‌ಟಿಸಿ ಬಿಎಂಟಿಸಿ ಆಗಿ ವಿಂಗಡಣೆಯಾಗಿ ಬೆಂಗಳೂರಿನಲ್ಲಿ ಸಾರಿಗೆ ಸೇವೆ ಒದಗಿಸುತ್ತೆ. ನಂತರ ಉತ್ತರ ಕರ್ನಾಟಕದ ಭಾಗದ ಜನರಿಗೆ ಸೇವೆ ನೀಡುವ ಸಲುವಾಗಿ ವಾಯುವ್ಯ ಕರ್ನಾಟಕ ಸಾರಿಗೆಯಾಗಿ, ಈಶಾನ್ಯ ಕರ್ನಾಟಕದ ಜನ ಹಿತಕ್ಕಾಗಿ ಈಶಾನ್ಯ ಕರ್ನಾಟಕ ಸಾರಿಗೆಯಾಗಿ ರಾಜ್ಯದ ನಾನಾ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಲು ಆರಂಭಿಸುತ್ತೆ.

[widget id=”custom_html-3″]

ಇನ್ನು ಕೆಎಸ್‌ಆರ್‌ಟಿಸಿಯ ಮುಖ್ಯ ಕಚೇರಿ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿದೆ. ಒಟ್ಟು 37 ಸಾವಿರಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಾರೆ. ನಿತ್ಯವೂ ಲಕ್ಷಾಂತರ ಜನರನ್ನು ಜಿಲ್ಲೆಯಿಂದ ಜಿಲ್ಲೆಗೆ ಕರೆದುಕೊಂಡು ಹೋಗುವ ಕೆಲಸವನ್ನು ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮಾಡುತ್ತಾರೆ. ಹಾಗೆಯೇ ಕೆಎಸ್‌ಆರ್‌ಟಿಸಿಯಲ್ಲಿ ಓಲಾ ಬಸ್‌ಗಳನ್ನು ಸಹ ಬಳಸಲಾಗುತ್ತಿದ್ದು, ಭಾರತದಲ್ಲಿ ಮೊಟ್ಟ ಮೊದಲು ಈ ಓಲಾ ಬಸ್‌ಗಳನ್ನು ಬಳಸಿದ ಹೆಗ್ಗಳಿಕೆ ಬೆಂಗಳೂರಿಗೆ ಸಲ್ಲುತ್ತದೆ.. ಒಟ್ಟಾರೆಯಾಗಿ ಕೆಎಸ್‌ಆರ್‌ಟಿಸಿ 8 ಸಾವಿರ ಬಸ್ ಹೊಂದಿದ್ದು, ಎನ್‌ಇಕೆಆರ್‌ಟಿಸಿ 4 ಸಾವಿರಕ್ಕೂ ಅಧಿಕ ಬಸ್‌ಗಳನ್ನು ಹೊಂದಿದೆ. ಎನ್‌ಡಬ್ಲೂಕೆಆರ್‌ಟಿಸಿ 4 ಸಾವಿರದ 700 ಕ್ಕೂ ಅಧಿಕ ಬಸ್ ಹೊಂದಿದೆ. ಇನ್ನು ಬಿಎಮ್ ಟಿಸಿ 4 ಸಾವಿರದ ಅಧಿಕ ಬಸ್‌ಗಳನ್ನು ಹೊಂದಿದೆ..