Advertisements

1947ರಲ್ಲಿ ಕೂಡಲಸಂಗಮ ಹೇಗಿತ್ತು ನೋಡಿ!

Temples

ಕನ್ನಡ ನಾಡು ಹಲವಾರು ಪುಣ್ಯಕ್ಷೇತ್ರಗಳ ಬಿಡಾಗಿದೆ. ಇಲ್ಲಿ ಅನೇಕ ಪ್ರವಾಸಿ ತಾಣಗಳು ಇವೆ. ಉತ್ತರ ಕರ್ನಾಟಕದ ಹೋದ್ರೆ ಅಲ್ಲಿ ಆಲಮಟ್ಟಿ ಜಲಾಶಯ ಮತ್ತು ಅಣೆಕಟ್ಟು ಹೆಸರುವಾಸಿಯಾಗಿದೆ. ಘಟಪ್ರಭಾ, ಮಲಪ್ರಭಾ,ಧೋನಿ, ಭೀಮಾ, ಕೃಷ್ಣ ಈ ಪಂಚ ನದಿಗಳ ನಾಡು ಬಾಗಲಕೋಟೆ ಮತ್ತು ವಿಜಯಪುರ.ಕೂಡಲಸಂಗಮನಾಥ ನೆಲೆಸಿದ ಪುಣ್ಯ ಸ್ಥಳವೂ ಹೌದು. ಸ್ವಾತಂತ್ರ್ಯ ಕಾಲದಲ್ಲಿ ಕೂಡಲಸಂಗಮನಾಥನ ದೇವಾಲಯ ಹೇಗಿತ್ತು ಗೊತ್ತಾ? ಅದು ಹೇಗೆ ಅಭಿವೃದ್ಧಿ ಆಯಿತು ಎಂದು ಇವತ್ತಿನ ಲೇಖನದಲ್ಲಿ ನೋಡೋಣ ಬನ್ನಿ. ಕೂಡಲಸಂಗಮವು ಕೃಷ್ಣಾ, ಮಲಪ್ರಭಾ ಹಾಗೂ ಘಟಪ್ರಭಾ ನದಿಗಳ ಸಂಗಮವಾಗಿದೆ. ಇದು ಬಾಗಲಕೋಟೆ ಜಿಲ್ಲೆಯ ಪವಿತ್ರ ಯಾತ್ರಾ ಸ್ಥಳವೂ ಹೌದು. ಇದು ಆಧ್ಯಾತ್ಮಿಕ ಮತ್ತು ಧಾರ್ಮಿಕ ಗುರುವಾದ ಬಸವಣ್ಣನ ಸಮಾಧಿ ಮತ್ತು ಐಕ್ಯ ಸ್ಥಳವಾಗಿದೆ. 11 ಮತ್ತು 12ನೇ ಶತಮಾನದಲ್ಲಿ ಬಸವಣ್ಣವರು ಜ್ಞಾನ ಜ್ಯೋತಿ ಬೆಳಗಿಸಿದ ಪವಿತ್ರ ಸ್ಥಳವಿದು. ಘಟಪ್ರಭಾ, ಮಲಪ್ರಭಾ,ಕೃಷ್ಣಾ ನದಿ ದಡದಲ್ಲಿ ಬಸವಣ್ಣನವರ ಐಕ್ಯಸ್ಥಳವಿತ್ತು. ನಾರಾಯಣಪುರ ಡ್ಯಾಮ್ ಕಟ್ಟಿಸಿದ ನಂತರ ಸ್ಥಳ ನೀರಿನಲ್ಲಿ ಮುಳುಗಿತ್ತು.

Advertisements

ಆಗಿನ ಮುಖ್ಯಮಂತ್ರಿ ಎಸ್ ನಿಜಲಿಂಗಪ್ಪ ಸಂರಕ್ಷಣೆಗೆ ಮುಂದಾಗಿದ್ದರು. ನಂತರ ದೇವರಾಜ ಅರಸರು 2.2 ಲಕ್ಷ ರೂ. ವೆಚ್ಚದಲ್ಲಿ ಈ ಐಕ್ಯ ಸ್ಥಳದ ಸುತ್ತಲೂ ದುಂಡಕಾರದ ಬಾವಿಯನ್ನು ರಚಿಸಿದರು. 1963 ರಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಇದಕ್ಕೆ ಹೊಸರೂಪ ಸಿಕ್ಕಿತ್ತು. ಜೊತೆಗೆ ಆಯ್ಕೆ ಮಂಟಪ ಹಾಗೂ ಬಸವಣ್ಣನವರ ಐಕ್ಯ ಸ್ಥಳಕ್ಕೆ ಹೋಗಲು ಮೆಟ್ಟಿಲುಗಳ ವ್ಯವಸ್ಥೆಯನ್ನು ಮಾಡಲಾಯಿತು. ನಂತರ 1997ರಲ್ಲಿ ಬಂದ ಮುಖ್ಯಮಂತ್ರಿ ಜೆ.ಎಚ್. ಪಟೇಲರು 36 ಕೋಟಿ ರೂಪಾಯಿ ಬಿಡುಗಡೆ ಮಾಡಿದರು. ಇದರಿಂದ ಕೂಡಲ ಸಂಗಮವು ಸಂಪೂರ್ಣವಾಗಿ ಅಭಿವೃದ್ಧಿಹೊಂದಿದ್ದು, ನಂತರ ಬಂದ ಮುಖ್ಯಮಂತ್ರಿ ಯಡಿಯೂರಪ್ಪನವರು ಹೊಸತನ್ನು ನೀಡಿದರು. ಹೀಗೆ ಹಂತ ಹಂತವಾಗಿ ಮುಖ್ಯಮಂತ್ರಿಗಳು ಯೋಜನೆಗಳನ್ನು ಹಾಕಿ ಕೂಡಲ ಸಂಗಮವನ್ನು ಅಭಿವೃದ್ಧಿಪಡಿಸಿದರು.

ಆಯ್ಕೆ ಮಂಟಪ ಮುಳುಗದಂತೆ ಸುತ್ತಲು ಬಾವಿಯಂತಹ ಕಟ್ಟಡ ನಿರ್ಮಿಸಿದ್ದಾರೆ. ಒಳಗೆ ಹೋಗಿ ದರ್ಶನ ಪಡೆಯಲು, ಹೊರಗೆ ಹೋಗಲು ಬೇರೆಬೇರೆ ಮೆಟ್ಟಿಲುಗಳ ದಾರಿಯನ್ನು ಸಹ ಮಾಡಿದ್ದಾರೆ. ಇದೀಗ ಭಕ್ತರಿಗೆ ಮಳೆಗಾಲ, ಬೇಸಿಗೆಯಲ್ಲಿಯೂ ದರ್ಶನ ಪಡೆಯಲು ಅವಕಾಶವಾಗುವಂತೆ ಮಾರ್ಗದುದ್ದಕ್ಕೂ ಮೇಲ್ಚಾವಣಿ ಹಾಕಲಾಗಿದೆ. ಗರ್ಭಗುಡಿಯಲ್ಲಿ ಚಾಲುಕ್ಯರ ಶೈಲಿಯಲ್ಲಿ ನಾಲ್ಕು ಸ್ತಂಭಗಳ ಒಳಗೊಂಡ, 15 ಅಡಿ ಎತ್ತರದ ಬಸವಣ್ಣನವರ ಐಕ್ಯ ಪಂಟಪವಿದೆ. ಇದು ಬಾಗಲಕೋಟೆ ಜಿಲ್ಲೆಯ ಲಾಂಛನವಾಗಿದೆ. ಬಾಗಲಕೋಟೆಗೆಯಿಂದ 50 ಕಿ.ಮಿ ದೂರದಲ್ಲಿದೆ. ಇಲ್ಲಿಗೆ ಹೋಗಲು ರೈಲುಗಳು, ಬಸ್ಸುಗಳು ಸೌಕರ್ಯವಿದೆ. ನೀವು ಜೀವನದಲ್ಲಿ ಒಮ್ಮೆಯಾದರೂ ಕೂಡಲಸಂಗಮಕ್ಕೆ ಭೇಟಿ ನೀಡಿರಿ. ಬಸವಣ್ಣನವರ ಐಕ್ಯ ಮಂಟಪದ ದರ್ಶನವನ್ನು ಪಡೆಯಿರಿ..