ಪರಶುರಾಮ ಸೃಷ್ಟಿಯ ಸಪ್ತ ಕ್ಷೇತ್ರಗಳಲ್ಲೊಂದಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯನ ದೇವಸ್ಥಾನ ಎಷ್ಟೊಂದು ಪ್ರಸಿದ್ಧಿ ಪಡೆದಿದೆ ಅಂದ್ರೆ ಬಾಲಿವುಡ್ ಮಂದಿಯ ಬದುಕನ್ನು ಸಹ ಬದಲಿಸಿಬಿಟ್ಟಿದೆ, ನಟರಿಂದ ಹಿಡಿದು ಕ್ರಿಕೆಟ್ ದಿಗ್ಗಜರವರೆಗೂ ಜನ ಸಾಮಾನ್ಯರು ಕೂಡ ಸುಬ್ರಹ್ಮಣ್ಯನ ಆರಾಧಕರೇ.. ಹೌದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತನ್ನದೇ ಆದ ಐತಿಹಾಸಿಕ ಹಿನ್ನಲೆಯಿದೆ. ಸ’ರ್ಪದೋ’ಷ ನಿವಾರಣೆಗಾಗಿ, ಅನೇಕ ಭಕ್ತಾದಿಗಳು ದೇವಸ್ಥಾನಕ್ಕೆ ಎಂಟ್ರಿ ಕೊಡುತ್ತಾರೆ. ಇನ್ನು ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರಿಗೂ ಸಹ ಒಂದು ಕಾಲದಲ್ಲಿ ಸಿನಿಮಾದ ಅವಕಾಶಗಳೇ ಬರುತ್ತಿರಲಿಲ್ಲ, ಅಂತಹ ಸಂದರ್ಭದಲ್ಲಿ ಸ್ನೇಹಿತರೋರ್ವರ ಸಲಹೆ ಮೇರೆಗೆ ಸುಬ್ರಹ್ಮಣ್ಯನ ದರ್ಶನ ಪಡೀತಾರೆ..
[widget id=”custom_html-3″]

ಅದಾದ ಮೇಲೆ ಸಾಲು ಸಾಲು ಸಿನಿಮಾಗಳು ಬಿಗ್ ಬಿಯನ್ನು ಅರಸಿಕೊಂಡು ಬಂದಿವೆ. ಇನ್ನು ಮಾಸ್ಟರ್ ಬ್ಲಾ’ಸ್ಟ’ರ್ ಕ್ರಿಕೆಟ್ ಗಾಡ್ ಎಂದೇ ಪ್ರಸಿದ್ಧಿ ಪಡೆದಿರುವ ಲೆಜೆಂಡ್ ಸಚಿನ್ ತೆಂಡೂಲ್ಕರ್ ಅವರಿಗೂ ಸಹ ಕ್ರಿಕೆಟ್ನಲ್ಲಿ ಒಂದಾದ ಮೇಲೆ ಒಂದರಂತೆ ಇಂ’ಜು’ರಿಗಳಾಗುತ್ತಿತ್ತಂತೆ, ಆ ಸಮಯದಲ್ಲಿ ಸಚಿನ್ ತನ್ನ ಚಿಕ್ಕಮ್ಮನ ಸಲಹೆ ಮೇರೆಗೆ ಸುಬ್ರಹ್ಮಣ್ಯನ ಸನ್ನಿಧಾನಕ್ಕೆ ಭೇಟಿ ಕೊಟ್ಟು ಸ’ರ್ಪಸಂ’ಸ್ಕಾರ ಮಾಡ್ತಾರೆ, ಅದಾದ ಮೇಲೆ ಅವರು ಇನ್ನಷ್ಟು ಉತ್ತಮ ಹೆಸರನ್ನು ಫೀಲ್ಡ್ನಲ್ಲಿ ಗಳಿಸಿದ್ದಾರೆ. ಇನ್ನು ಸುಬ್ರಹ್ಮಣ್ಯನ ಸಾನಿಧ್ಯದಲ್ಲಿರುವ ಕುಮಾರಧಾರ ನದಿಯಲ್ಲಿ ಸ್ನಾನ ಮಾಡಿದ್ರೆ ಕು’ಷ್ಟರೋ’ಗದಿಂದ ಹಿಡಿದು ಎಲ್ಲ ಅನಿಷ್ಠಗಳು ದೂರಾಗುತ್ತವೆ ಎಂಬ ನಂಬಿಕೆಯಿದೆ. ಜನ ಇಲ್ಲಿ ತೀರ್ಥಸ್ನಾನವನ್ನು ಮಾಡುತ್ತಾರೆ.
[widget id=”custom_html-3″]

ಹಾಗೆಯೇ ಈ ಪುಣ್ಯಕ್ಷೇತ್ರದಲ್ಲಿ ಸ’ರ್ಪಗಳ ರಾಜ ವಾಸುಕಿ ಹಾಗೇ ಸುಬ್ರಹ್ಮಣ್ಯನನ್ನು ಆರಾಧಿಸುತ್ತಾರೆ, ವಾಸುಕಿಗೆ ಏನೇ ಪೂಜೆ ಸಲ್ಲಿಸಿದರೂ ಅದು ಸುಬ್ರಹ್ಮಣ್ಯನಿಗೆ ಸಲ್ಲುತ್ತದೆ ಎಂಬ ನಂಬಿಕೆಯಿದೆ. ಇದಕ್ಕೂ ಒಂದು ಹಿನ್ನಲೆಯಿದೆ. ಒಮ್ಮೆ ವಾಸುಕಿ ಪಕ್ಷಿಗಳ ರಾಜ ಗರುಡನಿಂದ ತಪ್ಪಿಸಿಕೊಳ್ಳುವ ಸಲುವಾಗಿ ಷಣ್ಮುಖನ ಬಿಲ್ವಿತಾರ ಗುಹೆಯಲ್ಲಿ ಅಡಗಿ ಘೋರ ತಪಸ್ಸು ಮಾಡುತ್ತಿರುತ್ತಾನೆ, ಆಗ ಷಣ್ಮುಖ ಪ್ರತ್ಯಕ್ಷನಾಗಿ ನೀನಿ ಇಲ್ಲಿಯೇ ವಾಸಿಸು ಅಂತ ಹೇಳಿ ಹೋಗುತ್ತಾನೆ ಇದೇ ಕಾರಣಕ್ಕೆ ವಾಸುಕಿಗೆ ಏನೇ ಸಲ್ಲಿಸಿದರೂ ಅದು ಸುಬ್ರಹ್ಮಣ್ಯನಿಗೂ ಸಲ್ಲುತ್ತದೆ.
[widget id=”custom_html-3″]

ಇನ್ನು ಈ ಪುಣ್ಯಕ್ಷೇತ್ರಕ್ಕೆ ಕುಕ್ಕೆ ಅಂತ ಹೆಸರು ಬರಲು ಸಹ ಒಂದು ಕಾರಣವಿದೆ. ಪುರಾಣಗಳ ಪ್ರಕಾರ ಹಿಂದೆ ಒಮ್ಮೆ ಕುಮಾರಗಿರಿ ಕಾಡಿನಲ್ಲಿ ಕಾ’ಡ್ಗಿ’ಚ್ಚು ಕಾಣಿಸಿಕೊಂಡಾಗ ಅಲ್ಲಿದ್ದ ಹಾವುಗಳನ್ನು ಮಲೈಕುಡಿ ಜನಾಂಗದವರು ಕುಕ್ಕೆಯಲ್ಲಿ ತಂದು ಒಂದು ಊರಿನಲ್ಲಿ ಬಿಡುತ್ತಾರೆ. ಕುಕ್ಕೆ ಎಂದ್ರೆ ಬುಟ್ಟಿ ಎಂದರ್ಥ. ಮುಂದೆ ಇದೇ ಊರಿನ ಹೆಸರಾಗಿ ಕುಕ್ಕೆಯಾಗಿ ಬದಲಾಯ್ತು ಸಹಸ್ರಾರು ಜನ ಭಕ್ತಾದಿಗಳಿಗೆ ಕುಕ್ಕೆ ಸುಬ್ರಹ್ಮಣ್ಯನ ಸಾನಿಧ್ಯದಲ್ಲಿ ಅನ್ನಪ್ರಸಾದವನ್ನು ನೀಡಲಾಗುತ್ತೆ. ನಂಬಿ ಬಂದ ಭಕ್ತರನ್ನು ಸುಬ್ರಹ್ಮಣ್ಯ ಕೈ ಬಿಡೋದಿಲ್ಲ ಎಂಬ ನಂಬಿಕೆಯಿಂದಲೇ ವಿವಿಧ ಧೋ’ಷ’ಗಳ ನಿವಾರಣೆಗೆ ಕುಕ್ಕೆಗೆ ದೌಡಾಯಿಸುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಜಾಸ್ತಿ ಆಗ್ತಾನೆ ಇದೆ..