Advertisements

ಕುಲವಧು ಸೀರಿಯಲ್ ಅಮೃತಾ ಸೀಮಂತ ಕಾರ್ಯಕ್ರಮ.. ಯಾರೆಲ್ಲಾ ಬಂದಿದ್ರು ಗೊತ್ತಾ?

Cinema Entertainment

ನಮಸ್ತೇ ಸ್ನೇಹಿತರು, ಕ’ರೋ’ನ ಶುರುವಾಗಿದ್ದೇ ಶುರುವಾಗಿದ್ದು ನಮ್ಮ ಕಿರುತೆರೆ ಜೋಡಿಗಳು ಒಬ್ಬರಾದ ಮೇಲೆ ಒಬ್ಬರು ಸಿಹಿ ಸುದ್ದಿಯನ್ನು ಕೊಡುತ್ತಿದ್ದಾರೆ.. ಕೆಲವರು ತಮ್ಮ ಸಂಗಾತಿಯ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರೆ ಇನ್ನೂ ಕೆಲವರು ಮಗುವಿನ ನಿರೀಕ್ಷೆಯಲ್ಲಿದ್ದಾರೆ.. ಮತ್ತೆ ಇನ್ನೂ ಕೆಲವರು ಮನೆಗೆ ಮಗುವನ್ನು ಬರಮಾಡಿಕೊಂಡು ಖುಷಿಯಲ್ಲಿದ್ದಾರೆ. ಈಗ ಖ್ಯಾತ ಕಿರುತೆರೆ ನಟಿ ಅಮೃತ ಅವರ ಸರದಿ.. ಹೌದು ಅಮೃತ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.. ಯಾವ ಕಾರಣಕ್ಕೆ ಗೊತ್ತಾ.. ನೋಡೋಣ. ಕುಲವಧು ಸೀರಿಯಲ್ ಮೂಲಕ ಹೆಚ್ಚು ಮನೆ ಮಾತಾದ ಅಮೃತ ಅವರು ನಮ್ಮನೆ ಯುವರಾಣಿ ಖ್ಯಾತಿಯ ರಘು ಅವರನ್ನ ವಿವಾಹವಾಗಿದ್ದರು..

[widget id=”custom_html-3″]

Advertisements

ಕಿರುತೆರೆ ವೀಕ್ಷಕರ ಮೆಚ್ಚಿನ ಜೋಡಿಗಳಲ್ಲಿ ಇವರು ಕೂಡ ಒಬ್ಬರು. ಪ್ರೀತಿಸಿ ವಿವಾಹವಾದ ಈ ಜೋಡಿ ಕೆಲ ದಿನಗಳ ಹಿಂದೆ ಸಿಹಿ ಸುದ್ದಿಯನ್ನ ಹಂಚಿಕೊಂಡಿದ್ದರು.. ತಮ್ಮ ಮನೆಗೆ ಹೊಸ ಅತಿಥಿ ಬರುವುದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಖುಷಿಯನ್ನು ಹಂಚಿಕೊಂಡಿದ್ದರು. ಈಗ ಸೀಮಂತ ಶಾಸ್ತ್ರದ ಸಂಭ್ರಮದಲ್ಲಿ ಇದ್ದಾರೆ.. ಹೌದು ಪತ್ನಿಗೆ ಸೀಮಂತ ಶಾಸ್ತ್ರ ನೆರವೇರಿಸಿ ಖುಷಿ ಪಟ್ಟಿದ್ದಾರೆ ರಘು ಅವರು.. ಹಾಗೆ ಈ ಕಾರ್ಯಕ್ರಮಕ್ಕೆ ಹಲವು ಸೀರಿಯಲ್ ಸೆಲೆಬ್ರಿಟಿಗಳು ಕೂಡ ಆಗಮಿಸಿ ಅಮೃತ ಅವರನ್ನು ಆಶಿರ್ವದಿಸಿ ಹೋಗಿದ್ದಾರೆ. ಇನ್ನೂ ಈ ಬಗ್ಗೆ ನಟಿ ಅಮೃತ ರಾಮಮೂರ್ತಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ರೀತಿಯಾಗಿ ಬರೆದುಕೊಂಡಿದ್ದಾರೆ.

[widget id=”custom_html-3″]

ಪ್ರತಿಯೊಬ್ಬ ಹೆಣ್ಣಿಗೂ ತಾಯ್ತನದ ಸಮಯದಲ್ಲಿ ವಿವಿಧ ಆಸೆಗಳು, ಕನಸುಗಳು ಇರುತ್ತದೆ, ಹಾಗೆ ನನ್ನ ಬಹು ದೊಡ್ಡ ಕನಸು ಅಂದ್ರೆ ನನ್ನ ಸೀಮಂತ ಶಾಸ್ತ್ರವನ್ನು ತಾಯಿ ಮಗುವಿನ ಹಿತಕ್ಕಾಗಿ ಮಾಡುವ ಶಾಸ್ತ್ರ. ಹಿರಿಯರ ಸಮ್ಮುಖದಲ್ಲಿ ಸಂತೋಷದಿಂದ ಮಾಡಿಸಿಕೊಳ್ಳಬೇಕು ಎಂದಿತ್ತು. ಆ ನನ್ನ ಕನಸು ಈಡೇರಿದೆ.. ಇದಕ್ಕೆ ಕಾರಣರಾದ.. ಮೊದಲಿಗೆ ನನ್ನ ಜೀವ ನನ್ನ ಪತಿ , ಅತ್ತೆ, ಮಾವ, ಅತ್ತಿಗೆ, ಅಣ್ಣಾ, ಅಮ್ಮ, ಅಪ್ಪ , ಅಕ್ಕ, ಬಾವ, ಸ್ನೇಹಿತರು ಹಾಗೆ ನನ್ನ ಆತ್ಮೀಯರಾದ ಎಲ್ಲರಿಗೂ ನಾನು ಚಿರ ಋಣಿ ಎಂದು ಬರೆದುಕೊಂಡಿದ್ದಾರೆ.