ನಮಸ್ತೆ ಸ್ನೇಹಿತರೆ, ಸ್ಯಾಂಡಲ್ವುಡ್ ಹಿರಿಯ ನಟ ಮಾಜಿ ಸಚೀವ ಸರ್ವಪಕ್ಷ ಕ್ಷೇತ್ರದ ಕುಮಾರ್ ಬಂಗಾರಪ್ಪ ಅವರ ಮಗಳು ಲಾವಣ್ಯ ಅವರು ಇತ್ತೀಚೆಗಷ್ಟೇ ವಿಕ್ರಮಾದಿತ್ಯರ ಜೊತೆಗೆ ಉಂಗುರ ಬದಲಾಯಿಸಿಕೊಂಡು ಮದುವೆ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಾರೆ. ಹೌದು ಕನ್ನಡ ಚಿತ್ರರಂಗದ ನಾಯಕ ನಟ ಹಾಗು ರಾಜಕೀಯ ನಾಯಕನಾಗಿರುವ ಕುಮಾರ್ ಬಂಗಾರಪ್ಪ ಅವರಿಗೆ ಅರ್ಜುನ್ ಎಂಬ ಮಗ ಮತ್ತು ಲಾವಣ್ಯ ಎನ್ನುವ ಇಬ್ಬರು ಮಕ್ಕಳಿದ್ದಾರೆ..

ಇದೀಗ ಮಗಳು ಲಾವಣ್ಯ ಕುಮಾರ್ ಬಂಗಾರಪ್ಪ ಅವರ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮ ಅದ್ಧೂರಿಯಾಗಿ ಸಂಭ್ರಮದಿಂದ ನೆರವೇರಿದೆ. ಇದೀಗ ಕುಮಾರ್ ಬಂಗಾರಪ್ಪ ಅವರ ನಿವಾಸದಲ್ಲಿ ಮದುವೆಯ ಸಂಭ್ರಮ ಮನೆಮಾಡಿದೆ.. ಕುಮಾರ್ ಬಂಗಾರಪ್ಪ ಅವರು ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಮಗಳ ನಿಶ್ಚಿತಾರ್ಥವನ್ನು ನಡೆಸಿಕೊಟ್ಟಿದ್ದಾರೆ. ಈ ಒಂದು ಸಮಾರಂಭಕ್ಕೆ ಎರಡು ಕುಟುಂಬದ ಆಪ್ತರು..

ಲಾವಣ್ಯ ಮತ್ತು ವಿಕ್ರಮಾದಿತ್ಯ ಅವರ ಸ್ನೇಹಿತರು ಮಾತ್ರ ಭಾಗಿಯಾಗಿದ್ದರು. ಲಾವಣ್ಯ ಅವರ ನಿಶ್ಚಿತಾರ್ಥ ವಿಕ್ರಮಾದಿತ್ಯ ಅವರ ಜೊತೆಗೆ ನಡೆದಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಮದುವೆ ಕೂಡ ನಡೆಯಲಿದೆ. ಈಗಾಗಿ ಮದುವೆ ಕಾರ್ಯಕ್ರಮಕ್ಕೆ ಬರಲು ಎಲ್ಲಾ ರಾಜಕೀಯ ನಾಯಕರು ಮತ್ತು ಸಿನಿಮಾ ನಟ ನಟಿಯರಿಗೂ ಕೂಡ ಆಮಂತ್ರಣ ಪತ್ರಿಕೆಯನ್ನ ನೀಡಲಾಗುತ್ತಿದೆ.. ಇನ್ನೂ ನಿಮ್ಮ ಪ್ರಕಾರ ಈ ಜೋಡಿ ಹೇಗಿದೆ ನಿಮ್ಮ ಅನಿಸಿಕೆ ತಿಳಿಸಿ.