Advertisements

ಖ್ಯಾತ ನಟ, ರಾಜಕೀಯ ನಾಯಕ, ಕುಮಾರ್ ಬಂಗಾರಪ್ಪ ನವರ ಕುಟುಂಬ ಹೇಗಿದೆ ನೋಡಿ..

Kannada Mahiti

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದಲ್ಲಿ ನಟನಾಗಿ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಕುಮಾರ್ ಬಂಗಾರಪ್ಪ ಅವರು ತುಂಬಾ ಬ್ಯುಸಿಯಾಗಿದ್ದಾರೆ. ಇನ್ನೂ ಕಳೆದ ವಿಧಾ‌ನ ಸಭಾ ಎಲೆಕ್ಷನ್ ನಲ್ಲಿ ಸರಭಾ ಕ್ಷೇತ್ರದಲ್ಲಿ ಜಯಗಳಿಸಿ ಶಾಸಕರಾಗಿ ಆಯ್ಕೆಯಾದ ಕುಮಾರ್ ಬಂಗಾರಪ್ಪನವರು ಜನರ ಕಷ್ಟವನ್ನು ಆಲಿಸುವ ಸರಳ ಹಾಗೂ ಅಪರೂಪದ ನಾಯಕರಾಗಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಯಾವುದೇ ಸಮಸ್ಯೆಗಳು ಕಂಡುಬಂದಲ್ಲಿ ಕುಮಾರ್ ಬಂಗಾರಪ್ಪನವರು ಖುದ್ದಾಗಿ ಹೋಗಿ ಬಗೆಹರಿಸಿ ಕೊಡುತ್ತಾರೆ.

Advertisements

ಇನ್ನೂ ಕುಮಾರ್ ಬಂಗಾರಪ್ಪ ನವರು ರಾಜಕೀಯ ಕಾರ್ಯಗಳಲ್ಲಿ ಎಷ್ಟೇ ಬ್ಯುಸಿಯಾಗಿದ್ದರು.. ತಮ್ಮ ಮನೆಯವರೆಗೂ ಕೂಡ ಸಾಕಷ್ಟು ಸಮಯವನ್ನು ಕೊಡುತ್ತಾರೆ. ಈ ಹಿಂದೆ ಕುಮಾರ್ ಬಂಗಾರಪ್ಪನವರು ತಮ್ಮ ಮುದ್ದಿನ ಮಗಳ ನಿಶ್ಚಿತಾರ್ಥ ಕಾರ್ಯಕ್ರಮವನ್ನು ಅದ್ದೂರಿಯಾಗಿ ತುಂಬಾ ಸಂಭ್ರಮದಿಂದ ನಡೆಸಿಕೊಟ್ಟಿದ್ದಾರೆ. ಕುಮಾರ್ ಬಂಗಾರಪ್ಪನವರ ಮುದ್ದಿನ ಮಗಳ ಹೆಸರು ಲಾವಣ್ಯ. ಇನ್ನೂ ಅಳಿಯನಾಗಬೇಕಾಗಿರುವ ವಿಕ್ರಮಾದಿತ್ಯನ ಜೊತೆ ಮಗಳು ಲಾವಣ್ಯ ಉಂಗುರ ಬದಲಾಯಿಸಿಕೊಂಡಿದ್ದಾರೆ.

ಈ ನಿಶ್ಚಿತಾರ್ಥ ಸಮಾರಂಭಕ್ಕೆ ಎರಡು ಕುಟುಂಬಸ್ಥರು, ಬಂಧುಗಳು ಹಾಗೂ ಸ್ನೇಹಿತರೆಲ್ಲರು ಸೇರಿ ಸಂಭ್ರಮಿಸಿದ್ದರು. ಕುಮಾರ್‌ ಬಂಗಾರಪ್ಪನವರು ತಮ್ಮ ಸಾಮಾಜಿಕ ಜಾಲತಾಣದ ಅ’ಕೌಂಟ್ ನಲ್ಲಿ ತಮ್ಮ ಮಗಳ ನಿಶ್ಚಿತಾರ್ಥ ಸಮಾರಂಭದ ಪೊಟೊಗಳನ್ನು ಅಭಿಮಾನಿಗಳ ಮುಂದೆ ಹಂಚಿಕೊಂಡಿದ್ದು.. ನಿಮ್ಮೆಲರ ಆಶಿರ್ವಾದ ಬಯಸುತ್ತೇನೆ, ನಮ್ಮ ಕುಟುಂಬದ ಮೇಲೆ ಎಷ್ಟು ಅಭಿಮಾನ ಪ್ರೀತಿ ಇದಿಯೋ ಹಾಗೆ ಈ ನವ ಜೋಡಿಗಳ ಮೇಲೆ ನಿಮ್ಮ ಆಶಿರ್ವಾದ, ಆರೈಕೆಗಳು ಸಧಾ ಇರಲಿ ಎಂದು ಬರೆದುಕೊಂಡಿದ್ದಾರೆ‌. ಅಭಿಮಾನಿಗಳು ಸಹ ಈ ನವಜೋಡಿಗಳ ಪೊಟೊಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಆಶಿರ್ವಾದ ಮಾಡಿ ಶುಭ ಕೋರಿದ್ದಾರೆ.