Advertisements

ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿ ಆಗ್ಬೇಕು, ಭತ್ತ ನಾಟಿ ಮಾಡಿ ಕಾರ್ಯಕರ್ತರು ಸಂಕಲ್ಪ.

News

ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರು ತಮ್ಮ ಅಧಿಕಾರವನ್ನು ಕಳೆದುಕೊಂಡ ಇಂದಿಗೆ ಒಂದು ವರ್ಷವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಜೆಡಿಎಸ್ ಕಾರ್ಯಕರ್ತರು ಹಾಗೂ ರೈತ ಮಹಿಳೆಯರು ಸೇರಿ ಗದ್ದೆಯಲ್ಲಿ ನಾಟಿ ಕೆಲಸ ಮಾಡುವ ಮೂಲಕ ಈ ದಿನವನ್ನು ಆಚರಿಸಿ ಎಲ್ಲರ ಗಮನ ಸೆಳೆದಿದ್ದಾರೆ.

Advertisements

ಈ ಭತ್ತದ ನಾಟಿ ಕಾರ್ಯಕ್ರಮವನ್ನು ಮುಡಿಗೆರೆ ತಾಲೂಕಿನ ಗ್ರಾಮದಲ್ಲಿ ನಡೆದಿದ್ದು. ಹತ್ತಾರು ಯುವ ಜೆಡಿಎಸ್ ಕಾರ್ಯಕರ್ತರು ಭಾಗಿಯಾಗಿ‌ದ್ದರು. ಈ ವೇಳೆ ಜೆಡಿಎಸ್ ಯುವ ಘಟಕದ ಜಿಲ್ಲಾದ್ಯಕ್ಷ, ವಿನಯ್ ರಾಜ್ ಅವರು ಕಾರ್ಯಕ್ರಮದಲ್ಲಿ ಮಾತಾನಾಡಿದ್ದು. ಕುಮಾರಸ್ವಾಮಿಯವರ ಅಧಿಕಾರವನ್ನು ಮೋಸದಿಂದ ಕಿತ್ತುಕೊಂಡಿದೆ ಇಂದಿಗೆ ವರ್ಷವಾಗಿದೆ ಆದರೆ ಅವರನ್ನು ನಾವು ಮತ್ತೇ ಮುಖ್ಯಮಂತ್ರಿಯನ್ನಾಗಿ ಮಡಲು ನಾವೆಲ್ಲರೂ ಸೇರಿ ಸಂಕಲ್ಪ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಇನ್ನೊಂದೆಡೆ ಬೆಂಗಳೂರು ಮಹಾನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲೂ ಸಹ ದಿನೇ ದಿನೇ ಕೊರೊ,ನಾ ಆರ್ಭಟ ಹೆಚ್ಚಾಗುತ್ತಲೆ ಇದೆ. ಇದರ ಹಿನ್ನೆಲೆ ಲಾಕ್ ಡೌನ್ ಆಗಿ ಊರನ್ನು ಬಿಟ್ಟು ಬೆಂಗಳೂರಿನಲ್ಲಿ ಸೇರಿಕೊಂಡಿದ್ದ ನೂರಾರು ಜನರು ಮತ್ತೆ ತಮ್ಮ ತಮ್ಮ ಊರುಗಳಿಗೆ ತೆರಳಿದ್ದರು. ಈ ಕಾರ್ಯಕ್ರಮಕ್ಕೆ ಬೆಂಗಳೂರಿನಿಂದ ಬಂದ ಯುವಕರು ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಇನ್ನೂ ಈ ಸಮಯದಲ್ಲಿ ಅರ್ಥಿಕ ಸ್ಥಿತಿ ಕುಸಿದಿದ್ದು ಲಾಭವಿಲ್ಲದ ಭತ್ತದ ಕೃಷಿಯಿಂದ ರೈತರು ಬೇಸತ್ತಿರುವ ಕಾಲಘಟ್ಟದಲ್ಲಿ ಅವರನ್ನು ಪ್ರೋತ್ಸಾಹಿಸೋ ಕೆಲಸಕ್ಕೆ ಜೆ.ಡಿ.ಎಸ್ ಮುಂದಾಗಿದ್ದಾರೆ‌‌. ಈ ಕೊರೊ,ನಾ ಸಮಯದಲ್ಲಿ ರೈತರು ಗದ್ದೆ ಕೆಲಸ ಅಷ್ಟೊಂದು ಲಾಭದಾಯಕವಲ್ಲ ಎಂದು ವಿಮುಕ್ತವಾಗಿರುವುದನ್ನು ಕಂಡು ಜೆಡಿಎಸ್ ಕಾರ್ಯಕರ್ತರು ರೈತ ಮಹಿಳೆಯರೊಂದಿಗೆ ಸೇರಿ ಗದ್ದೆಯಲ್ಲಿ ನಾಟಿ ಕೆಲಸ ಮಾಡಿದ್ದಾರೆ.

Leave a Reply

Your email address will not be published. Required fields are marked *