Advertisements

ಮಗ ತನ್ನನ್ನ ಸಾಕ್ತಾನೆ ಅಂಥ ನಂಬಿ ಚಿನ್ನ ಹಣ ಜಮೀನನ್ನು ಮಗನಿಗೆ ಕೊಟ್ಟ ತಂದೆ.. ಆದರೆ ಇಂದು ಮಗ ಮಾಡಿದ ಕೆಲಸಕ್ಕೆ ತಂದೆ ಮನೆ ಮುಂದೆ ಕುಳಿತು ಏನ್ ಮಾಡ್ತಿದ್ದಾರೆ ಗೊತ್ತಾ?

Kannada Mahiti

ಮುಪ್ಪಿನ ಕಾಲದಲ್ಲಿ ಮಕ್ಕಳು ಆಸರೆಯಾಗ್ತಾರೆ ಅಂತ ಭಾವಿಸಿ ಮಕ್ಕಳನ್ನು ಅತ್ಯಂತ ಪ್ರೀತಿಯಿಂದ ಹೆತ್ತವರು ಸಾಕ್ತಾರೆ, ಆದ್ರೆ ಪ್ರೀತಿ ಪ್ರೇಮಕ್ಕೆ ಅರ್ಥ ಎಲ್ಲಿದೆ? ನಿಜಕ್ಕೂ ಈಗಿನ ಯಾಂತ್ರಿಕ ಯುಗದಲ್ಲಿ ಭಾವನೆಗಳು ಸಹ ಯಾಂತ್ರೀಕರಣವಾಗಿದ್ಯೆನೋ ಅನ್ನೋ ತರ ಅನಿಸ್ತಿದೆ. ಈ ಮಾತಿಗೆ ಪುಷ್ಟಿ ಕೊಡುವಂತಹ ಒಂದು ಘಟನೆಯನ್ನು ನಾವು ಹೇಳ್ತೀವಿ. ಎಸ್​ ವೃದ್ಧ ಜೀವವೊಂದು ತನ್ನನ್ನು ಮಗ ಪೋಷಣೆ ಮಾಡುತ್ತಿಲ್ಲವೆಂದು ಮಗನ ಮನೆ ಮುಂದೆ ನಿಂತು ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ. ತನ್ನ ಆಕ್ರೋಶವನ್ನು ಪ್ರ’ತಿ’ಭಟನೆ ಮುಖಾಂತರ ಹೊರಹಾಕಿದ್ದಾರೆ. ಹೌದು ಅಂದಹಾಗೇ ಈ ಘ’ಟ’ನೆ ನಡೆದಿರೋದು ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ವಿದ್ಯಾನಗರದಲ್ಲಿ.

Advertisements

ಕುಪೇಂದ್ರ ಆನೂರು ಎಂಬ ವೃದ್ದ ತನ್ನ ಮಗನ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಕುಪೇಂದ್ರ ಆನೂರು ವೃತ್ತಿಯಲ್ಲಿ ಶಿಕ್ಷಕನಾಗಿದ್ದು, ಮಗ ಭೀಮಶಂಕರ ಎಂಬವರ ಮನೆಯ ಮುಂದೆ 4 ದಿನದಿಂದ ಪ್ರತಿಭಟನೆ ನಡೆಸಿದ್ದಾರೆ. ತನ್ನ ಮಗ ಸರಿಯಾಗಿ ನನ್ನ ಪೋಷಣೆ ಹಾಗೂ ಆರೈಕೆ ಮಾಡ್ತಿಲ್ಲ ಅಂತ ಆರೋಪಿಸಿದ್ದಾರೆ. ಇಂಡಿ ತಾಲೂಕಿನ ಮಿರ್ಗಿ ಗ್ರಾಮದಲ್ಲಿನ ಮನೆಯಲ್ಲಿ ನನ್ನನ್ನು ಬಿಟ್ಟಿದ್ದಾನೆ, ಆದ್ರೆ ಅವನು ಮಾತ್ರ ಇಂಡಿ ಪಟ್ಟಣದಲ್ಲಿ ವಾಸವಾಗಿದ್ದಾನೆ. ಮಗ ಇಳಿ ವಯಸ್ಸಿನಲ್ಲಿ ನನ್ನನ್ನು ಪೋಷಣೆ ಮಾಡದೇ ನಿರ್ಲಕ್ಷ್ಯ ಮಾಡಿದ್ದಾನೆ ಎಂದು ಕುಪೇಂದ್ರ ಆ’ಕ್ರೋ’ಶ ವ್ಯಕ್ತಪಡಿಸಿದ್ದಾರೆ. ಸಾಲ ಮಾಡಿ ಬೆವರು ಸುರಿಸಿ,. ಕಷ್ಟಪಟ್ಟು ಮಕ್ಕಳನ್ನು ಬೆಳೆಸಿದ್ದೇನೆ, ನಾನು ಒಪ್ಪತ್ತಿನ ಊಟ ಕಟ್ಟಿ ಮಗನ ಆರೈಕೆ ಮಾಡಿದ್ದೇನೆ..

ಆದ್ರೆ ಅದ್ಯಾವುದನ್ನು ಸಹ ಅವನು ಗಣನೆಗೆ ತೆಗೆದುಕೊಂಡಿಲ್ಲ, ನನ್ನನ್ನು ಕಸದ ತರಹ ನೋಡ್ತಾಯಿದ್ದಾನೆ, ಪುತ್ರ ಭೀಮಾಶಂಕರಗೆ 40 ಗ್ರಾಂ ಚಿನ್ನ ಹಾಗೂ 50,000 ರೂಪಾಯಿ ನೀಡಿದ್ದೆ, ಆತನ ಪಾಲಿನ ಜಮೀನು ಸಹ ತೆಗೆದುಕೊಂಡಿದ್ದಾನೆ. ಇದೀಗ ನಾನು ಆತನಿಗೆ ನೀಡಿದ ಚಿನ್ನ ಹಾಗೂ ಹಣವನ್ನು ಮರಳಿ ಕೊಡಿಸಿ ಅಂತ ಒತ್ತಾಯಿಸಿದ್ದಾರೆ. ಇದೀಗ ನ್ಯಾಯಕ್ಕಾಗಿ ಮಗನ ಮನೆಯ ಎದುರಿಗೆ ಪ್ರತಿಭಟನೆ ನಡೆಸುತ್ತಿರುವುದಾಗಿ ನೊಂದ ಕುಪೇಂದ್ರ ಹೇಳಿದ್ದಾರೆ. ಅಲ್ಲದೇ ಈ ಬಗ್ಗೆ ಪೊಲೀಸರಿಗೆ ದೂ’ರು ನೀಡಿದ್ರು ಸಹ ಯಾವುದೇ ಪ್ರಯೋಜನವಾಗಿಲ್ಲ, ನನ್ನ ನೋ’ವಿ’ಗೆ ಕವಡೆ ಕಾಸಿನ ಕಿಮ್ಮತ್ತು ಕೊಡ್ತಿಲ್ಲ ಅಂತ ಅಳಲು ತೋಡಿಕೊಂಡಿದ್ದಾರೆ.