Advertisements

ಕುರಿ ಪ್ರತಾಪ್ ಮನೆಯ ಗೃಹಪ್ರವೇಶದ ಸುಂದರ ಕ್ಷಣಗಳು ಹೇಗಿತ್ತು ಒಮ್ಮೆ ನೋಡಿ..

Cinema

ಕನ್ನಡದ ಪ್ರಖ್ಯಾತ ಹಾಸ್ಯ ಕಲಾವಿದ ಕುರಿ ಪ್ರತಾಪ್ ಅವರ ಕನಸಿನ ಅರಮನೆ ಹೇಗಿದೆ ಗೊತ್ತಾ.. ಕುರಿ ಪ್ರತಪ್ ಮಾತನಾಡಿದರೆ ಸಾಕು ನಗು ಬರುತ್ತದೆ ಅಂತ ಹೇಳುವವರು ಅದೆಷ್ಟೋ, ಕುರಿ ಆಂಗಿಕ ಅಭಿನಯ ನೋಡಿ ನಗು ಬರುತ್ತದೆ ಅನ್ನುವವರು ಮತ್ತೆಷ್ಟೋ ಕುರಿ ಪ್ರತಾಪ್ ಎಂದರೆ ಹಾಸ್ಯದ ಇನ್ನೊಂದು ರೂಪ ಅಂತ ಹೇಳುವವರ ಸಂಖ್ಯೆ ಮಗದೆಷ್ಟೋ.. ಹೀಗೆ ಕುರಿಪ್ರತಾಪ್ ಅಂದ ತಕ್ಷಣ ಅವರ ಒಳಗಿರುವ ಹಾಸ್ಯ ಪ್ರಜ್ಞೆಯನ್ನು ಕನ್ನಡದ ಒಬ್ಬ ಅದ್ಭುತ ಕಾಮಿಡಿಯನ್ ಅ‌ನ್ನು ಜನ ನೆನಸಿಕೊಳ್ತಾರೆ. ಸಾಕಷ್ಟು ವರ್ಷಗಳಿಂದ ಚಿತ್ರರಂಗದಲ್ಲಿದ್ದು ಸಹ ಕುರಿ ಪ್ರತಾಪ್ ಅವರು ಇತ್ತೀಚಿನ ಕೆಲವು ವರ್ಷಗಳಲ್ಲಿ ಜನಮಾನಸದಲ್ಲಿದ್ದಾರೆ. ಸುಮಾರು 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕುರಿ ಪ್ರತಾಪ್ ಅವರು ಅಭಿನಯಿಸಿದ್ದಾರೆ.

[widget id=”custom_html-3″]

Advertisements

ಕನ್ನಡದ ಸಾಕಷ್ಟು ಹೆಸರಾಂತ ಕಲಾವಿದರೊಂದಿಗೆ ಬಣ್ಣ ಹಚ್ಚಿದ್ದಾರೆ. ಆದರೆ ಅವರ ಕಾಮಿಡಿ ಸೆನ್ಸ್ಗೆ ಜನ ಬೆಂಬಲ ಸಿಕಿದ್ದು ಮಾತ್ರ ಕಿರುತೆರೆಯಲ್ಲಿ. ಎಸ್ ಹಿರಿತೆರೆಗಿಂತ ಕಿರುತೆರೆಯಲ್ಲಿ ಕುರಿಯವರು ಮಿಂಚಿದ್ದಾರೆ.. ಮೊದಲಿಗೆ ಉದಯ ಟಿವಿಯಲ್ಲಿ ಬರುತ್ತಿದ್ದ ಕುರಿಗಳು ಸಾರ್ ಕುರಿಗಳು ಅನ್ನೋ ಒಂದು ಶೋ ಅಲ್ಲಿ ಕುರಿ ಜನರನ್ನು ಹೊಟ್ಟೆ ಹುಣ್ಣಾಗಿಸುವಂತೆ ಜನರನ್ನು ನಕ್ಕಿಸಿದ್ದಾರೆ. ಬಹುತೇಕರಿಗೆ ಗೊತ್ತಿದ್ಯೋ ಇಲ್ವೋ ಕುರಿಪ್ರತಾಪ್ ಒಬ್ಬ ನಿರೂಪಕ ಕೂಡ ಹೌದು. ಇನ್ನು ಕುರಿಪ್ರತಾಪ್ ಅವರು ಕಳೆದ ವರ್ಷ ಬಿಗ್‌ಬಾಸ್ 7ರ ಫೈನೆಲಿಸ್ಟ್ ಸಹ ಆಗಿದ್ರು. ಜೊತೆಗೆ ರನ್ನರ್ ಅಪ್ ಸಹ ಆಗಿದ್ರು. ಬಿಗ್ ಮನೆಯೊಳಗೆ ಎಲ್ಲರೊಂದಿಗೆ ಸಾಮಾನ್ಯನಂತೆಯೇ ಕುರಿ ಜೀವಿಸುತ್ತಿದ್ದದ್ದು ಪ್ರೇಕ್ಷಕರ ಮನಸ್ಸಿಗೆ ಇನ್ನಷ್ಟು ಹತ್ತಿರ ಆಗಲು ಕಾರಣ ಆಯ್ತು..

[widget id=”custom_html-3″]

ಬಿಗ್ ಮನೆಯೊಳಗಿರಬೇಕಾದರೆ ಕುರಿ ಪ್ರತಾಪ್ ಅವರು ತಮ್ಮ ಜೀವನದ ಒಂದು ದೊಡ್ಡ ಆಸೆ, ಕನಸ್ಸನ್ನು ಹೇಳಿಕೊಂಡಿದ್ರು. ತನ್ನ ಸಂಸಾರಕ್ಕಾಗಿ ತನ್ನದೇ ಆದ ಒಂದು ಪುಟ್ಟ ಕನಸಿನ ಮನೆಯೊಂದನ್ನು ಕಟ್ಟಬೇಕು ಅಂತ ಹೇಳಿಕೊಂಡಿದ್ರು. ಈಗ ಆ ಕನಸ್ಸನ್ನು ಕುರಿಪ್ರತಾಪ್ ನನಸು ಮಾಡಿಕೊಂಡಿದ್ದಾರೆ. ಎಸ್ ನೀವು ನೋಡ್ತಾ ಇದ್ದೀರಲ್ಲ ಇದೇ ಕುರಿ ಪ್ರತಾಪ್ ಅವರ ಭವ್ಯ ಮನೆ. ಕಷ್ಟಪಟ್ಟು ಬೆವರು ಸುರಿಸಿ ದುಡಿದ ದುಡ್ಡಿಂದ ಕಟ್ಟಿದ ಕನಸಿನ ಗೂಡು.

[widget id=”custom_html-3″]

ಕುರಿ ತನ್ನ ಕನಸಿನ ಕ್ಷಣಗಳನ್ನು ನನಸು ಮಾಡಿಕೊಳ್ಳುವಾಗ ಕನ್ನಡದ ಅನೇಕ ಸೆಲೆಬ್ರಿಟಿಗಳು ಸಾಕ್ಷಿಯಾಗಿದ್ದರು. ಬಿಗ್ ಬಾಸ್‌ನಲ್ಲಿ ಹೆಚ್ಚು ಸದ್ದು ಮಾಡಿದ ಪ್ರಥಮ ಸಹ ಹಾಜರರಿದ್ದರು. ಉಳಿದಂತೆ ಅನೇಕ ಗಣ್ಯರು ಕುರಿ ಪ್ರತಾಪ್ ಸಂತೋಷ ಸಂಭ್ರಮದಲ್ಲಿ ಪಾಲ್ಗೊಂಡರು. ಬಹುತೇಕ ಸಿನಿಮಾಗಳಲ್ಲಿ ನಟಿಸಿ ಅದರಲ್ಲೂ ಕಿರುತೆರೆಯ ಮಜಾಟಾಕೀಸ್ ಮುಖಾಂತರ ಜನ ಮನ ಗೆದ್ದ ಕುರಿ ಪ್ರತಾಪ್‌ಗೆ ಇನ್ನಷ್ಟು ಅವಕಾಶಗಳು ಹುಡುಕಿಕೊಂಡು ಬರಲಿ, ಅವರು ಕಂಡ ಕನಸುಗಳೆಲ್ಲ ನೆರೆವೇರಲಿ.. ಇವರ ಬಗ್ಗೆ ನಿವೇನ್ ಹೇಳ್ತಿರಾ..