Advertisements

ಕಣ್ಣೀರು ಹಾಕಿಸಿದ ಭಿಕ್ಷುಕಿ, ಯಾಕೆ ಗೊತ್ತಾ! ಹೃದಯವನ್ನೇ ಕಲಕುವ ಈ ಸ್ಟೋರಿ ನೋಡಿ..

Kannada Mahiti Motivation

ನಮಸ್ತೆ ಸ್ನೇಹಿತರೆ, ನಾವು ರೋಡಿನಲ್ಲಿ ಪ್ರಯಾಣಿಸುವಾಗ ತುಂಬಾ ಜನರು ಹಸಿವಿನಿಂದ ಬ’ಳಲುತ್ತಿರುತ್ತಾರೆ. ಅದನ್ನು ನೋಡಿ ನಾವು ಸಹಾಯ ಮಾಡದೇ ಹೊರಟು ಹೋಗುತ್ತೇವೆ.. ಅದೇ ರೀತಿ ನನ್ನ ಕಣ್ಣು ಮುಂದೆ ನಡೆದ ಒಬ್ಬ ತಾಯಿ ಮತ್ತು ಮಗುವಿನ ಕಥೆಯನ್ನು ನಾನು ನಿಮಗೆ ತಿಳಿಸುತ್ತೇನೆ. ಒಂದು ವಾರದ ಹಿಂದೆ ನಾನು ಚೆನ್ನೈಗೆ ಹೋಗಿದ್ದೆ.. ಸಾಯಂಕಾಲ ನನ್ನ ಕುಟುಂಬದೊಂದಿಗೆ ಬೀಚ್ ನ ಬಳಿ ಹೋಗಿದ್ದೆ. ಆಗ ಅಲ್ಲಿ ಒಂದು ತಾಯಿ ಮತ್ತು ಮಗು ಪಾನಿ ಪೂರಿ ಅಂಗಡಿಯ ಪಕ್ಕ ಕುಳಿತಿರುವುದನ್ನು ನಾನು ‌ನೋಡಿದೆ.. ಆ ತಾಯಿಯ ಕೈಯಲ್ಲಿ ಎರಡು ವರ್ಷದ ಮಗು ಹಸಿವಿನಿಂದ ಅ’ಳುತಿತ್ತು.. ಆ ತಾಯಿಯ ಹತ್ತಿರ ದುಡ್ಡಿರಲಿಲ್ಲ.

Advertisements

ನಾನು ಕೆಲ ಕಾಲ ಗಮನಿಸಿದೆ ಯಾರು ಸಹಾಯ ಮಾಡುತ್ತಾರೆ.. ಆ ತಾಯಿ ಏನು ಮಾಡಬಹುದು ಅಂತ. ಆ ಪಾನಿಪೂರಿ ಅಂಗಡಿಗೆ ಅರ್ಧ ಗಂಟೆಯಲ್ಲಿ 50 ಕ್ಕೂ ಹೆಚ್ಚು ಜನರು ಬಂದು ತಿಂದು ಹೋದರು.. ಆದರೂ ಕೂಡ ಯಾರು ಸಹಾಯ ಮಾಡಲೇ ಇಲ್ಲ. ವಾಹನ ಚಾಲಕರು, ದಾರಿ ಹೋಕರು, ಎಲ್ಲರೂ ಕೂಡ ನೋಡುತ್ತಿದ್ದರು ಸಹ ಯಾರು ಸಹಾಯ ಮಾಡಲೇ ಇಲ್ಲ. ಇದು ನಮ್ಮ ನಾಗರೀಕತೆ.. ನಂತರ ನಾನೇ ಆ ಮಹಿಳೆಯ ಬಳಿ ಹೋಗಿ ನಿಮಗೆ ಏನು ಬೇಕು ತಿನ್ನಿರಿ ನಾನು ಹಣ ಕೊಡುತ್ತೇನೆ ಅಂದೆ. ಆಗ ಆ ತಾಯಿ ನನಗೆ ಏನು ಬೇಡ, ನನ್ನ ಮಗುವಿಗೆ ಏನಾದರೂ ತಿನ್ನಲು ಕೊಡಿಸಿ ಎಂದು ಹೇಳಿದಾಗ ನನ್ನ ಮನ ಕಲುಕಿತು..

ಆಕೆಯು ಅಲ್ಲಿ ಇರುವುದಕ್ಕೆ ಕಾರಣವಾದ್ರೂ ಏನು. ಆಕೆಯ ಕಷ್ಟವಾದ್ರೂ ಏನು ಎಂದು ನಾನು ವಿಚಾರಿಸಿದೆ. ಅದಕ್ಕೆ ಆಕೆ ಹೇಳಿದ್ದು ಏನೆಂದರೆ.. ಎರಡು ತಿಂಗಳ ಹಿಂದೆ ತನ್ನ ಗಂಡ ರಸ್ತೆಯಲ್ಲಿ ಆದ ಆಚಾನಕ್ ಘ’ಟನೆಯಲ್ಲಿ ತೀ’ರಿಕೊಂಡರು.. ಮನೆಯ ಬಾಡಿಗೆ ಕಟ್ಟಲು ಹಣವಿಲ್ಲದ ಕಾರಣ ಯಜಮಾನ ಮನೆಯಿಂದ ಹೊರಹಾಕಿದರು. ನಾವು ಪ್ರೀತಿಸಿ ಮದುವೆಯಾದವರು.. ಆದುದರಿಂದ ನಮ್ಮ ಕುಟುಂಬಸ್ಥರು ಯಾರು ಸಹ ಸಹಾಯಕ್ಕೆ ಮುಂದಾಗಲಿಲ್ಲ. ಹಾಗಾಗಿ ಮಗುವನ್ನು ಬಿಟ್ಟು ನಾನು ಎಲ್ಲಿಯೂ ಕೂಡ ಕೆಲಸಕ್ಕೆ ಹೋಗಲು ಕೂಡ ಆಗುತ್ತಿಲ್ಲ..

ನಾನು ಕೂಡ ಸಾ’ಯೋ,ಣ ಅಂತೆಂದರೆ ಈ ಮಗು ಅನಾಥವಾಗಿ ಹೋಗುತ್ತದೆ ಎಂಬ ಭ’ಯ ಈಗಲೂ ಕಾಡುತ್ತದೆ ಎಂದು ತನ್ನ ಕಷ್ಟವನ್ನು ಹೇಳಿಕೊಂಡಳು. ಈ ಕಥೆಯನ್ನು ಕೇಳಿದ ನಾನು ಆಕೆಗೆ ಸ್ವಲ್ಪ ಊಟ ಕೊಡಿಸಿ ತನ್ನ ಕೈಲಾದಷ್ಟು ಹಣದ ಸಹಾಯವನ್ನು ಮಾಡಿ ಅಲ್ಲಿಂದ ಹೊರಟು ಹೋದೆ. ಈ ಘಟನೆ ನೋಡಿದ ಮೇಲೆ ಸಮಾಜದ ಮೇಲೆ ತುಂಬಾನೆ ಕೋ’ಪ ಬಂದಿತು.. ಅರ್ಧ ಗಂಟೆ ಕೂತಿದ್ದರು ಸಹ ನೂರಾರು ಜನರು ಆಕೆಯನ್ನು ನೋಡುತ್ತಾ ಹೋದರೇ ಹೊರತು ಯಾರು ಕೂಡ ಸಹಾಯ ಮಾಡಲಿಲ್ಲ. ನಮ್ಮ ಜೀವನದಲ್ಲಿ ಬರುವಾಗ ಅಥವಾ ಹೋಗುವಾಗ ಏನು ಕೂಡ ತೆಗೆದುಕೊಂಡು ಹೋಗಲಾರೆವು..

ಆದರೆ ನಮ್ಮ ಸ್ವಾರ್ಥಕ್ಕಾಗಿ ಬದುಕುತ್ತಾ ಇರುತ್ತೇವೆ. ನಾನೇನೋ ದಾನ ಮಾಡಬಿಟ್ಟೆ ಸಹಾಯ ಮಾಡಬಿಟ್ಟೆ ಅಂತ ಹೋಗಳಿಕೋತಿಲ್ಲ.. ಬದಲಾಗಿ ನಮ್ಮ ಸ್ವಲ್ಪ ಸಮಯವನ್ನು ಅವರೊಂದಿಗೆ ಕಳೆದು ಅವರ ಕಷ್ಟ ಅರಿತು ಕೈಲಾದ ಸಹಾಯ ಮಾಡಿದರೆ ನಾವು ಕಳೆದುಕೊಳ್ಳುವುದು ಏನು ಇಲ್ಲಾ ಅಲ್ಲವೇ. ದಯವಿಟ್ಟು ಇನ್ಮುಂದೆ ಯಾರಾದರೂ ಹೊಟ್ಟೆ ಹಸಿದವರು ಕಂಡರೆ ಅವರಿಗೆ ಧನಸಹಾಯ ಮಾಡುವ ಬದಲು 20 ರೂಪಾಯಿ ಅಥವಾ 30 ರೂಪಾಯಿ ಖರ್ಚು ಮಾಡಿ ಒಂದು ಊಟವನ್ನು ಕೊಡಿಸಿ.. ಅನ್ನದಾನ ಮಹಾದಾನ ನೆನಪಿನಲ್ಲಿಟ್ಟುಕೊಳ್ಳಿ ಸ್ನೇಹಿತರೆ. ಇನ್ನಾದರೂ ಕೂಡ ಇಂತಹವರಿಗೆ, ಸಮಾಜದಲ್ಲಿ ಸಹಾಯ ಮಾಡುತ್ತೀರಾ.. ತಿಳಿಸಿ.