Advertisements

ಬಹಳ ದಿನದಿಂದ ರೈಲ್ವೇ ನಿಲ್ದಾಣದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಮಹಿಳೆಯ ರಹಸ್ಯ ಬಯಲಾದಾಗ ಎಲ್ಲರಿಗೂ ಶಾ’ಕ್..

Inspire Kannada Mahiti

ನಮಸ್ತೆ ಸ್ನೇಹಿತರೆ, ದೊಡ್ಡ ದೊಡ್ಡ ನಗರಗಳಲ್ಲಿ ಜೀವನ ಮಾಡುವುದು ಕಷ್ಟ.. ಎಷ್ಟೇ ದುಡಿದರು ಮನೆಯ ಜವಾಬ್ದಾರಿ ನಡೆಸಲು ಸಾಕಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮಧ್ಯ ಪ್ರದೇಶದ ಸಂಧ್ಯಾ ಎಂಬುವ ಹುಡುಗಿಯ ಕಥೆ ಕೇಳಿದರೆ ಹೆಮ್ಮೆ ಪಡುವಂತದ್ದು.. ಅಷ್ಟಕ್ಕೂ ಏನಿದು ಇವರ ಜೀವನದ ಕಥೆ ಎಂಬುದನ್ನು ನೋಡೊಣ ಬನ್ನಿ. ಸಂಧ್ಯಾ ಅವರು ಮೂಲತಃ ಮಧ್ಯ ಪ್ರದೇಶದವರಾಗಿದ್ದು.. ಗಂಡ ಮತ್ತು ಮಕ್ಕಳ ಜೊತೆ ಸುಖ ಜೀವನ ನಡೆಸುತ್ತಿರುತ್ತಾರೆ. ಇವರ ಪತಿ ಕೂಡ ಹೊರಗಡೆ ಕೆಲಸ ಮಾಡುತ್ತಾ ಮನೆಯವರನ್ನು ಚೆನ್ನಾಗಿ ನೋಡಿಕೊಳ್ಳುತ್ತಿರುತ್ತಾನೆ‌..

Advertisements

ಈಗಿರುವಾಗ ಒಂದು ದಿನ ಸಂಧ್ಯಾ ಅವರ ಪತಿ ಕೆಲಸಕ್ಕೆ ಹೊರಗಡೆ ಹೋಗಿ ಮತ್ತೆ ಮನೆಗೆ ಬರುವ ಸಮಯದಲ್ಲಿ ಜೀವಂತವಾಗಿ ಮನೆಗೆ ಬರಲಿಲ್ಲ. ಇಹಲೋಕವನ್ನು ತ್ಯ’ಜಿಸುತ್ತಾರೆ.. ಇನ್ನೂ ಗಂಡ ತೀರಿಕೊಂಡ ನಂತರ ಮನೆಯ ಸಂಪೂರ್ಣ ಜವಾಬ್ದಾರಿ ಸಂಧ್ಯಾ ಅವರ ಮೇಲೆ ಬೀಳುತ್ತಾದೆ. ಮನೆಯಲ್ಲಿ ಗಂಡ ಇಲ್ಲ.. ಮೂರು ಮಕ್ಕಳು ಬೇರೆ ಏನು ಮಾಡುವುದು, ಅವರನ್ನು ಹೇಗೆ ಸಾಕುವುದು ಎಂದು ಯೋಚನೆ ಮಾಡುತ್ತಾ ಕೂರುತ್ತಾಳೆ ಸಂಧ್ಯಾ. ನಂತರ ಸಂಧ್ಯಾ ಅವರು ಯಾವುದಾದರೂ ಕೆಲಸಕ್ಕೆ ಸೇರಿ ಮಕ್ಕಳಿಗೆ ವಿಧ್ಯಾಭ್ಯಾಸವನ್ನು ಕೊಡಿಸಬೇಕು.. ಅವರನ್ನು ಬೆಳೆಸಿ ದೊಡ್ಡವರನ್ನಾಗಿ ಮಾಡಬೇಕೆಂದು ದೃಡ ನಿರ್ಧಾರ ಮಾಡುತ್ತಾರೆ.

ಸಂಧ್ಯಾ ಅವರು ಜಪಲ್ ಪೂರ್ ನಲ್ಲಿರುವ ಕಟಿನಿ ರೈಲ್ವೇ ಜಂಕ್ಷನ್ ನಲ್ಲಿ ಕೂಲಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ.. ರೈಲ್ವೇ ಸ್ಟೇಷನ್ ನಲ್ಲಿ ಬಂದು ಇಳಿದ ಪ್ರಯಾಣಿಕರು ತೂಕದ ಲಗೇಜ್ ಗಳನ್ನು ಕೂಡ ಹೊರುತ್ತಾರೆ. ಗಂಡಸರು ಹೊರಲು ಕಷ್ಟ ಪಡುತ್ತಿದ್ದ ಲಗೇಜ್ ಬ್ಯಾಗ್ ಗಳನ್ನು ಕೂಡ ಸಂಧ್ಯಾ ಅವರು ಹೊತ್ತು ಪ್ರಯಾಣಿಕರು ಹೇಳಿದ ಜಾಗಕ್ಕೆ ತೆಗೆದುಕೊಂಡು ಹೋಗಿ ಕೊಟ್ಟು ಬರುತ್ತಾರೆ.. ಆ ರೈಲ್ವೇ ಸ್ಟೇಷನ್ ನಲ್ಲಿ 45 ಜನ ಗಂಡು ಕೂಲಿಗಳ ಜೊತೆ ಸಂಧ್ಯಾ ಅವರು ಏಕಾಂಗಿಯಾಗಿ ಸುಮಾರು ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಇದರಿಂದ ಬರುವ ಹಣದಲ್ಲಿ ತಮ್ಮ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸವನ್ನು ಕೊಡಿಸುತ್ತಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ‌..

ಇನ್ನೂ ಸಂಧ್ಯಾ ಅವರು ಇಂಡಿಯನ್ ರೈಲ್ವೇ ನಲ್ಲಿ ಪ್ರಪ್ರಥಮ ಮಹಿಳಾ ಕೂಲಿ ಎಂಬ ಹೆಗ್ಗಳಿಗೆ ಪಡೆದಿದ್ದಾರೆ. ಇನ್ನೂ ಮಾಧ್ಯಮದವರು ಸಂಧ್ಯಾ ಅವರಿಗೆ ನೀವು ಈ ರೀತಿ ಕೂಲಿ ಕೆಲಸ ಮಾಡುತ್ತಿರುವುದರಿಂದ ಅವಮಾನ ಆಗುತ್ತಿಲ್ಲವೇ ಎಂದು ಪ್ರಶ್ನೆ ಕೇಳಿದಾಗ ಕೆಲಸ ಯಾವುದಾದರೇನು ನಾನು ಇನ್ನೊಬ್ಬರ ಹಣವನ್ನು ಕ’ಳ್ಳತನ ಮಾಡಿಲ್ಲ ಯಾರಿಗೂ ಮೋಸ ಕೂಡ ಮಾಡಿಲ್ಲ.. ಕಷ್ಟಪಟ್ಟು ದುಡಿಯಬೇಕು ಅಕಸ್ಮಾತ್ ಅವಮಾನ ಆಗುತ್ತಿದೆ ಎಂದು ಮನೆಯಲ್ಲಿ ಕೂತರೆ, ಜೀವನದಲ್ಲಿ ಮುಂದೆ ಬರಲು ಆಗುವುದಿಲ್ಲ ನನಗೆ ಈ ಕೆಲಸ ಮಾಡಲು ಯಾವುದೇ ರೀತಿ ಬೇಸರವಿಲ್ಲ.. ಇನ್ನೊಬ್ಬರ ಮಾತಿಗೆ ಕಿವಿ ಕೊಡದೇ ನಮ್ಮ ಕೆಲಸ ಏನಿದಿಯೋ ಅದನ್ನ ಮಾಡಿಕೊಂಡು ಹೋಗಬೇಕಷ್ಟೇ ಎಂದು ಹೇಳುತ್ತಾರೆ. ಸಂದ್ಯಾ ಅವರ ಸ್ವಾಭಿಮಾನದ ಬಗ್ಗೆ ನೀವೇನು ಹೇಳ್ತೀರಾ..