Advertisements

ವಿಮಾನದ ಒಳಗೆ ಕೂತಿದ್ದ 15 ಸೈನಿಕರಿಗೆ ಈ ಮಹಿಳೆ ಯಾರು ಮಾಡದ ಕೆಲಸ ಮಾಡಿದ್ದಾರೆ.. ಏನದು ನೋಡಿ..

Uncategorized

ನಮಸ್ತೆ ಸ್ನೇಹಿತರೆ, ನಾವುಗಳು ಎಲ್ಲಾದರೂ ಹೋಗುವಾಗ ಹಲವಾರು ವಿಚಿತ್ರ ಘಟನೆಗಳನ್ನು ನೋಡಿರುತ್ತೇವೆ, ಕೇಳಿರುತ್ತೇವೆ. ಇನ್ನೂ ಈ ಮಾಹಿತಿಯಲ್ಲಿ ರೇವತಿ ಎಂಬ ಮಹಿಳೆ ಒಮ್ಮೆ ವಿಮಾನದಲ್ಲಿ ಬೇರೆ ಊರಿಗೆ ಪ್ರಯಾಣ ಹೋಗುವಾಗ ನಡೆದಂತಹ ಒಂದು ಸ್ವಾರಸ್ಯಕರ ಘಟನೆಯ ಬಗ್ಗೆ ತಿಳಿದುಕೊಳ್ಳೋಣ.. ರೇವತಿಯವರು ಯಾವುದೋ ಕೆಲಸದ ನಿಮಿತ್ತ ವಿಮಾನ ಹತ್ತುತ್ತಾರೆ. ಇನ್ನೂ ಅವರ ಹಿಂದೆಯೇ 15 ಯೋದರು ಕೂಡ ಹತ್ತುತ್ತಾರೆ.. ರೇವತಿಯವರಿಗೆ ಸೈನಿಕರೆಂದರೆ ಬಹಳ ಪ್ರೀತಿ, ಈಗಾಗಿ ಆ 15 ಯೋದರಿಗೆ ಸೆಲ್ಯೂಟ್ ಹೊಡೆದು ಈಗ ಎಲ್ಲಿ ಕೆಲಸ ಮಾಡುತ್ತಿದ್ದೀರಾ, ಯಾವ ಕಡೆ ಹೋಗುತ್ತಿದ್ದೀರಾ ಎಂದು ರೇವತಿ ಕೇಳುತ್ತಾರೆ. ರೇವತಿ ಪ್ರಶ್ನೆಗೆ ಉತ್ತರ ಕೊಡುತ್ತಾ ಯೋದರಲ್ಲಿ ಒಬ್ಬರು ಈ ರೀತಿ ಹೇಳುತ್ತಾರೆ..

Advertisements

ನಾವು ಈಗ ಆಗ್ರಾದ ಕಡೆಗೆ ಹೋಗುತ್ತಿದ್ದೇವೆ ಅಲ್ಲಿ ಈಗ ಎರಡು ವಾರಗಳ ಕಾಲ ಕೆಲಸ ಇದೆ, ಆ ಕೆಲಸ ಮುಗಿದ ನಂತರ ಕಾಶ್ಮೀರದ ಕಡೆಗೆ ಹೋಗಬೇಕೆಂದು ಹೇಳುತ್ತಾರೆ.. ಕೆಲವು ಕ್ಷಣಗಳ ಬಳಿಕ ವಿಮಾನ ಕೂಡ ಹೊರಡುತ್ತದೆ.. ಮುಕ್ಕಾಲು ಗಂಟೆ ಸಮಯ ಕಳೆದು ಊಟದ ಸಮಯ ಬರುತ್ತದೆ. ವಿಮಾನದಲ್ಲಿ ಗಗನ ಸಖಿಯರು ಐಷಾರಾಮಿ ಊಟವನ್ನು ತೆಗೆದುಕೊಂಡು ಬೇಕಾದವರಿಗೆ ಕೊಡುತ್ತಾ ಬರುತ್ತಿದ್ದರು.. ರೇವತಿಯವರು ಕೂಡ ಊಟ ಬರುವಿಕೆಗಾಗಿ ಕಾಯುತ್ತಿದ್ದರು. ಆಗ ಹಿಂದೆ ಕೂತಿದ್ದ ಸೈನಿಕರು ಊಟದ ಬಗ್ಗೆ ಮಾತನಾಡಿಕೊಳ್ಳುತ್ತಾ.. ಅದರಲ್ಲಿ ಇದ್ದ ಒಬ್ಬ ಯೋದ ಊಟವನ್ನು ತೆಗೆದುಕೊಳ್ಳೋಣ ಹೊಟ್ಟೆ ತುಂಬಾ ಹಸಿವಾಗುತ್ತಿದೆ ಎಂದು ಹೇಳಿದ. ಆಗ ಇನ್ನೊಬ್ಬ ಸೈನಿಕ ಈ ಊಟದ ಬೆಲೆ ಜ್ಯಾಸ್ತಿ ಇರುತ್ತದೆ ನಮ್ಮ ಬಳಿ ಅಷ್ಟೊಂದು ಹಣ ಇಲ್ಲ..

ಡೆಲ್ಲಿಗೆ ಹೋದ ನಂತರ ಅಲ್ಲೇ ಒಟ್ಟಿಗೆ ಊಟ ಮಾಡೋಣ ಎಂದು ತಮ್ಮೊಳಗೆ ಮಾತನಾಡಿಕೊಳ್ಳುತ್ತಿರುತ್ತಾರೆ. ಇನ್ನೂ ಸೈನಿಕರು ಮಾತನಾಡಿಕೊಳ್ಳುತ್ತಿರುವ ವಿಷಯ ರೇವತಿಯವರ ಕಿವಿಗೆ ಬೀಳುತ್ತದೆ.. ನಾವು ನಮ್ಮ ಮನೆಗಳಲ್ಲಿ ಸುಖವಾಗಿ, ನೆಮ್ಮದಿಯಾಗಿ ಬದುಕುತ್ತಿದ್ದೇವೆ ಅಂದರೆ ಅದು ಸೈನಿಕರಿಂದ ಮಾತ್ರ.. ಆದರೆ ಇವರಿಗೆ ಈ ರೀತಿಯ ಪರಿಸ್ಥಿತಿ ಬಂದಿದೆ ಎಂದು ಬೇಸರಗೊಂಡ ರೇವತಿ ಒಬ್ಬ ಗಗನ ಸಖಿಯನ್ನು ಕರೆದು ಹಿಂದೆ ಕೂತಿದ್ದ 15 ಜನ ಸೈನಿಕರಿಗೆ ಯಾವ ಊಟ ಕೇಳುತ್ತಾರೋ ಅದನ್ನು ಕೊಡಿ ಆದರೆ ದುಡ್ಡು ಮಾತ್ರ ಅವರ ಬಳಿ ಕೇಳಬೇಡಿ ನಾನು ಕೊಡುತ್ತೇನೆ ಎಂದು ಹಣವನ್ನು ಕೊಟ್ಟು ಕಳುಹಿಸುತ್ತಾರೆ.. ರೇವತಿ ಮಾಡಿದ ಕೆಲಸ ನೋಡಿ ಆ ಗಗನ ಸಖಿ ರೇವತಿ ಅವರಿಗೆ ನೀವು ಗ್ರೇಟ್ ಮೇಡಮ್ ಎಂದು ಹೇಳಿ. ಆ 15 ಜನ ಸೈನಿಕರಿಗೆ ಊಟವನ್ನು ತಂದು ಕೊಡುತ್ತಾರೆ..

ನಂತರ ಸೈನಿಕರೂ ಊಟ ತಿಂದು ಮುಗಿಸುತ್ತಾರೆ‌‌.. ಇನ್ನೂ ರೆವತಿಯವರು ಕೂಡ ಊಟ ಮಾಡಿ ಕೈ ತೊಳೆಯಲು ಹೋದಾಗ ಅಲ್ಲೊಬ್ಬ ಅಜ್ಜ ರೇವತಿಯವರ ಬಳಿ ಬಂದು ನೀವು ಸೈನಿಕರ ಊಟಕ್ಕೆ ಹಣ ಕೊಟ್ಟಿದ್ದು ನಾನು ನೋಡಿದೆ ನಿಮ್ಮದು ನಿಜಕ್ಕೂ ಒಳ್ಳೆಯ ಮನಸ್ಸು. ನಮ್ಮ ಕೈಯಲ್ಲಿ ಮಾಡಲಗಾದ ಕೆಲಸ ನೀವು ಮಾಡಿದ್ದೀರಾ ನಾವೇನು ಮಾಡಲಗಲಿಲ್ಲ ತಗೋ ನನ್ನದು ಒಂದು ಚಿಕ್ಕ ಸಹಾಯ ಇರಲಿ ಎಂದು ಹೇಳಿ 500 ರೂಪಾಯಿಯನ್ನು ರೇವತಿಯ ಕೈಯಲ್ಲಿ ಇಟ್ಟು ಆ ಆಜ್ಜ ಹೋಗುತ್ತಾರೆ‌.. ರೇವತಿಯವರು ಕೈ ತೊಳೆದು ತಮ್ಮ ಸೀಟಿನಲ್ಲಿ ಹೋಗಿ ಕೂರುತ್ತಾರೆ. ಕೆಲವು ಸಮಯದ ಬಳಿಕ ಆ ವಿಮಾನದ ಕ್ಯಾಪ್ಟನ್ ಭಾವುಕರಾಗಿ ರೇವತಿ ಅವರ ಬಳಿ ಬಂದು ನೀವು ನಿಜವಾಗಿಯೂ ಒಳ್ಳೆಯ ಕೆಲಸ ಮಾಡಿದ್ದೀರಾ ನಿಮ್ಮಂತಹ ಒಳ್ಳೆಯ ಮನಸ್ಸಿನ ವ್ಯಕ್ತಿ ನಮ್ಮ ವಿಮಾನದಲ್ಲಿ ಪ್ರಯಾಣ ಮಾಡುತ್ತಿರುವುದು ನಮಗೆ ಹೆಮ್ಮೆ ವಿಷಯ ಎಂದು ಹೇಳುತ್ತಾರೆ.‌.

ಈ ವಿಷಯ ವಿಮಾನದಲ್ಲಿ ಕೂತಿದ್ದ ಬೇರೆ ಎಲ್ಲಾ ಪ್ರಯಾಣಿಕರಿಗೆ ಗೊತ್ತಾಗಿ ಎಲ್ಲಾರು ಚಪ್ಪಾಳೆ ಹೊಡೆಯುವ ಮೂಲಕ ರೇವತಿಗೆ ಅಭಿನಂದನೆ ಸಲ್ಲಿಸುತ್ತಾರೆ‌.. ವಿಮಾನದಲ್ಲಿ ಕೂತಿದ್ದ ಬೇರೆ ಪ್ರಯಾಣಿಕರೆಲ್ಲಾ ಒಬ್ಬೊಬ್ಬರಾಗಿ ಬಂದು ನೀವು ಮಾಡಿದ ಒಳ್ಳೆಯ ಕೆಲಸಕ್ಕೆ ನಮ್ಮದು ಒಂದು ಶೇರ್ ಇರಲಿ ಎಂದು. ರೇವತಿ ಸೈನಿಕರಿಗೆ ಊಟವನ್ನು ಕೊಡಿಸಲು ಖರ್ಚುಮಾಡಿದಕ್ಕಿಂತ ಜ್ಯಾಸ್ತಿ ಹಣವನ್ನು ರೇವತಿಯವರಿಗೆ ಕೊಡುತ್ತಾರೆ.. ವಿಮಾನ ಆಗ್ರಾದಲ್ಲಿ ಲ್ಯಾಂಡ್ ಆಗುತ್ತದೆ. ಎಲ್ಲಾ ಪ್ರಯಾಣಿಕರು ವಿಮಾನದಿಂದ ಕೆಳಗೆ ಇಳಿಯುತ್ತಿರುತ್ತಾರೆ ಆಗ ಒಬ್ಬ ಸೈನಿಕನ ಬಳಿ ಹೋದ ರೇವತಿ ಜನಗಳೆಲ್ಲಾ ಕೊಟ್ಟಿದ್ದ ಹಣವನ್ನು ಕೊಟ್ಟು ತನ್ನ ಪಾಡಿಗೆ ತಾನು ಹೊರಟು ಹೋಗುತ್ತಾರೆ.‌‌. ಸ್ನೇಹಿತರೆ ಈ ಘಟನೆಯ ಬಗ್ಗೆ ನೀವು ಏನು ಹೇಳಲು ಇಷ್ಟ ಪಡುತ್ತೀರಾ ಎಂಬುದನ್ನು ತಿಳಿಸಿ.