ನಮಸ್ತೆ ಸ್ನೇಹಿತರೆ, ಕೆಲವು ನಟಿಯರು ಕೆಲವೇ ಕೆಲವು ಸಿನಿಮಾಗಳಲ್ಲಿ ನಟಿಸಿದರು ಅಭಿಮಾನಿಗಳ ಮನದಲ್ಲಿ ಉಳಿಯುತ್ತಾರೆ.. ಈ ನಟಿ ಕೂಡ ನಟಿಸಿದ್ದು ಕೇವಲ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ಮಾತ್ರ. ನಂತರ ಮದುವೆ ಆದ ಈಕೆ ತನ್ನ ಪತಿಯಿಂದಾಗಿ ಒಂದು ಸಮ’ಸ್ಯೆಯಲ್ಲಿ ಸಿಲುಕಿಕೊಂಡರು.. ಅದೇನು ಎಂದು ನೋಡೊಣ ಬನ್ನಿ. ತೆಲುಗು, ತಮಿಳು, ಮಲಯಾಳಂ, ಕನ್ನಡ, ಹಿಂದಿ ಈ ಎಲ್ಲಾ ಬಾಷೆಯಲ್ಲಿ ಸುಮಾರು 40 ಚಿತ್ರಗಳಲ್ಲಿ ನಟಿಸಿದ ನಟಿ ಲೈಲಾ.. ಹಿಂದಿ ಸಿನಿಮಾ ಒಂದರ ಮೂಲಕ 1996 ರಲ್ಲಿ ಸಿನಿಮಾ ರಂಗಕ್ಕೆ ಬಂದ ಈ ನಟಿ ಹೆಚ್ಚಾಗಿ ನಟಿಸಿದ್ದು ತೆಲುಗು ಹಾಗು ತಮಿಳು ಚಿತ್ರಗಳಲ್ಲಿ..

ಕನ್ನಡದಲ್ಲಿ 2000 ನೇ ಇಸವಿಯಲ್ಲಿ ತೆರೆಕಂಡ ದೇವರ ಮಗ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ನಾಯಕಿಯಾಗಿ ಕನ್ನಡದಲ್ಲಿ ಮೊದಲ ಬಾರಿಗೆ ನಟಿಸಿದರು.. ನಂತರ ರವಿಚಂದ್ರನ್ ಜಗ್ಗೇಶ್ ಅವರ ರಾಮಕೃಷ್ಣ ಸಿನಿಮಾದಲ್ಲಿ ನಟಿಸಿದರು. ನಂತರ 2006 ನೇ ಇಸವಿಯಲ್ಲಿ ಉಪೇಂದ್ರ ಅವರಿಗೆ ನಾಯಕಿಯಾಗಿ ತಂದೆಗೆ ತಕ್ಕ ಮಗ ಚಿತ್ರದಲ್ಲಿ ನಟಿಸಿದರು.. ನಂತರ ಮೆಹದಿನ್ ಎಂಬ ಇರಾನ್ ದೇಶದ ಉದ್ಯಮಿಯನ್ನು ಪ್ರೀತಿಸುತ್ತಿದ್ದ ಲೈಲಾ 2006 ರಲ್ಲಿ ಮದುವೆಯಾಗಿ ದುಬೈನಲ್ಲಿ ನೆಲೆಸಿದರು. ನಂತರ ಇಬ್ಬರು ಮುದ್ದಾದ ಮಕ್ಕಳು ಕೂಡ ಜನಿಸಿದರು..

ಆದರೆ ಲೈಲಾ ಅವರ ಪತಿ ವ್ಯಾಪಾರದಲ್ಲಿ ಊಹಿಸಲಾಗದ ನಷ್ಟ ಅನುಭವಿಸಿದರು. ಎಷ್ಟರ ಮಟ್ಟಿಗೆ ಅಂದರೆ ಕೈಯಲ್ಲಿ ನಯಾ ಪೈಸೆ ಇಲ್ಲಾ.. ಗಂಡನದು ಇರಾನ್ ದೇಶ ಆದ್ದರಿಂದ ಅಂತರಾಷ್ಟ್ರೀಯ ಸಮಸ್ಯೆಗಳು ಹೆಚ್ಚು. ಒಂದು ದಿನ ಮಕ್ಕಳ ಜೊತೆ ತುಂಬಾ ದುಃಖದಲ್ಲಿದ್ದ ಲೈಲಾರನ್ನು ಒಬ್ಬ ಭಾರತೀಯ ಉದ್ಯಮಿ ಗುರುತಿಸಿದರು.. ಹಾಗ ಅವರನ್ನು ವಿಚಾರಿಸಿ ಆಕೆಗೆ ಎದುರಾಗಿರುವ ಕಷ್ಟಗಳ ಬಗ್ಗೆ ಕೇಳಿ ತಿಳಿದುಕೊಂಡರು. ಆಗೆ ಭಾರತೀಯ ಉದ್ಯಮಿಗಳ ಒಕ್ಕೂಟಕ್ಕೆ ತಿಳಿಸಿ ಲೈಲಾ ಅವರಿಗೆ ಸಹಾಯ ಮಾಡಿದ್ದಾರೆ.. ಭಾರತೀಯ ಉದ್ಯಮಿಗಳ ಸಹಾಯಕ್ಕೆ ಕಣ್ಣೀರು ಹಾಕಿದ ಲೈಲಾ ಅವರು.. ಯಾರೇ ಕಷ್ಟದಲ್ಲಿದ್ದರು ಮೊದಲು ಸಹಾಯಕ್ಕೆ ಬರುವುದು ನನ್ನ ಭಾರತೀಯರು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.