Advertisements

ಈ ದೇವಿಗೆ ಚಪ್ಪಲಿ ಹಾರವೇ ಬೇಕು, ಚಪ್ಪಲಿ ಸೇವೆ ಮಾಡೋ ಈ ಏಕೈಕ ದೇವಾಲಯ ಎಲ್ಲಿದೆ ಗೊತ್ತಾ?

Temples

ದೇವಸ್ಥಾನಕ್ಕೆ ಬಂದವರೆಲ್ಲ ದೇಗುಲದಿಂದ ಅತಿ ದೂರದಲ್ಲಿ ಚಪ್ಪಲಿಯನ್ನು ಕಳಚಿಟ್ಟು ಹಾಗೆ ಚಪ್ಪಲಿಯನ್ನು ಕಳಚಿದ ಮೇಲೆ ಕಾಲಿಗೆ ನೀರು ಹಾಕಿಕೊಂಡು ಮುಖವನ್ನೆಲ್ಲ ತೊಳೆದುಕೊಂಡು ಆಮೇಲೆ ದೇವಸ್ಥಾನದ ಒಳಗೆ ಹೋಗಿ ದೇವಸ್ಥಾನದ ಗರ್ಭದ ಗುಡಿ ಗೆ ಹೋಗಿ ದೇವರ ಹಾಗೂ ದೇವಿಯ ದರ್ಶನ ಪಡೆಯುತ್ತಾರೆ.ಆದರೆ ಇಲ್ಲೊಂದು ವಿಚಿತ್ರ ದೇವಾಲಯ ಇದೆ ಈ ದೇವಿಗೆ ಚಪ್ಪಲಿಯೇ ಸರ್ವಶ್ರೇಷ್ಠ.. ಅಷ್ಟೇ ಅಲ್ಲಾ ಇಲ್ಲಿ ಚಪ್ಪಲಿಯ ಜಾತ್ರೆ ಉತ್ಸವಗಳು ಕೂಡ ನಡೆಯುತ್ತವೆ. ಅಂತಹ ವಿಚಿತ್ರ ನಿಗೂಢ ದೇವಾಲಯ ಎಲ್ಲಿದೆ ಅಂತೀರಾ, ಹೌದು ಅಂಥದ್ದೊಂದು ವಿಚಿತ್ರ ದೇವಾಲಯ ನಮ್ಮ ಕರ್ನಾಟಕದಲ್ಲೆ ಇದೆ ಆ ದೇವಾಲಯ ಯಾವುದು ಎಲ್ಲಿದೆ ಹೇಗಿದೆ ಆ ದೇವಾಲಯಕ್ಕೆ ಹೇಗೆ ಹೋಗಬಹುದು ಯಾಕೆ ಅಲ್ಲಿ ಚಪ್ಪಲಿ ಸೇವೆಯನ್ನು ಮಾಡ ಲಾಗುತ್ತದೆ ಯಾಕೆ ಚಪ್ಪಲಿಯ ಹಾರವನ್ನು ದೇವಿಗೆ ನೀಡಲಾಗುತ್ತದೆ ಎನ್ನುವ ಸಂಪೂರ್ಣ ಮಾಹಿತಿ ನೋಡಿ ಸ್ನೇಹಿತರೆ ನಮ್ಮ ಭಾರತದಲ್ಲಿನ ಜನರಿಗೆ ದೇವರು ಮತ್ತು ದೇವಾಲಯಗಳ ಮೇಲೆ ತುಂಬಾ ನಂಬಿಕೆ ಇದೆ. ಭಾರತದಲ್ಲಿನ ದೇವಾಲಯಗಳು ತಮ್ಮದೇ ಆದ ವಿಶಿಷ್ಟತೆಯಿಂದ ವಿಶ್ವದಾದ್ಯಂತ ಹೆಸರು ವಾಸಿಯಾಗಿವೆ. ಭಾರತದಲ್ಲಿನ ಎಲ್ಲಾ ಜನರು ದೇವಾಲಯಗಳನ್ನು ತುಂಬಾ ಭಕ್ತಿ ಗೌರವದಿಂದ ಕಾಣುತ್ತಾರೆ ಆದ್ದರಿಂದ ದೇವಾಲಯದ ಅವರಣದಲ್ಲಿ ಚಪ್ಪಲಿಗಳನ್ನು ಬೂಟುಗಳನ್ನು ಧರಿಸುವುದಿಲ್ಲ.

Advertisements

[widget id=”custom_html-3″]

ಆದರೆ ಈ ವಿಚಿತ್ರ ದೇವಾಲಯದಲ್ಲಿ ಮಾತ್ರ ಆಗಿಲ್ಲ ಇಲ್ಲಿ ದೇವರಿಗೆ ಚಪ್ಪಲಿಗಳ ಹಾರವನ್ನೇ ಅರ್ಪಿಸುವ ವಿಚಿತ್ರ ಪದ್ಧತಿ ಒಂದಿದೆ. ಹೌದು ಈ ವಿಷಯ ನಿಮಗೆ ವಿಚಿತ್ರ ಅನಿಸಬಹುದು ಆದರೆ ನೀವು ಕೇಳುತ್ತಿರುವುದು ಸತ್ಯ ನಾನು ಹೇಳುತ್ತಿರುವುದು ನಿಜ ಇಂತಹ ಪದ್ಧತಿ ಹಾಗೂ ಆಚರಣೆ ಅಂದರೆ ನಮಗೆ ಮನಸ್ಸು ಒಪ್ಪುವುದಿಲ್ಲ ಆದರೆ ಈ ಪದ್ಧತಿಯನ್ನು ಕರ್ನಾಟಕದಲ್ಲಿ ಒಂದು ದೇವಾಲಯದಲ್ಲಿ ನೂರಾರು ವರ್ಷಗಳಿಂದ ಆಚರಿಸುತ್ತಾ ಬಂದಿದ್ದಾರೆ. ಹೌದು ಈ ದೇವಾಲಯ ಇರುವುದು ಕರ್ನಾಟಕ ರಾಜ್ಯದ ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ಗೋಳಾ ಹಳ್ಳಿಯಲ್ಲಿ.. ಇಲ್ಲಿಗೆ ಬರುವ ಭಕ್ತರು ಮಾತ್ರ ದೇವರಿಗೆ ಪ್ರತಿಜ್ಞೆ ಮಾಡುವಾಗ ಮರದ ಮೇಲೆ ಚಪ್ಪಲಿಯನ್ನು ಕಟ್ಟುತ್ತಾರೆ ನಂತರ ಪ್ರತಿಜ್ಞೆ ನೆರವೇರಿದಾಗ ಅವರು ದೇವಸ್ಥಾನಕ್ಕೆ ಬಂದು ದೇವಿಗೆ ಚಪ್ಪಲಿ ಹಾರವನ್ನು ಅರ್ಪಿಸುತ್ತಾರೆ. ಎಲ್ಲಿ ನಡೆಯುವ ಪಾದರಕ್ಷೆಗಳ ಉತ್ಸವವನ್ನು ಪ್ರತಿವರ್ಷ ದೀಪಾವಳಿಯ ಆರನೆಯ ದಿನದಂದು ಆಚರಿಸಲಾಗುತ್ತದೆ. ಜನರು ತಮ್ಮ ಬೇಡಿಕೆಗಳನ್ನು ಪೂರೈಸು ಅಂತ ದೇವರಲ್ಲಿ ಬೇಡಿಕೊಳ್ಳುತ್ತಾರೆ. ಹೊರಗಿನ ಮರದ ರೆಂಬೆಗಳಿಗೆ ಚಪ್ಪಲಿಯನ್ನು ನೇತು ಹಾಕುತ್ತಾರೆ. ದೇವಿಯು ತನ್ನ ಭಕ್ತರು ಸಮರ್ಪಿಸಿದ ಚಪ್ಪಲಿಯನ್ನು ದರಿಸಿ ರಾತ್ರಿಯಲ್ಲಿ ಸಂಚರಿಸುತ್ತ ದುಷ್ಟಶಕ್ತಿಗಳಿಂದ ನಮ್ಮನ್ನು ರಕ್ಷಿಸುತ್ತಾಳೆ ಎಂದು ಇಲ್ಲಿನ ಜನರ ಅಪಾರ ನಂಬಿಕೆ ಇದೆ..

[widget id=”custom_html-3″]

ಈ ಮೊದಲು ಜನರು ಈ ದೇವಿಯನ್ನು ಮೆಚ್ಚಿಸಲು ಎತ್ತುಗಳನ್ನು ಕೋಣಗಳನ್ನು ಬ’ಲಿ ಕೊಡುತ್ತಿದ್ದರು. ಪ್ರಾಣಿಗಳನ್ನು ಕೊಲ್ಲುವುದನ್ನು ನಿಷೇಧಿಸಿದ ಸರ್ಕಾರ ತದನಂತರ ಈ ಚಪ್ಪಲಿಯ ಆಚರಣೆ ಬಂತೆಂದು ಇಲ್ಲಿನ ಹಿರಿಯರು ನಮಗೆ ಹೇಳಿದ್ದಾರೆ.ಇದೇ ಕಾರಣ ಈ ಜಾಗದಲ್ಲಿ ಚಪ್ಪಲಿಗಳನ್ನು ಕಟ್ಟುವ ಸಂಪ್ರದಾಯ ಪ್ರಾರಂಭವಾಯಿತೆಂದು ಇಲ್ಲಿನ ಸ್ಥಳೀಯರು ನಂಬುತ್ತಾರೆ. ಜಗವೆಲ್ಲ ಸಂಚರಿಸಿ ನಮ್ಮನ್ನೆಲ್ಲಾ ರಕ್ಷಿಸುತ್ತಿರುವ ದೇವಿಯ ಅದಕ್ಕೆ ಯಾವುದೇ ನೋವು ಭಾರದಿರಲಿ ಅನ್ನೋದೇ ಈ ಆಚರಣೆಯ ಹಿಂದಿನ ನಂಬಿಕೆಯಾಗಿದೆ. ಇನ್ನು ಎಲ್ಲ ದೇವರಿಗೆ ಎದುರಿನಿಂದ ಪೂಜೆ ಸಲ್ಲಿಸಿದರೆ ಲಕ್ಕಮ್ಮದೇವಿ ಗೆ ಹಿಂಭಾಗದಿಂದ ಪೂಜೆ ಸಲ್ಲಿಸುತ್ತಾರೆ. ಈ ದೇವಸ್ಥಾನದ ವಿಶೇಷತೆ ಇದಾಗಿದೆ. ದೇವಿಯನ್ನು ಮೆಚ್ಚಿಸಲು ಭಕ್ತರು ಚಪ್ಪಲಿಗಳನ್ನು ಹೂವಿನ ಹಾರದ ರೀತಿ ಕಟ್ಟಿ ದೇವರಿಗೆ ಅರ್ಪಿಸುತ್ತಾರೆ. ಪ್ರತಿವರ್ಷ ಈ ದೇವಸ್ಥಾನದಲ್ಲಿ ಪಾದರಕ್ಷೆಗಳ ಉತ್ಸವವನ್ನು ಕೂಡ ಇಲ್ಲಿ ಆಯೋಜಿಸಲಾಗಿದೆ.ಈ ಉತ್ಸವದಲ್ಲಿ ಜನರು ಚಪ್ಪಲಿ ಹಾರದ ಸೇವೆಮಾಡಲು ಬಹಳ ದೂರ ದೂರದಿಂದ ಸಾವಿರಾರು ಭಕ್ತರು ಇಲ್ಲಿಗೆ ಬರುತ್ತಾರೆ.ಇನ್ನೊಂದು ವಿಶೇಷತೆಯಾಗಿದೆ ಜಾತ್ರೆಯ ಆ ರಾತ್ರಿ ದೇವಸ್ಥಾನದ ಹತ್ತಿರ ಯಾರು ಹೋಗುವುದಿಲ್ಲ ಅಂದರೆ ಒಂದು ವೇಳೆ ಹೋದರೆ ಕಷ್ಟಗಳು ಹುಡುಕಿಕೊಂಡು ಬರುತ್ತವೆ ಅನ್ನೋದು ಇಲ್ಲಿನ ಜನರ ನಂಬಿಕೆಯಾಗಿದೆ.

[widget id=”custom_html-3″]

ಒಟ್ಟಾರೆ ಹಲವು ವಿಶೇಷತೆಗಳನ್ನು ಹೊಂದಿರುವ ಗೋಳಾ ಲಕ್ಕಮ್ಮ ಚಪ್ಪಲಿ ಜಾತ್ರೆ ಪ್ರತಿವರ್ಷ ಇಲ್ಲಿ ದೀಪಾವಳಿಯ ನಂತರ ಆಚರಿಸಲಾಗುತ್ತದೆ. ಅಂದಹಾಗೆ ಗೋಳಾ ಲಕ್ಕಮ್ಮ ದೇವಸ್ಥಾನ ಜಿಲ್ಲಾ ಕೇಂದ್ರವಾದ ಕಲ್ಬುರ್ಗಿಯಿಂದ 45 ಕಿಲೋಮೀಟರ್ ದೂರದಲ್ಲಿದ್ದರೆ ವಿಜಯಪುರದಿಂದ 160 ಕಿಲೋಮೀಟರ್ ದೂರದಲ್ಲಿದೆ. ಹಾಗೆಯೇ ಅವಳಿ ನಗರಗಳಾದಂತ
ಹುಬ್ಬಳ್ಳಿ ಧಾರವಾಡದಿಂದ ಸುಮಾರು 399 ಕಿಲೋಮೀಟರ್ ದೂರದಲ್ಲಿದ್ದರೆ ಬೆಂಗಳೂರಿನಿಂದ 634 ಕಿಲೋಮೀಟರ್ ದೂರದಲ್ಲಿದೆ. ಒಂದು ವೇಳೆ ನೀವು ಆಳಂದ ಕ್ಕೆ ಹೋದರೆ ಅಲ್ಲಿಯ ಹತ್ತಿರವೇ ಗಾಣಗಾಪುರ ಇದೆ.ಈ ದೇವಸ್ಥಾನ ಕೇವಲ 46 ಕಿಲೋಮೀಟರ್ ದೂರದಲ್ಲಿದೆ ಸನಾತನ ಧರ್ಮದಲ್ಲಿ ಗುರುವಿಗೆ ಎಲ್ಲದಕ್ಕಿಂತ ಶ್ರೇಷ್ಠ ಸ್ಥಾನವಿದೆ. ಹೀಗಾಗಿ ಗುರುವನ್ನು ಬ್ರಹ್ಮ ವಿಷ್ಣು ಮಹೇಶ್ವರ ಎಂಬ ತ್ರಿಮೂರ್ತಿಗಳ ಸ್ವರೂಪ ಎಂದು ಬಣ್ಣಿಸಲಾಗಿದೆ. ಅಂತಹ ಗುರುವಿಗೆ ಗುರುವಾಗಿರು ವವರು ದತ್ತಾತ್ರೇಯರು ಗುರು ದತ್ತಾತ್ರೇಯ ನೆಲೆಸಿರುವ ಕ್ಷೇತ್ರ ಕರ್ನಾಟಕ ರಾಜ್ಯದ ಕಲಬುರ್ಗಿ ಜಿಲ್ಲೆಯ ಗಾಣಗಾಪುರದಲ್ಲಿ ಇದೆ. ಅದನ್ನು ದತ್ತಾತ್ರೇಯ ಕ್ಷೇತ್ರವೆಂದೇ ಕರೆಯಲಾಗುತ್ತದೆ.. ದತ್ತಾತ್ರೇಯ ಅವತಾರವೆನ್ನಲಾದ ಶ್ರೀ ನರಸಿಂಹ ಸರಸ್ವತಿ ಸ್ವಾಮಿಗಳು ಗಾಣಗಾಪುರದಲ್ಲಿ ನೆಲೆಸಿದ್ದರು..

[widget id=”custom_html-3″]

ಆದ್ದರಿಂದ ಗಾಣಗಾಪುರ ವನ್ನು ದತ್ತಾತ್ರೇಯ ಕ್ಷೇತ್ರವೆಂದೇ ನಂಬಲಾಗಿದೆ ಗುರು ಚರಿತ್ರೆಯಲ್ಲಿ ನರಸಿಂಹ ಸರಸ್ವತಿಗಳು ತಾವು ಸದಾ ಈ ಕ್ಷೇತ್ರದಲ್ಲಿ ಜಾಗೃತವಾಗಿ ನೆಲೆಸುವುದಾಗಿ ಉಲ್ಲೇಖಿಸಲಾಗಿದೆ. ಭೀಮ ಹಾಗೂ ಅಮರ್ಜಾ ನದಿಗಳ ಸಂಗಮ ಕ್ಷೇತ್ರವಾಗಿರುವ ನಿರ್ಗುಣ ಪಾದುಕ ಪೂಜೆಯನ್ನು ಇಲ್ಲಿ ಮಾಡಲಾಗುತ್ತದೆ. ಇಲ್ಲಿರುವ ಮುಖ್ಯ ದೇವಾಲಯ ದತ್ತಾತ್ರೇಯ ನರಸಿಂಹ ಸರಸ್ವತಿಗೆ ಮುಡುಪಾದ ನಿರ್ಗುಣ ಮಠ ಅಥವಾ ದೇವಾಲಯವಾಗಿದೆ. ಇಲ್ಲಿಗೆ ಬರುವ ಭಕ್ತರು ವಿಶೇಷವಾದ ನಿರ್ಗುಣ ಪಾದುಕ ಗಳ ಪೂಜೆಗಳನ್ನು ಮಾಡುತ್ತಾರೆ. ಸ್ವತಹ ಸ್ವಾಮಿಗಳು ಹೇಳಿರುವಂತೆ ಇಂದಿಗೂ ಅವರು ಮುಂಜಾನೆ ವೇಳೆ ಸಂಗಮದಲ್ಲಿ ನಿಂದು ಮಧ್ಯಾಹ್ನದ ಸಮಯದಲ್ಲಿ ಭಿಕ್ಷಾಟನೆ ಮಾಡಿ ಭಕ್ತರ ಪಾದುಕ ಪೂಜೆಯನ್ನು ಸ್ವೀಕರಿಸುತ್ತಾರೆ. ಹೀಗಾಗಿಯೇ ಇಲ್ಲಿಗೆ ಬರುವ ಭಕ್ತರು ವಿಶಿಷ್ಟವಾದ ಮಧುಕರಿ ಆಚರಣೆಯನ್ನು ಪಾಲಿಸುತ್ತಾರೆ. ಮಧುಕರಿ ಎಂದರೆ ಭಿಕ್ಷೆ ಬೇಡುವುದು ರೂಢಿಯಲ್ಲಿರುವಂತೆ ಭಕ್ತರು ಮೊದಲು ಸಂಗಮ ಸ್ಥಳದಲ್ಲಿ ಸ್ನಾನ ಮಾಡಿ ನಂತರ ಗಾಣಗಾಪುರದಲ್ಲಿ ಇರುವ ಮನೆಗಳ ಪೈಕಿ ಕನಿಷ್ಟ ಐದು ಮನೆಗಳಲ್ಲಿ ಭಿಕ್ಷೆ ಬೇಡಿ ನಂತರ ಪಾದುಕಗಳ ಪೂಜೆಯನ್ನು ನಿರ್ಗುಣ ಮಠದಲ್ಲಿ ನೆರವೇರಿಸುತ್ತಾರೆ. ಇಂತಹ ವಿಶೇಷವಾದ ದೇವಸ್ಥಾನವೆ ದತ್ತಾತ್ರೇಯ ದೇವಸ್ಥಾನ ಗಾಣಗಾಪುರ ಸ್ನೇಹಿತರೆ ಒಂದು ವೇಳೆ ನೀವು ಕಲಬುರ್ಗಿ ಜಿಲ್ಲೆಗೆ ಹೋದರೆ ಆಳಂದ ದಲ್ಲಿರುವ ಲಕ್ಕಮ್ಮ ದೇವಸ್ಥಾನ ಹಾಗೂ ಗಾಣಗಾಪುರ ದಲ್ಲಿರುವ ದತ್ತಾತ್ರೇಯ ದೇವಸ್ಥಾನಕ್ಕೆ ತಪ್ಪದೇ ಭೇಟಿ ಕೊಡಿ..