ಕೆಲವೊಮ್ಮೆ ಮನೆ ಅಥವಾ ಜಮೀನು ಕೊಳ್ಳುವಾಗ ಅದರ ಅಳತೆಯಲ್ಲಿ ಅನುಮಾನ ಉಂಟಾಗಬಹುದು. ಇಲ್ಲವೇ ನೀವು ಇರುವ ಜಾಗ ಅಥವಾ ಜಮೀನಿನ ವಿಸ್ತೀರ್ಣವನ್ನು ಅವುದೇ ಅಳತೆ ಮಾಪನಗಳು ಇಲ್ಲದೆ ನಿಮ್ಮ ಫೋನ್ ನಲ್ಲೇ ನಿಖರವಾಗಿ ತಿಳಿಯಬಹುದಾಗಿದೆ. ಇದಕ್ಕಾಗಿ ನಿಮ್ಮ ಆಂಡ್ರಾಯ್ಡ್ ಫೋನ್ ನಲ್ಲಿ ಪ್ಲೇ ಸ್ಟೋರ್ ಗೆ ಹೋಗಿ ಅಲ್ಲಿ ಒಂದು ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬೇಕು. ಅದೇ ಜಿಪಿಎಸ್ ಫೀಲ್ಡ್ ಏರಿಯ ಮೆಸರ್ ಎಂಬ ಆ್ಯಪ್. GPS field area measure.

ಇದನ್ನು ಇನ್ಸ್ಟಾಲ್ ಮಾಡಿದ ಬಳಿಕ ಓಪನ್ ಮಾಡಿ. ಆಗ ನೀವು ನಿಂತಿರುವ ಜಾಗದ ಲೊಕೇಶನ್ ಕಾಣ ಸಿಗುತ್ತದೆ. ಝೂಮ್ ಮಾಡಿ ನೀವು ಅಳೆಯಲು ಬಯಸುವ ಜಾಗವನ್ನು ಮೆಸರಿಂಗ್ ಟೂಲ್ ಸಹಾಯದಿಂದ ಸೆಲೆಕ್ಟ್ ಮಾಡಿ. ಆಗ ಅದು ಆ ಜಾಗದ ವಿಸ್ತೀರ್ಣ ಎಷ್ಟಿದೆ ಎಂಬುದನ್ನು ತಿಳಿಸುತ್ತದೆ. ಹಾಗೆ ಅದೇ ಆಪ್ ನಲ್ಲಿ ಸೇಟಿಂಗ್ಸ್ ಗೆ ಹೋಗಿ ನೀವು ಯಾವ ಮಾಪನದಲ್ಲಿ ಅಳಿಯಬೇಕು ಎಕರೆ, ಮೀಟರ್ ಸ್ಕ್ವಯರ್ , ಫೀಟ್ ಯಾವುದಾದರೂ ಸೆಲೆಕ್ಟ್ ಮಾಡಿಕೊಳ್ಳ ಬಹುದು.
ಇದೆ ರೀತಿ ಸರ್ಕಾರದ ಭೂಮಿ ಆ್ಯಪ್ ಕೂಡ ಇದೆ. ಅಲ್ಲಿ ನಿಮ್ಮ ಜಾಗದ ಸರ್ವೆ ನಂ ಉಪಯೋಗಿಸಿ ಜಾಗವನ್ನು ನಿಖರವಾಗಿ ಅಳೆಯಬಹುದು. ನಿಮ್ಮ ಊರಿನ ನಕ್ಷೆ ಪಡೆಯಲು ಗೂಗಲ್ ನಲ್ಲಿ ಲ್ಯಾಂಡ್ ರೆಕಾರ್ಡ್ಸ್ ಎಂಬ ಸರ್ಕಾರಿ ವೆಬ್ಸೈಟ್ ನಲ್ಲಿ ಮೋಜರಿ ಎಂಬ ಆಯ್ಕೆ ಯನ್ನು ತೆರೆದು ಅದರಲ್ಲಿ ನಿಮ್ಮ ಜಿಲ್ಲೆ, ತಾಲೂಕು , ಊರು ಎಲ್ಲಾ ಮಾಹಿತಿ ಕೊಟ್ಟರೆ ನಿಮ್ಮ ಊರಿನ ಇಡೀ ನಕ್ಷೆ ಪಿಡಿಎಫ್ ನಲ್ಲಿ ಸಿಗುತ್ತದೆ. ಸ್ನೇಹಿತರೇ, ನಿಮಗೆ ಇನ್ನು ಈ ಮಾಹಿತಿ ಬಗ್ಗೆ ಗೊಂದಲಗಳು ಇದ್ದಲ್ಲಿ, ಸಂಪೂರ್ಣ ಮಾಹಿತಿಗಾಗಿ ಕೆಳಗಡೆ ಇರುವ ಈ ವಿಡಿಯೋ ನೋಡಿ..ನಿಮ್ಮ ಅಭಿಪ್ರಾಯ ತಿಳಿಸಿ..