Advertisements

ಒಂದು ಕಾಲದಲ್ಲಿ ಜನರಿಂದ ಪಾದ ಪೂಜೆ ಮಾಡಿಸಿಕೊಂಡ ನಟ ಈಗ ಹೊಟ್ಟೆ ಪಾಡಿಗಾಗಿ ಕುಗ್ರಾಮದಲ್ಲಿ ಟೈಲರಿಂಗ್ ಕೆಲಸ ಮಾಡ್ತಿದ್ದಾರೆ.. ಇವರು ಯಾರು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಸಿನಿಮಾ ಲೋಕಾನೇ ಹಾಗೆ.. ಸ್ಟಾರ್ ಆಗಬೇಕೆಂದು ತುಂಬಾನೆ ಜನ ಬರ್ತಾರೆ. ಕೊನೆಗೆ ಅವಕಾಶ ಸಿಗದೇ ಎಲ್ಲರೂ ಮಾಯಾ ಆಗ್ತಾರೆ.. ಕೆಲವರಿಗೆ ಅವಕಾಶ ಸಿಕ್ಕರೂ ಆಗೆ ಮಿಂಚಿ ಈಗೆ ಮಾರೆಯಾಗುತ್ತಾರೆ. ತೆಲುಗು ಲೆಜೆಂಡ್ ನಟ ಎನ್ ಟಿ ರಾಮರಾವ್ ಮಾಡುತ್ತಿದ್ದ ಲವಕುಶ ಚಿತ್ರದ ಕುಶ ಪಾತ್ರಕ್ಕಾಗಿ ಸಾವಿರಾರು ಹುಡುಗರನ್ನು ಆಡಿಷನ್ ಮಾಡಿದರು. ಆದರೆ ನಾಟಕದಲ್ಲಿ ಪಾತ್ರ ಮಾಡುತ್ತಿದ್ದ 10 ವರ್ಷದ ಹುಡುಗ ಸುಬ್ರಹ್ಮಣ್ಯಂ ಅವರನ್ನು ನೋಡಿದ ಡೈರೆಕ್ಟರ್ ಕುಶ ಪಾತ್ರಕ್ಕೆ ಆಯ್ಕೆ ಮಾಡಿಕೊಂಡರು.. ಲವ ಕುಶ ಚಿತ್ರದ ಏಳು ವರ್ಷ ನಡೆಯಿತು.. ಅಷ್ಟೊತ್ತಿಗಾಗಲೇ ಸುಬ್ರಹ್ಮಣ್ಯಂ ಅವರಿಗೆ 17ವರ್ಷ ವಯಸ್ಸಾಗಿತ್ತು. ಚಿತ್ರ ರಿಲೀಸ್ ಆಗಿ ದೊಡ್ಡ ಸಂಚಲನ ಸೃಷ್ಟಿ ಮಾಡಿತ್ತು..

Advertisements

ಸಿನಿಮಾ ನೋಡಲು ಥಿಯೇಟರ್ ಮುಂದೆ ಕಿಲೋಮೀಟರ್ ಗಟ್ಟಲೆ ಜನ ಇರುತ್ತಿದ್ದರು. ಲವ ಕುಶ ಚಿತ್ರವನ್ನು ಕನ್ನಡಕ್ಕೂ ಡಬ್ ಮಾಡಲಾಯಿತು.. ಇಲ್ಲಿಯೂ ಕೂಡ ದೊಡ್ಡ ಹಿಟ್ ಆಯಿತು. ವರ್ಷಗಟ್ಟಲೆ ತೆರೆಕಂಡ ಚಿತ್ರ ಮತ್ತೆ ರಿಲೀಸ್ ಮಾಡಿದಾಗ್ಲೂ ವರ್ಷ ಓಡಿದೆ.. ಆ ಸಮಯದಲ್ಲಿ ಕುಶ ಪಾತ್ರ ಮಾಡಿದ ಸುಬ್ರಹ್ಮಣ್ಯಂ ಎಲ್ಲಿಗೆ ಹೋದರು ಆರತಿ ಎತ್ತಿ ಸುಬ್ರಹ್ಮಣ್ಯಂ ಪಾದ ತೊಳೆದು ತೆಂಗಿನಕಾಯಿ ಹೊಡೆಯುತ್ತಿದ್ದರು ಜನ. ಸಾಕ್ಷಾತ್ ದೇವರಂತೆ ಅವರನ್ನು ನೋಡುತ್ತಿದ್ದರು.. ಲವ ಕುಶ ಚಿತ್ರದ ನಂತರ ಕೆಲವು ಸಿನಿಮಾಗಳಲ್ಲಿ ನಟಿಸಿದ ಸುಬ್ರಹ್ಮಣ್ಯಂ ಅವರಿಗೆ ಹೇಳಿಕೊಳ್ಳುವಂತಹ ಸಕ್ಸಸ್ ಸಿಗಲಿಲ್ಲ.

ಕೊನಗೆ ಹೊಟ್ಟೆ ಪಾಡಿಗಾಗಿ ತನ್ನ ಕುಗ್ರಾಮಕ್ಕೆ ಹೋಗಿ ಟೈಲರಿಂಗ್ ಕೆಲಸ ಶುರುಮಾಡಿದರು.. ಆಗ ಸುಬ್ರಹ್ಮಣ್ಯಂ ಅವರನ್ನು ನೋಡಿದ ತುಂಬಾ ಜನ ಹೀಯಾಳಿಸಿದರು. ಗೇಲಿ ಮಾಡಿದರು. ಅದಕ್ಕೆಲ್ಲಾ ಲೆಕ್ಕಿಸದ ಸುಬ್ರಹ್ಮಣ್ಯಂ ಟೈಲರಿಂಗ್ ಮಾಡುತ್ತಾ ನಂತರ ಮದುವೆಯಾಗಿ ಸುಂದರ ಸಂಸಾರವನ್ನು ಕಟ್ಟಿಕೊಂಡರು.. ಸುಮಾರು 40 ವರ್ಷಗಳಿಂದ ಬಟ್ಟೆ ಹೊಲಿಯುತ್ತಾ ಜೀವನ ಸಾಗಿಸುತ್ತಿದ್ದಾರೆ ನಟ ಸುಬ್ರಹ್ಮಣ್ಯಂ ಅವರು. ಆ ದಿನ ಹೀಯಾಳಿಸಿದವರೇ ಅಣ್ಣ ಬಟ್ಟೆ ಹರಿದೋಗಿದೆ ಸ್ವಲ್ಪ ಹೊಲಿದು ಕೊಡು ಎಂದು ಸುಬ್ರಹ್ಮಣ್ಯಂ ಅವರ ಬಳಿ ಬರ್ತಾರಂತೆ.. ಸಿನಿಮಾ ಅವಕಾಶ ಸಿಗಲಿಲ್ಲ ಎಂದು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಅದೆಷ್ಟೋ ನಟರಿಗೆ ನಟ ಸುಬ್ರಹ್ಮಣ್ಯಂ ಅವರು ಮಾದರಿಯಾಗಿದ್ದಾರೆ.