Advertisements

ಅರುಣ್ ಸಾಗರ್ ಎಂಬ ದೈತ್ಯ ಪ್ರತಿಭೆಯನ್ನು ಸಿನಿರಂಗ ಮರೆತೆ ಬಿಡ್ತಾ.. ಈಗ ಅರುಣ್ ಸಾಗರ್ ಏನ್ ಕೆಲಸ ಮಾಡ್ತಿದ್ದಾರೆ ಗೊತ್ತಾ? ಮಗಳು ಇವರೇ ನೋಡಿ..

Cinema

ಒಬ್ಬ ಕಲಾವಿದನಾಗಿ, ಖ,ಳನಟರಾಗಿ, ಹಾಸ್ಯ ಕಲಾವಿದರಾಗಿ, ಸಂಗೀತ ನಿರ್ದೆಶಕನಾಗಿ, ಪೋಷಕ ನಟನಾಗಿ, ನಿರೂಪಕನಾಗಿ ಹೀಗೆ ಸಾಕಷ್ಟು ಪಾತ್ರದಲ್ಲಿ ಕಾಣಿಸಿಕೊಂಡ ಮಲ್ಟಿ ಟ್ಯಾಲೆಂಟಡ್ ವ್ಯಕ್ತಿ ಅಂದರೆ ಅದು ಅರುಣ್ ಸಾಗರ್, ಅರುಣ್ ಸಾಗರ್ ಅವರಿಗೆ ಇರುವ ಪ್ರತಿಭೆಗೆ ಇಷ್ಟೊತ್ತಿಗೆ ಅವರು ಇನ್ನು ಹೆಚ್ಚು ಹೆಸರು ಮಾಡಬೇಕಿತ್ತು. ಬಾಲ್ಯದಿಂದ ಹಿಡಿದು ಯವ್ವನದಲ್ಲಿಯೂ ತನ್ನ ಯಾವೊಂದು ಕ್ಷಣವನ್ನು ವ್ಯರ್ಥ ಮಾಡದೇ ನಿರಂತರವಾಗಿ ಹೊಸತನವನ್ನು ಕಲಿತವರು ಅರುಣ್ ಸಾಗರ್. ಬಹುತೇಕರಿಗೆ ಅರುಣ್ ಸಾಗರ್ ಅವರು 2002 ರ ಇತ್ತೀಚಿನಿಂದ ಕಾಣಲಿಕ್ಕೆ ಶುರು ಆಗಿದ್ದಾರೆ. ಆದ್ರೆ ಇವರು ಚಿತ್ರಂಗಕ್ಕೆ ಕೊಟ್ಟು 25 ವರ್ಷಗಳೇ ಕಳೆದಿವೆ.

[widget id=”custom_html-3″]

Advertisements


ಬಾಲ್ಯದಿಂದಲೂ ಸದಾ ಒಂದಿಲ್ಲೊಂದು ವಿಚಾರಗಳಲ್ಲಿ ತಲ್ಲೀನನಾಗ್ತಿದ್ದ ಅರುಣ್ ಸಾಗರ್ ಯಾವೊಂದು ದಿನವನ್ನು ಸಹ ಸುಮ್ಮನೆ ಕಳೆದಿಲ್ಲ. ಸಾಗರದಲ್ಲಿ ಹುಟ್ಟಿ ಬೆಳದ ಅರುಣ್ ಸಾಗರದ ನಾಟಕ ರಂಗದವರೊಂದಿಗೆ ಅವರಿಗೆ ಟೀ ಕೊಟ್ಟುಕೊಂಡು ದಿನ ಕಳಿಲಿಕ್ಕೆ ಶುರು ಮಾಡ್ತಾರೆ. ಈ ವೇಳೆ ಮದ್ದಳೆ, ತಬಲಗಳನ್ನು ನುಡಿಸವುದನ್ನು ಕಲಿಯುತ್ತಾರೆ. ಸಂಗೀತ ಲೋಕದಲ್ಲಿ ಆಸಕ್ತಿ ಅವರಿಗೆ ನಾಟಕದವರ ಜೊತೆ ಸುತ್ತಾಡಿಯೇ ಬರುತ್ತದೆ. ನಂತರ ಯಕ್ಷಗಾನ ಕಲಿತಾರೆ. ಬಳಿಕ ದೊಡ್ಡವರಾದ ಮೇಲೆ ಮೈಸೂರಿನ ರಂಗಾಯಣದಲ್ಲಿ ನಟನೆ ತರಬೇತಿಯನ್ನು ಪಡೆಯಲು ಸೇರ್ತಾರೆ. ಆ ವೇಳೆ ಚಿಕ್ಕ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡು ಅಭಿನಯವನ್ನು ಕಲೀತಾರೆ.

[widget id=”custom_html-3″]

ಸಾಗರದಲ್ಲಿದ್ದಾಗ ನಾಟಕಗಳಲ್ಲಿ ಅಭಿನಯಿಸಿ ಅಭಿನಯದ ಬಗ್ಗೆ ತಿಳಿದಿತ್ತಾದರೂ, ಮೈಸೂರಿನಲ್ಲಿ ಇವರಿಗೆ ದೊಡ್ಡ ಪಾತ್ರಗಳು ಆರಂಭದಲ್ಲಿ ಸಿಗುವುದಿಲ್ಲ. ಹೋಗ್ತಾ ಹೋಗ್ತಾ ಇವರ ನಟನಾ ಪ್ರೌಢಿಮೆಗೆ ಮನಸೋತು ರಂಗಮಂದಿರದಲ್ಲಿ ದೊಡ್ಡ ದೊಡ್ಡ ಪಾತ್ರಗಳನ್ನು ಮಾಡಲಿಕ್ಕೆ ಅವಕಾಶ ಸಿಗುತ್ತೆ, ಇದೇ ರಂಗಮಂದಿರದ ಮುಖೇನ ದೂರದ ವಿದೇಶಗಳಲ್ಲಿಯೂ ಕೂಡ ಅರುಣ್ ಸಾಗರ್ ಅಭಿನಯಿಸ್ತಾರೆ, ಬಳಿಕ ಜನುಮದ ಜೋಡಿ ಚಿತ್ರದಲ್ಲಿ ಶಿವಣ್ಣ ಗೆಳೆಯರಲ್ಲಿ ಓರ್ವರಾಗಿ ಅಭಿನಯಿಸ್ತಾರೆ. ಅದಾದ ಬಳಿಕ ಕೆಲವು ಸಿನಿಮಾಗಳಲ್ಲಿ ಆರ್ಟ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸ್ತಾರೆ. ಇವರ ಪ್ರತಿಭೆ ಮೆಚ್ಚಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಓ ನನ್ನ ನಲ್ಲೆ ಸಿನಿಮಾದಲ್ಲಿ ಕಲಾ ನಿರ್ದೆಶಕರಾಗಿ ಕೆಲಸ ಮಾಡುವ ಅವಕಾಶ ಕೊಡ್ತಾರೆ.

[widget id=”custom_html-3″]

ಅನೇಕ ಪ್ರಭಾವ ಉಳ್ಳ ನಟ, ನಿರ್ದೇಶಕರ ಜೊತೆ ಕಾರ್ಯ ನಿರ್ವಹಿಸಿದ್ದಾರೆ, ತದ ನಂತರ ಸಂಜು ಹಾಗೂ ಮೈನಾ ಸಿನಿಮಾಗಳಲ್ಲಿ ಖ’ಳನಟರಾಗಿಯೂ ಗುರುತಿಸಿಕೊಂಡು ಅದ್ಭುತ ಅಭಿನಯದ ಮೂಲಕ ಜನ ಮನಗೆದ್ದಿದ್ದಾರೆ. ನಂತರ ಸಾಲು ಸಾಲು ಸುದೀಪ್ ಸಿನಿಮಾದಲ್ಲಿ ಅಭಿನಯಿಸಿ ಜನರ ಫೆವರೇಟ್ ಆದ್ರು. ವಿಷ್ಣುವರ್ಧನ, ಬಚ್ಚನ್, ವೀರ ಮಧಕರಿ ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ರು. ಬಳಿಕ ಕನ್ನಡದ ದೊಡ್ಡ ರಿಯಾಲಿಟಿ ಶೋ ಬಿಗ್​​ಬಾಸ್ ಸೀಸನ್ 1ಕ್ಕೆ ಹೋಗುವ ಅವಕಾಶ ಅರುಣ್ ಸಾಗರ್ ಅವರಿಗೆ ಸಿಕ್ಕಿತ್ತು. ಅರುಣ್ ಸಾಗರ್ ಅವರ ಅಭಿನಯಕ್ಕೆ, ಹಾಸ್ಯ ಪ್ರಜ್ಞೆಗೆ, ಪ್ರತಿಭೆಗೆ ಬಿಗ್ ಮನೆ ಒಳ್ಳೆಯ ವೇದಿಕೆಯಾಯ್ತು.

[widget id=”custom_html-3″]

ನಂತರ ಬಿಗ್​ಬಾಸ್​​ಲ್ಲಿ ರನ್ನರ್​​ ಅಪ್ ಆಗಿ ಗುರುತಿಸಿಕೊಂಡು ಬಿಗ್ ಮನೆಯಿಂದ ಆಚೆ ಬಂದ ಮೇಲೆ ಬಹು ಬೇಡಿಕೆಯ ನಿರೂಪಕನಾದರು. ಹಾಗೆಯೇ ಸೃಜನ್ ಲೋಕೇಶ್ ಅವರ ಮಜಾ ವಿತ್ ಸೃಜಾ ಅನ್ನೋ ಕಾರ್ಯಕ್ರಮದಲ್ಲಿಯೂ ಸಹ ಭಾಗವಹಿಸಿದ್ರು.
ಇನ್ನು ರಂಗಾಯಣದಲ್ಲಿರುವಾಗಲೇ ಮೀರಾ ಎನ್ನುವವರನ್ನು ಪ್ರೀತಿಸಿ ಮದುವೆಯಾಗಿದ್ರು. ಈ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ. ಇವರ ಹೆಣ್ಣು ಮಗಳು ಸಂಗೀತದಲ್ಲಿ ಆಸಕ್ತಿಯಿದ್ದು, ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಡಲು ತಯಾರಿ ನಡೆಸ್ತಿದ್ದಾರೆ.

ಒಬ್ಬ ಖ’ಳನಟನಾಗಿಯೂ ಖದರ್ ಆಗಿದ್ದು, ಹಾಸ್ಯನಟನಾಗಿಯೂ ಕಾಮಿಡಿ ಕಚಗುಳಿ ಕೊಟ್ಟು, ಪೋಷಕ ನಟನಾಗಿಯೂ ಪಾತ್ರಕ್ಕೆ ಜೀವ ತುಂಬಿ, ನಿರ್ದೆಶಕನಾಗಿ ಉತ್ತಮ ಡೈರೆಕ್ಷನ್ ಮಾಡಿ, ಕ್ರಿಯಾತ್ಮಕ ನಿರ್ದೆಶಕರಾಗಿ ಕ್ರಿಯೆಟಿವ್ ಆಗಿ ಚಿತ್ರಿಸಿ ಬಹುಮುಖ ಪ್ರತಿಭೆಯಾಗಿ ಕನ್ನಡದಲ್ಲಿ ಗುರುತಿಸಿಕೊಂಡಿರುವ ಅರುಣ್ ಸಾಗರ್ ಅವರಿಗೆ ಕನ್ನಡದಲ್ಲಿ ಅವರ ಪ್ರತಿಭೆಗೆ ತಕ್ಕುದಾದ ಅವಕಾಶಗಳು ಸಿಕ್ಕಿಲ್ಲ. ಇನ್ನು ಮೇಲಾದರೂ ಅವರಿಗೆ ಸಾಕಷ್ಟು ಅವಕಾಶಗಳು ಸಿಗಲಿ. ಕನ್ನಡ ಸಿನಿರಂಗದ ಅದ್ಭುತ ಪ್ರತಿಭೆಯ ಬಳಕೆಯನ್ನು ಚಿತ್ರರಂಗ ಮಾಡಿಕೊಳ್ಳುವಂತಾಗಲಿ ಎಂಬುವುದೇ ನಮ್ಮ ಆಶಯ.. ನಿವೇನ್ ಹೇಳ್ತೀರಾ..