Advertisements

ಜನುಮದ ಜೋಡಿ ನಟಿ ಶಿಲ್ಪಾ ಅವರ ಮನೆ ಹೇಗಿದೆ ಗೊತ್ತಾ? ಮೊದಲ ಬಾರಿಗೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ಕನ್ನಡ ತೆರೆಯ ಮೇಲೆ ಮಿಂಚಿ ನಂತರ ತೆರೆಯಿಂದ ದೂರ ಸರಿದ ಅದ್ಬುತ ನಟಿಯರಲ್ಲಿ ಇವರೂ ಒಬ್ಬರು. ಕನ್ನಡದ ಸಿನಿ ರಸಿಕರು ಎಂದೂ ಮರೆಯದ ನಟಿಯರಲ್ಲಿ ಸಿಗುವ ಅಪರೂಪದ ನಟಿ ಶಿಲ್ಪಾ ಅವರು.. ಕೆಲವರ ಮುಖ ಚಾಯೆ ಅವರ ಹೃದಯದ ಭಾವನೆಯನ್ನು ತೋರಿಸುತ್ತದೆ. ಅವರ ಒಳ್ಳೆಯ ಮನಸ್ಸು ಅವರ ಮುಖದಲ್ಲಿ ಕಾಣುತ್ತದೆ.. ಅಂತಹ ಮುಖ ಚಾಯೆ ಮತ್ತು ಹೃದಯ ಹೊಂದಿರುವ ನಟಿ ಹಳ್ಳಿ ಹುಡುಗಿಯ ಪಾತ್ರಗಳನ್ನು ಮಾಡಿ ಕನ್ನಡಿಗರ ಹೃದಯ ಗೆದ್ದವರು ನಟಿ ಶಿಲ್ಪಾ ಅವರು.. ಜನುಮದ ಜೋಡಿಯಲ್ಲಿ ಶಿಲ್ಪಾ ಅವರ ನಟನೆ ಅಮೋಘ. ಇವರು ಹುಟ್ಟಿ ಬೆಳೆದಿದ್ದು ಕೇರಳದಲ್ಲಿ.. ಆದರೆ ಕನ್ನಡದಲ್ಲೇ ಅತಿ ಹೆಚ್ಚು ಪ್ರಸಿದ್ಧಿ ಗಳಿಸಿದರು..

Advertisements

ಶಿಲ್ಪಾ ಅವರ ನಿಜವಾದ ಹೆಸರು ಚಿಟ್ಟಿ. ಇವರು ಕೊನೆಯದಾಗಿ ನಟಿಸಿದ ಚಿತ್ರ ಕೂಡ ಕನ್ನಡದ ಸಿನಿಮಾನೆ.. ಅದು 2004 ರಲ್ಲಿ ಬಂದ ಪಾಂಡವ, ಆನಂತರ ಯಾವ ಸಿನಿಮಾದಲ್ಲೂ ನಟಿಸಲಿಲ್ಲ ನಟಿ ಶಿಲ್ಪಾ ಅವರು. 2001 ರಲ್ಲಿ ನಿರ್ಮಾಕ ರಂಜಿತ್ ಅವರನ್ನ ಮದುವೆಯಾದ ಶಿಲ್ಪಾ ಅವರಿಗೆ ಮುದ್ದಾದ ಮಗಳಿದ್ದಾಳೆ. ಆಕೆಯ ಹೆಸರು ಆವಂತಿಕ.. ಆಸು ಪಾಸು ತಾಯಿಯ ಹಾಗೆ ಕಾಣುತ್ತಾಳೆ. ಈಗ ತಿರುವನಂತಪುರಂ ನಲ್ಲಿ ವಾಸವಿರುವ ಈ ನಟಿ ಸುಂದರ ಮನೆಯನ್ನು ಕಟ್ಟಿಕೊಂಡಿದ್ದಾರೆ.. ಹಾಗೆ ಎಷ್ಟೇ ಬ್ಯುಸಿ ಇದ್ದರೂ..ಮನೆಯಲ್ಲೇ ತಾವೇ ಅಡುಗೆ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಶಿಲ್ಪಾ ಅವರು..

ಮದುವೆಯ ನಂತರ ಸ್ವಂತ ನಿರ್ಮಾಣ ಸಂಸ್ಥೆಯನ್ನ ಪ್ರಾರಂಬಿಸಿದ ಶಿಲ್ಪಾ ಗಂಡನ ನಿರ್ದೇಶನದಲ್ಲಿ ಚಿತ್ರ ನಿರ್ಮಾಣ ಮಾಡಿದರು. ಆದರೆ ಅವರು ಅಷ್ಟಾಗಿ ಸಕ್ಸಸ್ ಕಾಣಲಿಲ್ಲ. ಚಿತ್ರ ನಿರ್ಮಾಣದಲ್ಲಿ ಸ್ವಲ್ಪ ಮಟ್ಟಿಗೆ ಹಣ ಕಳೆದುಕೊಂಡರು.. ನಂತರ ಧಾರಾವಾಹಿಗಳಲ್ಲಿ ನಟಿಸಲು ಶುರುಮಾಡಿದ ಈ ನಟಿ ಆರ್ಥಿಕವಾಗಿ ಸ್ವಲ್ಪ ಸುಧಾರಿಸಿದ ಮೇಲೆ ಸೀರಿಯಲ್ ನಿರ್ಮಾಣಕ್ಕೆ ಕೈ ಹಾಕಿದರು. ಆದರೆ ಈ ಬಾರಿ ದೇವರು ಕೈ ಬಿಡಲಿಲ್ಲ..‌ಈಗ ಶಿಲ್ಪಾ ಅವರ ನಿರ್ಮಾಣದ ಮಲಯಾಳಂ ನಲ್ಲಿ ಮತ್ತು ತಮಿಳುನಲ್ಲಿ ಎರಡು ಸೀರಿಯಲ್ ಪ್ರಸಾರವಾಗುತ್ತಿದ್ದು ಸೂಪರ್ ಡೂಪರ್ ಹಿಡ್ ಆಗಿದೆ.. ಈಗ ದೊಡ್ಡ ನಿರ್ಮಾಪಕಿಯಾಗಿ ಬೆಳೆದಿದ್ದಾರೆ ಶಿಲ್ಪಾ ಅವರು. ಇನ್ನೂ ಸೀರಿಯಲ್ ಸೆಟ್ ನಲ್ಲಿ ಬಾಸ್ ಎಂಬ ಮನೋಭಾವ ಇಲ್ಲದೇ ಚಿಕ್ಕಪುಟ್ಟ ಕೆಲಸಗಳನ್ನು ಮಾಡುತ್ತಾರಂತೆ.. ಎಂತಹ ಗುಣ ಅಲ್ಲವೇ. ಸ್ನೇಹಿತರೆ ಈ ನಟಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..