Advertisements

ನಟಿ ಸೌಂದರ್ಯ ಮನೆ ಮೊದಲ ಬಾರಿಗೆ ತೋರಿಸ್ತೀವಿ ನೋಡಿ..

Cinema

ನಮಸ್ತೆ ಸ್ನೇಹಿತರೆ, ಸೌಂದರ್ಯ ಎಂತಹ ಪಾತ್ರವನ್ನಾದರೂ ಲೀಲಾ ಜಾಲವಾಗಿ ಮಾಡಿ ಕನ್ನಡ ಸೇರಿದಂತೆ ಡಕ್ಷಿಣ ಭಾರತದ ಜನರ ಮನಸಲ್ಲಿ, ಮನದಲ್ಲಿ ಉಳಿದಿರುವ ಅಪರೂಪದ ನಟಿ.. ಅವರು ನಮ್ಮನ್ನ ಬಿಟ್ಟು ಅಗಲಿ 16 ವರ್ಷ ಕಳೆದಿದೆ. ಆದರೆ ಅವರನ್ನ ಯಾರು ಸಹ ಮರೆತಿಲ್ಲ.. ನಟಿ ಸೌಂದರ್ಯ ಅವರ ಬಗ್ಗೆ ಇಂಟ್ರೆಷ್ಟಿಂಗ್ ಮಾಹಿತಿ ಹಾಗೂ ಅವರ ಮನೆಯನ್ನ ನೋಡೊಣ ಬನ್ನಿ. ಜುಲೈ 18, 1976 ರಲ್ಲಿ ಹುಟ್ಟಿದ ಸೌಂದರ್ಯ ಅವರ ನಿಜವಾದ ಹೆಸರು ಸೌಮ್ಯ. ಮುಳಬಾಗಿಲು ತಾಲೂಕಿನ ಗಂಜಕುಂಟೆಯಲ್ಲಿ ಹುಟ್ಟಿದ ಸೌಂದರ್ಯ ಒಂದನೇ ತರಗತಿಯನ್ನ ಅದೇ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಓದಿದರು..

Advertisements

5 ಬಾಷೆಗಳು ಸೇರಿ 107 ಚಿತ್ರಗಳಲ್ಲಿ ನಟಿಸಿರುವ ಸೌಂದರ್ಯ ತಮ್ಮ 30ನೇ ವಯಸ್ಸಿನಲ್ಲಿ ಮದುವೆಯಾದರು.. ಮದುವೆಯಾದ ಒಂದು ವರ್ಷಕ್ಕೆ ಅಂದರೆ ತಮ್ಮ 31ನೇ ವರ್ಷದಲ್ಲಿ ಇಹಲೋಕವನ್ನು ತ್ಯ’ಜಿಸುತ್ತಾರೆ. ಇದರ ಜೊತೆ ಮತ್ತೊಂದು ಹೃದಯ ಹಿಂ’ಡುವ ಸತ್ಯ ಏನೆಂದರೆ ನಟಿ ಸೌಂದರ್ಯ ಅವರ ದು’ರಂತದ ವೇಳೆಯಲ್ಲಿ ಏಳು ತಿಂಗಳ ಗರ್ಭಿಣಿಯಾಗಿದ್ದರು ಎಂಬ ಸತ್ಯ.. ನಟಿ ಸೌಂದರ್ಯ ಅವರು ಕನಸುಗಳನ್ನು ಹೊತ್ತು ತನ್ನ ಮೊದಲ ಮಗುವಿನ ಮುಖ ನೋಡಲು ಕಾಯುತ್ತಿದ್ದ ಆಸೆ ಹೀಡೇರಲೆ ಇಲ್ಲಾ. ಆದರೆ ತನ್ನ ಊರಿನಲ್ಲಿ ಸೌಂದರ್ಯ ಅವರು ಕಟ್ಟಿಸಿರುವ ಶಾಲೆಯಲ್ಲಿ ನೂರಾರು ಮಕ್ಕಳು ಓದುತ್ತಿದ್ದಾರೆ.

ಅವರ ನೆನಪಲ್ಲಿ ಪ್ರತೀದಿನ ಶಾಲೆಗೆ ಪ್ರವೇಶಿಸುತ್ತಾರೆ.. ಈ ನಟಿ ಹುಟ್ಟಿ ಬೆಳೆದು ನಲಿದಾಡಿದ ಮನೆ ಇದು. ಸೌಂದರ್ಯ ಅವರನ್ನ ಇಲ್ಲಿನ ಜನ ಎಂದೂ ಮರೆಯೋದಿಲ್ಲ.. ಬಡತನದಲ್ಲಿ ಬೆಳೆದ ಸೌಂದರ್ಯ ಎಷ್ಟೇ ದೊಡ್ಡ ಮಟ್ಟಕ್ಕೆ ಹೋದರು ಒಂದು ಚೂರು ಗರ್ವ, ಅಹಂಕಾರ ತೋರಿಸುತ್ತಿರಲಿಲ್ಲ. ಊರಿಗೆ ಬಂದಾಗ ಎಲ್ಲಾ ಮನೆಗಳಿಗೆ ಹೋಗಿ ಬೆರೆತು ಮಾತನಾಡುತ್ತಿದ್ದರು.. ಕಷ್ಟ ಎಂದವರ ಕೈಗೆ ಹಣ ಇಡುತ್ತಿದ್ದರು ಎಂದು ಸೋದರ ಸಂಬಂಧಿ ಹೇಳಿದ್ದಾರೆ.

ನಟಿ ಸೌಂದರ್ಯ ಅವರು ಚಿತ್ರದ ಶೂಟಿಂಗ್ ನಲ್ಲಿ ಇದ್ದರೆ ಅಲ್ಲಿ‌ ಕೆಲಸ ಮಾಡುವ ಕೆಲಸಗಾರರಿಗೆ ಎಲ್ಲಿಲ್ಲದ ಸಂತೋಷ. ಕಾರಣ ಅವರ ಕಷ್ಟ ಕೇಳುತ್ತಿದ್ದ ನಟಿ ಸೌಂದರ್ಯ ಸಾಧ್ಯವಾದಷ್ಟು ಅವರ ಕೈ ತುಂಬಾ ಹಣ ಕೊಡುತ್ತಿದ್ದರು.. ಅದಕ್ಕಿಂತ ಹೆಚ್ಚಾಗಿ ಅವರ ಜೊತೆ ಆತ್ಮೀಯತೆಯಿಂದ ಬೆರೆಯುತ್ತಿದ್ದರು. ಈ ನಟಿ ನೋಟದಲ್ಲಿ ಮಾತ್ರ ಸೌಂದರ್ಯವತಿಯಾಗಿರಲಿಲ್ಲ.. ಹೃದಯದಲ್ಲೂ ಸೌಂದರ್ಯವಾಗಿದ್ದರು ಎಂದು ಹೇಳಲು ಹತ್ತಾರು ಕಥೆಗಳಿವೆ.. ನೀವು ನಟಿ ಸೌಂದರ್ಯ ಅವರ ಅಭಿಮಾನಿಯಾಗಿದ್ದರೆ ಅವರ ಬಗ್ಗೆ ಒಂದು ಅನಿಸಿಕೆ ತಿಳಿಸಿ.