ಚಿತ್ರರಂಗದಲ್ಲಿ ಕೆಲವ್ರು ಸ್ಟಾರ್ ಆಗ್ತಾರೆ ಇನ್ ಕೆಲವ್ರು ಸೂಪರ್ ಸ್ಟಾರ್ ಆಗ್ತಾರೆ ಆದ್ರೆ ಅದೆಲ್ಲದಕ್ಕೂ ಮೀರಿದವ್ರು ನಮ್ ಪ್ರೀತಿ ನಟಸಾರ್ವಭೌಮ ಅಣ್ಣಾವ್ರು. ಕಲೆಯನ್ನೇ ಉಸಿರು ಅಂತ ಬದುಕಿದೋರು, ಅಭಿಮಾನಿಗಳನ್ನು ದೇವರೆಂದ ಜಗತ್ತಿನ ಏಕೈಕ ಕಲಾ ಸರಸ್ವತಿ ಪುತ್ರ.

ಆಡು ಮುಟ್ಟದ ಸೊಪ್ಪಿಲ್ಲ ಅಂತಾರಲ್ಲ ಹಾಗೆ ಅಣ್ಣಾವ್ರು ಮಾಡದ ಪಾತ್ರವಿಲ್ಲ. 2 ಸಿನಿಮಾ ಹಿಟ್ ಆದ್ರೆ ಕೊಬ್ಬು ಮೈಯೆಲ್ಲಾ ಏರಿರುತ್ತೆ ಈಗಿನ ನಟರಿಗೆ. ದುರಹಂಕಾರ ಪರಮಾವದಿ ತಲುಪಿರ್ತಾರೆ. ಅಣ್ಣಾವ್ರು ಇಡೀ ಜೀವಮಾನದಲ್ಲಿ ಒಮ್ಮೆಯೂ ನಾನು ನಂದು ನನ್ನಿಂದಲೇ ಅನ್ನಲೇ ಇಲ್ಲ.

ಎಲ್ಲವೂ ಗುರು ರಾಘವೇಂದ್ರನ ಕೃಪೆ ಅಭಿಮಾನಿಗಳ ಪ್ರೀತಿ ಅಂದ್ರು. ಯಾವಾಗ ಒಬ್ಬ ವ್ಯಕ್ತಿ ಫಲವನ್ನು ಅಪೇಕ್ಷಿಸದೆ ಕಾಯಕ ಯೋಗಿ ಆಗ್ತಾನೋ ಆಗ ಆ ವ್ಯಕ್ತಿ ಶಕ್ತಿಯಾಗಿ ಬೆಳೀತಾನೆ. ಅಂತಹ ಅದ್ಬುತ ಶಕ್ತಿ ಕನ್ನಡ ಚಿತ್ರರಂಗದ ದೇವ್ರು ನಮ್ ಅಣ್ಣಾವ್ರು. ಕನ್ನಡ ಚಿತ್ರರಂಗಕ್ಕೆ ತಳಪಾಯವೇ ಅಣ್ಣಾವ್ರು.

ಯಾವುದೇ ರೀತಿಯ ಪೈಂಟಿಂಗ್ಸ್ ಡ್ರಾಯಿಂಗ್ ಬೇಕಾದಲ್ಲಿ ನನ್ನ 9480776752 ನಂಬರ್ ಗೆ ಕರೆ ಮಾಡಿ. ಈ ಕಲಾಕೃತಿ ನಿಮ್ಗೆ ಇಷ್ಟ ಆದ್ರೆ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.
