ನಮಸ್ತೆ ಸ್ನೇಹಿತರೆ, ಮಗ ವಿನೋದ್ ರಾಜ್ ಅವರನ್ನು ಸಾ’ಯಿ’ಸಲು ನಟಿ ಲೀಲಾವತಿ ಅವರು ಮುಂದಾಗಿದ್ದರಂತೆ.. ಖುದ್ದಾಗಿ ಈ ಘಟನೆಯನ್ನು ಲೀಲಾವತಿ ಅವರು ಬಿಚ್ಚಿಟ್ಟಿದ್ದು ಈ ಘಟನೆ ಕೇಳಿದರೆ ನಿಜಕ್ಕೂ ದುಃಖದ ವಾತಾವರಣ ಸೃಷ್ಟಿಯಾಗುತ್ತದೆ. ತಾಯಿ ಮಗನ ಸಂಬಂಧ ಎಂತದ್ದು ಎಂದು ನಿಜಕ್ಕೂ ಅರಿವಾಗುತ್ತದೆ. ಕಷ್ಟದ ದಿನಗಳನ್ನು ನೋಡಿದ ನಟಿ ಲೀಲಾವತಿ ಅವರಿಗೆ ಮಗುವಾದಾಗ ಚಿತ್ರರಂಗದಲ್ಲಿ ಅವಕಾಶಗಳು ಸಿಗದೇ ಕೈಯಲ್ಲಿ ಹಣವಿಲ್ಲದೇ ಬಹಳ ಕಷ್ಟವನ್ನು ಅನುಭವಿಸಿದ್ದರು..

ಇನ್ನೂ ಸಿನಿಮಾದಲ್ಲಿ ಅವಕಾಶಗಳು ಸಿಗದೇ ಇದ್ದಾಗ ನಾಟಕ ಮಾಡಲು ಡ್ರಾಮಾ ಕಂಪನಿಗಳ ಕಡೆ ಮುಖ ಮಾಡಿದ ನಟಿ ಲೀಲಾವತಿ ಅವರು ಒಂದೊಮ್ಮೆ ಕಂದಮ್ಮ ವಿನೋದ್ ರಾಜ್ ಜೊತೆ ತಾನು ಜೀ’ವ ಬಿಡಲು ಮುಂದಾಗಿದ್ದರಂತೆ. ಅಂತಹ ಕಣ್ಣೀರ ಕ್ಷಣಗಳನ್ನು ಖಾಸಗಿ ವಾಹಿನಿಯಲ್ಲಿ ಕೂತು ನಟಿ ಲೀಲಾವತಿ ಮೆಲುಕು ಹಾಕಿದ್ದಾರೆ. ಹೌದು ವಿನೋದ್ ರಾಜ್ ಹುಟ್ಟುತ್ತಾನೆ ಎಂದು ಗೊತ್ತಾದ ಕೂಡಲೇ ಎಲ್ಲಾ ಸಿನಿಮಾಗಳು ಕೂಡ ರಿಜೆಕ್ಟ್ ಆಗುತ್ತದೆ. ಒಂದು ತುತ್ತು ಊಟಕ್ಕೂ ಸಹ ಪರದಾಡಿದ್ದೇನೆ.. ಇನ್ನೂ ಮಗು ಹುಟ್ಟಿದ ಮೇಲೆ ಹೇಗೆ ಅವನನ್ನು ಸಾಕಲಿ ಎಂದು ಅಮಾವಾಸ್ಯೆಯ ದಿನ ಯೋಚನೆ ಮಾಡುತ್ತಾ ಕುಳಿತಿದ್ದೆ.

ಆಗ ನನಗೆ ಕೃಷಿಯ ಮೇಲೆ ಗಮನ ಬೀಳುತ್ತದೆ.. ಈಗ ಅದೇ ವ್ಯವಸಾಯ ಈ ದಿನ ನನ್ನನ್ನು ಕಾಪಾಡಿ ನನ್ನ ಮಗನನ್ನು ಕೂಡ ಬೀದಿಗೆ ಬರದೇ ಹಾಗೆ ನೋಡಿಕೊಳ್ಳುತ್ತಿದೆ. ಇನ್ನೂ ಇದಾದ ನಂತರ ಕೆಲವು ಸಂದರ್ಭಗಳಲ್ಲಿ ಮನೆ ಖರ್ಚಿಗೆ ಡುಡ್ಡಿಲ್ಲದೆ ನಾನು ಮತ್ತು ನನ್ನ ಮಗುವೇ ಮನೆಯಲ್ಲಿ ಇರುತ್ತಿದ್ದೆವು.. ಈ ಸಮಯದಲ್ಲಿ ಮನೆ ಕೆಲಸದವರು ಕೂಡ ಬಿಟ್ಟು ಹೋದರು. ಮಗುವಿಗೆ ಸ್ನಾನ ಮಾಡಿಸುವಾಗ ಉಸಿರು ಕ’ಟ್ಟುತ್ತದೆ.. ಹೇಗೋ ಒ’ದ್ದಾಡಿ ಮಗುವನ್ನು ತೊಟ್ಟಿಲಿನಲ್ಲಿ ಮಲಗಿಸಿದೆ. ಮಗು ಜೋರಾಗಿ ಅಳಲು ಶುರುಮಾಡಿದ..

ಈ ಸಂದರ್ಭದಲ್ಲಿ ನನಗೆ ಬೇರೆ ದಾರಿಯಿಲ್ಲದೆ ಮಗುವಿನ ಜೀ’ವ ತಗೆದು ನಾನು ಕೂಡ ಜೀ’ವ ಬೀಡಬೇಕು ಅಂದುಕೊಂಡು ಮಗುವಿನ ತೊಟ್ಟಿಲನ್ನು ಜೋರಾಗಿ ಆಡಿಸುವುದಕ್ಕೆ ಶುರುಮಾಡಿದೆ.. ಆಗ ಮಗು ಅಳುವನ್ನು ನಿಲ್ಲಿಸಿ ನನ್ನ ಮುಖವನ್ನು ನೋಡಿದ. ಆ ದಿನ ನನಗೆ ಆದ ಸಂಕಟ ಏನು ಎಂದು ಹೇಳಲಿ.. ಆ ದಿನ ನಾನು ನಿರ್ಧಾರ ಮಾಡಿದ್ದು ಒಂದೇ ನಾನು ನಿನ್ನನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು.

ನಮ್ಮಿಬ್ಬರ ಕಥೆ ಬಿಟ್ಟು ಬೇರೆ ಏನಿದೆ ಈ ಪ್ರಪಂಚದಲ್ಲಿ.. ಹೆಜ್ಜೆ ಹೆಜ್ಜೆಗೂ ಕೆಲಸ ಇದ್ದ ಕಾಲದಿಂದ, ಕೆಲಸ ಇಲ್ಲದೇ ಇದ್ದ ಕಾಲದಿಂದ ಎಲ್ಲದರಲ್ಲೂ ಜೊತೆಯಾಗಿ ಇದ್ದೀಯಾ ಎಂದು ನಟಿ ಲೀಲಾವತಿ ಹಾಗೂ ವಿನೋದ್ ರಾಜ್ ಅವರು ಕಣ್ಣೀರು ಇಡುತ್ತಾ ತಮ್ಮ ಗಾಢವಾದ ನೋವನ್ನು ಹೊರಹಾಕಿದ್ದಾರೆ. ನಿಜಕ್ಕೂ ಹೇಳಬೇಕೆಂದರೆ ಲೀಲಾವತಿಯಂತಹ ತಾಯಿಯನ್ನು ಪಡೆಯಲು ವಿನೋದ್ ರಾಜ್ ಅವರು ತುಂಬಾ ಅದೃಷ್ಟವಂತರು..