Advertisements

ಬೆಕ್ಕಿನ ಮರಿಗಳು ಎಂದುಕೊಂಡು ಮನೆಗೆ ತಂದ 6 ವರ್ಷದ ಹುಡುಗ, ನಿಜ ಗೊತ್ತಾಗಿ ಬೆಚ್ಚಿಬಿದ್ದರು..

Kannada Mahiti

ನಮಸ್ತೆ ಸ್ನೇಹಿತರೆ, ಮನುಷ್ಯ ತನ್ನ ಅತಿಯಾದ ಆಸೆಗೆ ಅರಣ್ಯ ನಾಶ ಮಾಡುತ್ತಿದ್ದಾನೆ.. ತನ್ನ ಪ್ರದೇಶ ಕಳೆದುಕೊಂಡ ಪ್ರಾಣಿಗಳು ಮನುಷ್ಯ ವಾಸಿಸುವ ಪ್ರದೇಶಕ್ಕೆ ಎಂಟ್ರಿ ಕೊಡುತ್ತಿವೆ. ಈಗೆ ಅರಣ್ಯ ಪಕ್ಕದಲ್ಲಿ ವಾಸಿಸುವ ಹುಡುಗ ಗಿಡದ ಬುಡದಲ್ಲಿದ್ದ ಎರಡು ಮರಿಗಳನ್ನು ನೋಡಿ.. ಅವು ಬೆಕ್ಕಿನ ಮರಿಗಳು ಎಂದುಕೊಂಡು ತಕ್ಷಣ ಮನೆಗೆ ಕರೆದುಕೊಂಡು ಬಂದು ಹಾಲು ಕೊಟ್ಟ.. ನಂತರ ಆಗಿದ್ದೇನು? ಆಂದ್ರಪ್ರದೇಶದ ವಿಶಾಖಪಟ್ಟಣಂ ಗೋಂದೂರು ಎಂಬ ಹಳ್ಳಿ ಅರಣ್ಯದಲ್ಲಿ ಇದೆ. ಆ ಊರಿಗೆ ಸೇರಿದ ಆರು ವರ್ಷದ ಹುಡುಗ ತನ್ನ ಸ್ನೇಹಿತರ ಜೊತೆ ಆಟ ಆಡುತ್ತಾ ಇದ್ದಾಗ ಒಂದು ಗಿಡದ ಕೆಳಗೆ ಎರಡು ಚಿಕ್ಕ ಮರಿಗಳು ಕಾಣಿಸಿದವು..

Advertisements

ಬೆಕ್ಕಿನ ಮರಿ ಎಂದು ಭಾವಿಸಿದ ಆ ಹುಡುಗ ಮರಿಗಳನ್ನು ಮನೆಗೆ ತಂದು ಹಾಲು ಕೊಟ್ಟು ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಈಗೆ ಇತರ ಹುಡುಗರ ಜೊತೆ ಸೇರಿ ಆ ಮರಿಗಳ ಜೊತೆಯಲ್ಲಿ ಒಂದು ವಾರದಿಂದ ಆಟ ಆಡುತ್ತಿದ್ದ.. ಆ ಮರಿಗಳು ಚೆನ್ನಾಗಿ ಹಾಲು ಕುಡಿದು ತುಂಟಾಟ ಮಾಡುತ್ತಿದ್ದವು. ಒಂದು ವಾರ ಕಳೆದ ಮೇಲೆ ಆ ಮರಿಗಳನ್ನು ನೋಡಿ ಅನುಮಾನಗೊಂಡ ಹಿರಿಯರು ಸರಿಯಾಗಿ ಪರಿಶೀಲನೆ ಮಾಡಿದಾಗ ಅವು ಬೆಕ್ಕಿನ ಮರಿಗಳು ಅಲ್ಲಾ.. ಚಿರತೆಯ ಮರಿಗಳು ಎಂದು ಗೊತ್ತಾಗಿದೆ. ತಕ್ಷಣವೇ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿದ ಹಳ್ಳಿಗರು ಆ ಚಿರತೆಯ ಮರಿಗಳನ್ನು ಅರಣ್ಯ ಅಧಿಕಾರಿಗಳಿಗೆ ಹಸ್ತಾಂತರ ಮಾಡಿದ್ದಾರೆ..

ಒಂದು ವಾರದಿಂದ ಚಿರತೆಯ ಮರಿಗಳು ಜೊತೆ ಬಾಂಧವ್ಯ ಬೆಳೆಸಿಕೊಂಡಿದ್ದ ಹುಡುಗ ಆ ಮರಿಗಳಿಂದ ದೂರ ಆದಾಗ ಒಂದು ಕ್ಷಣ ದುಃಖಿತನಾದ. ಆ ಹಳ್ಳಿಯ ಸುತ್ತ ಇರುವ ಅರಣ್ಯ ಪ್ರದೇಶ ಕ್ಲೀನ್ ಮಾಡಿ ಜನ ವ್ಯವಸಾಯ ಮಾಡಲು ಶುರುಮಾಡಿದ್ದಾರೆ.. ಹಾಗಾಗಿಯೇ ಅರಣ್ಯ ಎಂದುಕೊಂಡು ತನ್ನ ಮರಿಗಳನ್ನು ಗಿಡದ ಕೆಳಗೆ ಬಿಟ್ಟ ಚಿರತೆ ಬೇ’ಟೆಗೆ ಹೋಗಿತ್ತು.‌ ಇದರ ಬಗ್ಗೆ ಮಾತನಾಡಿರುವ ಅರಣ್ಯ ಅಧಿಕಾರಿಗಳು.. ಆ ಆರು ವರ್ಷದ ಹುಡುಗ ತುಂಬಾ ಅದೃಷ್ಟವಂತ ಯಾಕೆಂದರೆ ಹೆಣ್ಣು ಚಿರತೆ ತುಂಬಾ ಅ’ಪಾಯಕಾರಿ. ತನ್ನ ಮರಿಗಳನ್ನು ಎತ್ತುಕೊಂಡು ಹೋಗುತ್ತಿರುವುದನ್ನು ನೋಡಿದರೆ ಚಿರತೆ ಭ’ಯಾನಕವಾಗಿ ದಾ’ಳಿ ಮಾಡುತ್ತಿತ್ತು ಎಂದು ಹೇಳಿದ್ದಾರೆ.. ಏನೇ ಆದರೂ ತಾಯಿಯಿಂದ ದೂರವಾದ ಚಿರತೆ ಮರಿಗಳು ಅನಾಥವಾಗಿವೆ. ತನ್ನ ಮರಿಗಳು ಕಾಣಿಸದೇ ಹೋದ ಕಾರಣ ಆ ತಾಯಿ ಚಿರತೆ ಎಷ್ಟು ದುಃಖ ಅನುಭವಿಸುತ್ತಿದೆ ಅಲ್ಲವೇ.