Advertisements

ಪ್ರತೀ ದಿನ ರಾತ್ರಿ ಹಸುವಿನ ಬಳಿ ಬರುತ್ತಿದ್ದ ಚಿರತೆ.! ಆದರೆ ಅಲ್ಲಿ ನಡೆಯುತ್ತಿದ್ದದ್ದೇ ಬೇರೆ ?

Kannada Mahiti

ನಮಸ್ತೇ ಸ್ನೇಹಿತರೇ, ಭಾರತದಲ್ಲಿ ಗೋವಿಗೆ ಪೂಜ್ಯ ಸ್ಥಾನವಿದೆ. ಹಿಂದುಗಳು ಗೋವನ್ನ ಕಾಮಧೇನುವಾಗಿ ಪೂಜೆ ಮಾಡುತ್ತಾರೆ. ಇನ್ನು ಸಾಧು ಪ್ರಾಣಿಯಾಗಿರುವ ಗೋವಿಗೂ ಮಾಂ’ಸ ಭಕ್ಷಕ ಪ್ರಾಣಿಯಾಗಿರುವ ಚಿರತೆಗೂ ಎತ್ತಣದಿಂದ ಎತ್ತಣ ಸಂಬಂಧ ಅಲ್ಲವೇ..ಆದರೆ ನೈಜ ಘಟನೆ ಆಧಾರಿತ ಈ ಸ್ಟೋರಿಯನ್ನ ಕೇಳಿದ್ರೆ ನೀವು ನಂಬೋದಿಲ್ಲ. ಇನ್ನು ಈ ಘಟನೆ ಅಸ್ಸಾಂ ರಾಜ್ಯದಲ್ಲಿ ನಡೆದಿದೆ. ಅಲ್ಲಿನ ವ್ಯಕ್ತಿಯೊಬ್ಬ ಹಸುವೊಂದನ್ನ ಕೊಂಡು ತಂದು ಸಾಕುತ್ತಿರುತ್ತಾನೆ. ಆದರೆ ಆತನ ಮನೆಗೆ ಹಸು ಬಂದ ಆ ದಿನದಿಂದ ರಾತ್ರಿಯ ಸಮಯದಲ್ಲಿ ಆತನ ಮನೆಯ ಸುತ್ತಮುತ್ತಲಿರುವ ನಾಯಿಗಳು ಒಂದೇ ಸಮನೆ ಬೊಗಳಲು ಶುರು ಮಾಡುತ್ತವೆ. ಇದೇ ರೀತಿ ಪ್ರತೀ ದಿನ ರಾತ್ರಿ ನಡೆಯುತ್ತದೆ. ಹೀಗೆ ಕೆಲವು ದಿನಗಳು ಕಳೆದ ಬಳಿಕ ಆ ವ್ಯಕ್ತಿ ತನ್ನ ಮನೆಗೆ ಸಿಸಿಟಿವಿ ಕ್ಯಾಮರವನ್ನ ಹಾಕಿಸುತ್ತಾನೆ..

Advertisements

ಮತ್ತೆ ಅದೇ ರೀತಿ ರಾತ್ರಿ ಸಮಯದಲ್ಲಿ ನಾಯಿಗಳು ಹುಚ್ಚುಹುಚ್ಚಾಗಿ ಬೊಗಳುತ್ತವೆ. ಇನ್ನು ಮರುದಿನ ಆ ವ್ಯಕ್ತಿ ಸಿಸಿ ಕ್ಯಾಮರದಲ್ಲಿ ಸೆರೆಯಾಗಿರುವ ದೃಶ್ಯಗಳನ್ನ ನೋಡಿದಾಗ ಆತನಿಗೆ ಅಚ್ಚರಿಯಾಗುತ್ತದೆ. ತಾನು ಕೊಂಡು ತಂದಿರುವ ಹಸುವಿನ ಜೊತೆ ಇರುವ ಚಿರತೆಯನ್ನ ಆ ದೃಶ್ಯಗಳಲ್ಲಿ ನೋಡುತ್ತಾನೆ. ಹೌದು, ಆತ ನೋಡಿದ್ದು ನಿಜ ಆಗಿತ್ತು. ಹಸುವಿನ ಜೊತೆ ಇದ್ದ ಚಿರತೆ ಹಸುವಿಗೆ ಮಾತ್ರ ಯಾವುದೇ ತೊಂದರೆಯನ್ನ ಮಾಡಿರಲಿಲ್ಲ. ತನ್ನ ಹುಟ್ಟು ಗುಣದ ಮನೋಭಾವವನ್ನ ಮರೆತು ಹಸುವಿನ ಜೊತೆ ಆಟ ಆಡುವುದಲ್ಲದೆ ಅದನ್ನ ಮುದ್ದು ಕೂಡ ಮಾಡುತಿತ್ತು ಆ ಚಿರತೆ. ತನ್ನ ಪ್ರಕ್ರತಿ ಸಹಜವಾದ ಹುಟ್ಟುಗುಣವನ್ನ ಮರೆತಿದ್ದ ಆ ಚಿರತೆ ಹಸು ಮಲಗುವವರಿಗೂ ಅದರ ಜೊತೆ ಇದ್ದು, ಅದು ಮಲಗಿದ ಮೇಲೆ ತಾನು ಸ್ವಲ್ಪ ಸಮಯ ಆ ಹಸುವಿನ ಬಳಿಯೇ ಎಚ್ಚರದಿಂದ ಇದ್ದು ಬಳಿಕ ಹೊರಟುಹೋಗುತಿತ್ತು.

ಹೀಗೆ ಪ್ರತೀದಿನ ರಾತ್ರಿ ಆದಾಗ ಹಸುವಿನ ಬಳಿ ಬರುತ್ತಿದ್ದ ಚಿರತೆ ಬೆಳಗಾಗುವಷ್ಟರಲ್ಲಿ ಅಲ್ಲಿಂದ ಹೊರಟು ಹೋಗುತಿತ್ತು. ಇನ್ನು ಈ ವಿಸ್ಮಯವನ್ನ ಕಣ್ಣಾರೆ ಕಂಡ ಆ ವ್ಯಕ್ತಿ ಮೊದಲಿಗೆ ಇದ್ದ ಆ ಹಸುವಿನ ಮಾಲೀಕರನ್ನ ಇದರ ಬಗ್ಗೆ ಕೇಳಿದ್ದಾನೆ. ಅದಕ್ಕೆ ಅವರು ಹೇಳಿದ್ದು ಹೀಗೆ..ಚಿರತೆ ಹತ್ತು ವರ್ಷ ವಯಸ್ಸಿನಲ್ಲಿದ್ದಾಗ ಅದರ ತಾಯಿ ಮ’ರಣ ಹೊಂದಿತ್ತು. ಅದರ ಬಳಿಕ ಇದೆ ಹಸು ತನ್ನ ಹಾಲನ್ನ ಆ ಚಿರತೆ ಮರಿಗೆ ನೀಡಿ ಪಾಲನೆ ಪೋಷಣೆ ಮಾಡಿತ್ತು. ಆ ಚಿರತೆ ಮರಿ ಬೆಳೆದು ದೊಡ್ಡದಾದಾಗ ಹತ್ತಿರದಲ್ಲೇ ಇದ್ದ ಕಾಡಿಗೆ ಬಿಟ್ಟು ಬಂದೆವು. ಆದರೆ ಬೆಳೆದು ದೊಡ್ಡದಾಗಿದ್ದರೂ ಆ ಚಿರತೆ ಹಸು ನೀಡುತ್ತಿದ್ದ ಹಾಲಿನ ಋಣವನ್ನ ಮರೆತಿಲ್ಲ.

ಹಾಗಾಗಿ ಪ್ರತೀ ರಾತ್ರಿ ಬರುವ ಆ ಚಿರತೆ ಹಸುವಿನ ಜೊತೆ ಇದ್ದು ಹೋಗುತ್ತದೆ. ಆದರೆ ಹಸುವಿಗೆ ಮಾತ್ರ ಏನೂ ಮಾಡೋದಿಲ್ಲ..ನೋಡಿ ಸ್ನೇಹಿತರೇ, ತಾಯಿಯ ವಾತ್ಸಲ್ಯ ಅಂದರೆ ಇದೆ ಅಲ್ಲವಾ..ಅದು ಕ್ರೂ’ರ ಪ್ರಾಣಿ ಅಂತ ಗೊತ್ತಿದ್ದರೂ ಹಾಲುಣಿಸಿ ಬೆಳೆಸಿದ ಗೋ ಮಾತೆ. ಇನ್ನುಆ ಹಾಲಿನ ಋಣದಿಂದಾಗಿ ತನ್ನ ಪ್ರಕೃತಿ ದತ್ತ ಸಹಜ ಸ್ವಭಾವವನ್ನೇ ಮರೆತ ಆ ಚಿರತೆ ಮಗುವಿನಂತೆ ಹಸುವಿನ ಬಳಿ ಬಂದು ಹೋಗುತ್ತಿರುವುದು. ಇದೆ ಅಲ್ಲವಾ ವಿಸ್ಮಯ ಎಂದರೆ..ಆದರೆ ನಾವು ಬುದ್ದಿವಂತ ಮನುಷ್ಯರು ಇದ್ಯಾವುದನ್ನ ಅರ್ಥ ಮಾಡಿಕೊಳ್ಳದೆ ಪ್ರಾಣಿಗಳಿಗಿಂತ ತೀರಾ ಕೆಳ ಮಟ್ಟದಲ್ಲಿ ವರ್ತಿಸುತ್ತೇವೆ ಅಲ್ಲವೇ..