Advertisements

ಚಿಕ್ಕ ವಯಸ್ಸಿನಲ್ಲಿ ನಡೆದ ಆ ಘಟನೆಯನ್ನು ನೆನೆದು ಮತ್ತೆ ಕಣ್ಣೀರು ಹಾಕಿದ ಲೀಲಾವತಿ ಹಾಗು ವಿನೋದ್ ರಾಜ್.. ಅಪ್ಪು ಬಗ್ಗೆ ಏನು ಹೇಳಿದ್ದಾರೆ ಗೊತ್ತೇ!

Cinema

ಪುನೀತ್ ರಾಜಕುಮಾರ್ ಅವರ ಅಗಲಿಕೆಯ ನೋವಿನಿಂದ ಇನ್ನು ಯಾರೂ ಕೂಡ ಹೊರಬಂದಿಲ್ಲ ಇಡೀ ಕರ್ನಾಟಕದ ಜನರ ಮನೆ ಮಗನಂತಿದ್ದ ಪುನೀತ್ ಅವರನ್ನು ಒಂದಲ್ಲ ಒಂದು ಸಮಯದಲ್ಲಿ ಪ್ರತಿಯೊಬ್ಬರು ಪ್ರತಿದಿನವೂ ನೆನೆಯುತ್ತಲೆ ಇದ್ದಾರೆ. ಇನ್ನೂ ಕನ್ನಡ ಚಿತ್ರರಂಗದ ಪ್ರತಿಯೊಬ್ಬ ನಟ ನಟಿಯರು ತಂತ್ರಜ್ಞರು ಚಿತ್ರರಂಗದ ಪ್ರತಿಯೊಂದು ವಿಭಾಗದವರು ಕೂಡ ಅಪ್ಪು ಅವರನ್ನು ನೆನೆದು ದುಃಖ ಪಡುತ್ತಲೆ ಇದ್ದಾರೆ. ಇನ್ನು ಅದೆ ರೀತಿ ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟಿ ಲೀಲಾವತಿ ಹಾಗೂ ವಿನೋದ್ ರಾಜ್ ಅವರು ಅಪ್ಪು ಅವರನ್ನು ಮತ್ತೆ ಮತ್ತೆ ನೆನೆದು ಕಣ್ಣೀರು ಹಾಕುತ್ತಲೆ ಇದ್ದಾರೆ. ಅಪ್ಪು ತೀರಿಹೋದ ದಿನ ವಿನೋದ್ ರಾಜ್ ಮತ್ತು ಲೀಲಾವತಿಯವರು ಮಾಧ್ಯಮಗಳ ಮುಂದೆ ಗಳಗಳನೆ ಅಳುತ್ತಾ ಅತಿಯಾದ ದುಃಖವನ್ನು ಪಟ್ಟಿದ್ದರು.

[widget id=”custom_html-3″]

Advertisements

ಇದೀಗ ಮತ್ತೆ ಲೀಲಾವತಿ ವಿನೋದ್ ರಾಜ್ ಅವರು ಪುನೀತ್ ಅವರನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಲೀಲಾವತಿ ಅವರು ಮಾತನಾಡಿ ಪುನೀತ್ ರಾಜಕುಮಾರ್ ನನ್ನ ಕಣ್ಣು ಮುಂದೆ ಹುಟ್ಟಿ ಬೆಳೆದ ಚಿಕ್ಕಮಗು. ಎರಡು ನಕ್ಷತ್ರಗಳು ಚಿತ್ರದಲ್ಲಿ ನನ್ನ ಮಗನಾಗಿ ಪಾತ್ರ ಮಾಡಿದ್ದ.. ಎಲ್ಲಿದ್ದರೂ ಬಂದು ನನ್ನ ಕೈಹಿಡಿದು ಮಾತನಾಡಿಸೋನು ನನ್ನ ಮೇಲೆ ತುಂಬಾ ಅಭಿಮಾನವಿತ್ತು ಪುನೀತ್ ಗೆ ನೀವು ಚೆನ್ನಾಗಿ ಆಕ್ಟಿಂಗ್ ಮಾಡ್ತೀರಾ ಅನ್ನೋನು ಆದರೆ ಈಗ ಪುನೀತ್ ಮಾತು ನಿಂತೋಯ್ತು ಅಂದರೆ ನನಗೆ ನಂಬಲಿಕ್ಕೆ ಆಗುತ್ತಿಲ್ಲ.

[widget id=”custom_html-3″]

ನನ್ನ ಜೊತೆ ಇನ್ನು ಎರಡು ಸಿನಿಮಾ ಮಾಡಿದ್ದ ದುಃಖದ ಬಾರವೆ ನನ್ನ ತಲೆ ಮೇಲೆ ಕೂತಂತೆ ಆಗಿದೆ . ನಿದ್ದೆ ಬರುತ್ತಿಲ್ಲ ಊಟ ಸೇರುತ್ತಿಲ್ಲ ಪುನೀತ್ ಗೆ ಭಗವಂತ ಯಾಕೆ ಈ ರೀತಿ ಮಾಡುಬಿಟ್ಟ ವಿಧಿಯಾಟ ಎಷ್ಟರವರೆಗೆ ನಡೆಯುತ್ತೆ ಅಂತ ತೋರಿಸಿದ್ನ ದಯವಿಟ್ಟು ದೇವರು ಚಾಲೆಂಜ್ ಮಾಡೋದು ಬೇಡ ಮತ್ತೆ ನಾನು ಪುನೀತ್ ನ ಎಲ್ಲಿ ನೋಡಲಿ ಯಾವ ರೀತಿ ನೋಡಲಿ ಅಯ್ಯೋ ವಿಧಿಯಾಟ ಆಡೋಕೆ ಬೇರೆ ಯಾರು ಸಿಗಲಿಲ್ವಾ. ಆ ಹೆಸರು ಶ್ರೇಷ್ಠ ಹೆಸರು ಪುನೀತ್ ಅಂದರೆ ಶ್ರೇಷ್ಠತೆ,
ಶ್ರೇಷ್ಠತೆ ಹೊಂದಿದ್ದ ಹೆಸರು ಪುನೀತ್ ನಾದವನು ಮತ್ತೆ ನನಗೆ ಏನು ಹೇಳಬೇಕು ಗೊತ್ತಿಲ್ಲ ಪುನೀತ್ ಬೇಕು ಎಂದು ಕಣ್ಣೀರಿಟ್ಟು ಗೋಳಾಡಿದ್ದಾರೆ ಲೀಲಾವತಿಯವರು..

[widget id=”custom_html-3″]