Advertisements

ಲಾಕ್ ಡೌನ್ ಸಡಿಲವಾಗಲಿದೆ ಎಂದು ಕಾದಿದ್ದವರಿಗೆ ಶಾಕ್ ! ಇನ್ನು ಎಷ್ಟು ದಿವಸ ಮುಂದುವರಿಯುತ್ತೆ ಗೊತ್ತಾ?

News

ಮೇ ೧೭ಕ್ಕೆ ಲಾಕ್ ಡೌನ್ ಮುಕ್ತಾಯವಾಗಲಿದ್ದು, ಮೇ 18ರ ಸೋಮವಾರದಿಂದ ಕಂಟೋನ್ಮೆಂಟ್  ಜೋನ್ ಗಳನ್ನ ಹೊರತುಪಡಿಸಿ  ದೇಶದಾದ್ಯಂತ ಹೀಗಿರುವ ಲಾಕ್ ಡೌನ್ ನಿಯಮಗಳು ಸಡಿಲವಾಗಲಿದ್ದು, ಹೊಸ ಲಾಕ್ ಡೌನ್ 4.0 ನಿಯಮಗಳು ಶುರುವಾಗಲಿವೆ ಎಂದು ಹೇಳಲಾಗಿತ್ತು.

Advertisements

ಆದರೆ ಈಗ ಕೇಂದ್ರ ಸರ್ಕಾರ ಮೇ 31ರವರೆಗೆ ಲಾಕ್ ಡೌನ್ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಇನ್ನು ಇಂದು ಮೂರನೇ ಹಂತದ ಲಾಕ್ ಡೌನ್ ಮುಕ್ತಾಯವಾಗಲಿದ್ದು, ಇಂದು ಮಧ್ಯರಾತ್ರಿಯಿಂದಲೇ ಹೊಸ ಲಾಕ್ ಡೌನ್ ನಿಯಮಗಳು ಶುರುವಾಗಲಿದ್ದು, ದೇಶದಾದ್ಯಂತ ಎರಡು ವಾರಗಳ ಕಾಲ ವಿಸ್ತರಣೆಯಾಗಿದೆ.

ಇನ್ನು ಹೊಸ ಲಾಕ್ ಡೌನ್ 4.0 ನಿಯಮಗಳ ಬಗ್ಗೆ ಕುರಿತಂತೆ ಹೊಸ ಮಾರ್ಗಸೂಚಿಗಳನ್ನ ಕೇಂದ್ರ ಸರ್ಕಾರ ಬಿಡುಗಡೆ ಮಾಡಲಿದೆ ಎಂದು ಹೇಳಲಾಗಿದೆ. ಇನ್ನು ಲಾಕ್ ಡೌನ್ 4.0 ಬಗ್ಗೆ, ಈಗಾಗಲೇ ಪ್ರಧಾನಿ ಮೋದಿಯವರು ಲಾಕ್ ಡೌನ್ ಹೊಸ ರೀತಿಯಲ್ಲಿ ಇರಲಿದೆ ಎಂಬ ಸುಳಿವನ್ನ ಕೂಡ ಕೊಟ್ಟಿದ್ದು, ದೇಶದ ಜನರಲ್ಲಿ ಕುತೂಹಲ ಮಿಡಿದೆ.  ಇನ್ನು ಈಗಾಗಲೇ ಲಾಕ್ ಡೌನ್ ಸಡಿಲ ಮಾಡಿರುವ ಕಾರಣ ದೇಶದಲ್ಲಿ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು, ಈ ಕಾರಣದಿಂದಲೇ ಲಾಕ್ ಡೌನ್ ವಿಸ್ತರಣೆ ಮಾಡಲಾಗಿದೆ ಎಂದು ಹೇಳಲಾಗಿದೆ.