Advertisements

ಲೂಸ್ ಮಾದ ಯೋಗಿಯ ಜೀವನದಲ್ಲಿ ನಿಜಕ್ಕೂ ಆಗಿದ್ದೇನು! ಸ್ವಂತ ಸ್ನೇಹಿತರು ಸೇರಿಕೊಂಡು ಏನ್ ಮಾಡಿದ್ರು ಗೊತ್ತೇ!

Cinema

ಪ್ರತಿದಿನ ಒಂದಲ್ಲ ಒಂದು ಸಿನಿಮಾ ಧಾರಾವಾಹಿಗಳನ್ನು ನೋಡುತ್ತಲೆ ಇರುತ್ತೇವೆ. ಆ ಧಾರಾವಾಹಿ ಸಿನಿಮಾಗಳಲ್ಲಿ ನಟಿಸುವ ನಟ-ನಟಿಯರನ್ನು ನೋಡಿ ನಾವು ಇದೆ ತರ ಆಗಬೇಕು ಹೀಗೆ ಇರಬೇಕು ಅಂತ ಎಷ್ಟೊ ಕನಸುಗಳನ್ನು ಕಾಣುತ್ತೇವೆ. ಆದರೆ ತೆರೆ ಮುಂದೆ ನಮ್ಮನ್ನೆಲ್ಲ ನಕ್ಕುನಗಿಸಿ ಮನರಂಜಿಸುವ ನಟ ನಟಿಯರ ಜೀವನ ಅಷ್ಟೆ ಕಷ್ಟದಿಂದ ಕೂಡಿರುತ್ತದೆ. ಸ್ಯಾಂಡಲ್ ವುಡ್ ನ ಅದ್ಭುತ ನಟರೊಬ್ಬರು ತಮ್ಮ ಜೀವನದ ಕಷ್ಟಗಳನ್ನು ಹಂಚಿಕೊಂಡಿದ್ದಾರೆ. ಹಾಗಾದರೆ ಆ ನಟ ಯಾರು ಅವರ ಜೀವನದ ಕಷ್ಟಗಳೇನು ನೋಡಿ. ಚಂದನವನದಲ್ಲಿ ತಮ್ಮ ವಿಶಿಷ್ಟ ಅಭಿನಯದ ಮೂಲಕ ಚಾಪು.. ಮೂಡಿಸಿದ ನಟ ಲೂಸ್ ಮಾದ ಯೋಗಿ ಸಿನಿ ಪಯಣದಲ್ಲಿ ತಾವು ಕಂಡ ಸುಖ ದುಃಖಗಳು ಏರುಪೇರುಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

[widget id=”custom_html-3″]

Advertisements

ಪ್ರತಿಭಾನ್ವಿತ ನಾಯಕ ನಟ ಮತ್ತು ಹವ್ಯಾಸಿ ಗಾಯಕ ದುನಿಯಾ ಚಿತ್ರದಲ್ಲೂ ಲೂಸ್ ಮಾದನ ಪಾತ್ರದಿಂದ ಕನ್ನಡ ಚಿತ್ರರಂಗ ಪ್ರವೇಶಿಸಿದ ಯೋಗಿ ಜನಿಸಿದ್ದು 1990 ಜುಲೈ 6ರಂದು ನಿರ್ಮಾಪಕ ಟಿಪಿ ಸಿದ್ದರಾಜು ಮತ್ತು ಅಂಬುಜಾ ದಂಪತಿಗಳ ಪುತ್ರನಾಗಿರುವ ಇವರು ನಟ ದುನಿಯಾ ವಿಜಯ್ ಸೋದರ ಸಂಬಂಧಿ ದುನಿಯಾ ಚಿತ್ರ ನಂತರ ನಂದ ಲವ್ಸ್ ನಂದಿತಾ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಚಂದನವನ ಪ್ರವೇಶಿಸಿದರು.ನಂತರ ರಾವಣ ಪುಂಡ ಯೋಗಿ ಮುಂತಾದ ಚಿತ್ರಗಳಲ್ಲಿ ನಟಿಸಿದರು. 2010ರಲ್ಲಿ ತೆರೆಗೆ ಬಂದ ಎ.ಪಿ ಅರ್ಜುನ್ ನಿರ್ದೇಶನದ ಅಂಬಾರಿ ಚಿತ್ರ ಭರ್ಜರಿ ಪ್ರದರ್ಶನ ಕಂಡು ಯೋಗಿಗೆ ಅತ್ಯುತ್ತಮ ನಾಯಕ ನಟ ರಾಜ್ಯ ಪ್ರಶಸ್ತಿ ತಂದುಕೊಟ್ಟಿತು. ನಂತರ ಪುನೀತ್ ರಾಜಕುಮಾರ್ ಅವರ ಜೊತೆ ನಟಿಸಿದ ಹುಡುಗರು ಮತ್ತು ಯಾರೆ ಕೂಗಾಡಲಿ ಚಿತ್ರಗಳು ಕೂಡ ಯಶಸ್ವಿಯಾದವು.

[widget id=”custom_html-3″]

2012ರಲ್ಲಿ ತೆರೆಕಂಡ ರಮ್ಯಾ ಅಭಿನಯದ ಸಿದ್ಲಿಂಗು ಚಿತ್ರ ವಿಮರ್ಷಕ ಮತ್ತು ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆಯನ್ನು ಪಡೆದುಕೊಂಡಿತು. ನಂತರ ಬಂದ ಸಿನಿಮಾಗಳು ಒಂದರ ಮೇಲೊಂದರಂತೆ ಪ್ಲಾಪ್ ಆದಾಗ ಯೋಗಿ ಪಾತಾಳಕ್ಕೆ ಕುಸಿದರು. ಆಗ ಜೊತೆಗಿದ್ದ ಸ್ನೇಹಿತರೆಲ್ಲಾ ಒಬ್ಬೊಬ್ಬರೇ ಬಿಟ್ಟು ಹೋದರಂತೆ. ಹಾಗೂ ಯಾರನ್ನಾದರೂ ಸಾಲ ಕೇಳಿದರೆ ಈಗ ಇಲ್ಲ ಆಮೇಲೆ ನೋಡೋಣ ಅಂತ ತಪ್ಪಿಸಿಕೊಂಡು ಹೋಗುತ್ತಿದ್ದರಂತೆ. ದುಡ್ಡಿದ್ದಾಗ ಸಿಗುತಿದ್ದ ಆ ಗೌರವ ನಂತರ ಸಿಗಲಿಲ್ಲ. ಅಣ್ಣ ಸರ್ ಬಾಸ್ ಅಂತಿದ್ದವರಲ್ಲ ಹೋಗೋ ಬಾರೋ ಅನ್ನೋತರ ಆಗಿಬಿಟ್ರು. ಎಷ್ಟೋ ಸಲ ಒಬ್ಬನೆ ರೂಮ್ ನಲ್ಲಿ ಬಿಕ್ಕಿ ಬಿಕ್ಕಿ ಅಳುತಿದ್ದೆ.

[widget id=”custom_html-3″]

ನನಗೆ ಒಂದು ಸತ್ಯ ಅರ್ಥವಾಯಿತು ಈ ಜಗತ್ತಿನಲ್ಲಿ ಒಂದು ದುಡ್ಡಿರಬೇಕು ಇನ್ನೊಂದು ಅಧಿಕಾರ ಇರಬೇಕು ಹಾಗ ಜನ ಬೆಲೆ ಕೊಡುತ್ತಾರೆ. ಪ್ರೀತಿ, ವಿಶ್ವಾಸಕ್ಕೆ ಬೆಲೆ ಇಲ್ಲ ಆದರೆ ನನ್ನ ಅಭಿಮಾನಿಗಳು ನನ್ನ ಕೈಬಿಟ್ಟಿಲ್ಲ ಈಗಲೂ ಎಲ್ಲೆ ಹೋದರು ನೂರಾರು ಜನ ಬಂದು ಫೋಟೋ ತಗೋತಾರೆ ಅಣ್ಣ ಮತ್ತೆ ಸಿನಿಮಾ ಮಾಡಿ ಅಂತಾರೆ ನನಗೆ ಅವರ ಅಭಿಮಾನ ಸಾಕು ಅಂತಾ ಕಣ್ಣೀರು ಹಾಕಿದ್ದಾರೆ. ನಾನು ಸೋತಿದ್ದೇನೆ ನಿಜ ಆದರೆ ಇನ್ನೂ ಸತ್ತಿಲ್ಲ ಮತ್ತೆ ಎದ್ದು ಬಂದೆ ಬರುತ್ತೀನಿ. ಈಗಾಗಲೇ ಐದು ಚಿತ್ರಗಳಲ್ಲಿ ಸಹಿ ಮಾಡಿದ್ದೇನೆ. ಸದ್ಯದಲ್ಲೇ ಬರ್ತೀನಿ ಅಂತ ಹೇಳಿದ್ದಾರೆ. ಸ್ಕ್ರೀನ್ ಮೇಲೆ ಹೀರೋ ಆಗಿ ಮಿಂಚುವ ನಟರ ಜೀವನದಲ್ಲಿ.. ಕೂಡ ಅನೇಕ ನೋವಿನ ಕಥೆಗಳು ಇರುತ್ತವೆ ಎನ್ನುವುದಕ್ಕೆ ಲೂಸ್ ಮಾದ ಯೋಗಿಯವರು ಉತ್ತಮ ನಿದರ್ಶನ.

[widget id=”custom_html-3″]