Advertisements

ತಿರುಪತಿ ವೆಂಕಟೇಶ್ವರ ಸ್ವಾಮಿಯ ದೇವಸ್ಥಾನಕ್ಕೆ ಹೋದಾಗ ತಪ್ಪದೆ ಈ 3 ಕೆಲಸಗಳನ್ನ ಮಾಡಿ..ನಿಮ್ಮ ಅದೃಷ್ಟವೇ ಬದಲಾಗುತ್ತದೆ !

Adyathma Astrology

ನಮಸ್ತೇ ಸ್ನೇಹಿತರೆ, ಕಲಿಯುಗದ ಪ್ರತ್ಯಕ್ಷ ದೈವ ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ತಿರುಪತಿ ತಿಮ್ಮಪ್ಪನನ್ನ ನಂಬಿದವರನ್ನ ಎಂದಿಗೂ ಕೈ ಬಿಟ್ಟಿಲ್ಲ ಎಂಬ ಪ್ರತೀತಿ ಇದೆ. ಸಾಕ್ಷಾತ್ ನಾರಾಯಣನೇ ಧರೆಗಿಳಿದು ಬಂದು ಲಕ್ಷ್ಮಿ ಪದ್ಮಾವತಿ ಸಮೇತನಾಗಿ ವೆಂಕಟೇಶ್ವರ ಸ್ವರೂಪನಾಗಿ ತಿರುಪತಿಯಲ್ಲಿ ನೆಲಸಿದ್ದಾನೆ. ಇನ್ನು ಶ್ರೀಕ್ಷೇತ್ರಕ್ಕೆ ಬರುವ ಭಕ್ತ ಸಮೂಹ ವರ್ಷ ವರ್ಷವೂ ಹೆಚ್ಚಾಗುತ್ತಲೇ ಇದೆ. ಎಲ್ಲರೂ ಭಗವಂತನ ದರ್ಶನಕ್ಕಾಗಿ ತಿರುಪತಿಗೆ ಹೋಗುವುದು ಸಮಸ್ಯೆಗಳು ನೋವು ದುಃಖಗಳು ಪರಿಹಾರವಾಗಲಿ ಎಂದು. ಆದರೆ ತಿರುಪತಿಗೆ ಹೋಗಿ ಬಂದ ಬಳಿಕ ಏನೂ ಸಮಸ್ಯೆಯೇ ಇಲ್ಲ..ಎಲ್ಲಕ್ಕೂ ಪರಿಹಾರ ಸಿಕ್ಕಿತು ಅಂತ ಹೇಳಲಾಗುವುದಿಲ್ಲ. ಆದರೆ ಸಮಸ್ಯೆಯ ಪ್ರಮಾಣ ಕಡಿಮೆಯಾಗಿ ಜೀವನದಲ್ಲಿ ಸ್ವಲ್ಪ ನೆಮ್ಮದಿಯಾದರೂ ಸಿಗುತ್ತದೆ ಎಂಬ ನಂಬಿಕೆಯೆಂತು ಇದೆ..

Advertisements

ಆದರೆ ತಿಮ್ಮಪ್ಪನ ದರ್ಶನಕ್ಕಾಗಿ ತಿರುಪತಿಗೆ ಹೋದಾಗ ನೀವು ತಪ್ಪದೆ ಈ ಮೂರೂ ಕೆಲಸಗಳನ್ನ ಮಾಡಿ..ಇದರಿಂದ ಖಂಡಿತವಾಗಿಯೂ ನಿಮಗೆ ಶುಭಫಲ ದೊರೆಯುವುದು. ಇದರಿಂದ ನಿಮ್ಮ ಆರ್ಥಿಕ ಸಮಸ್ಯೆ ಕಡಿಮೆಯಾಗಿ ಹಣದ ಆಗಮನವಾಗುತ್ತೆ ಎಂದು ಪಂಡಿತರು ಹೇಳುತ್ತಾರೆ. ತಿರುಪತಿಗೆ ಹೋದಾಗ ಮಾತ್ರ ಅಂತ ಏನಿಲ್ಲ ನೀವು ಯಾವುದೇ ವಿಷ್ಣು ಅಥ್ವಾ ನಾರಾಯಣನ ಅವತಾರದ ದೇವಸ್ಥಾನಗಳಿಗೆ ಭೇಟಿ ಕೊಟ್ಟಾಗ ಈ ಮೂರೂ ನಿಯಮಗಳನ್ನ ತಪ್ಪದೆ ಪಾಲಿಸಿ..ಇದರಿಂದ ಶುಭದಾಯಕ ಫಲಗಳು ನಿಮಗೆ ದೊರೆಯುವುದರಲ್ಲಿ ಸಂದೇಹವಿಲ್ಲ..ಹಾಗಾದ್ರೆ ಆ ೩ ನಿಯಮಗಳು ಯಾವುದು ಎಂದು ಮುಂದೆ ನೋಡೋಣ ಬನ್ನಿ..

ಪ್ರಥಮವಾಗಿ..ನಾವು ಸಾಮಾನ್ಯವಾಗಿ ದೇವಸ್ಥಾನಕ್ಕೆ ಹೋದಾಗ ಭಗವಂತನ ದರ್ಶನ ಮಾಡುವಾಗ ಮೊದಲು ದೇವರ ಮುಖ, ಅಥ್ವಾ ದೇವರ ಪಾದ ಇಲ್ಲವೇ ದೇವರ ಕೈಗಳನ್ನ ನೋಡುತ್ತಾ ದರ್ಶನ ಮಾಡುತ್ತೇವೆ. ಆದರೆ ನಾರಾಯಣನ ದೇವಾಲಯಕ್ಕೆ ಹೋದಾಗ ಮೊದಲು ಭಗವಂತನ ನಾಮದ ದರ್ಶನ ಮಾಡಿ. ಬಳಿಕ ದೇವರ ಪಾದದಿಂದ ಹಿಡಿದು ಮುಖದವರೆಗೆ ಭಕ್ತಿಯಿಂದ ದರ್ಶನ ಮಾಡಿ..ಅದು ನಿಧಾನವಾಗಿ.

ದ್ವಿತೀಯವಾಗಿ..ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಲಿ ಅಥ್ವಾ ಬೇರೆ ಯಾವುದೇ ವಿಷ್ಣು ದೇವಸ್ಥಾನಕ್ಕಾಗಲಿ ಹೋಗುವಾಗ ತಪ್ಪದೆ ವಿಷ್ಣುವಿಗೆ ತುಂಬಾ ಪ್ರಿಯವಾದ ತುಳಸಿ ಹಾರವನ್ನ ತೆಗೆದುಕೊಂಡು ಹೋಗಿ ಭಗವಂತನಿಗೆ ಸಮರ್ಪಣೆ ಮಾಡಿ. ಇದರಿಂದ ಶುಭಫಲಗಳು ದೊರಕುತ್ತವೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ನಿಮಗೆ ದೇವಸ್ಥಾನದಲ್ಲಿ ತುಳಸಿ ಹರವು ಪ್ರಸಾದ ರೂಪವಾಗಿ ದೊರೆತಲ್ಲಿ ತೆಗೆದುಕೊಂಡು ಬಂದು ಮನೆಯಲ್ಲಿಡಿ. ಎಷ್ಟು ದಿನಗಳವರೆಗೆ ತುಳಸಿ ಹಾರ ಬಾಡದೆ ಇರುತ್ತದೆಯೋ ಅಷ್ಟು ದಿನ ಮನೆಯಲ್ಲೇ ಇಡಿ. ಇದರಿಂದ ನಿಮ್ಮ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳಿಂದ ಮುಕ್ತಿ ಸಿಗುವುದರ ಜೊತೆಗೆ ದಾ’ರಿದ್ರ್ಯ ತೊಲಗಿ ಎಲ್ಲವೂ ಶುಭವಾಗುತ್ತದೆ.

ಮೂರನೆಯದಾಗಿ..ಭಗವಂತ ನಾರಾಯಣನ ಯಾವುದೇ ದೇವಸ್ಥಾನಕ್ಕೆ ಹೋದಾಗ ವಿಷ್ಣುವಿನ ಜೊತೆಗೆ ಮತ್ತೊಬ್ಬರ ದರ್ಶನ ಮಾಡಿ. ಹೌದು, ವಿಷ್ಣುವಿನ ವಾಹನವಾದ ಪಕ್ಷಿರಾಜ ಗರುಡ ದೇವರ ದರ್ಶನ ಮಾಡಿ. ಭಗವಂತ ಶಿವನ ದೇವಸ್ಥಾನಗಳಲ್ಲಿ ಶಿವ ಲಿಂಗದ ಮುಂದೆ ನಂದಿ ಇರುವಂತೆ ಭಗವಾನ್ ಶ್ರೀ ಹರಿಯ ದೇವಸ್ಥಾನಗಳಲ್ಲಿ ಗರುಡ ದೇವರ ವಿಗ್ರಹ, ಗರುಡ ಸ್ತಂಭಗಳು ಇರುತ್ತವೆ. ಮುಖ್ಯ ದೇವರು ವಿಷ್ಣುವಿನ ದರ್ಶನ ಮಾಡಿದ ಬಳಿಕ ಗರುಡ ದೇವರ ದರ್ಶನ ಮಾಡಿ, ಗರುಡ ಸ್ತಂಭದ ಪ್ರದಕ್ಷಿಣೆ ಹಾಕಿ ಮತ್ತೆ ಮುಖ್ಯ ದೇವರು ವಿಷ್ಣುವಿನ ದರ್ಶನ ಮಾಡಿ ಹೊರಗಡೆ ಬರಬೇಕು.

ಸ್ನೇಹಿತರೇ, ನೀವು ಮುಂದಿನ ಬಾರಿ ತಿರುಪತಿ ತಿಮ್ಮಪ್ಪನ ಸನ್ನಿದಿಗೆ ಹೋದಾಗ ತಪ್ಪದೆ ಈ ಮೂರು ನಿಯಮಗಳಲನ್ನ ಪಾಲಿಸಿ..ಯಾರಿಗೆ ಗೊತ್ತು..ನೀವೇನಾದರೂ ಆರ್ಥಿಕ ಸಮಸ್ಯೆ ಅಥ್ವಾ ಯಾವುದಾದರೂ ಕಷ್ಟದಿಂದ ಬಳಲುತ್ತಿದ್ದರೆ ಆ ಎಲ್ಲಾ ಸಮಸ್ಯೆಗಳಿಂದ ಪಾರಾಗಬಹುದು. ಹಾಗೂ ಈ ನಿಯಮಗಳನ್ನ ಪಾಲಿಸುವುದರಿಂದ ನಿಮಗೆ ಶುಭ ಫಲಗಳು ಹೆಚ್ಚಾಗಿ ದೊರೆಯುವುದು. ಆದರೆ ಏನನ್ನೇ ಮಾಡಲಿ ಭಕ್ತಿಯಿಂದ ನಂಬಿಕೆಯಿಂದ ಮಾಡಿ ಎಲ್ಲವೂ ಒಳ್ಳೆಯದೇ ಆಗುತ್ತದೆ.