Advertisements

ನವರಾತ್ರಿಯ ಎಂಟನೇ ದಿವಸ..ತಾಯಿ ಚಾಮುಂಡೇಶ್ವರಿಗೆ ವಂದಿಸುತ್ತಾ ನಿಮ್ಮ ರಾಶಿಯ ಫಲಾ ಫಲಗಳು ಹೇಗಿವೆ ನೋಡಿ

Astrology

ನವರಾತ್ರಿಯ ಎಂಟನೇ ದಿವಸ ತಾಯಿ ದುರ್ಗಾ ದೇವಿಯ ಅಷ್ಟಮ ಅವತಾರವಾಗಿರುವ ಮತ್ತೆ ಮಹಾಗೌರಿಯನ್ನು ಭಕ್ತಿಯಿಂದ ವಂದಿಸುತ್ತಾ ಈ ದಿನದ ನಿಮ್ಮ ದ್ವಶರಾಶಿಗಳ ಭವಿಷ್ಯ ಹೇಗಿದೆ ನೋಡಿ..

ಮೇಷ ರಾಶಿ : ಅಣ್ಣ ತಂಗಿಯರಿಂದ ಸಮಸ್ಯೆಯಾಗುವ ಸಾಧ್ಯತೆ, ನೀವು ಕೆಲಸ ಮಾಡುವ ಸ್ಥಳದಲ್ಲಿ ಸ್ವಲ್ಪ ಅಡೆ ತಡೆಗಳು ಸಂಭವಿಸುತ್ತವೆ. ಇನ್ನು ನಿಮಗೆ ಅದ್ಭುತ ದಿನವಾಗಿದ್ದು ಆಕಸ್ಮಿಕವಾಗಿ ಧನಲಾಭವಾಗಲಿದೆ.ವ್ಯವಹಾರದಲ್ಲಿ ಎಚ್ಚರಿಕೆಯಿಂದಿರಿ.ನಷ್ಟವಾಗುವ ಸಾಧ್ಯತೆ ಇದೆ.

ವೃಷಭ : ಪ್ರಯಾಣ ಮಾಡುವಾಗ ಆಲಸ್ಯ ಮಾಡಬೇಡಿ..ಎಚ್ಚರದಿಂದಿರಿ. ನಿಮ್ಮ ಸಂಬಂಧಿಕರಿಂದಲೇ ನೋವು ಅಪಮಾನಗಳು ಆಗುವ ಸಾಧ್ಯತೆ. ನಿಮ್ಮ ಬೆಳವಣಿಗೆಯಲ್ಲಿ ಕುಂಠಿತವಾಗಲಿದೆ.

ಮಿಥುನ ರಾಶಿ : ನಿಮಗೆ ಶುಭಸುದ್ದಿಯೊಂದು ಕಾದಿದೆ. ಆರೋಗ್ಯ ಸಮಸ್ಯೆ ಕಾಡಲಿದೆ. ಸಾಲ ಮಾಡುವ ಸ್ಥಿತಿ ತಲೆದೋರಲಿದೆ. ನೋಡಿಕೊಂಡು ವ್ಯವಹಾರ ಮಾಡಿ. ನಿಮಗೆ ಏಕಾಗ್ರತೆಯ ಸಮಸ್ಯೆ ಕಾಡುವುದರಿಂದ ಹುಷಾರಾಗಿರುವುದು ಉತ್ತಮ. ನಿಮ್ಮ ಕುಟುಂಬದವರೊಂದಿಗೆ ವಾಗ್ವಾದ ಉಂಟಾಗುವ ಸಾಧ್ಯತೆ ಇದೆ.

ಕಟಕ : ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ದಾಂಪತ್ಯ ಜೀವನದಲ್ಲಿ ಕಲಹ ಉಂಟಾಗಲಿದೆ. ಅಪಮಾನಗಳಿಗೆ ಗುರಿಯಾಗುವ ಸಾಧ್ಯತೆ. ನಿಮ್ಮ ಮನೋಭಿಲಾಷೆಯ ಮೇಲೆ ಹಿಡಿತ ಇರಲಿ.

ಸಿಂಹ ರಾಶಿ : ಈ ದಿನ ಖರ್ಚು ವೆಚ್ಚವಾಗಲಿದೆ. ಆದರೆ ಧೃತಿಗೆಡುವ ಅವಶ್ಯಕತೆ ಇಲ್ಲ. ಒಳ್ಳೆಯ ಕಾರ್ಯಕ್ಕೆ ವೆಚ್ಚವಾಗಲಿದೆ. ಅನಾರೋಗ್ಯ ಕಾಡುವ ಸಾಧ್ಯತೆ ಹೆಚ್ಚಿದೆ. ಅಸ್ತಿ ಹಾಗೂ ವಾಹನಗಳಲ್ಲಿ ನಷ್ಟ ಅನುಭವಿಸುವ ಸಾಧ್ಯತೆ.

ಕನ್ಯಾ ರಾಶಿ : ಇನ್ನು ಈ ರಾಶಿಯಲ್ಲಿ ಜನಿಸಿದವರಿಗೆ ಅದ್ಭುತ ದಿನವಾಗಿದ್ದು ಶುಭ ಸುದ್ದಿಯೊಂದು ಬರಲಿದೆ. ಅದರ ಮೇಲೆ ನಿಮಗೆ ಯಾವುದೇ ಅನುಮಾನ ಬೇಡ. ಸ್ನೇಹಿತರೆ ನಿಮಗೆ ಶತ್ರು’ಗಳಾಗುವ ಸಾಧ್ಯತೆ. ನ್ಯಾಲಯಲದ ಪ್ರಕರಣಗಳಲ್ಲಿ ನಿಮಗೆ ಜಯವಾಗಲಿದೆ.

ತುಲಾ : ನಿಮಗೆ ಗಡಿಬಿಡಿ ಉಂಟಾಗಲಿದೆ. ಆರ್ಥಿಕವಾಗಿ ಧನಲಾಭವಾಗಲಿದೆ. ನಿಮ್ಮ ಸಂಗಾತಿಯೊಂದಿಗೆ ವಾಗ್ವಾದವಾಗುವ ಸಂಭವಿದೆ.

ವೃಚ್ಚಿಕ : ತಂದೆ ತಾಯಿಗಳಿಂದ ಸಹಾಯ ಪ್ರಾಪ್ತವಾಗಲಿದೆ. ಶುಭಕಾರ್ಯಗಳಲ್ಲಿ ಪ್ರಗತಿ ಕಾಣಲಿದೆ. ಪ್ರಯಾಣ ಮಾಡುವಾಗ ಎಚ್ಚರವಿರಲಿ, ಅಡೆತಡೆಯಾಗುವ ಸಾಧ್ಯತೆ ಇದೆ. ಆಸ್ತಿ ವಿಚಾರದಲ್ಲಿ ಸಮಸ್ಯೆ ಶುರುವಾಗಲಿದ್ದು, ಅನಾರೋಗ್ಯವಾಗುವ ಸಾಧ್ಯತೆ ಇರುವುದರಿಂದ ಆರೋಗ್ಯದ ಕಡೆ ಗಮನಹರಿಸಿ.

ಧನಸ್ಸು : ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯಗಳಿವೆ. ಆರ್ಥಿಕವಾಗಿ ನಷ್ಟವಾಗಲಿದ್ದು ನೀವು ನಂಬಿದ ವ್ಯಕಿಗಳಿಂದಲೇ ನಷ್ಟ ಅನುಭವಿಸುತ್ತೀರಾ..ಕುಟುಂಬದ ಸಂಬಂಧಗಳಲ್ಲಿ ಎಳೆದಾಟ ಇರುತ್ತದೆ.

ಮಕರ ರಾಶಿ : ಯಾರೋ ನಿಮ್ಮ ಸಹಾಯಕ್ಕಾಗಿ ಬರುತ್ತಾರೆ. ಮಿತ್ರರಿಂದ ಅನುಕೂಲವಾಗಲಿದೆ. ವ್ಯವಹಾರದ ಪಾರ್ಟ್ನರ್ ಶಿಪ್ ನಲ್ಲಿ ಲಾಭವಾಗಲಿದೆ. ನಿಮ್ಮ ಆಸೆಗಳು ಈಡೇರುವ ದಿನವಾಗಿದೆ.

ಕುಂಭ : ಇಂದು ಖರ್ಚು ವೆಚ್ಚಗಳಾಗುವ ಸಾಧ್ಯತೆ. ಆರೋಗ್ಯದಲ್ಲಿ ಏರುಪೇರು. ನಷ್ಟವಾದರೂ ಜೊತೆಗೆ ಲಾಭ ಕೂಡ ಆಗಲಿದೆ. ಅಧಿಕಾರಿಗಳಿಂದ ನಿಮಗೆ ನಷ್ಟವಾಗುವ ಸಾಧ್ಯತೆ.

ಮೀನಾ ರಾಶಿ : ಮಾಡುವ ಕೆಲಸಗಳಲ್ಲಿ ಪ್ರಗತಿ ಸಿಗಲಿದೆ. ದೂರ ಪ್ರಯಾಣ ಸಂಭವ. ಮಕ್ಕಳ ಆರೋಗ್ಯದಲ್ಲಿ ಏರುಪೇರು. ನಿಮ್ಮ ಪಿತೃವಿನಿಂದ ನಿಮಗೆ ಅದೃಷ್ಟ ಒದಗಿ ಬರಲಿದೆ.