Advertisements

ನವರಾತ್ರಿಯ ಏಳನೇ ದಿವಸ..ದುರ್ಗಾಪರಮೇಶ್ವರಿಯ ಕೃಪೆಯಿಂದ ಈ ರಾಶಿಗಳಿಗೆ ಶುಭಯೋಗ ! ನಿಮ್ಮ ರಾಶಿಯೂ ಇದೆಯಾ ನೋಡಿ

Astrology

ಇಂದು ಅಕ್ಟೋಬರ್ 23 ಶುಕ್ರವಾರ ನವರಾತ್ರಿಯ ಏಳನೇ ದಿವಸ. ಶುಕ್ಲ ಪಕ್ಷ ಸಪ್ತಮಿಯಾದ ಈ ದಿನದಂದು ದುರ್ಗಾಮಾತೆಯ ಸಪ್ತಮ ಅವತಾರವಾದ ಕಾಳರಾತ್ರಿ ದೇವಿಯನ್ನ ಪೂಜಿಸಲಾಗುತ್ತದೆ. ಇನ್ನು ಈ ಶುಭದಿನದಂದು ದ್ವಾದಶರಾಶಿಗಳ ಫಲಗಳು ಹೇಗಿದೆ ಎಂಬುದನ್ನ ತಿಳಿಯೋಣ ಬನ್ನಿ,.

ಮೇಷ : ಈ ರಾಶಿಯಲ್ಲಿ ಜನಿಸಿದವರು ಇಂದು ಸುಮ್ಮನೆ ಕುಳಿತುಕೊಳ್ಳುವ ಬದಲು ಏನನ್ನಾದರೂ ಮಾಡಿ. ಇದರಿಂದ ನಿಮ್ಮ ಆರ್ಥಿಕತೆ ಸುಧಾರಿಸುತ್ತದೆ. ನೀವು ಧೀರ್ಘ ಪ್ರಯಾಣ ಮಾಡುವುದು ಈ ವೇಳೆ ಶುಭವಲ್ಲ. ಇನ್ನು ಈ ದಿನ ಅದ್ಭುತ ದಿನವಾಗಿದ್ದು ನಿಮ್ಮ ಸಂಬಂಧದ ಬಗ್ಗೆ ಇರುವ ದೂರಗಳಾಗಲಿ ದ್ವೇಷವಾಗಲಿ ಎಲ್ಲಕ್ಕೂ ಮುಕ್ತಿ ಸಿಗುತ್ತದೆ. ನಿಮ್ಮ ಮನೆಯ ಸುತ್ತಮುತ್ತ ನಡೆಯುವ ಚಿಕ್ಕಪುಟ್ಟ ಬದಲಾವಣೆಗಳೇ ನಿಮ್ಮ ಸುಧಾರಣೆಗೆ ಸಹಾಯಕವಾಗುತ್ತವೆ.

ವೃಷಭ ರಾಶಿ : ನೀವು ಸಾಲ ಪಡೆದುಕೊಳ್ಳಲು ಇಚ್ಛಿಸಿದಲ್ಲಿ ಇಂದು ಒಳ್ಳೆಯ ದಿನ. ನೀವು ಪ್ರೀತಿಸುವವರು ಇಂದು ಕಿರಿಕಿರಿಗೊಳ್ಳುವ ಸಾಧ್ಯತೆ ಇದೆ. ಮನಸ್ಸಿನ ಒತ್ತಡ ಹೆಚ್ಚಾಗುವ ಸಾಧ್ಯತೆ. ನೀವು ನಿಮ್ಮ ಕೆಲಸದಲ್ಲೇ ಏನನ್ನಾದರೂ ಸಾಧಿಸುವ ಅದ್ಭುತ ದಿನವಾಗಿದೆ ಇಂದು. ನೀವು ಸಕಾರಾತ್ಮಕವಾಗಿ ಯೋಚನೆ ಮಾಡಿ ಹೆಜ್ಜೆ ಮುಂದೆ ಇಟ್ಟಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರವಾಗಿ ನೀವು ಮಾಡುವ ಕೆಲಸದಲ್ಲಿ ಯಶಸ್ಸು ಕಾಣುವುದು.

ಮಿಥುನ : ನಿಮ್ಮ ಅಭಿಪ್ರಾಯಗಳು ಏನೇ ಇರಲಿ ಆತ್ಮವಿಶ್ವಾಸದಿಂದ ವ್ಯಕ್ತಪಡಿಸಿ. ಇಲ್ಲದಿದ್ದರೆ ಅದು ನಿಮ್ಮ ಸಮಸ್ಯೆಯನ್ನ ಮತ್ತಷ್ಟು ಹೆಚ್ಚು ಮಾಡಬಹುದು. ನಿಮ್ಮ ಬೆಳವಣಿಗೆಗೆ ತೊಡಕಾಗುವ ಸಾಧ್ಯತೆಗಳಿವೆ. ಹಣ ಕೂಡಿಡುವ ಬಗ್ಗೆ ಯೋಚಿಸಿ. ಇದು ನಿಮ್ಮ ಕಷ್ಟದ ಸಮಯದಲ್ಲಿ ಸಹಾಯಕ್ಕೆ ಬರಲಿದೆ. ನೀವು ತೋರಿಸುವ ಉದಾರ ಮನೋಭಾವವನ್ನ ನಿಮ್ಮ ಮಿತ್ರರು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ. ಇದರಿಂದ ಹುಷಾರಾಗಿರಿ. ನಿಮ್ಮ ಅತೀ ಉತ್ಸಾಹ ತರವಲ್ಲ. ಇದರಿಂದ ನೀವು ಸಂಕಟಕ್ಕೆ ಸಿಲುಕಿಕೊಳ್ಳುವ ಸಾಧ್ಯತೆಗಳಿವೆ.

ಕಟಕ ರಾಶಿ : ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಇದರಿಂದ ನೀವು ಕ್ರೀಡಾ ಸ್ಫರ್ಧೆಗಳು ಸೇರಿದಂತೆ ದೈಹಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಹುದಾಗಿದೆ. ನಿಮ್ಮ್ ಕುಟುಂಬದವರ ಅನಾರೋಗ್ಯದ ಚಿಂತೆ ನಿಮ್ಮನ್ನ ಕಾಡಲಿದೆ. ಮ್ಯೂಚುವಲ್ ಫಂಡ್ ಗಳಲ್ಲಿ ಉಡಿಕೆ ಮಾಡಲು ನಿಮಗೆ ಒಳ್ಳೆಯ ದಿನವಾಗಿದೆ. ನಿಮ್ಮ ಸಂಗಾತಿಯ ನೈಜ ಪ್ರೀತಿಯ ಬಗ್ಗೆ ಇಂದು ನಿಮಗೆ ತಿಳಿಯಲಿದೆ.

ಸಿಂಹ : ವಿವಿಧ ಮೂಲಗಳಿಂದ ನಿಮಗೆ ಆರ್ಥಿಕ ಲಾಭ ಆಗಲಿದೆ. ನಿಮ್ಮ ಪ್ರೀತಿಯ ಸಂಗಾತಿಯಿಂದ ನಿಮಗೆ ಸರ್ಪ್ರೈಸ್ ಸಿಗಲಿದೆ. ನಿಮ್ಮ ಕೆಲಸದಲ್ಲಿ ಇಂದು ಅದ್ಭುತ ಯಶಸ್ಸು ಸಿಗಲಿದೆ. ಬ್ಯುಸಿನೆಸ್ ಮಾಡುವವರು ಇಂದು ತಮ್ಮ ಕುಟುಂಬದವರ ಜೊತೆಯಲ್ಲೇ ಕಾಲ ಕಳೆಯಲಿದ್ದು ಕುಟುಂಬದಲ್ಲಿನ ಆನಂದ ಸಾಮರಸ್ಯಕ್ಕೆ ಕಾರಣವಾಗಲಿದೆ. ನೀವು ಮೋಜು ಮಸ್ತಿಗಾಗಿ ಹೊರಹೋದಲ್ಲಿ ಆನಂದದಿಂದ ಸಮಯ ಕಳೆಯುವಿರಿ.

ಕನ್ಯಾ ರಾಶಿ : ನಿಮ್ಮ ಖರ್ಚು ವೆಚ್ಚಗಳ್ಲಲಿ ಏರಿಕೆ ಕಂಡುಬಂದರೂ ಅಧಾಯದಲ್ಲಿ ಹೆಚ್ಚಾಗಲಿದ್ದು ಎಲ್ಲವನ್ನು ಸರಿದೂಗಿಸಲಿದೆ. ಪ್ರೇಮಿಗಳ ಪ್ರೀತಿಯಲ್ಲಿ ನಿರಾಸೆ ಕಾಣಬಹುದಾದರೂ ಎದೆಗುಂದವ ಅಗತ್ಯವಿಲ್ಲ. ನಿಮ್ಮ ಸುತ್ತಮುತ್ತಲಿರುವವರ ಬೆಂಬಲ ನಿಮಗೆ ಸಿಗುವ ಕಾರಣ ನಿಮಗೆ ಸಂತೋಷ ಸಿಗಲಿದೆ. ನಿಮ್ಮ ಕೇವಲ ಶ್ರಮ ಪಟ್ಟರೆ ಸಾಲದು, ತಾಳ್ಮೆ ಕೂಡ ಇದ್ದಲ್ಲಿ ಮಾತ್ರ ನಿಮ್ಮ ಅಂದುಕೊಂಡದ್ದನ್ನ ಸಾಧಿಸಲು ಸಾಧ್ಯ.

ತುಲಾ : ಹಣಕಾಸು ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಶುಭವಲ್ಲ. ನಿಮಗೆ ಸಮಸ್ಯೆ ಇದ್ದರೂ ನಿಮ್ಮ ಹತ್ತಿರದವರಿಗೆ ಸಹಾಯ ಮಾಡುವಿರಿ. ಇಂದು ಸಾಮಾಜಿಕ ಕೆಲಸಗಳಿಗೆ ಹೆಚ್ಚು ಹೊತ್ತು ಕೊಡುತ್ತೀರಿ. ಒಂಟಿಯಾಗಿರುವವರನ್ನ ವಿಶೇಷ ವ್ಯಕ್ತಿಯೊಬ್ಬರು ಭೇಟಿಯಾಗುತ್ತಾರೆ. ನೀವು ಕೆಲಸಕ್ಕಾಗಿ ಸಂದರ್ಶನಕ್ಕೆ ಹೋಗಲು ಉತ್ತಮವಾದ ದಿನ.

ವೃಚ್ಚಿಕ ರಾಶಿ : ಇಂದು ನೀವು ನಿಮ್ಮ ಜೀವನದ ಸಮಸ್ಯೆಗಳನ್ನ ನಿಮ್ಮ ಸಂಗಾತಿಯೊಂದಿಗೆ ಹಂಚಿಕೊಳ್ಳುವ ಮೊದಲೇ ನಿಮ್ಮ ಸಂಗಾತಿ ಅವರ ಸಮಸ್ಯೆಗಳ ಬಗ್ಗೆ ಹಂಚಿಕೊಂಡು ನಿಮ್ಮನ್ನ ಮತ್ತಷ್ಟು ಸಮಸ್ಯೆಗೆ ಸಿಲುಕಿಸುವ ಹಾಗೆ ಮಾಡಬಹುದು. ನೌಕರರಿಗೆ ಬಡ್ತಿ ಸಿಗಲಿದ್ದು ಆರ್ಥಿಕವಾಗಿ ಲಾಭವಾಗಲಿದೆ. ಆಸ್ತಿಯ ವಿಚಾರದಲ್ಲಿ ನಿಮ್ಮ ತಂದೆಯೇ ನಿಮ್ಮ ವಿರುದ್ದವಾಗುತ್ತಾರೆ. ಆದರೆ ಇಂದರಿಂದ ನೀವು ಎದೆಗುಂದುವ ಅವಶ್ಯಕತೆ ಇಲ್ಲ.

ಧನಸ್ಸು : ನಿಮ್ಮ ಮಿತ್ರರಿಂದ ನಿಮಗೆ ಬೆಂಬಲ ಸಿಗಳಿದು ನಿಮಗೆ ಆನಂದವಾಗಲಿದೆ. ಇಂದು ನಿಮಗೆ ಅದ್ಭುತ ದಿನವಾಗಿದ್ದು ನಿಮ್ಮ ಕೆಲಸದಲ್ಲಿ ಒಳ್ಳೆಯದಾಗಲಿದೆ. ನಿಮ್ಮನ್ನ ದ್ವೇಷ ಮಾಡುವವರನ್ನ ಸಹ ಪ್ರೀತಿಯಿಂದ ಕಾಣಿ. ಇದರಿಂದ ನಿಮಗೆ ಶುಭವಾಗಲಿದೆ. ನಿಮ್ಮ ಕುಟುಂಬದೊಂದಿಗೆ ಆನಂದದ ಸಮಯ ಕಳೆಯುವಿರಿ.

ಮಕರ ರಾಶಿ : ನಿಮ್ಮ ಕೆಲಸದಲ್ಲಿ ಇಂದು ಅದ್ಭುತ ಯಶಸ್ಸು ಸಿಗಲಿದೆ. ಪ್ರವಾಸಿತಾಣಗಳಿಗೆ ಭೇಟಿ ನೀಡುವ ಸಾಧ್ಯತೆಗಳಿವೆ. ಇಂದು ಹೆಚ್ಚಿನ ಸಮಯ ನಿಮ್ಮ ಕುಟುಂಬದವರೊಂದಿಗೆ ಕಳೆಯುವುದರಿಂದ ನಿಮಗೆ ಸಂಬಂಧಗಳ ಮಹತ್ವ ತಿಳಿಯಲಿದೆ. ನಿಮಗೆ ಆರ್ಥಿಕವಾಗಿ ನಷ್ಟವಾದರೂ ನಿಮ್ಮ ಅದೃಷ್ಟದಿಂದ ಹಣ ಸುಲಭವಾಗಿ ನಿಮ್ಮ ಕೈ ಸೇರಲಿದೆ.

ಕುಂಭ : ನಿಮ್ಮ ಕೋಪವೇ ನಿಮ್ಮ ತೊಂದರೆಗೆ ಕಾರಣವಾಗಲಿದೆ. ಆರ್ಥಿಕ ಸಮಸ್ಯೆಯ ಕಾರಣ ನಿಮ್ಮ ಕೆಲಸಗಳು ನಿಂತುಹೋಗುತ್ತವೆ. ನಿಮ್ಮ ಸಂಗಾತಿಯ ವಿಚಿತ್ರ ಮನಸ್ಥಿತಿ ನಿಮ್ಮ ಅಸಮಾಧಾನಕ್ಕೆ ಕಾರಣವಾಗಲಿದೆ. ಇಂದು ನಿಮ್ಮ ಪ್ರಯಾಣ ಆನಂದದಾಯಕವಾಗಿರಲಿದೆ. ಇಂದು ನಿಮ್ಮ ಸಹದ್ಯೋಗಿಗಳಿಂದ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.

ಮಿನ ರಾಶಿ : ನಿಮ್ಮ ಜೀವನಶೈಲಿಯೇ ನಿಮ್ಮ ಕುಟುಂಬದವರ ಆತಂಕಕ್ಕೆ ಕಾರಣವಾಗಲಿದೆ. ನಿಮ್ಮ ಖರ್ಚು ವೆಚ್ಚಗಳ ಬಗ್ಗೆ ಎಚ್ಚರಿಕೆಯಿಂದಿರಿ. ಇಂದು ನೀವು ಏಕಾಂತ ಸಮಯವನ್ನ ಕಳೆಯುವಿರಿ. ಪ್ರಯಾಣ ಮಾಡುವಾಗ ಎಚ್ಚರಿಕೆಯಿಂದಿರಿ.