Advertisements

ಶ್ರೀ ಕ್ಷೇತ್ರ ಗೊರವನಹಳ್ಳಿ ಮಹಾಲಕ್ಷ್ಮಿ ದೇವಿಯನ್ನ ನೆನೆಯುತ್ತಾ ಇಂದಿನ ನಿಮ್ಮ ದ್ವಾದಶ ರಾಶಿಗಳ ಫಲಗಳು ಹೇಗಿದೆ ನೋಡಿ..

Astrology

ಮೇಷ ರಾಶಿ : ಇಂದು ನಿಮ್ಮ ವೈವಾಹಿಕ ಜೀವನದಲ್ಲಿ ಸಂತೋಷ ಸಿಗಳಲಿದೆ. ಆರ್ಥಿಕವಾಗಿ ವೃದ್ಧಿ ಕಾಣಲು ನಿಮ್ಮ ಹಿರಿಯರ ಸಲಹೆ ಸೂಚನೆಗಳನ್ನ ಸ್ವೀಕರಿಸಿ ಅದರಂತೆ ನಡೆಯಿರಿ. ಪ್ರಯಾಣಕ್ಕೆ ವಿಜ್ಞವಾಗುವ ಸಾಧ್ಯತೆ ಇದೆ. ಆರೋಗ್ಯದಲ್ಲಿ ಏರುಪೇರು. ಬಾಡಿಗೆದಾರರಿಂದ ಕಿರಿಕಿರಿ ಉಂಟಾಗುವ ಸಾಧ್ಯತೆ.

ವೃಷಭ ರಾಶಿ : ನೀವು ಇಂದು ಮನೆಯ ಬಳಕೆಯ ವಸ್ತುಗಳಾಗಲಿ, ಆಭರಣಗಳನ್ನಾಗಲಿ ಖರೀದಿಸುವ ಸಾಧ್ಯತೆ ಇದೆ. ಪ್ರೀತಿಯಿಂದ ಸಂಕಟವನ್ನ ಎದುರಿಸಬೇಕಾಗುತ್ತದೆ.ಆರ್ಥಿಕವಾಗಿ ನಷ್ಟವಾಗಲಿದ್ದು ಚಿಂತೆ ಕಾಡಲಿದೆ. ಕುಟುಂಬದಲ್ಲಿ ಹೆಚ್ಚಾಗಿ ಖರ್ಚು ವೆಚ್ಚಾಗುವ ಸಂಭವ ಇದೆ.

ಮಿಥುನ : ನಿರಂತರ ಪ್ರಯತ್ನದಿಂದ ಯಶಸ್ಸು ಪ್ರಾಪ್ತವಾಗಲಿದೆ. ಅದಕ್ಕಾಗಿ ತಾಳ್ಮೆಯಿಂದಿರುವುದು ಉತ್ತಮ. ಅನುಭವ ಪಡೆದವರಿಂದ ಸಲಹೆ ಪಡೆದು ನಿಮ್ಮ ಹಣವನ್ನ ಹೂಡುವುದು ಉತ್ತಮ. ಬಂದ ಅವಕಾಶಗಳು ಕೈ ತಪ್ಪಿಹೋಗುವ ಸಾಧ್ಯತೆ.

ಕಟಕ ರಾಶಿ : ನಿಮ್ಮ ನೆಂಟರೊಬ್ಬರು ಇಂದು ಅನಿರೀಕ್ಷಿತವಾಗಿ ನಿಮ್ಮ ಮನೆಗೆ ಬರುವ ಸಾಧ್ಯತೆ ಇದೆ. ಇದರಿಂದ ನಿಮ್ಮ ಸಮಯವು ವ್ಯರ್ಥವಾಗುವುದು. ನಿಮಗಿರುವ ಖಿ’ನ್ನತೆಯೇ ನಿಮ್ಮ ಬೆಳವಣಿಗೆಗೆ ಅಡ್ಡಿಯಾಗಲಿದೆ. ಬೇಡದ ವಿಷಯಗಳಿಗೆ ಖರ್ಚು ಹೆಚ್ಚಾಗಲಿದೆ. ಸಂಪಾದನೆ ಇಲ್ಲದೆ ಜೀವನದಲ್ಲಿ ಬೇಸರವಾಗಲಿದೆ.

ಸಿಂಹ ರಾಶಿ : ಇಂದು ನಿಮಗೆ ತಾಯಿಯಿಂದ ಸಹಾಯವಾಗಲಿದೆ. ಇಂದು ವೈವಾಹಿಕ ಜೀವನದ ಅತ್ತ್ಯುತ್ತಮ ದಿನವಾಗಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ನೀವು ನಿಮ್ಮ ಕುಟುಂಬದದೊಂದಿಗೆ ಬೆರೆತು ಅವರ ಬಗ್ಗೆ ಕಾಳಜಿವಹಿಸುವುದು ಸೂಕ್ತ. ಗೆಳೆಯರಿಂದ ಭರವಸೆ ಸಿಗಲಿದೆ. ಕೌಟುಂಬಿಕವಾಗಿ ನೋ’ವಾಗಲಿದೆ.

ಕನ್ಯಾ : ನಿಮ್ಮ ಸಂಗಾತಿಯ ಆರೋಗ್ಯದ ಚಿಂತೆ ಕಡಲಿದ್ದು ಅದರ ಬಗ್ಗೆ ಗಮನ ಕೊಡಿ. ಹಣಕಾಸಿನ ವಿಷಯದಲ್ಲಿ ಸುಧಾರಣೆ ಕಾಣಲಿದ್ದೀರಿ. ನಿಮ್ಮ ಉದ್ಯೋಗದಲ್ಲಿ ಹಿನ್ನಡೆಯಾಗುವ ಸಂಭವ ಇದೆ.

ತುಲಾ ರಾಶಿ : ಸ್ನೇಹಿತರಿಂದ ನಿಮಗೆ ಬೆಂಬಲ ಸಿಗಲಿದ್ದು ಸಂತೋಷವಾಗಲಿದೆ. ವ್ಯಾಪಾರದಲ್ಲಾಗಲಿ, ಕೆಲಸದಲ್ಲಾಗಲಿ ನಿಮ್ಮ ಅಜಾಗೂರಕತೆಯಿಂದಾಗಿ ಆರ್ಥಿಕ ನಷ್ಟ ಸಂಭವಿಸುವ ಸಾಧ್ಯತೆ ಇದೆ. ಹಿರಿಯರ ಆರೋಗ್ಯದಲ್ಲಿ ಏರುಪೇರಾಗಲಿದೆ. ಪ್ರಯಾಣ ಮಾಡುವಾಗ ಎಚ್ಚರಿಕೆಯಿಂದಿರಿ.

ವೃಚ್ಚಿಕ : ಯಾವುದನ್ನೂ ಪರಿಶೀಲಸದೆ ಆತುರದಲ್ಲಿ ಹೂಡಿಕೆ ಮಾಡುವುದು ನಿಮ್ಮ ನಷ್ಟಕ್ಕೆ ಕಾರಣವಾಗಲಿದೆ. ಪತ್ನಿಯಿಂದಾಗಿ ನಿಮ್ಮ ಜೀವನ ಬದ್ಲಾಗುವ ಸಾಧ್ಯತೆ ಇದೆ. ಮಿತ್ರರು ದೂರವಾಗಲಿದ್ದಾರೆ. ಹೆಚ್ಚಾಗಿ ನಷ್ಟವಾಗುವ ಸಾಧ್ಯತೆ ಇದೆ.

ಧನಸ್ಸು ರಾಶಿ : ನಿಮಗೆ ಹಣಕ್ಕೆ ಸಂಬಂದಿಸಿದ ಸಮಸ್ಯೆಗಳು ಕಡಲಿದ್ದು ಹಿರಿಯರ ಸಲಹೆ ಪಡೆದು ಅದರಂತೆ ಮುನ್ನಡೆಯಿರಿ. ಕೆಲಸದಲ್ಲಿ ನಿರಾಸಕ್ತಿ ಕಾಡಲಿದೆ. ವ್ಯಾಪಾರ ವ್ಯವಹಾರಗಳಲ್ಲಿ ಯಶಸ್ಸು ಸಿಗಲಿದೆ.

ಮಕರ : ಬೆನ್ನು ನೋವು ನಿರಂತರವಾಗಿ ಕಾಡುವ ಸಾಧ್ಯತೆ ಹೆಚ್ಚಿದೆ. ನಿಮ್ಮ ಕುಟುಂಬದವರ ಬಗ್ಗೆ ಕಾಳಜಿ ನೀಡಿ ಅವರ ಅಗತ್ಯತೆಗಳನ್ನ ಆದಷ್ಟು ಪೂರೈಸುವ ಕೆಲಸ ಮಾಡಿ. ನೀವು ಬಹಳ ಹಿಂದೆ ಏನಾದರೂ ಹಣ ಹೂಡಿಕೆ ಮಾಡಿದ್ದಲ್ಲಿ ಅದರ ಲಾಭ ಪಡೆಯಿರಿ. ಮಿತ್ರರಿಂದ ಅಂತರವಿರಲಿ. ವೈವಾಹಿಕ ಜೀವನದಲ್ಲಿ ವಿರಸವಾಗಲಿದೆ.

ಕುಂಭ : ಹಣದ ಕಾರಣಕ್ಕಾಗಿ ನಿಮ್ಮ ಸಂಗಾತಿಯ ಜೊತೆಗೆ ಜ’ಗಳವಾಗುವ ಸಾಧ್ಯತೆ ಇದೆ. ನಿಮ್ಮ ಮಕ್ಕಳ ಜೊತೆಯಲ್ಲಿ ಸ್ವಲ್ಪ ಸಮಯ ಕಳೆಯಿರಿ. ಅನಿರೀಕ್ಷಿತವಾಗಿ ಪ್ರಯಾಣವಾಗಲಿದ್ದು, ಲಾಭ ಕೂಡ ಆಗಲಿದೆ.

ಮೀನ ರಾಶಿ : ನೀವು ಹಣವನ್ನ ಕೂಡಿಟ್ಟಲ್ಲಿ ಮಾತ್ರ ಅದು ನಿಮ್ಮ ಕಷ್ಟಕಾಲದಲ್ಲಿ ಸಹಾಯಕ್ಕೆ ಬರಲಿದೆ. ತಾಯಿಯಿಂದ ಹಣದ ಸಹಾಯವಾಗಲಿದೆ. ನಿಮ್ಮ ಬೇಜವಾಬ್ದಾರಿತನವೇ ನಿಮ್ಮ ಹಿನ್ನಡೆಗೆ ಕಾರಣವಾಗಲಿದೆ. ನಿಮ್ಮ ಹಣ, ಆಭರಣಗಳು ಕಳ್ಳತನವಾಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದಿರುವುದು ಒಳ್ಳೆಯದು.