Advertisements

ಎಲ್ಲಾ ಭ್ರಮೆಗಳಿಂದ ದೂರಾಗಿ ಜ್ಞಾನ ಪಡೆದುಕೊಳ್ಳಲು ನಿಮ್ಮ ಮನೆಯ ಕತ್ತಲು ಕಳೆದು ಜೀವನ ಬೆಳಕಾಗಲು ಈ ದೇವಿಯ ಮೊರೆಹೋಗಿ !

Adyathma

ಜ್ಞಾನಿಗಳಿಗೆ ದುಃಖ ಇರುವುದಿಲ್ಲ. ಇದ್ದರೂ ಅದನ್ನು ಗೆಲ್ಲುವ ತಾಕತ್ತು ಜ್ಞಾನದ ಜೊತೆಗೇ ಬಂದಿರುತ್ತದೆ. ಅಧ್ಯಾತ್ಮದ ಗಾಳಿ ಗಂಧ ಗೊತ್ತಿರದದೆ, ಕನಿಷ್ಠ ದೇವರ ಮೇಲೆ ಭಕ್ತಿಯೂ ಇಲ್ಲದೆ, ಪರಿಪೂರ್ಣ ವಿಜ್ನಾನವೂ ತಿಳಿಯದೆ ಮನಸ್ಸಲ್ಲಿ ಅಂಧಕಾರ ತುಂಬಿಕೊಂಡ ಮನುಷ್ಯ ಜೀವನದಲ್ಲಿ ಕಷ್ಟವನ್ನೇ ಎದುರಿಸಿ ಜೀವನದಲ್ಲಿ ನೊಂದು ಬೆಂದು ಹೋಗುತ್ತಾನೆ. ಕಡೆಗೆ ದೇವರ ಪಾದವನ್ನು ಹಿಡಿಯುವುದು ಬಿಟ್ಟರೆ ಅವನಿಗೆ ಮುಂದೆ ಯಾವ ದಾರಿಯೂ ಇರುವುದಿಲ್ಲ. ಇಂತಹ ಮನುಜರನ್ನು ಉದ್ಧಾರ ಮಾಡಲಿಕ್ಕೆಂದೇ ಮಹಾದೇವಿಯೊಬ್ಬಳು ಇದ್ದಾಳೆ. ಇಂತಹ ಜನರನ್ನು ಜ್ಞಾನ ವೈರಾಗ್ಯದಿಂದ ಉದ್ಧರಿಸಲೆಂದೇ ನಮ್ಮ ಪೂರ್ವಜರು ಆಕೆಗೊಂದು ಶಕ್ತಿ ಪೀಠವನ್ನು ಮಾಡಿದ್ದಾರೆ. ವಿಶೇಷ ಎಂದರೆ ಅದು ನಮ್ಮ ಕರ್ನಾಟಕದಲ್ಲೇ ಇದೆ.

Advertisements

ಈ ದೇವಿಯ ಮೊರೆ ಹೋಗುವುದರಿಂದ ಜ್ಞಾನ ವೈರಾಗ್ಯಗಳು ಪ್ರಾಪ್ತಿಯಾಗುತ್ತವೆ. ಮನಸಿನ, ಮನೆಯ ಜೀವನದ ಕತ್ತಲೆ ಕಳೆಯುತ್ತದೆ. ಆಕೆಯ ಎದುರಿನಲ್ಲಿ ಒಮ್ಮೆ ಭಕ್ತಿಯಿಂದ ನಿಂತರೂ ಸಾಕು ಆಕೆಯ ಪ್ರಭಾವ ನಿಮ್ಮ ಮೇಲೆ ಬೀರಿ ಜೀವನದಲ್ಲಿ ಒಳಿತು ನಡೆಯುತ್ತದೆ. ನಂತರ ನಿಮ್ಮ ಮನೆ ಒಂದು ಜ್ಞಾನದ ಕೇಂದ್ರವಾಗುತ್ತದೆ. ನಿಮ್ಮ ಮನೆಯಲ್ಲಿ ಅನ್ನದಾನ ಶುರುವಾಗುತ್ತದೆ. ಅವಳೇ ಶ್ರೀ ಅನ್ನಪೂರ್ಣೇಶ್ವರಿ. ಅನ್ನದ ದೇವಿ. ಜ್ಞಾನ ವೈರಾಗ್ಯದ ದೇವಿ. ಶ್ರೀ ಕ್ಷೇತ್ರ ಹೊರನಾಡು ಒಂದು ಪವಿತ್ರ ಶಕ್ತಿ ಕ್ಷೇತ್ರ. ಇಲ್ಲಿ ಭಕ್ತಿಯಿಂದ ನಡೆದುಕೊಂಡರೆ ಊಟದ ದಾರಿದ್ರ ಕಳೆಯುತ್ತದೆ. ಹೊಟ್ಟೆಯ ಹಸಿವು ಮಾತ್ರವಲ್ಲ ಜ್ಞಾನದ ಹಸಿವು ಕೂಡ ನೀಗುತ್ತದೆ. ಏಕೆಂದರೆ ಅನ್ನ ಪೂರ್ಣೆ ಕೇವಲ ಅನ್ನದ ದೇವಿ ಮಾತ್ರ ಅಲ್ಲ , ಜ್ಞಾನ ವೈರಾಗ್ಯದ ಸಿದ್ಧಿ ನೀಡುವ ಮಹಾದೇವಿ.

ಈ ದೇವಿ ನಿಮ್ಮ ಯಾವುದೇ ಸಮಸ್ಯೆ ಬಗೆಹರಿಸಬಲ್ಲಳು. ಆದರೆ ನೀವು ಆಕೆಯನ್ನು ಎಷ್ಟು ನಂಬುತ್ತೀರಿ ಎಂಬುದು ಮುಖ್ಯ. ಕೇವಲ ಒಮ್ಮೆ ಭಕ್ತಿಯಿಂದ ಅವಳ ಭವ್ಯ ಮೂರ್ತಿಯ ಮುಂದೆ ನಿಂತರೂ ಸಾಕು ನಿಮ್ಮ ಮೇಲೆ ಎಂತಹ ಪರಿಣಾಮ ಬೀರುತ್ತದೆ ಎಂಬುದನ್ನು ನೀವೇ ಅರಿಯುತ್ತೀರಿ. ಈ ಕ್ಷೇತ್ರ ಚಿಕ್ಕಮಗಳೂರು ಜಿಲ್ಲೆಯಲ್ಲಿದೆ. ಅಗಸ್ತ್ಯ ಮುನಿಗಳು ಈ ದೇವಾಲಯದ ಸ್ಥಾಪಕರು. ಮುಂದೆ ಶಂಕರಾಚಾರ್ಯರು ಇಲ್ಲಿ ಒಂದು ಶ್ರೀ ಚಕ್ರವನ್ನು, ಶ್ರೀಗಂಧದ ಮೂರ್ತಿಯನ್ನು ಸ್ಥಾಪಿಸಿದರು. ಇಲ್ಲಿ ಚಿನ್ನದ ಮೂಲ ವಿಗ್ರಹವೂ ಇದೆ. ಇದು ಒಂದು ಶಕ್ತಿ ಕೇಂದ್ರ. ಇಲ್ಲಿಗೆ ಭೇಟಿ ಕೊಡುವುದರಿಂದಲೇ ನಿಮ್ಮ ಮನಸ್ಸು , ಶರೀರದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ.

ಅನ್ನಪೂರ್ಣೆಯ ಕಥೆ : ಭಗವಂತ ಶಿವ ಬ್ರಹ್ಮದೇವನ ನಾಲ್ಕನೇ ತಲೆಯನ್ನು ಕ’ತ್ತರಿಸಿದ ಕಾರಣ ಬ್ರಹ್ಮ ಹ’ತ್ಯೆಯ ಶಾಪಕ್ಕೆ ಗುರಿಯಾಗುತ್ತಾನೆ. ಈ ಶಾಪದ ಪರಿಣಾಮ ಸ್ಮಶಾನ ರುದ್ರನು ಭಿಕ್ಷುಕನಾಗುತ್ತಾನೆ. ಅವನ ಭಿಕ್ಷದ ಪಾತ್ರೆ ತುಂಬುವವರೆಗೆ ಭಿಕ್ಷೆ ಬೇಡ ಬೇಕಾಗುತ್ತದೆ. ಆದರೆ ಆ ಪಾತ್ರೆ ಎಷ್ಟೇ ಬಿಕ್ಷೆ ಬೇಡಿದರೂ ತುಂಬುವುದಿಲ್ಲ. ಆಗ ಗೌರಿಯು ಅನ್ನಪೂರ್ಣೆಯ ರೂಪ ಧರಿಸುತ್ತಾರೆ. ಶಿವನು ದೇವಿಯ ಬಳಿ ಬಿಕ್ಷೆ ಬೇಡಿದಾಗ ಆಕೆ ಅನ್ನಪೂರ್ಣೆಯಾಗಿ ಭಿಕ್ಷೆ ನೀಡುತ್ತಾಳೆ. ಆಗ ಭಿಕ್ಷಾ ಪಾತ್ರೆಯು ತುಂಬಿ ಶಿವನ ಶಾಪ ನಿವಾರಣೆಯಾಗುತ್ತದೆ. ಕಾಶಿಯಲ್ಲಿ ನೆಲೆಸಿದ ದೇವಿಯು ಅನ್ನ ಪೂರ್ಣೆಯಾಗಿ ಜಗತ್ತಿನ ಹಸಿವು ನೀಗುತ್ತಾಳೆ. ಕಾಶಿಯನ್ನು ಬಿಟ್ಟರೆ ಆ ದೇವಿಯ ಸನ್ನಿಧಿ ಇರುವುದು ಹೊರನಾಡಿನಲ್ಲಿ. ಇದು ಒಂದು ಪವಿತ್ರ, ಶಕ್ತಿ ಶಾಲಿ ಸ್ಥಳವಾಗಿದ್ದು ಇಲ್ಲಿಗೆ ನಡೆದುಕೊಳ್ಳುವ ಭಕ್ತರ ಕಷ್ಟ ಕಳೆದು ಜೀವನ ಬೆಳಕಾಗುತ್ತದೆ.

“ಅನ್ನಪೂರ್ಣೆ ಸದಾಪೂರ್ಣೆ ಶಂಕರ ಪ್ರಾಣ ವಲ್ಲಭೆ. ಜ್ಞಾನ ವೈರಾಗ್ಯ ಸಿದ್ದರ್ಥ್ಯಂ ಭಿಕ್ಷಾನ್ ದೇಹಿಚ ಪಾರ್ವತಿ. ಮತಾಚ ಪಾರ್ವತಿ ದೇವಿ ಪಿತಾ ದೇವೋ ಮಹೇಶ್ವರಃ. ಬಾಂಧವ ಶಿವ ಭಕ್ತಾಷ್ಚ ಸ್ವದೇಶೋ ಭುವಂತ್ರಯಂ.” ಎಂಬ ಅನ್ನಪೂರ್ಣೆಯ ಮಂತ್ರವನ್ನು ದಿನವೂ ಜಪಿಸುವುದರಿಂದ ನಿಮ್ಮ ಮನೆಯಲ್ಲಿ ಧಾನ್ಯ ಸಂಪತ್ತು ವೃದ್ಧಿಸುತ್ತದೆ. ಜ್ಞಾನ ವೈರಾಗ್ಯಗಳು ಸಿದ್ಧಿಸುತ್ತವೆ. ನೀವು ಕಷ್ಟ, ಅಂಧಕಾರದಲ್ಲಿ ಇದ್ದರೆ ನಿಮ್ಮ ಜೀವನ ಬೆಳಕು ಕಾಣುತ್ತದೆ. ಅನ್ನಪೂರ್ಣೆಯ ಮೇಲೆ ನಂಬಿಕೆ ಇಡಿ ಸಾಕು ಆ ದೇವಿಯೇ ನಿಮ್ಮನ್ನು ರಕ್ಷಿಸುತ್ತಾಳೆ.