Advertisements

ಸಮಸ್ತ ಲೋಕದ ಓಡೆಯ ಶಿವ, ಶನಿಯ ಮಾತಿಗೆ ಹೆದರಿ ಗುಹೆಯಲ್ಲಿ ಅವಿತು ಕೊಂಡಿದ್ದು ಯಾಕೆ? ಕೊನೆಗೆ ಸೋಲಪ್ಪಿಕೊಂಡ ಶಿವ ಶನಿಗೆ ಹೇಳಿದ್ದೇನು.

Adyathma

ಶನಿಕಾಟ ಸೂರ್ಯ ಪುತ್ರನಾದ ಶನೀಶ್ವರನು ಯಾರ ಮೇಲಾದರೂ ಕರುಣೆ ತೋರಿದರೆ ಅವರಿಗೆ ಕಷ್ಟ ಕಾರ್ಪಣ್ಯಗಳೇ ಇರುವುದಿಲ್ಲ. ಅವರ ಬಾಳಿನಲ್ಲಿ ಸುಖ ಸಂತೋಷಗಳೇ ತುಂಬಿರುತ್ತದೆ. ಆದರೆ ಯಾರ ಮೇಲಾದರೂ ಕೋಪಗೊಂಡರೆ ಅವರಿಗೆ ಕಷ್ಟ ಪರಂಪರೆ ಶತಸಿದ್ದ. ಒಮ್ಮೆ ಶನೀಶ್ವರ ಕೈಲಾಸಕ್ಕೆ ಹೋಗಿ ಶಿವನನ್ನು ಭೇಟಿ ಮಾಡಿ ಪರಮೇಶ್ವರ ನಿನ್ನ ಗ್ರಹ,ಚಾರದಲ್ಲಿ ಸ್ವಲ್ಪ ಕಾಲ ನನ್ನ ಬರುವಿಕೆ ಇದೆ ಎಂದುಹೇಳಿದ. ಸಮಸ್ತ ಲೋಕದ ಒಡೆಯನಾದ ತನ್ನನ್ನು ಇವನೇನು ಮಾಡಬಲ್ಲ ಎಂದು ಶಿವ ನೀನು ಬಂದು ಏನು ಮಾಡಿತ್ತೀಯೆ ಎಂದು ಕೇಳಿದ.

Advertisements

ನಾನು ಬಂದರೆ ಕಷ್ಟಗಳು ಬರುವುದರಲ್ಲಿ ಸಂದೇಹವೇ ಇಲ್ಲ ಎಂದು ಹೇಳಿದ. ಆಗ ಶಿವ ಸರಿ ಬರಲೇ ಬೇಕೆಂದಿದ್ದರೆ ಬಾ ಬೇಡವೆಂದವರು ಯಾರು. ಆದರೆ ಬರುವ ದಿನವನ್ನು ಮೊದಲೇ ತಿಳಿಸಿ ಬಾ ಎಂದು ಹೇಳಿದ. ಹಾಗಿದ್ದರೆ ನಾಳೆಯೇ ಬರುತ್ತೇನೆ ಎಂದು ನುಡಿದ ಶನೀಶ್ವರ ಹೊರಟು ಹೋದ. ಇವನೇನು ಮಾಡಬಲ್ಲ ಎಂದು ಶಿವನಿಗನಿಸಿತಾದರೂ ಮನಸ್ಸಿನಲ್ಲಿ ಸ್ವಲ್ಪ ಅಳುಕಿತ್ತು. ಇದಕ್ಕೆ ಉಪಾಯವೇನೆಂದು ಯೋಚಿಸಿ ಗುಹೆಯೊಂದರಲ್ಲಿ ಅಡಗಿ ಕುಳಿತುಕೊಂಡು ಬಿಟ್ಟ. ತನ್ನ ಇರುವಿಕೆಯೇ ಪತ್ತೆಯಾಗದಿದ್ದ ಮೇಲೆ ಶನೀಶ್ವರ ತನಗೆ ಕಷ್ಟ ಕೊಡುವುದಾರೂ ಹೇಗೆ ಎನಿಸಿತು.

ಶನೀಶ್ವರ ಹೇಳಿದ್ದ ಗಡುವು ಮುಗಿಯುವವರೆಗೆ ಕತ್ತಲೆಯ ಗುಹೆಯಲ್ಲೇ ಅಡಗಿ ಕೊಂಡಿದ್ದು ನಂತರ ಹೊರಗೆ ಬಂದ ನಂತರ ಶನೀಶ್ವರನನ್ನು ಕರೆಸಿ ಎಲೈ ಶನೀಶ್ವರನೇ ನನ್ನ ಮುಂದೆ ನಿನ್ನ ಆಟ ಏನೂ ಸಾಗಲಿಲ್ಲ ಎಂದು ಹೇಳಿ ಗಟ್ಟಿಯಾಗಿ ನಕ್ಕ, ಆಗ ಶನೀಶ್ವರ ನಗುತ್ತಾ ಅಯ್ಯಾ ಕೈಲಾಸಾದಿಪತಿಯೇ ಸಮಸ್ತ ಲೋಕಗಳಿಗೆ ಒಡೆಯನಾದ ನೀನು ನನ್ನ ಮಾತಿಗೆ ಬೆದರಿ ಕತ್ತಲೆಯ ಗುಹೆಯೊಂದರಲ್ಲಿ ಅವಿತು, ಅನ್ನ ಆಹಾರವಿಲ್ಲದೆ ಅಡಗಿ ಕುಳಿತೆಯಲ್ಲ ಅದು ಕಷ್ಟವಲ್ಲವೆ ಹೇಳಿದ. ಅವನ ಮಾತಿಗೆ ಒಪ್ಪಿದ ಶಿವ. ನೀನು ನವಗ್ರಹಗಳಲ್ಲಿ ಶ್ರೇಷ್ಠ, ಎಂದು ಹೇಳಿದ.