Advertisements

ಪ್ರಭು ಮಹಾದೇವನ ಈ ವಸ್ತುಗಳು ಕನಸಿನಲ್ಲಿ ಬಂದರೆ ಶುಭವೋ ಅಶುಭವೋ ನೋಡಿ

Adyathma

ನಮಸ್ತೇ ಸ್ನೇಹಿತರೇ, ಕನಸುಗಳು ಯಾರಿಗೆ ತಾನೇ ಬರೋದಿಲ್ಲ ಹೇಳಿ..ನಮಗೆ ಗೊತ್ತಿಲ್ಲದ ಎಂದೂ ನೋಡಿರದಂತಹ ವ್ಯಕ್ತಿಗಳು, ವಿಚಿತ್ರ ಸ್ಥಳಗಳು, ಯಾವುದೊ ಲೋಕದಲ್ಲಿ ವಿಹಾರ ಮಾಡಿದಂತೆ, ನಮಗೇನೋ ಅ’ಪಾಯವಾದಂತೆ ಜೊತೆಗೆ ಪ್ರಾಣಿಗೆಳು ಹೀಗೆ ವಿವಿಧ ರೀತಿಯ ವಿಚಿತ್ರ ಕನಸುಗಳು ನಮಗೆ ಬರುತ್ತವೆ. ಇನ್ನು ಮುಂಜಾನೆ ಅಂದರೆ ಬೆಳಿಗ್ಗೆ ೪ ಗಂಟೆಯಿಂದ ೫ ಗಂಟೆಯ ಒಳಗೆ ನಮಗೆ ಬೀಳುವ ಕನಸುಗಳು ನನಸಾಗುತ್ತವೆ ಎಂದು ಶಾಸ್ತ್ರಗಳು ಹೇಳುತ್ತವೆ. ಕನಸುಗಳಲ್ಲಿ ಕೆಟ್ಟ ಹಾಗೂ ಒಳ್ಳೆಯ ರೀತಿಯ ಕನಸುಗಳು ಕಾಣಿಸಿಕೊಳ್ಳುತ್ತವೆ. ಹಾಗಾದ್ರೆ ತ್ರಿಮೂರ್ತಿಗಳಲ್ಲಿ ಒಬ್ಬರಾದ ಪಾರ್ವತೀಪತಿ ಶಿವ ಶಂಕರನಿಗೆ ಸಂಬಂಧಿಸಿದ ವಸ್ತುಗಳು ಕನಸಿನಲ್ಲಿ ಕಾಣಿಸಿಕೊಂಡರೆ ಶುಭವವಾಗಲಿದೆಯೇ ಎಂಬುದರ ಬಗ್ಗೆ ಮುಂದೆ ನೋಡೋಣ ಬನ್ನಿ..

*ನಿಮ್ಮ ಕನಸಿನಲ್ಲಿ ಮಹಾದೇವನ ಲಿಂಗ ಕಾಣಿಸಿಕೊಂಡರೆ ನಿಮಗೆ ಅದೃಷ್ಟದ ಬಾಗಿಲು ತೆರೆಯಿತು ಎಂದರ್ಥ. ಹೌದು, ಅಲ್ಲಿಯವರೆಗೂ ನಿಮ್ಮ ಜೀವನದಲ್ಲಿ ಕಾಡುತ್ತಿದ್ದ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂಬುದನ್ನ ತಿಳಿಯಬಹುದಾಗಿದೆ. ಇನ್ನು ಶಿವಲಿಂಗ ಕನಸಿನಲ್ಲಿ ಕಾಣಿಸಿಕೊಂಡ ಮರುದಿನವೇ ಶಿವಲಿಂಗಕ್ಕೆ ಹಾಲು ಅರ್ಪಿಸುವುದನ್ನ ಮರೆಯಬೇಡಿ. ಇದರಿಂದ ಶುಭವಾಗಲಿದೆ.

Advertisements

*ಪರಮೇಶ್ವರ ನೆಲಸಿರುವ ದೇವಸ್ಥಾನ ನಿಮ್ಮ ಕನಸಿನಲ್ಲಿ ಬಂದಲ್ಲಿ ನಿಮಗೆ ಹಲವಾರು ವರ್ಷಗಳಿಂದ ಕಾಡುತ್ತಿದ್ದ ರೋಗ ರುಜಿನಗಳಿಗೆ ಪರಿಹಾರ ಸಿಗಲಿದೆ ಎಂದರ್ಥವಾಗಿದೆ.

*ಶಿವನು ಕೊರಳಲ್ಲಿ ಸರ್ಪವನ್ನ ಧರಿಸಿರುವುದರಿಂದ ನಾಗಾಭರಣ ಎಂತಲೂ ಕರೆಯಲಾಗುತ್ತದೆ. ಒಂದು ವೇಳೆ ಭಗವಾನ್ ಈಶ್ವರ ಧರಿಸಿರುವ ಸರ್ಪ ನಿಮ್ಮ ಕನಸಿನಲ್ಲಿ ಕಾಣಿಸಿಕೊಂಡರೆ ಧನ ಲಾಭವಾಗುವುದರ ಸಂಕೇತವಾಗಿದೆ. ಇನ್ನು ಸರ್ಪ ನಿಮ್ಮ ಹಿಂದೆಯೇ ಇರುವಂತೆ ನಿಮ್ಮ ಕನಸಿನಲ್ಲಿ ಕಾಣಿಸಿಕೊಂಡರೆ ನಾಗದೇವತೆಯ ಕೃಪೆ ನಿಮ್ಮ ಮೇಲಿರಲಿದೆ ಎಂಬುದು ಇದರ ಅರ್ಥವಾಗಿದೆ.

*ನೃತ್ಯವೆಂದರೆ ಮಹಾದೇವನಿಗೆ ತುಂಬಾ ಇಷ್ಟ. ಹಾಗಾಗಿಯೇ ಶಿವಶಂಕರನಿಗೆ ನಟರಾಜ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಶಿವನಿಗೆ ಕೋಪ ಹೆಚ್ಚಾದಾಗ ತಾಂಡವ ನೃತ್ಯ ಮಾಡುತ್ತಾನೆ. ಒಂದು ವೇಳೆ ತಾಂಡವ ನೃತ್ಯ ಮಾಡುವುದು ನಿಮ್ಮ ಕನಸಿನಲ್ಲಿ ಬಂದರೆ ಭಯಪಡುವ ಅವಶ್ಯಕೆತೆಯಿಲ್ಲ. ಇದು ಶುಭದಾಯಕದ ಸಂಕೇತ ಕೂಡ. ಇನ್ನು ಈ ಕನಸು ಆರ್ಥಿಕವಾಗಿ ಅಭಿವೃದ್ದಿಹೊಂದುವ ಸಂಕೇತವೂ ಆಗಿದ್ದು, ನೀವು ಪ್ರಯತ್ನಪಟ್ಟಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬುದು ಈ ಕನಸಿನ ಅರ್ಥವಾಗಿದೆ.