Advertisements

ದೇವಿ ಪಾರ್ವತಿಗೆ ಕಾ’ಟ ಕೊಟ್ಟ ಶಿವನ ಸಹೋದರಿಯ ಅಚ್ಚರಿಯ ಕತೆ !

Adyathma

ಪುರಾಣಗಳಲ್ಲಿ ಧರ್ಮ ಗ್ರಂಥಗಳಲ್ಲಿ ಶಿವನ ಬಗ್ಗೆ ಓದಿರುತ್ತೇವೆ, ಕೇಳಿರುತ್ತೇವೆ ಆದರೆ ಕೆಲವು ಅಚ್ಚರಿಯ ವಿಷಯಗಳು ತಿಳಿದಿರುವುದಿಲ್ಲ. ಅದರಲ್ಲೂ ಮಹಾದೇವನ ಸಹೋದರಿಯ ಬಗ್ಗೆ ನಾವು ಕೇಳಿರುವುದು ಕಡಿಮೆಯೇ. ಅಷ್ಟಕ್ಕೂ ಶಿವನಿಗೆ ಸಹೋದರಿ ಇದ್ದಾಳೆ ಎಂಬ ಪ್ರಶ್ನೆ ನಮ್ಮ ತಲೆಗೆ ಮೊದಲು ಬರುತ್ತದೆ. ಈ ಕುತೂಹಲಕ್ಕೆ ಇಲ್ಲಿದೆ ಉತ್ತರ. ಸತಿಯ ಜೀ’ವ ತ್ಯಾ’ಗದ ನಂತರ ಆದಿ ಶಕ್ತಿ ದೇವಿ ಪಾರ್ವತಿಯ ರೂಪದಲ್ಲಿ ಜನಿಸಿ ಶಿವನನ್ನು ಮದುವೆಯಾಗುತ್ತಾಳೆ. ಮದುವೆಯ ನಂತರ ಪಾರ್ವತಿ ದೇವಿ ಮಹಾದೇವನೊಂದಿಗೆ ತಮ್ಮ ವಾಸ ಸ್ಥಳ ಕೈಲಾಸಕ್ಕೆ ತೆರಳುತ್ತಾಳೆ. ಅಕ್ಕ ತಂಗಿಯರು, ತಂದೆ ತಾಯಿ ಸಖಿಯರ ಜೊತೆ ಬೆಳೆದಿದ್ದ ಪಾರ್ವತಿಗೆ ಕೈಲಾಸದಲ್ಲಿ ಸ್ವಲ್ಪ ಬೇಸರವಾಗುತ್ತದೆ.

Advertisements

ಯಾರಾದರೂ ಒಬ್ಬ ಸ್ತ್ರೀಯ ಸಂಗ ಬೇಕೆನಿಸುತ್ತದೆ. ಯಾವಾಗಲೂ ತನ್ನೊಟ್ಟಿಗೆ ಇರಲು, ತನ್ನ ಕ’ಷ್ಟ ಸುಖ ಕೇಳಲು ಗಂಡನ ಮನೆಯಲ್ಲಿ ಯಾರಾದರೂ ಒಬ್ಬ ಸಖಿ ಬೇಕೆನಿಸುತ್ತದೆ. ಈ ವಿಷಯವಾಗಿ ಮಹಾದೇವನೊಂದಿಗೆ ಮಾತನಾಡುತ್ತಾಳೆ. ಆಗ ಪರಶಿವನು ತನ್ನ ಸಹೋದರಿ ಸಮನಾದ ಲಕ್ಷ್ಮೀ ದೇವಿ ಅಥವಾ ಸರಸ್ವತಿ ಯೊಂದಿಗೆ ನಿನ್ನ ಸ್ತ್ರೀ ಸಂಬಂಧ ಕ’ಷ್ಟ ಸುಖವನ್ನು ಹಂಚಿಕೊಳ್ಳುವಂತೆ ತಿಳಿಸುತ್ತಾರೆ. ಆದರೆ ಪಾರ್ವತಿಯು ಇದಕ್ಕೆ ಒಪ್ಪುವುದಿಲ್ಲ. ಕಾರಣ ಲಕ್ಷ್ಮಿ ದೇವಿಯು ನಾರಾಯಣನೊಂದಿಗೆ, ಸರಸ್ವತಿಯು ಬ್ರಹ್ಮ ದೇವರೊಂದಿಗೆ ಸದಾ ಇರುತ್ತಾರೆ. ಕೈಲಾಸದಲ್ಲಿ ನೆಲೆಸಿ ಸದಾ ತನ್ನೊಂದಿಗೆ ಇರುವಂತಹ ಒಬ್ಬ ಸಹೋದರಿಯನ್ನು ಸೃಷ್ಟಿಸುವಂತೆ ಕೇಳಿಕೊಳ್ಳುತ್ತಾಳೆ.

ಪಾರ್ವತಿ ದೇವಿಯ ಕೋರಿಕೆಗೆ ಮಣಿದ ಪರಶಿವನು ಒಬ್ಬ ಸ್ರೀ ಯನ್ನು ಸೃಷ್ಟಿಸುತ್ತಾನೆ. ಅವಳು ಶಿವನ ಸಹೋದರಿ ಆಗಿರುತ್ತಾಳೆ. ಆಕೆಯೂ ಶಿವನಂತೆಯೇ ಉಡುಪು ಧರಿಸಿರುತ್ತಾಳೆ. ನೋಡಲು ಶಿವನಂತೆಯೇ ಇರುತ್ತಾಳೆ. ಅವಳ ಹೆಸರು ಅಸಾವರಿ. ಇದರಿಂದ ದೇವಿಗೆ ಸಂತೋಷವಾಗುತ್ತದೆ. ತನ್ನೊಂದಿಗೆ ಕೈಲಾಸದಲ್ಲಿ ಇರಲು ಶಿವನ ಸಹೋದರಿ ಸಿಕ್ಕಳಲ್ಲ ಎಂದು ಸಂಭ್ರಮ ಪಡುತ್ತಾಳೆ. ಒಂದು ದಿನ ಪಾರ್ವತಿಯು ಅಸಾವರಿಗಾಗಿ ಬಗೆ ಬಗೆಯ ಭೋಜನ ತಯಾರಿಸಿ ತರುತ್ತಾಳೆ. ಅಸಾವರಿಯು ಎಷ್ಟೇ ಊಟ ಬಡಿಸಿದರು ಸಾಕು ಎನ್ನುವುದಿಲ್ಲ. ಕೈಲಾಸದಲ್ಲಿ ಇದ್ದ ಎಲ್ಲಾ ಆಹಾರವನ್ನು ತಿಂದು ಮುಗಿಸಿ ಮತ್ತೆ ಊಟ ಕೇಳುತ್ತಾಳೆ. ಇದೇನಿದು ಎಂದು ಆಶ್ಚರ್ಯದಿಂದ ಪಾರ್ವತಿ ಈ ಬಗ್ಗೆ ಅಸಾವಾರಿಯನ್ನು ಪ್ರಶ್ನಿಸಿದಾಗ ಅವಳು ಪಾರ್ವತಿಯನ್ನು ನಿಂ’ದಿಸುತ್ತಾಳೆ. ನಿನ್ನದು ಕೈಲಾಸದಲ್ಲಿ ಆಡಿದ್ದೆ ಆಟ ಆಗಿದೆ ಎಂದು ಬೈ’ಯುತ್ತಾಳೆ.

ಇದರಿಂದ ಪಾರ್ವತಿಯು ಕೋ’ಪಗೊಳ್ಳುತ್ತಾಳೆ. ಆದರೆ ಅಸಾವರಿ ತನ್ನ ಪತಿಯ ತಂಗಿಯಾಗಿರುವುದರಿಂದ ಅವಳೊಟ್ಟಿಗೆ ಕೋ’ಪದಿಂದ ವರ್ತಿಸಬಾರದು ಎಂದು ಮತ್ತೆ ಶಾಂತಳಾಗುತ್ತಾಳೆ. ಆದರೆ ಅಸಾವರೀ ಮಾತ್ರ ಸುಮ್ಮನಾಗುವುದಿಲ್ಲ ದೇವಿಯೊಂದಿಗೆ ದು’ರ್ವರ್ತನೆ ತೋರುತ್ತಾಳೆ. ತನ್ನ ದು’ಷ್ಟ ತನದಿಂದ ಪಾರ್ವತಿಯನ್ನು ತನ್ನ ಅಂಗಾಲಿನಲ್ಲಿ ಅ’ಡಗಿಸಿ ಇಡುತ್ತಾಳೆ. ಅಷ್ಟರಲ್ಲಿ ಪ್ರತ್ಯಕ್ಷನಾದ ಮಾಹಾದೇವ ಇದನ್ನೆಲ್ಲ ಕಂಡು ಪಾರ್ವತಿಯನ್ನು ರಕ್ಷಿಸುತ್ತಾನೆ. ಮತ್ತು ಅಸಾವರಿಯನ್ನು ತನ್ನಲ್ಲಿ ಲೀ’ನ ಮಾಡಿಕೊಳ್ಳುತ್ತಾನೆ. ಆನಂತರ ಪಾರ್ವತಿಗೆ ತಿಳಿಸಿ ಹೇಳುತ್ತಾನೆ, ಯಾವುದೇ ಸ್ತ್ರೀಗೆ ತನ್ನ ಪತಿಯ ಮನೆಯಲ್ಲಿ ಮತೊಬ್ಬ ಸ್ತ್ರೀಯ ಜೊತೆ ಯಾವುದೇ ಮನಸ್ತಾಪ ಇಲ್ಲದೆ ಪ್ರೀತಿಯಿಂದ ಇರಲು ಸಾಧ್ಯವಿಲ್ಲ ಎಂದು. ಇದನ್ನು ಅರ್ಥ ಮಾಡಿಸಲೆಂದೇ ಅಸಾವರಿಯನ್ನು ಸೃಷ್ಟಿಸಿದೆ ಎಂದು ಹೇಳುತ್ತಾನೆ. ಇದನ್ನು ಅರ್ಥ ಮಾಡಿಕೊಂಡ ಪಾರ್ವತಿ , ಕೈಲಾಸದಲ್ಲಿ ವಾಸಿಸುವ ಶಿವನ ಬಳಗದೊಂದಿಗೆ ಸಂತೋಷದಿಂದ ಇರುತ್ತಾರೆ.