Advertisements

ಮತ್ತೊಮ್ಮೆ ಸುದ್ದಿಯಾದ ಲವ್ ಮಾಕ್ ಟೇಲ್ ಜೋಡಿ ಮಿಲನ ಮತ್ತು ಡಾರ್ಲಿಂಗ್ ಕೃಷ್ಣ.. ಮದುವೆಗೂ ಮುನ್ನ ಮಾಡಿದ್ದೇನು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಲವ್ ಮಾಕ್ ಟೇಲ್ ಜೋಡಿ ಮಿಲನ  ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.. ಈ ಜೋಡಿಯ ಮದುವೆ 2021 ರ ಪೆಬ್ರವರಿ 14 ರಂದು ನಿಶ್ಚಯವಾಗಿದೆ. ಮದುವೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಎಲ್ಲಾ ಪೂರ್ವ ತಯಾರಿಯನ್ನ ನಡೆಸುತ್ತಿದ್ದಾರೆ.. ಇದೀಗ ಮಿಲನ ನಾಗರಾಜ್ ಅವರು ತಮ್ಮ ಮದವೆಗೂ ಮುನ್ನ ಗೆಳತಿಯರ ಜೊತೆ ಬ್ಯಾಚುಲರ್ ಪಾರ್ಟಿ ಮಾಡಿದ್ದಾರೆ. ಈ ಪೊಟೊಗಳನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಮಿಲನ ಗೆಳತಿಯರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ..

Advertisements

ಬ್ಯಾಚುಲರ್ ಪಾರ್ಟಿಯಲ್ಲಿ ತಿಳಿ ಆಕಾಶ ನೀಲಿ ಬಣ್ಣದ ಗೌನ್ ದರಿಸಿ ತಮ್ಮ ಗೆಳತಿಯರೊಂದಿಗೆ ರಾಂಪ್ ವಾಕ್ ಮಾಡಿ ಮಿಂಚಿರುವ ಮಿಲನ ಈ ಪೊಟೊಗಳನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.. ಮತ್ತು ಬ್ಯಾಚುಲರ್ ಪಾರ್ಟಿಯಲ್ಲಿ ಭಾಗಿಯಾಗಿದ್ದ ತನ್ನ ಗೆಳತಿಯರಿಗೆ ತುಂಬಾ ಧನ್ಯವಾದಗಳು ಎಂದು ಮಿಲನ ಅವರು ಟ್ವೀಟ್ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ ಅವರು ಸಹ ಈ ಬ್ಯಾಚುಲರ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು.. ಮಿಲನ ಮತ್ತು ಕೃಷ್ಣ ಅವರು ಪಾರ್ಟಿಯಲ್ಲಿ ಒಟ್ಟಿಗೆ ಹೆಜ್ಜೆ ಹಾಕಿರುವ ಪೋಟೊವನ್ನು ಸ್ವತಃ ಡಾರ್ಲಿಂಗ್ ಕೃಷ್ಣ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ..

ಅಂದ ಹಾಗೆ ಕೃಷ್ಣ ಮತ್ತು ಮಿಲನ ಅವರ ಮದುವೆ 2021 ರ ಪೆಬ್ರವರಿ 14 ರಂದು ನಡೆಯಲಿದೆ. ಪ್ರೆಮಿಗಳ ದಿನದ ವಿಶೇಷವಾಗಿ ಲವ್ ಮಾಕ್ ಟೇಲ್ ಜೋಡಿ ಹೊಸ ಜೀವನ ಆರಂಭಿಸಲಿದೆ. ಬೆಂಗಳೂರಿನಲ್ಲಿ ಮದುವೆ ನಡೆಸಲು ಹಿರಿಯರು ನಿರ್ದರಿಸಿದ್ದು ಸದ್ಯಕ್ಕೆ ಎಲ್ಲಿ ಎಂಬುದು ಬಹಿರಂಗವಾಗಿಲ್ಲ.. ಕಳೆದ ವಾರ ಮಿಲನ ನಾಗರಾಜ್ ಮತ್ತು ಕೃಷ್ಣ ಅವರ ಜೋಡಿ ತಮಿಳುನಾಡಿನ ಕಾಂಚಿಪುರಂಗೆ ಹೋಗಿದ್ದರು. ಮದುವೆ ಹಿನ್ನೆಲೆ ಅಗತ್ಯ ವಸ್ತುಗಳನ್ನು ಖರೀದಿಸಲು ತೆರಳಿದ್ದರು ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ..