Advertisements

ಇವರ ಅಪ್ಪ ಸಿ‌ನಿಮಾ ಹೀರೋ ಅಲ್ಲ ಇವರ ಅಣ್ಣ ಸಿನಿಮಾ ನಿರ್ದೇಶಕ ಅಲ್ಲ.. ನೇಕಾರರ ಹುಡುಗ ಹೀರೋ ಆಗಿದ್ದು ಹೇಗೆ ಗೊತ್ತಾ?

Cinema

ಬಡ ಕುಟುಂಬದಲ್ಲಿ ಹುಟ್ಟಿ ಯಾವುದೇ ಬ್ಯಾಕ್‌ಗ್ರೌಂಡ್ ಇಲ್ಲದೇ ಬೆಳೆದು ಇವತ್ತು ಕನ್ನಡ ಚಿತ್ರ ಪ್ರೇಮಿಗಳ ಮನಸ್ಸಲ್ಲಿ ನೆನಪಿನಲ್ಲಿ ಉಳಿಯುವಂತೆ ಅಭಿನಯಿಸುವ ನೆನಪಿರಲಿ ಪ್ರೇಮ್ ಸಿನಿರಂಗದಲ್ಲಿ ತನ್ನ ಕರಿಯರ್ ರೂಪಿಸಿಕೊಂಡಿದ್ದೇ ಸತತ ಶ್ರಮ, ನಿರಂತರ ಪ್ರಯತ್ನದಿಂದ. ಮೂಲತಃ ಪ್ರೇಮ್ ಅವರು ಬೆಂಗಳೂರಿನ ಸಂಪಂಗಿನಗರದವರು. ಕೈ ಮಗ್ಗ ಮಾಡುವ ನೇಕಾರರ ಕುಟುಂಬದಲ್ಲಿ ಜನಸಿದ ಪ್ರೇಮ್ ಅವರ ಮನೆಯವರೇನು ಸಿರವಂತರಲ್ಲ, ತಕ್ಕ ಮಟ್ಟಿಗೆ ಬದುಕು ಸಾಗಿಸುತ್ತಿದ್ದ ಮದ್ಯಮ ಕುಟುಂಬದವರು. ಬಟ್ಟೆಗಳನ್ನು ನೇಯ್ದು ಮಾರುಕಟ್ಟೆಯಲ್ಲಿ ಮಾರುವುದೇ ಇವರ ಮನೆಯವರ ಕುಲಕಸುಬಾಗಿತ್ತು. ಅದರಿಂದ ಬಂದ ಹಣದಲ್ಲಿ ಜೀವನ ಸಾಗಿಸುತ್ತಿದ್ದರು.

[widget id=”custom_html-3″]

Advertisements

ಸಿನಿಮಾ ನೋಡೋದು, ಬಟ್ಟೆಗಳನ್ನು ತೆಗೆದುಕೊಳ್ಳೋದು, ಫೋಟೋ ಶೂ’ಟ್ ಮಾಡಿಸುವುದು ಅಂದ್ರೆ ಪ್ರೇಮ್‌ಗೆ ಸಖತ್ ಇಷ್ಟ ಅಂತೆ. ಕೂಡಿಟ್ಟ ಅಲ್ಪ ಸ್ವಲ್ಪ ಹಣವನ್ನು ಇದರಲ್ಲೇ ಕಳೆಯುತ್ತಿದ್ದರಂತೆ, ಎಷ್ಟೋ ದಿನ ದಿನದ ಮೂರು ಮೂರು ಶೋಗಳನ್ನು ನೋಡುತ್ತಿದ್ದದ್ದು ಉಂಟಂತೆ. ನೋಡಲು ಸುಂದರವಾಗಿದ್ದ ಪ್ರೇಮ್ ಫಿಟ್‌ನೆಸ್ ಫ್ರೀಕ್ ಆಗಿದ್ರು. ಸಿನಿಮಾ ರಂಗಕ್ಕೆ ಬರುವ ಮುಂಚೆ ಚಪ್ಪಲಿ ಅಂಗಡಿಯಲ್ಲಿ ಕೆಲಸ ಮಾಡ್ತಾಯಿದ್ದರು. ಸ್ನೇಹಿತರೊಬ್ಬರು ಟಿಎನ್ ಸೀತಾರಾಮ್ ಅವರ ಕಾರ್ ಡ್ರೈವರ್ ಆಗಿ ಕೆಲಸ ಮಾಡ್ತಾಯಿದ್ರು. ಆ ವೇಳೆ ಟಿಎನ್ ಸಿತಾರಾಮ್ ಅವರು ಪೋಷಕ ನಟನ ಪಾತ್ರಕ್ಕೆ ಹುಡುಕುತ್ತಿರುತ್ತಾರೆ, ಆಗ ಪ್ರೇಮ್ ಅವರ ಬಳಿ ಅಡಿಷನ್‌ಗೆ ಹೋಗಿ ಅಂತ ಸ್ನೇಹಿತ ಬಲವಂತ ಮಾಡಿದ್ದಕ್ಕೆ ಎಂಗೋ ದುಡ್ಡು ಬರುತ್ತದೆ ಅಂತ ಪ್ರೇಮ್ ಅಡಿಷನ್‌ಗೆ ಹೋಗಿ ಆಯ್ಕೆಯಾದರು.

[widget id=”custom_html-3″]

ನಂತರ ಮನ್ವಂತರ ಧಾರವಾಹಿ ಮೂಲಕ ಕಿರುತೆರೆಗೆ ಪ್ರೇಮ್ ಎಂಟ್ರಿ ಕೊಡ್ತಾರೆ. ನಂತರ ಪ್ರಾ’ಣ ಎನ್ನುವ ಸಿನಿಮಾದ ಮೂಲಕ ಪೂರ್ಣ ಪ್ರಮಾಣದ ನಾಯಕನಟನಾಗಿ ಕನ್ನಡ ಸಿನಿಲೋಕಕ್ಕೆ ಎಂಟ್ರಿಕೊಡ್ತಾರೆ. ಮೊದಲ ಸಿನಿಮಾದಲ್ಲಿಯೇ ಫಿಲ್ಮ್ ಫೇರ್ ಅವಾರ್ಡ ಮುಡಿಗೇರಿಸಿಕೊಳ್ತಾರೆ. ಬಳಿಕ ನೆನಪಿರಲಿ, ಜೊತೆ ಜೊತೆಯಲಿ ಸಿನಿಮಾಗಳಲ್ಲಿ ಅಭಿನಯಿಸಿ ಪ್ರೇಮ್ ನೆನಪಿರಲ್ಲಿ ಎಂಬ ಖ್ಯಾತಿ ಪಡೆದುಕೊಳ್ತಾರೆ. ಇದಾದ ಬಳಿಕ ಪ್ರೇಮ್ ಅವರ ಬಹುನಿರೀಕ್ಷಿತ ಚಿತ್ರ ಪಲ್ಲಕ್ಕಿ ಸಿನಿಮಾ ತೆರೆಗಪ್ಪಳಿಸುತ್ತೆ. ಇದು ಕೂಡ ಸೂಪರ್ ಡೂಪರ್ ಹಿಟ್ ಆಗುತ್ತದೆ. ಬಹುತೇಕ ಪ್ರೇಮ್ ಅಭಿನಯದ ಎಲ್ಲ ಸಿನಿಮಾಗಳು ಶತದಿನೋತ್ಸವವನ್ನು ಕಾಣುತ್ತೆ. ಪ್ರೇಮ್ ಅವರು ಪ್ರೀತಿಸಿ ಮದುವೆಯಾಗಿದ್ದು ಅವರಿಗೆ ಇಬ್ಬರು ಮಕ್ಕಳು ಸಹ ಇದ್ದಾರೆ.

[widget id=”custom_html-3″]


ಹೀಗೆ ವೃತ್ತಿ ಜೀವನದಲ್ಲಿ ಉತ್ತುಂಗದಲ್ಲಿದ್ದಾಗಲೇ ಪ್ರೇಮ್ ಲಕ್ ಕೈ ಕೊಡಲು ಶುರು ಆಯ್ತು. ನಂತರದ ದಿನಗಳಲ್ಲಿ ಇವರು ಅಭಿನಯಿಸಿದ ಗುಣವಂತ, ಸವಿನೆನಪು ಸಕ್ಸಸ್ ಕಾಣಲೇಯಿಲ್ಲ. ಜೊತೆಗಾರ. ಐಮ್ ಸೋರಿ ಮತ್ತೆ ಬನ್ನಿ ಪ್ರೀತ್ಸೋಣ ಎಲ್ಲ ಸಿನಿಮಾಗಳು ಗಾಂಧಿನಗರದಲ್ಲಿ ಸದ್ದು ಮಡಲೇಯಿಲ್ಲ. ಹೀಗೆ ಪ್ರೇಮ್ ವೃತ್ತಿ ಬದುಕಿನ ಗ್ರಾಫ್ ಕೆಳಗಿಳಿಯುತ್ತಿದ್ದಂತೆ ಚಾರ್‌ಮಿನಾರ್ ಸಿನಿಮಾವನ್ನು ಮಡ್ತಾರೆ. ಈ ಸಿನಿಮಾ ಪ್ರೇಮ್‌ಗೆ ಮತ್ತ ಹೊಸ ಬ್ರೇಕ್ ಕೊಟ್ಟಿತ್ತು.

ಮತ್ತೆ ಈ ಚಿತ್ರದ ಅದ್ಭುತ ಅಭಿನಯಕ್ಕೆ ಫಿಲ್ಮ್ ಫೇರ್ ಅವಾರ್ಡ್ ಸಹ ಮುಡಿಗೇರಿಸಿಕೊಂಡ್ರು. ನಂತರದ ಕೆಲ ಸಿನಿಮಾಗಳು ಅಷ್ಟಾಗಿ ಸದ್ದು ಮಾಡಿಲ್ಲವಾದ್ರೂ, ಚೌಕ ಸಿನಿಮಾದಲ್ಲಿನ ಮನೋಜ್ಞ ಅಭಿನಯಕ್ಕೆ ಜನರ ಚಪ್ಪಾಳೆಯನ್ನು ಗಿಟ್ಟಿಸಿಕೊಂಡ್ರು. ಸದ್ಯ ಈಗ ನೆನಪಿರಲಿ ಪ್ರೇಮ್ ಅಭಿನಯದ ಮೋಸ್ಟ್ ಎಕ್ಸ್ಪೆಕ್ಟಡ್ ಪ್ರೇಮಂ ಪೂಜ್ಯಂ ಸೆಟ್ಟೇರಿದ್ದು, ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಎಣಿಸುತ್ತಿದೆ. ಕೊರೊನಾ ಹಿನ್ನಲೆ ಚಿತ್ರತಂಡ ಚಿತ್ರ ಬಿಡುಗಡೆ ಮಾಡದೇ ಉಳಿದ ಕೆಲಸವನ್ನು ಮಾಡಿಕೊಳ್ಳುತ್ತಿದೆ.

Leave a Reply

Your email address will not be published. Required fields are marked *