Advertisements

ಅಪ್ಪು ನಟನೆಯ ಲಕ್ಕಿ ಮ್ಯಾನ್ ಚಿತ್ರ ಇಲ್ಲಿಯವರೆಗೆ ಎಷ್ಟು ಗಳಿಕೆ ಮಾಡಿದೆ ಗೊತ್ತಾ..?ದಾಖಲೆ ಕಲೆಕ್ಷನ್.!

Cinema

ಲಕ್ಕಿ ಮ್ಯಾನ್ 2022 ರ ಭಾರತೀಯ ಕನ್ನಡ ಭಾಷೆಯ ಸಕತ್ ರೋಮ್ಯಾಂಟಿಕ್ ಹಾಸ್ಯ ಚಲನಚಿತ್ರವಾಗಿದ್ದು, ಎಸ್ ನಾಗೇಂದ್ರ ಪ್ರಸಾದ್ ಅವರ ನಿರ್ದೇಶನದ ಚೊಚ್ಚಲ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿತ್ತು. ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ, ಸಂಗೀತಾ ಶೃಂಗೇರಿ, ರೋಶನಿ ಪ್ರಕಾಶ್, ಪುನೀತ್ ರಾಜ್‌ಕುಮಾರ್, ನಾಗಭೂಷಣ ಎನ್ ಎಸ್ ಮತ್ತು ಪ್ರಭುದೇವ ಅವರು ನಟಿಸಿದ್ದು ಸಿನಿಮಾ ಇದೀಗ ಅದ್ಭುತವಾದ ಓಟ ನಡೆಸಿದೆ ಎನ್ನಬಹುದು. ಹೌದು ಇದು ತಮಿಳಿನ ಓ ಮೈ ಕಡವುಲೆ ಚಿತ್ರದ ರಿಮೇಕ್ ಆಗಿದೆ ಎಂದು ಹೇಳಬಹುದು.

ಹೌದು ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಇದೀಗ ನಮ್ಮ ಜೊತೆಗಿಲ್ಲ, ಆದರೆ ಅವರು ಮಾಡಿ ಹೋದ ಕೆಲಸಗಳು ಕಾರ್ಯಗಳಿಗೆ ಎಂದಿಗೂ ಸಾವು ಇಲ್ಲ ಎಂದೇ ಹೇಳಬಹುದು. ಪುನೀತ್ ರಾಜ್ ಕುಮಾರ್ ಅವರು ಕೇವಲ ದೊಡ್ಡ ತೆರೆ ಮೇಲೆ ಮಾತ್ರ ಅಲ್ಲದೆ ಕಿರುತೆರೆಯಲ್ಲಿ ಸಕ್ರಿಯ ಆಗಿ ಮಿಂಚಿದವರು. ಕೌಟುಂಬಿಕ ಕಾರ್ಯಕ್ರಮಗಳ ನಡೆಸಿಕೊಟ್ಟವರು ಅಪ್ಪು. ಕನ್ನಡದ ಕೋಟ್ಯಾಧಿಪತಿ ಸೇರಿ ಫ್ಯಾಮಿಲಿ ಪವರ್ ಎಂಬ ಕಾರ್ಯಕ್ರಮ ನಡೆಸಿಕೊಟ್ಟು ಸಣ್ಣ ಮಕ್ಕಳ ಹಾಗೆ ಎಲ್ಲರೊಟ್ಟಿಗೆ ಹೆಚ್ಚು ಪ್ರೀತಿ ಹೊಂದಿದ್ದ ನಟ. ಪುನೀತ್ ರಾಜಕುಮಾರ್ ಅವರು ಅದೆಷ್ಟು ಜನಕ್ಕೆ ಸಹಾಯ ಹಸ್ತ ನೀಡಿದ್ದಾರೆ ಎಂದರೆ ಅದು ಲೆಕ್ಕವೇ ಇಲ್ಲ ಎನ್ನಬಹುದು ಬಿಡಿ. ಅವರ ಅಗಲಿಕೆಯಾಗಿದ್ದು ದೊಡ್ಡ ವಿಷಾದನೀಯ.

Advertisements

ಬಹುಬೇಗನೆ ದೇವರು ಎಲ್ಲರಿಗೂ ಮೋಸ ಮಾಡಿಬಿಟ್ಟ. ಅವರ ಅಭಿಮಾನಿಗಳು ಇಂದಿಗೂ ಅವರ ಅಗಲಿಕೆಯ ನೆನೆದು ಕಣ್ಣೀರು ಹಾಕುತ್ತಾ ಬೇಸರದಿಂದಲೇ ಕೆಲವರು ಜೀವನ ನಡೆಸುತ್ತಿದ್ದಾರೆ. ಇನ್ನು ಕೆಲವರು ಅವರನ್ನು ದೇವರ ರೂಪದಲ್ಲಿ ನೋಡುತ್ತಾ ದೇವರಂತೆಯೇ ಪ್ರತಿದಿನ ಪೂಜೆ ಮಾಡುತ್ತಾ ಅವರು ಹಾಕಿ ಕೊಟ್ಟ ಹಾದಿಯಲ್ಲಿಯೇ ಅಪ್ಪು ಅವರನ್ನ ಸ್ಫೂರ್ತಿಯಾಗಿ ತೆಗೆದುಕೊಂಡು ಅವರ ಜೀವನ ನಡೆಸುತ್ತಿದ್ದಾರೆ ಎನ್ನಬಹುದು. ನಟ ಪುನೀತ್ ಅವರು ಕೇವಲ ನಮ್ಮಿಂದ ದೈಹಿಕವಾಗಿ ಮಾತ್ರ ದೂರವಾಗಿದ್ದಾರೆ. ಪ್ರತಿ ದಿನ ಒಂದಲ್ಲ ಒಂದು ಅವರ ವಿಡಿಯೋಗಳು ಹಾಗೂ ಫೋಟೋಸ್ ಅಥವಾ ಬೇರೆಯವರ ಬಾಯಿಂದ ಅವರ ಬಗ್ಗೆ ಕೇಳಿ ಬರುವ ಅವರ ಕೆಲಸಗಳು ಈ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕೇ ಸಿಗುತ್ತವೆ. ಅಷ್ಟರಮಟ್ಟಿಗೆ ಪುನೀತ್ ಅವರು ಜನಪ್ರಿಯತೆ ಹೊಂದಿದ್ದಾರೆ. ಈ ಸೂರ್ಯ ಚಂದ್ರ ಇರುವವರೆಗೂ ಅಪ್ಪು ಅಜರಾಮರ.

ಹೌದು ಅಪ್ಪು ನಾಯಕ ನಟನಾಗಿ ಮಿಂಚಿದ ಸಿನಿಮಾ ಜೇಮ್ಸ್ ಈಗಾಗಲೇ ಒಳ್ಳೆಯ ಪ್ರಖ್ಯಾತಿ ಪಡೆದುಕೊಂಡಿದೆ. ಕೇವಲ ಅಪ್ಪುಗಾಗಿಯೇ ಸಿನಿಮಾವನ್ನು ಕಣ್ತುಂಬಿಕೊಂಡು ಅವರ ಅಭಿಮಾನಿ ಬಳಗದವರು ಎಲ್ಲರೂ ಸಹ ಕಣ್ಣೀರು ಹಾಕಿದರು. ಹಾಗೆ ಇಡೀ ಕರ್ನಾಟಕದ ಜನತೆ ಸಹ. ಅಂದು ಕಣ್ಣೀರು ಹಾಕಿತು. ಇದೀಗ ಲಕ್ಕಿ ಮ್ಯಾನ್ ಚಿತ್ರದಲ್ಲಿ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಅಭಿನಯ ಮಾಡಿದ್ದು, ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು..ಹೌದು ದೇವರಾಗಿಯೇ ಅಪ್ಪು ತೆರೆ ಮೇಲೆ ಕಾಣಿಸಿದ್ದನ್ನು ನೋಡಿ ಲಕ್ಕಿ ಮ್ಯಾನ್ ಚಿತ್ರ ವೀಕ್ಷಣೆ ಮಾಡಿದ ಪ್ರತಿಯೊಬ್ಬರು ಸಹ ಮತ್ತೆ ಕಣ್ಣೀರು ಹಾಕುತ್ತಾ ಹೊರಬಂದಿದ್ದಾರೆ. ಹೌದು ಇದೀಗ ಸಿನಿಮಾ ಕಲೆಕ್ಷನ್ ವಿಚಾರವಾಗಿ ಕೆಲವು ಮಾಹಿತಿ ಹೊರಗಡೆ ಬಂದಿದೆ. ಹೌದು ಬಿಡುಗಡೆಯಾದ ಸೆಪ್ಟೆಂಬರ್ ಒಂಬತ್ತನೇ ತಾರೀಕು ಮೊದಲ ದಿನ ಲಕ್ಕಿ ಮ್ಯಾನ್ ಚಿತ್ರ ಎರಡು ಕೋಟಿ ಕಲೆಕ್ಷನ್ ಮಾಡಿತ್ತು ಎನ್ನಲಾಗಿದೆ. ನಂತರದ ದಿನದಲ್ಲಿ ಗುರುವಾರದ ತನಕ ಚಿತ್ರ ಆರು ಕೋಟಿಗೂ ಅಧಿಕ ಹಣ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ. ಹಾಗೆ ಈ ಭಾನುವಾರದವರೆಗೆ ಎಂದರೆ ಲೆಕ್ಕಾಚಾರದ ಪ್ರಕಾರ ಏಳರಿಂದ ಎಂಟು ಕೋಟಿ ಕಲೆಕ್ಷನ್ ಮಾಡಿರುವುದಾಗಿ ತಿಳಿದು ಬಂದಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು..