Advertisements

ಜೂನ್ 5ರಂದು ಸಂಭವಿಸಲಿದೆ ಹುಣ್ಣಿಮೆ ಚಂದ್ರ ಗ್ರಹಣ..ಎಲ್ಲಿ ಯಾವಾಗ ? ಸಮಯ ?

News

ಈ ವರ್ಷದ ಮೊದಲ ಚಂದ್ರಗ್ರಹಣ ಜನವರಿ 10ರಂದು ಸಂಭವಿಸಿತ್ತ. ಈಗ 2020ರ ಎರಡನೆಯ ಚಂದ್ರಗ್ರಹಣ ಜೂನ್ 5 ಶುಕ್ರವಾರದಂದು ಸಂಭವಿಸಲಿದೆ. ಒಟ್ಟು ಮೂರು ಗಂಟೆ 19 ನಿಮಿಷಗಳ ಕಾಲ ಗೋಚರವಾಗುವ ಈ ಗ್ರಹಣ ಜೂನ್ ೫ರ ರಾತ್ರಿ 11.15ಕ್ಕೆ ಶುರುವಾಗಲಿದ್ದು, ಬೆಳಗಿನ ಜಾವ 2.34 (ಜೂನ್ 6) ಕ್ಕೆ ಚಂದ್ರ ಗ್ರಹಣ ಅಂತ್ಯವಾಗಲಿದೆ.

Advertisements

ಇನ್ನು ಖಗೋಳ ವಿಜ್ಞಾನಿಗಳು ಹೇಳುವ ಹಾಗೆ ಈ ಚಂದ್ರ ಗ್ರಹಣ ಏಷ್ಯಾಸೇರಿದಂತೆ, ಯುರೋಪ್, ಅಮೆರಿಕಾ, ಹಾಗೂ ಆಫ್ರಿಕಾದ ಕೆಲವು ಭಾಗಗಲ್ಲಿ ಗೋಚರವಾಗಲಿದೆ ಎಂದು ಹೇಳಲಾಗಿದೆ. ಇನ್ನು ೨೦೨೦ರ ಎರಡನೆಯ ಚಂದ್ರ ಗ್ರಹಣ ಇದಾಗಿದ್ದು, ಮತ್ತೆರಡು ಚಂದ್ರ ಗ್ರಹಣಗಳು ಕ್ರಮವಾಗಿ ಜುಲೈ ೫ ಹಾಗೂ ನವಂಬರ್ ೨೯ಕ್ಕೆ ಸಂಭವಿಸಲಿವೆ ಎಂದು ಹೇಳಲಾಗಿದೆ.

ಜೂನ್ ೫ರಂದು ಗೋಚರವಾಗಲಿರುವ ಈ ಚಂದ್ರ ಗ್ರಹಣ ಭಾರತ ಸೇರಿದಂತೆ ಕರ್ನಾಟಕದ ಕೆಲವು ಭಾಗಗಳಲ್ಲಿ ಮಾತ್ರ, ಅದೂ ಸ್ವಲ್ಪ ಮಟ್ಟಿಗೆ ಮಾತ್ರ ಕಾಣಿಸಲಿದೆ ಎಂದು ಹೇಳಲಾಗಿದೆ. ಇನ್ನು ಮುಂದಿನ ನವೆಂಬರ್ ನಲ್ಲಿ ಗೋಚರವಾಗುವ ಚಂದ್ರಗ್ರಹಣ ಕೂಡ ಭಾರತದಲ್ಲಿ ಭಾಗಶಃ ಗೋಚರವಾಗುತ್ತದೆ ಎಂದು ಹೇಳಲಾಗಿದೆ.