Advertisements

ಹುಡುಗಿಯನ್ನು ಪ್ರೀತಿಸಿ ಮೋಸ ಮಾಡಿದ ಮಗ.. ಆದರೆ ಮಗ ಮೋಸ ಮಾಡಿದ ಹುಡುಗಿಯನ್ನು ಮನೆಯಲ್ಲಿ ಇಟ್ಟುಕೊಂಡ ತಂದೆ ಮಾಡಿದ್ದೇನು ಗೊತ್ತಾ?

Kannada Mahiti

ಪ್ರೀತಿ ಕುರುಡೋ, ಪ್ರೀತಿ ಮಾಯೆಯೋ, ಪ್ರೀತಿ ಪಚೀತಿಯೋ ಗೊತ್ತಿಲ್ಲ.. ಪ್ರೀತಿಯನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಸಂಭೋಧಿಸುತ್ತಾರೆ. ಆದರೆ ತಾನು ಪ್ರೀತಿಸಿದ ಹುಡುಗಿಯನ್ನು ಅರ್ಧದಾರಿಗೆ ಕೈ ಬಿಟ್ಟ ಪ್ರೇಮಿಯ ತಂದೆ ತಾಯಿ ಮಾಡಿದ ಕೆಲಸ ಕೇಳಿದ್ರೆ ನಿಜಕ್ಕೂ ಆಶ್ಚರ್ಯ ಆಗುತ್ತೆ.. ಹೌದು ಕೋಟೆಯಂ ತಿರುಣಕ್ಕವರ್ ಪ್ರದೇಶದ ಶಾರ್ಜಿ ದಂಪತಿ ತನ್ನ ಮಗ ಪ್ರೀತಿಸಿ ಕೈ ಬಿಟ್ಟ ಹುಡುಗಿಯ ಬದುಕನ್ನು ರೂಪಿಸಿದ್ದಾರೆ. ಅಷ್ಟಕ್ಕೂ ಇಲ್ಲಿ ಆಗಿದ್ದೇನು ಗೊತ್ತಾ.. 6 ವರ್ಷಗಳ ಹಿಂದೆ ಶಾಲಾ ದಿನಗಳಲ್ಲಿಯೇ ಈ ಶಾರ್ಜಿ ದಂಪತಿಗಳ ಪುತ್ರ ಓರ್ವ ಹುಡುಗಿಯನ್ನು ಪ್ರೀತಿಸಿ ಆಕೆಯ ಜೊತೆ ಓಡಿ ಹೋಗಿದ್ದ. ಆಗ ಮಗಳು ಶಾಲೆಗೆ ಹೋದವಳು ವಾಪಸ್ ಬಾರದನ್ನು ಕಂಡು ಗಾಬರಿಯಾದ ಹುಡುಗಿಯ ತಂದೆ ತಾಯಿ ಪೊಲೀಸ್ ಕಂ’ಪ್ಲೆಂಟ್ ಕೊಡುತ್ತಾರೆ.

[widget id=”custom_html-3″]

Advertisements

ಇನ್ನು ಈ ಕೇ’ಸ್ ನ್ಯಾಯಲಯದಲ್ಲಿ ತನಿಖೆ ಆಗ್ತಾಯಿರುತ್ತೆ, ಆ ಸಂದರ್ಭದಲ್ಲಿಯೇ ಓಡಿ ಹೋದ ಹುಡುಗ ಹುಡುಗಿಯ ಬಗ್ಗೆ ಮಾಹಿತಿಯೂ ಸಿಕ್ಕುತ್ತೆ. ಮಕ್ಕಳಿಗಿನ್ನು 18 ವರ್ಷ ವಯಸ್ಸಾಗದೇ ಇದ್ದದ್ದರಿಂದ ಕಾನೂನು ಪ್ರಕಾರ ಅವರಿಬ್ಬರು ವಿವಾಹವಾಗುವಂತಿರಲಿಲ್ಲ, ಈ ಹಿನ್ನಲೆ ಇವರಿಬ್ಬರನ್ನು ವಾಪಸ್ ತಮ್ಮ ತಮ್ಮ ಮನೆಗಳಿಗೆ ಕಳುಹಿಸಿಕೊಡುವ ಬಗ್ಗೆ ನ್ಯಾಯಲಯದಲ್ಲಿ ಚರ್ಚೆ ನಡೆಯುತ್ತಿರುವಾಗ, ಹುಡುಗಿಯ ಮನೆಯವರು ತಮಗೆ ತಮ್ಮ ಮಗಳು ಬೇಡ ಅಂತ ಕೋರ್ಟ್​ಗೆ ಹೇಳಿಬಿಡುತ್ತಾರೆ. ಮನೆಬಿಟ್ಟು ಓಡಿಹೋದ ಮಗಳನ್ನು ಮತ್ತೆ ಮನೆಗೆ ತುಂಬಿಕೊಂಡರೇ ಅಕ್ಕಪಕ್ಕದ ಮನೆಯವರು ಮನಬಂದಂತೆ ಮಾತನಾಡುತ್ತಾರೇ ಅಂತಲೋ ಅಥವಾ ಬಂದುಗಳ ಟೀಕೆಗೆ ಗುರಿಯಾಗಬೇಕಾಗುತ್ತೇ ಅಂತಾನೋ ಗೊತ್ತಿಲ್ಲ.

[widget id=”custom_html-3″]

ಒಟ್ಟಿನಲ್ಲಿ ಹುಡುಗಿಯ ಹೆತ್ತವರು ನಮಗೆ ನಮ್ಮ ಮಗಳು ಬೇಡ ಅಂತ ನಿರ್ಧರಿಸಿ ಬಿಟ್ಟಿದ್ದರು. ಇತ್ತ ಪ್ರಿಯತಮನನ್ನೇ ನಂಬಿ ಬಂದ ಹುಡುಗಿ ಇನ್ನಷ್ಟು ಗಾಬರಿಗೊಳ್ತಾಳೆ. ಇಂತಹ ಸಂದರ್ಭದಲ್ಲಿ ಶಾರ್ಜಿ ದಂಪತಿಗಳು ಹುಡುಗಿಗೆ ಧೈರ್ಯ ತುಂಬಿ ಸಾಂತ್ವನ ಹೇಳುತ್ತಾರೆ. ಜೊತೆಗೆ 18 ವರ್ಷ ತುಂಬಿದ ಬಳಿಕ ಇವರಿರ್ವರಿಗೂ ತಾವೇ ಮದುವೆ ಮಾಡಿಸೋದಾಗಿ ಭರವಸೆ ಕೊಟ್ಟು ಆ ಹುಡುಗಿಯನ್ನು ತಮ್ಮ ಮನೆಗೆ ಕರೆದುಕೊಂಡು ಹೋಗ್ತಾರೆ. ಇನ್ನು ಪ್ರೀತಿಸುತ್ತಿರುವ ಪ್ರಣಯ ಪಕ್ಷಿಗಳಿಬ್ಬರು ಮದುವೆಯಾಗದೇ ಮನೆಯಲ್ಲಿರುವುದು ಸರಿಯಲ್ಲ ಅಂತ ಹುಡುನ ತಂದೆ ತಾಯಿಗಳು ಒಂದು ಮಹತ್ವದ ನಿರ್ಣಯ ಕೈಗೊಳ್ಳುತ್ತಾರೆ. ಈ ನಿರ್ಧಾರವೇ ಈ ದಂಪತಿಗಳನ್ನು ಇವತ್ತು ಇಷ್ಟು ಕೊಂಡಾಡಲು ಬಹುಶಃ ಕಾರಣವೇನೋ.. ಹೌದು ತನ್ನ ಮಗನನ್ನು ಹಾಸ್ಟೆಲ್​​ಗೆ ಸೇರಿಸಿ, ಮಗ ಪ್ರೀತಿಸಿದ ಹುಡುಗಿಯನ್ನ ಮನೆಯಲ್ಲಿರಿಸಿಕೊಂಡು ಸಾಕಲು ಶುರು ಮಾಡ್ತಾರೆ.

[widget id=”custom_html-3″]

ಕತೆ ಇಲ್ಲಿಗೆ ಮುಗೀತು ಅನ್ಕೊಂಡ್ರೆ ಅದು ತಪ್ಪು, ಕತೆಯಲ್ಲಿ ಒಂದು ಟ್ವಿಸ್ಟ್ ಇದೆ. ಎಸ್ ಇತ್ತ ತನ್ನ ಪ್ರಿಯಕರ ಬರುತ್ತಾನೆ, ಮದುವೆಯಾಗ್ತಾನೆ ಅಂತಲೇ ಮಹದೆತ್ತರದ ಕನಸು ಕಂಡು. ಆಸೆಗಳ ಮಂಟಪದೊಳಗೆ ಕನಸಿನ ಡೆಕೋರೇಶನ್ ಮಾಡಿದ್ದ ಹುಡುಗಿಯ ಮನಸ್ಸು ಒಡೆದ ಕನ್ನಡಿಯಂತಾಗುವ ಘ’ಟ’ನೆಯೊಂದು ನಡೆದೇ ಹೋಗಿತ್ತು. ಹೌದು ಹಾಸ್ಟೆಲ್​ನಲ್ಲಿ ಓದ್ಲಿಕ್ಕೆ ಸೇರಿದವ ಮತ್ತೆ ಪ್ರೀತಿ ಪ್ರೇಮದ ಗುಂಗಿನಲ್ಲಿ ಬಿದ್ದು ಇನ್ನೊಂದು ಹುಡುಗಿಯನ್ನು ಮದುವೆಯಾಗಿ ಮನೆಗೆ ಕರೆದುಕೊಂಡು ಬರುತ್ತಾನೆ.

[widget id=”custom_html-3″]

ತನ್ನವನಿಗಾಗಿ ಅತೀ ಚಿಕ್ಕ ವಯಸ್ಸಿನಲ್ಲಿಯೇ ತನ್ನಪ್ಪ, ತನ್ನಮ್ಮನನ್ನು ಬಿಟ್ಟು ಬಂದ ಹುಡುಗಿಗೆ ಆಕಾಶವೇ ಕಳಚಿ ಬಿದ್ದ ಅನುಭವವಾಗಿತ್ತು. ಆದರೆ ಶಾರ್ಜಿ ದಂಪತಿಗಳು ಅತೀ ಮುದ್ದಾಗಿ ಸಾಕಿದ್ದ ಈ ಹೆಣ್ಣಿನ ಕೈ ಬಿಡಲಿಲ್ಲ, ಮಗನ ಚಂಚಲ ಮನಸಿನ ಆಸೆಗಳಿಗೆ ಓರ್ವ ಹೆಣ್ಣಿನ ಬದುಕು ಹಾಳಾಗಲು ಅವಕಾಶ ಮಾಡಿಕೊಡಲಿಲ್ಲ. ತಾವೇ ಒಂದು ಒಳ್ಳೆಯ ಸುಸಂಸ್ಕ್ರತ ಹುಡುಗನನ್ನು ಹುಡುಕಿ ಕೊಟ್ಟು ಮದುವೆ ಮಾಡಿಸಿ ಗ್ರೇಟ್ ಎನಿಸಿಕೊಂಡಿದ್ದಾರೆ.