ಲಾಕ್ ಡೌನ್ ಕಾರಣದಿಂದಾಗಿ ಕಿರುತೆರೆಯ ಜನಮೆಚ್ಚಿದ ಅನೇಕ ಧಾರಾವಾಹಿಗಳು ನಿಂತುಹೋಗಿವೆ. ಈಗ ಇದರ ಸರದಿ ಲಕ್ಷಾಂತರ ವೀಕ್ಷಕರ ಮನ ಸೆಳೆದಿದ್ದ ಉತ್ತಮ ಸದಭಿರುಚಿಯ ಧಾರವಾಹಿ ಎನಿಸಿಕೊಂಡಿದ್ದ ‘ಮಗಳು ಜಾನಕಿ’ಸೀರಿಯಲ್ ಇನ್ನು ಮುಂದೆ ವೀಕ್ಷಕರ ಮುಂದೆ ಬರೋದಿಲ್ಲ. ಹೌದು, ಕನ್ನಡದ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ, ಖ್ಯಾತ ನಿರ್ದೇಶಕ ಟಿ.ಎನ್. ಸೀತಾರಾಮ್ ಅವರ ನಿರ್ದೇಶನದ ಮಗಳು ಜಾನಕೀ ಇನ್ನು ಮುಂದೆ ಪ್ರಸಾರವಾಗುವುದಿಲ್ಲ.

ಕಲರ್ಸ್ ಸೂಪರ್ ಚಾನೆಲ್ ತಾತ್ಕಾಲಿಕವಾಗಿ ಸ್ಟಾಪ್ ಆಗುತ್ತಿದೆ. ಈ ಕಾರಣದಿಂದಲೇ ಮಗಳು ಜಾನಕಿ ಧಾರವಾಹಿಯ ಎಪಿಸೋಡ್ ಗಳು ಪೂರ್ಣಗೊಳ್ಳುವ ಮುನ್ನವೇ ಈ ಸೀರಿಯಲ್ ಗೆ ಬ್ರೇಕ್ ಬಿದ್ದಿದೆ. ಇನ್ನು ಇದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟಿ.ಏನ್.ಸೀತಾರಾಮ್ ಅವರು ಸದ್ಯದ ಮಟ್ಟಿಗೆ ಮಗಳು ಜಾನಕೀ ಸೀರಿಯಲ್ ಪ್ರಸಾರವಾಗುವುದಿಲ್ಲ. ಮುಂದೆ ಏನಾಗುತ್ತೆ ಕಾಡು ನೋಡಬೇಕಾಗಿದೆ.
ಇನ್ನು ಸೀತಾರಾಮ್ ಅವರು ಹೇಳುವ ಪ್ರಕಾರ, ಚಾನೆಲ್ ಸ್ಟಾಪ್ ಆಗುವುದರ ಬಗ್ಗೆ ಮ್ಯಾನೇಜ್ಮೆಂಟ್ ನಿರ್ಧಾರ ಮಾಡಿದ್ದು, ನಮ್ಮ ಸೀರಿಯಲ್ ಗೆ ಬೇರೆ ಚಾನೆಲ್ ಕೊಡಿ ಎಂದು ನಾವು ಕೇಳುವುದಕ್ಕೆ ಆಗುವುದಿಲ್ಲ. ಒಂದು ವೇಳೆ ಕಲರ್ಸ್ ಸೂಪರ್ ನವರು ಬೇರೆ ಕಲರ್ಸ್ ನ ಬೇರೆ ಚಾನೆಲ್ ನಲ್ಲಿ ನಮಗೆ ಜಾಗ ಕೊಟ್ಟರೆ ನಾವು ಶೂಟಿಂಗ್ ಶುರು ಮಾಡುತ್ತೇವೆ ಎಂದು ಹೇಳಿದ್ದಾರೆ.