Advertisements

ಈ ಸ್ಟಾರ್ ನಟಿಯರು ಅಕ್ಕ ತಂಗಿಯರು, ಆದರೆ ಇವರು ಒಬ್ಬ ತಂದೆಯ ಮಕ್ಕಳು ಅಲ್ಲ.. ಅದು ಹೇಗೆ ಗೊತ್ತಾ?

Cinema

ಕನ್ನಡದಲ್ಲಿ ಕುರುಬನ ರಾಣಿ ಸಿನಿಮಾದ ಮೂಲಕ ಶಿವಣ್ಣನ ಜೋಡಿಯಾಗಿ ಅಭಿನಯಿಸಿದ ಖ್ಯಾತ ನಟಿ ನಗ್ಮಾ ಅವರ ತಂಗಿಯೂ ಸಹ ಪ್ರಖ್ಯಾತ ನಟಿ.. ಹೌದು ಕುರುಬನ ರಾಣಿ ಚಿತ್ರದಲ್ಲಿ ಬ್ಯುಟಿಫುಲ್ ಆಗಿ ಅಭಿನಯಿಸಿ ಕನ್ನಡಿಗರ ಮನಗೆದ್ದು ಈಗ ರಾಜಕೀಯದಲ್ಲಿ ಸಕ್ರೀಯರಾಗಿರುವ ನಟಿ ನಗ್ಮಾ ಅವರ ತಂಗಿ ಬಹುದೊಡ್ಡ ಸಿನಿ ತಾರೆ, ತಂಗಿಯ ಗಂಡ ಕೂಡ ಜನಮೆಚ್ಚಿದ ನಟ. ನಗ್ಮಾ ಅವರ ತಾಯಿ ನಂದಿತಾ ಅವರು ಅರವಿಂದ್ ಎಂಬುವವರನ್ನು ಮದುವೆಯಾಗ್ತಾರೆ. ದಾಂಪತ್ಯದಲ್ಲಿ ಬಿರುಕು ಮೂಡಿ ಹೊಂದಾಣಿಕೆಯಾಗದೇಯಿದ್ದಾಗ ಈ ಜೋಡಿ ವಿಚ್ಚೇಧನ ಪಡೆದುಕೊಳ್ಳುತ್ತಾರೆ. ಇನ್ನು ಡೈ’ವ’ರ್ಸ್ ಮಾಡುವಾಗ ನಗ್ಮಾ ಅವ್ರು ನಂದಿತಾ ಅವರ ಹೊಟ್ಟೆಯಲ್ಲಿದ್ದರು. ನಂತರಾ ನಂದಿತಾ ಅವರು ಇನ್ನೊಂದು ಮದುವೆಯಾಗುವ ನಿಶ್ಚಯ ಮಾಡ್ತಾರೆ.

[widget id=”custom_html-3″]

Advertisements

ಇನ್ನು ಚಿಕ್ಕ ವಯಸ್ಸಾದ್ದರಿಂದ ಒಂಟಿ ಜೀವನ ನಡೆಸೋದು ಕಷ್ಟಸಾಧ್ಯವಾದ್ದರಿಂದ ನಂದಿತಾ ಅವರು ಇನ್ನೊಂದು ಮದುವೆಯಾಗ್ತಾರೆ. ಚಂದ್ರ ಎಂಬುವವರ ಜೊತೆ ಎರಡನೇ ಮದುವೆಯಾದ ನಂದಿತಾ ಅವರಿಗೆ ಹುಟ್ಟಿದ ಮಕ್ಕಳೇ ಜ್ಯೋತಿಕಾ, ಹಾಗೂ ರೋಶನಿ. ಎಸ್ ಈಗ ನಿಮಗೆ ಅರ್ಥವಾಗಿರಬಹುದು ನಗ್ಮಾ ಅವರ ಆ ಸೆಲೆಬ್ರಿಟಿ ತಂಗಿ ಯಾರು ಅಂತ. ತಮಿಳುನಟ ಸೂರ್ಯನನ್ನು ಪ್ರೀತಿಸಿ ಮದುವೆಯಾದ ಜ್ಯೋತಿಕಾ ಅವರೇ ನಗಮಾ ಅವರ ಸ್ವಂತ ತಂಗಿ, ಅಂದರೆ ನಗ್ಮಾ ಅವರ ತಾಯಿ ನಂದಿತಾ ಅವರ ಎರಡನೇ ಗಂಡನ ಮಗಳು. ಕನ್ನಡದಲ್ಲಿಯೂ ಸಹ ಜ್ಯೋತಿಕಾ ಅಭಿನಯಿಸಿದ್ದು, ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಜೋಡಿಯಾಗಿ ನಾಗರಹಾವು ಚಿತ್ರದಲ್ಲಿ ನಾಯಕನಟಿಯಾಗಿ ಅಭಿನಯಿಸಿ ತನ್ನದೇ ಆದ ಫ್ಯಾನ್ ಫಾಲೋವರ್ಸ್ ಸಹ ಹೊಂದಿದ್ದಾರೆ.

[widget id=”custom_html-3″]

ಇನ್ನು ಜ್ಯೋತಿಕಾ ಅವರು ಆರಂಭದ ದಿನಗಳಲ್ಲಿ ಸಿನಿಮಾಕ್ಕೆ ಎಂಟ್ರಿ ಕೊಡುವಾಗ ನಗ್ಮಾ ಅವರೇ ಭವ್ಯ ಬುನಾದಿಯನ್ನು ಹಾಕಿಕೊಟ್ಟಿದ್ರು ಅಂತ ಹೇಳಲಾಗ್ತಿದೆ. ನಗ್ಮಾ ಕಷ್ಟಪಟ್ಟು ಸಿನಿರಂಗದಲ್ಲಿ ಪ್ರಜ್ವಲಿಸಿದ್ದರಿಂದ ತಾನುಪಟ್ಟ ಕಷ್ಟ ತನ್ನ ಸಹೋದರಿಗೆ ಬರಬಾರದು ಅಂತ ಜ್ಯೋತಿಕಾ ಅವರಿಗೆ ಒಳ್ಳೆಯ ಅವಕಾಶವನ್ನು ಕಲ್ಪಿಸಿಕೊಟ್ಟಿದ್ರು ಅಂತ ಹೇಳಲಾಗ್ತಿತ್ತು. ಜೊತೆಗೆ ಜ್ಯೋತಿಕಾ ಅವರು ಸಹ ಅಪಾರ ಪ್ರತಿಭೆಯುಳ್ಳವರಾದ್ದರಿಂದ ಇವರಿಗೆ ಬೇಗ ಕಲಾದೇವಿಯೂ ಒಲಿದು ಬಂದಿದ್ದಾಳೆ. ಇನ್ನು ಇವರು ತಮಿಳಿನ ಖ್ಯಾತ ನಟ ಆಡಿಯನ್ಸ್ ಫೆವರೇಟ್ ಸೂರ್ಯ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ಕೆಲವು ವರ್ಷಗಳ ಬಳಿಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನಟಿ ನಗಮಾ ಹಾಗೂ ಜ್ಯೋತಿಕಾ ಅವರು ಅನ್ಯೋನ್ಯವಾಗಿದ್ದು ಇವರ ಮಧ್ಯೆ ಇರುವ ಪ್ರೀತಿ, ಕಾಳಜಿ ಶಾಶ್ವತವಾಗಿರಲಿ ಎಂಬುವುದೇ ನಮ್ಮ ಹಾರೈಕೆ.